• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ತೆಂಗಿನಮರವೊಂದರಲ್ಲಿ ಒಂದಲ್ಲ.. ಎರಡಲ್ಲ.. ಐದು ಸುಳಿ ಪತ್ತೆ!!.. ಪ್ರಕೃತಿ ವಿಸ್ಮಯ

ತೆಂಗಿನಮರವೊಂದರಲ್ಲಿ ಒಂದಲ್ಲ.. ಎರಡಲ್ಲ.. ಐದು ಸುಳಿ ಪತ್ತೆ!!.. ಪ್ರಕೃತಿ ವಿಸ್ಮಯ

ಪ್ರಕೃತಿಯಲ್ಲಿ ಕೆಲವೊಂದು ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಒಂದೇ ಸುಳಿ ಇರುತ್ತದೆ. ಅಪರೂಪಕ್ಕೆ ಎರಡು ಸುಳಿ ಇರುವ ಮರಗಳನ್ನೂ ನೋಡಿರಬಹುದು. ಆದರೆ ಇಲ್ಲೊಂದು ತೆಂಗಿನ ಮರದಲ್ಲಿ ಬರೋಬ್ಬರಿ ಐದು ಸುಳಿಗಳು ಕಾಣಿಸಿಕೊಂಡಿವೆ.

Written ByRamya. R. Gowda
Published: Nov 03, 2026, 11:58 AM IST|Updated: Nov 03, 2026, 12:13 PM IST
joinshare
ತೆಂಗಿನಮರವೊಂದರಲ್ಲಿ ಒಂದಲ್ಲ.. ಎರಡಲ್ಲ.. ಐದು ಸುಳಿ ಪತ್ತೆ!!.. ಪ್ರಕೃತಿ ವಿಸ್ಮಯ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

ಬಿಗ್‌ಬಾಸ್‌ ಮನೆಯಲ್ಲಿ ಮೂಡಿದ ಪ್ರೇಮ ಪ್ರಸಂಗ!.. ಮಗಳನ್ನೆ ವಾಪಸ್‌ ಕರೆದ ಫೋಷಕರು

2

ಮುರುಸು" ಚಂಡಮಾರುತ ಏಫೆಕ್ಟ್‌ : ತಿರುಪತಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದ TTD

3

ಮಹಿಳಾ ಉದ್ಯೋಗಿಗಳೇ ಗಮನಿಸಿ.. ಈ ಆ್ಯಪ್‌ನಲ್ಲಿ ಅಪ್ಲೈ ಮಾಡಿದ್ರೆ ಸ್ವಯಂ ಮಂಜೂರಾಗುತ್ತೆ ʼಮುಟ್ಟಿನ ರಜೆʼ

4

ತೆಂಗಿನಮರವೊಂದರಲ್ಲಿ ಒಂದಲ್ಲ.. ಎರಡಲ್ಲ.. ಐದು ಸುಳಿ ಪತ್ತೆ!!.. ಪ್ರಕೃತಿ ವಿಸ್ಮಯ

5

ಬೈಟ್‌ಡ್ಯಾನ್ಸ್ ಸಹ-ಸಂಸ್ಥಾಪಕನನ್ನು ಹಿಂದಿಕ್ಕಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್‌ ಅಂಬಾನಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಪ್ರಕೃತಿಯಲ್ಲಿ ಕೆಲವೊಂದು ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಒಂದೇ ಸುಳಿ ಇರುತ್ತದೆ. ಅಪರೂಪಕ್ಕೆ ಎರಡು ಸುಳಿ ಇರುವ ಮರಗಳನ್ನೂ ನೋಡಿರಬಹುದು. ಆದರೆ ಇಲ್ಲೊಂದು ತೆಂಗಿನ ಮರದಲ್ಲಿ ಬರೋಬ್ಬರಿ ಐದು ಸುಳಿಗಳು ಕಾಣಿಸಿಕೊಂಡಿವೆ. ಒಂದೇ ಮರದಲ್ಲಿ ಐದು ಸುಳಿಗಳನ್ನ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಈ ಅಪರೂಪದ ತೆಂಗಿನ ಮರ ಇರೋದೆಲ್ಲಿ? ತೋರಿಸ್ತೀವಿ ನೋಡಿ.

ಒಂದೇ ತೆಂಗಿನ ಮರದಲ್ಲಿ ಐದು ಸುಳಿ ಸೃಷ್ಟಿ!
ಪ್ರಕೃತಿಯ ಈ ವಿಸ್ಮಯ ಕಂಡು ಜನರು ಅಚ್ಚರಿಗೊಂಡಿದ್ದಾರೆ. ಸಾಮಾನ್ಯವಾಗಿ ತೆಂಗಿನ ಮರದಲ್ಲಿ ಒಂದು ಸುಳಿ ಇರುವುದು ಸಹಜ. ಎರಡು ಸುಳಿ ಕಂಡುಬಂದರೆ ಅದೇ ವಿಶೇಷ. ಆದ್ರೆ ಇಲ್ಲಿ ಬರೋಬ್ಬರಿ ಐದು ಸುಳಿಗಳು ಒಂದೇ ಮರದಲ್ಲಿ ಕಾಣಿಸಿಕೊಂಡಿವೆ.ಅಂದಹಾಗೆ ಈ ಅಪರೂಪದ ತೆಂಗಿನ ಮರ ಇರೋದು ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ. ಗ್ರಾಮದ ರವೀಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ವಿಶೇಷ ತೆಂಗಿನ ಮರವಿದೆ. ಒಂದೇ ಮರದಲ್ಲಿ ಐದು ಸುಳಿಗಳು ಬೆಳೆದಿರುವುದನ್ನು ಕಂಡು ರವೀಶ್ ಮಾತ್ರವಲ್ಲದೆ ಗ್ರಾಮಸ್ಥರೂ ಅಚ್ಚರಿಗೊಂಡಿದ್ದಾರೆ.ಈ ಬಗ್ಗೆ ರೈತರು ಮಾತನಾಡಿದ್ದು, ಇದುವೊಂದು ಪ್ರಕೃತಿ ವಿಸ್ಮಯ ದೇವರ ಮಹಿಮೆ ಇದಕ್ಕೆ ಕಾರಣವೆಂದು ಹೇಳಿದ್ದರು


ಇನ್ನು ಈ ಅಪರೂಪದ ತೆಂಗಿನ ಮರದ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೂ ಹರಡಿದೆ. ಹೀಗಾಗಿ ವಿಶೇಷ ಮರವನ್ನು ಕಣ್ತುಂಬಿಕೊಳ್ಳಲು ಅಕ್ಕಪಕ್ಕದ ಗ್ರಾಮಗಳ ಜನರು ಆಗಮಿಸುತ್ತಿದ್ದಾರೆ. ಮರವನ್ನು ಕಂಡು ಪ್ರಕೃತಿಯ ಈ ಅದ್ಭುತಕ್ಕೆ ಬೆರಗಾಗುತ್ತಿದ್ದಾರೆ. ಒಂದು ಸುಳಿ ಸಾಮಾನ್ಯ.. ಎರಡು ಸುಳಿ ವಿಶೇಷ.. ಆದ್ರೆ ಒಂದೇ ತೆಂಗಿನ ಮರದಲ್ಲಿ ಐದು ಸುಳಿ ಅಂದ್ರೆ ನಿಜಕ್ಕೂ ವಿಸ್ಮಯವೇ ಸರಿ. ಪ್ರಕೃತಿಯ ಈ ಅಪರೂಪದ ಕೌತುಕ ಇದೀಗ ಕುಮಚಹಳ್ಳಿ ಗ್ರಾಮದ ಪ್ರಮುಖ ಆಕರ್ಷಣೆಯಾಗಿದೆ.

ಒಟ್ಟಿನಲ್ಲಿ ಒಂದೇ ಮರದಲ್ಲಿ ಐದು ಸುಳಿಗಳು ಕಾಣಿಸಿಕೊಂಡಿರೋದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ಪ್ರಕೃತಿಯ ಈ ಅಪರೂಪದ ವಿಸ್ಮಯ ನೋಡಲು ಜನರು ಮುಗಿಬೀಳುತ್ತಿದ್ದಾರೆ.

 

ಪಂಪ್‌ಸೆಟ್ ಕೇಬಲ್ ಕಳ್ಳರ ಹಾವಳಿಗೆ ರೈತರು ಕಂಗಾಲು!

ಇತ್ತ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಈಗಾಗಲೇ ಬೆಳೆ ಇಲ್ಲದೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಕಳ್ಳರ ಕಾಟ ಮತ್ತೊಂದು ಸಂಕಷ್ಟ ತಂದಿಟ್ಟಿದೆ. ಜಮೀನುಗಳಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ಗಳ ಕೇಬಲ್‌ಗಳನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಸರಣಿ ಕೇಬಲ್ ಕಳ್ಳತನ ನಡೆದಿದ್ದು, ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್‌ಗಳು ಕಳುವಾಗಿದ್ದು, ಪೊಲೀಸರ ನಿರ್ಲಕ್ಷ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಮಳೆ ಇಲ್ಲದೆ ಬೆಳೆ ನಷ್ಟ.. ಮತ್ತೊಂದೆಡೆ ಕಳ್ಳರ ಕಾಟ.. ಮೊದಲೇ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಈಗ ಕೇಬಲ್ ಕಳ್ಳರ ಹಾವಳಿ ನುಂಗಲಾರದ ತುತ್ತಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಜಮೀನುಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ರಾತ್ರಿ ವೇಳೆ ಜಮೀನುಗಳಿಗೆ ನುಗ್ಗಿರುವ ಕಳ್ಳರು, ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಕೇಬಲ್‌ಗಳನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆ. ಹತ್ತಕ್ಕೂ ಹೆಚ್ಚು ರೈತರ ಜಮೀನುಗಳಲ್ಲಿ ಕೇಬಲ್ ಕಳ್ಳತನ ನಡೆದಿದ್ದು, ಕೇಬಲ್ ಒಳಗಿರುವ ತಾಮ್ರದ ತಂತಿಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು ಹತ್ತು ಜಮೀನುಗಳಲ್ಲಿ ಬರೋಬ್ಬರಿ ಎರಡು ಲಕ್ಷ ರೂಪಾಯಿ ಮೌಲ್ಯದ ಕೇಬಲ್‌ಗಳು ಕಳುವಾಗಿವೆ. ಪಂಪ್‌ಸೆಟ್‌ಗಳಿಗೆ ಕೇಬಲ್ ಇಲ್ಲದೆ ನೀರು ಹಾಯಿಸಲು ಸಾಧ್ಯವಾಗದೆ ರೈತರು ಪರದಾಡುವಂತಾಗಿದೆ. ಬೆಳೆ ಬೆಳೆಯಲು ಕಷ್ಟಪಡುತ್ತಿರುವ ರೈತರಿಗೆ ಈ ಕಳ್ಳತನ ಗಾಯದ ಮೇಲೆ ಬರೆ ಎಳೆದಂತಾಗಿದೆ.ಇನ್ನು ಗ್ರಾಮದಲ್ಲಿ ಸರಣಿ ಕೇಬಲ್ ಕಳ್ಳತನ ನಡೆಯುತ್ತಿದ್ದರೂ ಬೇಗೂರು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ರೈತರ ಆರೋಪ. ಕಳ್ಳರನ್ನು ಪತ್ತೆಹಚ್ಚಿ ಕಳುವಾಗಿರುವ ಕೇಬಲ್‌ಗಳನ್ನು ಮರಳಿ ಕೊಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಬೆಳೆ ನಷ್ಟದ ಸಂಕಷ್ಟದ ನಡುವೆಯೇ ಕೇಬಲ್ ಕಳ್ಳರ ಹಾವಳಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರಿಗೆ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

 

 

 

Add Zee News as a Preferred Source
TAGS:
Kannada News