• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್

ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಕರ್ನಾಟಕದಲ್ಲಿ ಮತಗಳ್ಳತನದ ವಿರುದ್ಧದ ತನಿಖೆ ಮತ್ತು ಹೋರಾಟವನ್ನು ಮುಂದುವರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Written ByKrishna NK
Published: Oct 12, 2026, 10:02 PM IST|Updated: Oct 12, 2026, 10:03 PM IST
joinshare
ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್
Image Credit: CM Dk Shivakumar

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
'ಪ್ರೇಮದ ಊರಲಿ’ OTT ಪ್ರಸಾರದ ಬಗ್ಗೆ ಚಿತ್ರತಂಡದಿಂದ ಮಹತ್ವದ ಮಾಹಿತಿ

'ಪ್ರೇಮದ ಊರಲಿ’ OTT ಪ್ರಸಾರದ ಬಗ್ಗೆ ಚಿತ್ರತಂಡದಿಂದ ಮಹತ್ವದ ಮಾಹಿತಿ

2

ಸಂಗೀತಾ ಭಟ್‌ ಅಲ್ಲದಿದ್ದರೆ... ಈ ವಾರ ಬಿಗ್‌ ಬಾಸ್‌ ನಿಂದ ಯಾರು ಹೊರಬೇಕಿತ್ತು? ಅತಿ ಕಡಿಮೆ ವೋಟ್‌ ಪಡೆದಿದ್ದು ಇವರೇನಾ!

3

ಮತಗಳ್ಳತನದ ವಿರುದ್ಧ ಕರ್ನಾಟಕದಲ್ಲಿ ತನಿಖೆ ಮುಂದುವರಿಕೆ: ಸಿಎಂ ಡಿಕೆ ಶಿವಕುಮಾರ್

4

ಬಿಗ್‌ ಬಾಸ್‌ನಿಂದ ಹೊರಬಂದರೂ ಬುದ್ಧಿ ಕಲಿಯದ ಮಂಜ! ಮತ್ತೆ ಅಸಭ್ಯ ಪದ ಬಳಕೆ, ನಿರ್ದೇಶಕ ನಂದಕಿಶೋರ್ ಬೇಸರ

5

ಈ ತಿಂಗಳಿನಿಂದ ಸರ್ಕಾರಿ ನೌಕರರ ಕನಿಷ್ಟ ಮೂಲ ವೇತನ ₹18000 ದಿಂದ 69,000ಕ್ಕೆ ಏರಿಕೆ!?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವದೆಹಲಿ : ಕರ್ನಾಟಕದಲ್ಲಿ ಬಿಜೆಪಿಯವರು ತಪ್ಪೆಸಗಿಲ್ಲ ಎಂದಾದರೆ ತನಿಖೆ ಬೇಡ, ಪ್ರಕರಣ ದಾಖಲಿಸಬೇಡಿ ಎಂದು ಯಾಕೆ ರಾಜ್ಯಪಾಲರ ಬಳಿ ಹೋಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಪ್ರಶ್ನಿಸಿದರು. ಅಮಾಯಕ ಕಾರ್ಯಕರ್ತರಿಂದ ಅರ್ಜಿ ನಮೂನೆ-7ಕ್ಕೆ ಸಹಿ ಹಾಕಿಸಿ ಅರಾಜಕತೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ಮತದಾನದ ಹಕ್ಕನ್ನು ಕಿತ್ತುಹಾಕಲು ಹೊರಟವರು ಬಿಜೆಪಿಯವರು ಎಂದು ಕಿಡಿಕಾರಿದರು.

ಸುಪ್ರೀಂಕೋರ್ಟ್‌ನಲ್ಲಿ ನ್ಯಾಯದ ವಿಶ್ವಾಸ
ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಇಂಡಿಯಾ ಒಕ್ಕೂಟದ ನಾಯಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಮಗೆ ನ್ಯಾಯ ದೊರಕುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಪರಿಶಿಷ್ಟರ ಮತಗಳನ್ನು ತೆಗೆದುಹಾಕಿರುವ ಬಗ್ಗೆ ವಿಶೇಷ ಅಭಿಯಾನ ನಡೆಸುವಂತೆ ಚುನಾವಣಾ ಆಯೋಗ ಈಗಾಗಲೇ ತಿಳಿಸಿತ್ತು ಎಂದು ಹೇಳಿದರು.

ದೆಹಲಿ ಪ್ರತಿಭಟನೆಯಲ್ಲಿ ಭಾರೀ ಜನಸಾಗರ
ಮತಗಳ್ಳತನ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಲಕ್ಷಾಂತರ ಜನ ಸೇರಿದ್ದರು. ನವರಾತ್ರಿ ಸಮಯದಲ್ಲಿ ಕರ್ನಾಟಕದಿಂದ ಸಚಿವರು, ನೂರಕ್ಕೂ ಹೆಚ್ಚು ಶಾಸಕರು ಹಾಗೂ ಮುೂರಕ್ಕೂ ಹೆಚ್ಚು ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

ಅಡ್ಡ ಮತದಾನದ ಬಗ್ಗೆ ವಿಪಕ್ಷಗಳಿಗೆ ತಿರುಗೇಟು
ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೊದಲು ತಮ್ಮ ಪಕ್ಷದಲ್ಲಿದ್ದು ಅಡ್ಡ ಮತದಾನ ಮಾಡಿದ 12 ಜನ ಶಾಸಕರು ಯಾರೆಂದು ವಿಪಕ್ಷ ನಾಯಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಎನ್‌ಡಿಎ ಸರಿಯಿಲ್ಲ ಎಂದು ಅವರು ನಮಗೆ ಮತ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

Add Zee News as a Preferred Source
TAGS:
Kannada News