• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ಬಾಸ್ ಮನೆಯಲ್ಲಿ ಭಾವುಕ ಕ್ಷಣ.. ಕುಟುಂಬದವರ ಪತ್ರ ನೋಡಿ ಕಣ್ಣೀರಿಟ್ಟ ಸ್ಪರ್ಧಿಗಳು!

ಬಿಗ್‌ಬಾಸ್ ಮನೆಯಲ್ಲಿ ಭಾವುಕ ಕ್ಷಣ.. ಕುಟುಂಬದವರ ಪತ್ರ ನೋಡಿ ಕಣ್ಣೀರಿಟ್ಟ ಸ್ಪರ್ಧಿಗಳು!

Bigg boss kannada13 Contestant Emotional moments: ಬಿಗ್‌ಬಾಸ್‌ ಕನ್ನಡ ಸೀಸನ್‌ 13 ದಿನದಿಂದ ದಿನಕ್ಕೆ ರೋಚಕೆ ಘಟ್ಟ ತಲುಪುತ್ತಿದೆ ಈ ನಡುವೆ ಬಿಗ್‌ಬಾಸ್‌ ಉಡುಗೊರೆಯೊಂದು ನೀಡಿದ್ದು, ಮನೆ ಸದಸ್ಯರು ಭಾವುಕರಾಗಿದ್ದಾರೆ.

Written ByRamya. R. Gowda
Published: Nov 03, 2026, 11:18 AM IST|Updated: Nov 03, 2026, 11:27 AM IST
joinshare
ಬಿಗ್‌ಬಾಸ್ ಮನೆಯಲ್ಲಿ ಭಾವುಕ ಕ್ಷಣ.. ಕುಟುಂಬದವರ ಪತ್ರ ನೋಡಿ ಕಣ್ಣೀರಿಟ್ಟ ಸ್ಪರ್ಧಿಗಳು!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

2

ಮುರುಸು" ಚಂಡಮಾರುತ ಏಫೆಕ್ಟ್‌ : ತಿರುಪತಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದ TTD

3

ಮಹಿಳಾ ಉದ್ಯೋಗಿಗಳೇ ಗಮನಿಸಿ.. ಈ ಆ್ಯಪ್‌ನಲ್ಲಿ ಅಪ್ಲೈ ಮಾಡಿದ್ರೆ ಸ್ವಯಂ ಮಂಜೂರಾಗುತ್ತೆ ʼಮುಟ್ಟಿನ ರಜೆʼ

4

ತೆಂಗಿನಮರವೊಂದರಲ್ಲಿ ಒಂದಲ್ಲ.. ಎರಡಲ್ಲ.. ಐದು ಸುಳಿ ಪತ್ತೆ!!.. ಪ್ರಕೃತಿ ವಿಸ್ಮಯ

5

ಬೈಟ್‌ಡ್ಯಾನ್ಸ್ ಸಹ-ಸಂಸ್ಥಾಪಕನನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್‌ ಅಂಬಾನಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg boss kannada13 Contestant Emotional moments: ಬಿಗ್‌ಬಾಸ್ ಕನ್ನಡ ಸೀಸನ್ 13 ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ಟಾಸ್ಕ್, ಜಗಳ, ಮನಸ್ತಾಪಗಳ ಆಟ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಭಾವುಕ ಉಡುಗೊರೆಯೊಂದನ್ನು ನೀಡಿದ್ದಾರೆ. ಮನೆಯಿಂದ ದೂರವಿರುವ ಸ್ಪರ್ಧಿಗಳಿಗೆ ಕುಟುಂಬದವರ ಪ್ರೀತಿಯ ಪತ್ರಗಳನ್ನು ತಲುಪಿಸುವ ವಿಶೇಷ ಟಾಸ್ಕ್‌ ಆಯೋಜಿಸಿದ್ದಾರೆ. ಹಾಗಾದ್ರೆ, ಈ ಟಾಸ್ಕ್‌ನಲ್ಲಿ ಏನಿದೆ? ಸ್ಪರ್ಧಿಗಳ ಪ್ರತಿಕ್ರಿಯೆ ಹೇಗಿತ್ತು? ನೋಡೋಣ ಈ ಸ್ಟೋರಿ.

ಬಿಗ್‌ಬಾಸ್ ಮನೆ ಅಂದ್ರೆನೇ ಜಗಳ, ಕಿತ್ತಾಟ, ಟಾಸ್ಕ್‌ಗಳ ಅಬ್ಬರ. ಇಲ್ಲಿ ಗೆಲ್ಲಬೇಕು, ಆಟದಲ್ಲಿ ಮುಂದೆ ಬರಬೇಕು ಅನ್ನೋ ಹಠ ಪ್ರತಿಯೊಬ್ಬ ಸ್ಪರ್ಧಿಯಲ್ಲೂ ಇರುತ್ತೆ. ಆದ್ರೆ, ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳ ಆಟದ ಜೊತೆಗೆ ಅವರ ಭಾವನೆಗಳಿಗೂ ಪರೀಕ್ಷೆ ಇಟ್ಟಿದ್ದಾರೆ. ಮನೆಯ ಅಂಚೆಪೆಟ್ಟಿಗೆಯಲ್ಲಿ ಸ್ಪರ್ಧಿಗಳ ಕುಟುಂಬದವರಿಂದ ಬಂದಿರುವ ಪ್ರೀತಿಯ ಪತ್ರಗಳನ್ನು ಇರಿಸಲಾಗಿದೆ.ಆದ್ರೆ, ಈ ಪತ್ರಗಳು ಅಷ್ಟು ಸುಲಭವಾಗಿ ಸ್ಪರ್ಧಿಗಳ ಕೈ ಸೇರಲ್ಲ. ಯಾಕಂದ್ರೆ, ಪತ್ರಗಳು ಬ್ಲ್ಯಾಂಕ್ ಆಗಿದ್ದು, ಟಾಸ್ಕ್ ಗೆಲ್ಲುವ ಮೂಲಕವೇ ಕುಟುಂಬದವರ ಪತ್ರವನ್ನು ಪಡೆದುಕೊಳ್ಳಬೇಕು. ಹೀಗಾಗಿ, ಪತ್ರಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಇಷ್ಟು ದಿನ ಆಟದ ಮೇಲೆ ಗಮನಹರಿಸಿದ್ದ ಸ್ಪರ್ಧಿಗಳು ಇದೀಗ ಕುಟುಂಬದವರ ಪ್ರೀತಿ, ನೆನಪುಗಳಿಗಾಗಿ ಹೋರಾಡಬೇಕಿದೆ.

ಮನೆಯೊಳಗೆ ನಗುತ್ತಾ, ಜಗಳವಾಡುತ್ತಾ, ಆಟವಾಡುತ್ತಾ ದಿನ ಕಳೆಯುತ್ತಿದ್ದ ಸ್ಪರ್ಧಿಗಳಿಗೆ ಕುಟುಂಬದವರ ನೆನಪು ಸಹಜವಾಗಿಯೇ ಕಾಡುತ್ತಿದೆ. ಅಪ್ಪ, ಅಮ್ಮ, ಪತಿ, ಪತ್ನಿ, ಮಕ್ಕಳು ಹಾಗೂ ಆತ್ಮೀಯರ ಪ್ರೀತಿಯ ಮಾತುಗಳನ್ನು ಓದುವ ಅವಕಾಶ ಸಿಗಲಿದೆ. ಈ ಪತ್ರಗಳು ಸ್ಪರ್ಧಿಗಳ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಮೂಡಿಸಲಿವೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಸದ್ಯ  ಬಿಗ್‌ಬಾಸ್ ಮನೆಯ ಈ ವಾರದ ಟಾಸ್ಕ್ ಕೇವಲ ಆಟವಲ್ಲ, ಭಾವನೆಗಳ ಸಂಗಮವಾಗಲಿದೆ. ಕುಟುಂಬದವರ ಪತ್ರಕ್ಕಾಗಿ ಯಾರು ಗೆಲುವು ಸಾಧಿಸುತ್ತಾರೆ? ಯಾರಿಗೆ ಪತ್ರ ಸಿಗಲಿದೆ? ಪತ್ರ ಓದಿ ಯಾರೆಲ್ಲ ಕಣ್ಣೀರಿಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.


ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 13 ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಮನೆಯೊಳಗೆ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ, ಸ್ನೇಹ, ಪ್ರೀತಿ, ಕಿತ್ತಾಟ, ವಾಗ್ವಾದ ಹೀಗೆ ನಾನಾ ರೀತಿಯ ಘಟನೆಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಪ್ರತಿ ವಾರವೂ ಹೊಸ ತಿರುವು ಪಡೆದುಕೊಳ್ಳುತ್ತಿರುವ ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಗೆಲುವಿನ ಪಟ್ಟ ಯಾರ ಪಾಲಾಗಲಿದೆ ಅನ್ನೋದೇ ಸದ್ಯದ ಕುತೂಹಲ.ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭದಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸ್ಪರ್ಧಿಗಳ ವಿಭಿನ್ನ ವ್ಯಕ್ತಿತ್ವ, ಆಟದ ವೈಖರಿ ಹಾಗೂ ಟಾಸ್ಕ್‌ಗಳಲ್ಲಿನ ಪೈಪೋಟಿ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತಿದೆ.

ಸ್ಪರ್ಧಿಗಳ ನಡುವೆ ಫೈಟ್
ಮನೆಯೊಳಗೆ ಒಂದು ಕಡೆ ಸ್ನೇಹದ ಬಾಂಧವ್ಯ ಗಟ್ಟಿಯಾಗುತ್ತಿದ್ದರೆ, ಮತ್ತೊಂದು ಕಡೆ ಸಣ್ಣಪುಟ್ಟ ವಿಚಾರಗಳೇ ದೊಡ್ಡ ಜಗಳಕ್ಕೆ ಕಾರಣವಾಗುತ್ತಿವೆ. ನಾಮಿನೇಷನ್ ಪ್ರಕ್ರಿಯೆ, ಕ್ಯಾಪ್ಟನ್ಸಿ ಟಾಸ್ಕ್ ಹಾಗೂ ಎಲಿಮಿನೇಷನ್ ವಿಚಾರವಾಗಿ ಸ್ಪರ್ಧಿಗಳ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.ಇನ್ನು ಸೋಷಿಯಲ್ ಮೀಡಿಯಾದಲ್ಲೂ ಬಿಗ್‌ಬಾಸ್ ಚರ್ಚೆ ಜೋರಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಯಾರು ಚೆನ್ನಾಗಿ ಆಡುತ್ತಿದ್ದಾರೆ? ಯಾರು ಮನೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ? ಯಾರು ಫಿನಾಲೆ ತಲುಪಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಶನಿವಾರ ನಡೆದ ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚು ಸುದೀಪ ಅವರು ಮನೆ ಸ್ಪರ್ಧಿಗಳಿಗೆ ಎಚ್ಚರಿಕೆಯ ಕಿವಿ ಮಾತು ನೀಡಿದ್ದು, ಮನೆಮಂದಿ ಈ ವಾರ ತಮ್ಮ ತಮ್ಮ ಆಟವನ್ನು ಬೇರೆ ರೀತಿಯಲ್ಲಿ ಶುರುಮಾಡಲು ತೆರೆಮರೆಯಲ್ಲಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ನಿನ್ನೆಯ ಎಪಿಸೋಡಿನಲ್ಲಿ ಎಲಿಮಿನೇಷನ್‌ ಬಿಸಿ ತಟ್ಟಿದ್ದು, ಸ್ಪರ್ಧಿಗಳು ಅಲರ್ಟ್‌ ಆಗಿದ್ದಾರೆ. 

ಮುಂದೇನು?
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಸ್ಪರ್ಧಿಗಳ ಆಟದ ತಂತ್ರ ಬದಲಾಗುತ್ತಿದೆಯಾ? ಹೊಸ ಸ್ನೇಹಗಳು ಹುಟ್ಟಿಕೊಳ್ಳುತ್ತವೆಯಾ? ಅಥವಾ ಹಳೆಯ ಸ್ನೇಹಗಳೇ ಮುರಿದು ಬೀಳುತ್ತವೆಯಾ? ಇದೆಲ್ಲದಕ್ಕೂ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗಲಿದೆ. ಬಿಗ್‌ಬಾಸ್ ಮನೆಯ ಈ ವಾರದ ಟಾಸ್ಕ್ ಕೇವಲ ಆಟವಲ್ಲ, ಭಾವನೆಗಳ ಸಂಗಮವಾಗಲಿದೆ. ಕುಟುಂಬದವರ ಪತ್ರಕ್ಕಾಗಿ ಯಾರು ಗೆಲುವು ಸಾಧಿಸುತ್ತಾರೆ? ಯಾರಿಗೆ ಪತ್ರ ಸಿಗಲಿದೆ? ಪತ್ರ ಓದಿ ಯಾರೆಲ್ಲ ಕಣ್ಣೀರಿಡುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

 

Add Zee News as a Preferred Source
TAGS:
Bigg Boss Kannada Season 13