• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

Biggboss: ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡ್ತಾರೆ. ಆದ್ರೆ ಇಲ್ಲಿ ಫ್ಯಾಮಿಲಿ ವೀಕ್‌ಗೂ ಮೊದಲೇ ಸ್ಪರ್ಧಿಯ ಪೋಷಕರು ವೇದಿಕೆಗೆ ಬಂದು ಶಾಕ್ ಕೊಟ್ಟಿದ್ದಾರೆ. ಮಗಳ ಆಟ ನಿಲ್ಲಿಸಿ, ಕಾರ್ಯಕ್ರಮದಿಂದ ಹೊರಬರುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಅಷ್ಟಕ್ಕೂ ಯಾರು ಆ ಸ್ಪರ್ಧಿ? ಪೋಷಕರ ಈ ನಡೆಗೆ ಕಾರಣವೇನು?

Written ByRamya. R. Gowda
Published: Nov 03, 2026, 12:58 PM IST|Updated: Nov 03, 2026, 01:05 PM IST
joinshare
ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಹಾಸನಾಂಬೆ ದರ್ಶನ ಪಡೆದ ಗಣ್ಯರು.. ವಿಶೇಷ ಪೂಜೆ ಸಲ್ಲಿಸಿದ ರಾಜಕೀಯ ನಾಯಕರು, ನಟಿಯರು!

ಹಾಸನಾಂಬೆ ದರ್ಶನ ಪಡೆದ ಗಣ್ಯರು.. ವಿಶೇಷ ಪೂಜೆ ಸಲ್ಲಿಸಿದ ರಾಜಕೀಯ ನಾಯಕರು, ನಟಿಯರು!

2

"ಸುಳ್ಳು ಆರೋಪ ಕಾಂಗ್ರೆಸ್ಸಿಗರು ಬಹಿರಂಗವಾಗಿ ಕ್ಷಮೆ ಕೇಳಬೇಕು"

3

ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

4

ಮುರುಸು" ಚಂಡಮಾರುತ ಏಫೆಕ್ಟ್‌ : ತಿರುಪತಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದ TTD

5

ಮಹಿಳಾ ಉದ್ಯೋಗಿಗಳೇ ಗಮನಿಸಿ.. ಈ ಆ್ಯಪ್‌ನಲ್ಲಿ ಅಪ್ಲೈ ಮಾಡಿದ್ರೆ ಸ್ವಯಂ ಮಂಜೂರಾಗುತ್ತೆ ʼಮುಟ್ಟಿನ ರಜೆʼ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg boss house neha Fathima love controversy :ಬಿಗ್‌ಬಾಸ್ ಮನೆಯಲ್ಲಿ ದಿನಕ್ಕೊಂದು ಹೊಸ ವಿವಾದ ಸೃಷ್ಟಿಯಾಗ್ತಿದೆ. ಅದರಲ್ಲೂ ಮಲಯಾಳಂ ಬಿಗ್‌ಬಾಸ್ ಸೀಸನ್ 8 ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಫ್ಯಾಮಿಲಿ ವೀಕ್‌ನಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡ್ತಾರೆ. ಆದ್ರೆ ಇಲ್ಲಿ ಫ್ಯಾಮಿಲಿ ವೀಕ್‌ಗೂ ಮೊದಲೇ ಸ್ಪರ್ಧಿಯ ಪೋಷಕರು ವೇದಿಕೆಗೆ ಬಂದು ಶಾಕ್ ಕೊಟ್ಟಿದ್ದಾರೆ. ಮಗಳ ಆಟ ನಿಲ್ಲಿಸಿ, ಕಾರ್ಯಕ್ರಮದಿಂದ ಹೊರಬರುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಅಷ್ಟಕ್ಕೂ ಯಾರು ಆ ಸ್ಪರ್ಧಿ? ಪೋಷಕರ ಈ ನಡೆಗೆ ಕಾರಣವೇನು? ನಿರೂಪಕ ಮೋಹನ್‌ ಲಾಲ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗ್ತಿರೋದ್ಯಾಕೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.


ಮಲಯಾಳಂ ಬಿಗ್‌ಬಾಸ್ ಸೀಸನ್ 8ರಲ್ಲಿ ಈಗ ನೇಹಾ ಫಾತಿಮಾ ವಿಚಾರವೇ ಹಾಟ್ ಟಾಪಿಕ್. ಬಿಗ್‌ಬಾಸ್ ವೇದಿಕೆಗೆ ನೇಹಾ ಅವರ ಪೋಷಕರು ದಿಢೀರ್ ಎಂಟ್ರಿ ಕೊಟ್ಟಿದ್ದಾರೆ. ಸಾಮಾನ್ಯ ಫ್ಯಾಮಿಲಿ ವೀಕ್‌ಗೂ ಮೊದಲೇ ವೇದಿಕೆಗೆ ಬಂದ ಪೋಷಕರು, ಮಗಳು ಆಟದಿಂದ ಭಾವನಾತ್ಮಕವಾಗಿ ಕುಗ್ಗಿದ್ದಾಳೆ. ಇತರ ಸ್ಪರ್ಧಿಗಳು ತಮ್ಮ ಸ್ವಾರ್ಥಕ್ಕಾಗಿ ನೇಹಾಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಇನ್ನು ಈ ಎಲ್ಲಾ ಹೈಡ್ರಾಮಾಗೆ ಪ್ರಮುಖ ಕಾರಣ ನೇಹಾ ಫಾತಿಮಾ ಹಾಗೂ ಸಹ ಸ್ಪರ್ಧಿ ಸಂತೋಷ್ ರಾಜ್ ಅಲಿಯಾಸ್ ತಾಶಿ ನಡುವಿನ ಪ್ರೇಮದ ವಿಚಾರ. ನೇಹಾ ಮತ್ತು ತಾಶಿ ನಡುವಿನ ಸಂಬಂಧದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ತಾಶಿ ಮತ್ತೊಬ್ಬ ಸ್ಪರ್ಧಿ ವೇದಂಗಿ ಜೊತೆ ನಿಕಟವಾಗಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಇದೇ ವಿಚಾರಕ್ಕೆ ನೇಹಾ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಘಟನೆ ಕೇವಲ ಬಿಗ್‌ಬಾಸ್ ಮನೆಯೊಳಗಿನ ವಿವಾದವಾಗಿ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಧಾರ್ಮಿಕ ಧ್ರುವೀಕರಣದ ಬಣ್ಣವನ್ನೂ ಪಡೆದುಕೊಂಡಿದೆ. ಉತ್ತರ ಭಾರತದ ಹಲವು ಮಾಧ್ಯಮಗಳು ಹಾಗೂ ವ್ಯಕ್ತಿಗಳು ಕಾರ್ಯಕ್ರಮದ ಪ್ರೋಮೋವನ್ನು ವ್ಯಾಪಕವಾಗಿ ಹಂಚಿಕೊಂಡು ವಿವಾದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.ಇನ್ನು ಈ ಬೆಳವಣಿಗೆಯಿಂದ ಕಾರ್ಯಕ್ರಮದ ನಿರೂಪಕ ಮೋಹನ್‌ ಲಾಲ್‌ ಕೂಡ ಟೀಕೆಗೆ ಗುರಿಯಾಗಿದ್ದಾರೆ. ವೇದಿಕೆಯ ಮೇಲೆ ಪೋಷಕರು ನೇಹಾಳನ್ನು ಗದರಿಸುವಾಗ ಮಧ್ಯಪ್ರವೇಶಿಸಿ ತಡೆಯುವ ಪ್ರಯತ್ನ ಮಾಡಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬಳ ವೈಯಕ್ತಿಕ ಆಯ್ಕೆ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕಿತ್ತು. ಆದರೆ ಮೋಹನ್‌ ಲಾಲ್‌ ಅವರ ನಡೆ ಪಿತೃಪ್ರಧಾನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

So, on Bigg Boss Malayalam, Neha Fathima’s parents came on stage to take their daughter back after she proposed to a Hindu contestant, Santhosh Raj, on the show. https://t.co/JVr2Y7jPDa

— Sharanya Shettyy (@Sharanyashettyy) November 1, 2026

 

ಆದರೆ ಪೋಷಕರ ಒತ್ತಡದ ನಡುವೆಯೂ ಧೈರ್ಯದಿಂದ ತನ್ನ ನಿಲುವು ವ್ಯಕ್ತಪಡಿಸಿದ ನೇಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ನಾನು ಕೂಡ ಒಬ್ಬ ಮನುಷ್ಯಳು, ನನಗೂ ಭಾವನೆಗಳಿವೆ. ಯಾರನ್ನಾದರೂ ಇಷ್ಟಪಡುವುದು ತಪ್ಪಲ್ಲ ಎಂದು ನೇಹಾ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಭಾವನೆಗಳಿಗೂ ಗೌರವ ಸಿಗಬೇಕು ಎಂಬ ಸಂದೇಶ ನೀಡಿದ್ದಾರೆ.

ಇದು ಧಾರ್ಮಿಕ ಮತ್ತು ಪ್ರಮುಖ ಚರ್ಚೆಗಳಿಗೆ ಕಾರಣವಾಗಿದೆ. ಉತ್ತರ ಭಾರತದ ಅನೇಕ ಮಾಧ್ಯಮಗಳು ಮತ್ತು ವ್ಯಕ್ತಿಗಳು ಪ್ರೋಮೋ ವೀಡಿಯೊವನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೊಳ್ಳುವ ಮೂಲಕ ವಿವಾದವನ್ನು ಸೃಷ್ಟಿಸುತ್ತಿದ್ದಾರೆ.

ನಿರೂಪಕ ಮೋಹನ್ ಲಾಲ್ ಕೂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ವೇದಿಕೆಯಲ್ಲಿ ಒಬ್ಬ ಸ್ಪರ್ಧಿಯನ್ನು ಆಕೆಯ ಪೋಷಕರು ಗದರಿಸಲು ಅವಕಾಶ ಮಾಡಿಕೊಟ್ಟರು ಮತ್ತು ಅದನ್ನು ತಡೆಯಲು ಪ್ರಯತ್ನಿಸಲಿಲ್ಲ ಎಂಬ ಆರೋಪ ಅವರ ಮೇಲಿದೆ. ಮೋಹನ್ ಲಾಲ್ ಅವರ ವಿಧಾನವು ಪಿತೃಪ್ರಧಾನವಾಗಿದೆ ಮತ್ತು ಮಹಿಳೆಯರ ಸ್ವಾಯತ್ತತೆಗೆ ವಿರುದ್ಧವಾಗಿದೆ ಎಂಬುದು ಟೀಕೆಯಾಗಿದೆ.. ಆದರೆ ಪೋಷಕರ ಒತ್ತಡವನ್ನು ಧೈರ್ಯದಿಂದ ಎದುರಿಸಿದ ನೇಹಾಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬೆಂಬಲ ಸಿಗುತ್ತಿದೆ. ನೇಹಾ ತಾನು ಮನುಷ್ಯಳು ಮತ್ತು ಅವಳಿಗೂ ಭಾವನೆಗಳಿವೆ. ಯಾರನ್ನಾದರೂ ಇಷ್ಟಪಡುವುದು ತಪ್ಪಲ್ಲ ಎಂದು ನೇಹಾ ಹೇಳಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಅಗುತ್ತಿದೆ. 
 

ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯ ಆಟ ಈಗ ವೈಯಕ್ತಿಕ ಸಂಬಂಧ, ಪೋಷಕರ ಹಸ್ತಕ್ಷೇಪ, ಮಹಿಳಾ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಚರ್ಚೆಗಳತ್ತ ತಿರುಗಿದೆ. ನೇಹಾ ಅವರ ಮುಂದಿನ ನಡೆ ಏನು? ಪೋಷಕರ ಮಾತಿಗೆ ಮಣಿಯುತ್ತಾರಾ ಅಥವಾ ಆಟ ಮುಂದುವರಿಸುತ್ತಾರಾ? ಅನ್ನೋ ಕುತೂಹಲ ಈಗ ವೀಕ್ಷಕರಲ್ಲಿದೆ.

ಈ ನೇಹಾ ಫಾತಿಮಾ ಯಾರು?
ನೇಹಾ ಫಾತಿಮಾ ಅವರು ಮಲಯಾಳಂನ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ ಬಾಸ್‌ ಮಲಯಾಳಂ ಸೀಸನ್‌ 8' ರ ಸ್ಪರ್ಧಿSocial Media Influencer ಆಗಿದ್ದಾರೆ. ಇವರು ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂತಲ್ಮನ್ನಾ ಮೂಲದವರು. ರಿಯಾಲಿಟಿ ಶೋಗೆ ಬರುವ ಮುನ್ನ ವ್ಲಾಗ್‌ಗಳು, ಫ್ಯಾಷನ್ ಮತ್ತು ಜೀವನಶೈಲಿಯ ವಿಡಿಯೋಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿದ್ದರು. ಸದ್ಯ  'ಬಿಗ್‌ ಬಾಸ್‌ ಮಲಯಾಳಂ ಸೀಸನ್‌ 8ರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. 

 

Add Zee News as a Preferred Source
TAGS:
Bigg Boss Kannada