• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ದೊಡ್ಮನೆಯಲ್ಲಿ ಸ್ನೇಹಿತರ ಮಧ್ಯ ಬಿರುಕು : ತಾಂಡವ್‌ಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಿದ ಗಗನ್!

ದೊಡ್ಮನೆಯಲ್ಲಿ ಸ್ನೇಹಿತರ ಮಧ್ಯ ಬಿರುಕು : ತಾಂಡವ್‌ಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಿದ ಗಗನ್!

Gagan Chinnappa vs Tandav Ram : ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವೆ ದಿನದಿಂದ ದಿನಕ್ಕೆ ಮನಸ್ತಾಪಗಳು ಹೆಚ್ಚಾಗುತ್ತಿದೆ. ಟಾಸ್ಕ್‌ ನಡುವೆ ಗೆಳೆಯರ ನಡುವೆಯೇ ಜಗಳಗಳು ಉಂಟಾಗುತ್ತಿವೆ. ಪ್ರಸ್ತುತ ಗೆಳೆತನವನ್ನು ನೋಡದೇ ಗಗನ ಚಿನ್ನಪ್ಪ ತಾಂಡವ್‌ ರಾಮ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸೋಲು-ಗೆಲುವಿನ ನ್ಯಾಯಯುತ ಆಟದಲ್ಲಿ ಫ್ರೆಂಡ್ ಶಿಪ್ ಲೆಕ್ಕ ಇಲ್ಲ ಎನ್ನುವುದನ್ನ ಸಾಭೀತು ಪಡಿಸಿದ್ದಾರೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಮಾಹಿತಿ

Written ByKrishna NK
Published: Oct 22, 2026, 02:34 PM IST|Updated: Oct 22, 2026, 02:37 PM IST
joinshare
ದೊಡ್ಮನೆಯಲ್ಲಿ ಸ್ನೇಹಿತರ ಮಧ್ಯ ಬಿರುಕು : ತಾಂಡವ್‌ಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಿದ ಗಗನ್!
Image Credit: Bigg Boss Kannada 13 updates

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಕಲ್ಲಿನಿಂದ ಜಜ್ಜಿ, ಬಾಯಿಗೆ ವೇಲ್ ತುರುಕಿ ಹೆಂಡತಿ ಹ*ತ್ಯೆ : ರಾಜಕಾಲುವೆ ರಹಸ್ಯ ಬಯಲು.. ಗಂಡ ಅರೆಸ್ಟ್

ಕಲ್ಲಿನಿಂದ ಜಜ್ಜಿ, ಬಾಯಿಗೆ ವೇಲ್ ತುರುಕಿ ಹೆಂಡತಿ ಹ*ತ್ಯೆ : ರಾಜಕಾಲುವೆ ರಹಸ್ಯ ಬಯಲು.. ಗಂಡ ಅರೆಸ್ಟ್

2

ಕರ್ನಾಟಕದ ಬರ ಪರಿಹಾರಕ್ಕೆ 20,585.73 ಕೋಟಿ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಪತ್ರ

3

ದೊಡ್ಮನೆಯಲ್ಲಿ ಸ್ನೇಹಿತರ ಮಧ್ಯ ಬಿರುಕು : ತಾಂಡವ್‌ಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆ ನೀಡಿದ ಗಗನ್!

4

ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಮನೆಯಲ್ಲಿಯೇ ಶೇ.100 ರಷ್ಟು ಶುದ್ಧ ರೋಸ್ ವಾಟರ್ ಅನ್ನು ಸುಲಭವಾಗಿ ತಯಾರಿಸುವುದು ಹೇಗೆ..

5

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈಜಲು ಹೋಗಿ 17 ವರ್ಷದ ಯುವಕ ನಾಪತ್ತೆ; ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kannada 13 updates : 'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವಿನ ಸಂಬಂಧ ಕ್ಷಣಕ್ಕೊಂದು ತಿರುವು ಪಡೆಯುತ್ತಿವೆ. ಅದರಲ್ಲೂ ಆರಂಭದಿಂದಲೂ ಆಪ್ತ ಸ್ನೇಹಿತರೆಂದು ಗುರುತಿಸಿಕೊಂಡಿರುವ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ನಡುವೆ ಈಗ ಆಟದ ವಿಚಾರಕ್ಕೆ ಬಿರುಕು ಮೂಡುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ಟಾಸ್ಕ್‌ ಗೆಲ್ಲಲು ಸ್ನೇಹವನ್ನು ಬದಿಗಿಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಗಗನ್ ಚಿನ್ನಪ್ಪ ಅವರು ತಮ್ಮ ಆತ್ಮೀಯ ಸ್ನೇಹಿತ ತಾಂಡವ್ ರಾಮ್‌ಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು... ಈ ಶೋಗೆ ಬರುವುದಕ್ಕೂ ಮುನ್ನವೇ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ನಡುವೆ ಒಳ್ಳೆಯ ಸ್ನೇಹವಿತ್ತು. ಅದೇ ಬಾಂಧವ್ಯ ಬಿಗ್ ಬಾಸ್ ಮನೆಯಲ್ಲೂ ಮುಂದುವರಿದುಕೊಂಡು ಬಂದಿತ್ತು. ಆದರೆ, ದೊಡ್ಮನೆಯ ಆಟದಲ್ಲಿ ಸ್ನೇಹ ಅಂತ ಕುಳಿತರೆ ಗೆಲ್ಲುವುದು ಕಷ್ಟಕರ, ಈ ವಿಚಾರ ಈಗಾಗಲೇ ಸ್ಪರ್ಧಿಗಳಿಗೆ ಅರ್ಥವಾಗಿದೆ. ಹೀಗಾಗಿ, ಆಟದ ದೃಷ್ಟಿಯಿಂದ ಆ ಬಂಧವನ್ನು ಸ್ವಲ್ಪ ಮಟ್ಟಿಗೆ ಸಡಿಲ ಮಾಡಿಕೊಳ್ಳಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ.

ಪ್ರಸ್ತುತ ವಾರ ಬಿಗ್ ಬಾಸ್ ಮನೆಯಲ್ಲಿ 'ಲೂಟಿಕೋರರು ಮತ್ತು ಕಾವಲುಗಾರರು' ಎಂಬ ವಿನೂತನ ಥೀಮ್ ಆಧಾರಿತ ಟಾಸ್ಕ್ ನೀಡಲಾಗಿದೆ. ಮ್ಯೂಸಿಯಂ ಒಳಗೆ ಕೆಲವು ಅಮೂಲ್ಯವಾದ ವಸ್ತುಗಳನ್ನು ಇಡಲಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳು ಲೂಟಿಕೋರರ ತಂಡದಲ್ಲಿದ್ದಾರೆ. ಇತ್ತ ಆ ವಸ್ತುಗಳನ್ನು ಕಾವಲು ಕಾಯುವ ಜವಾಬ್ದಾರಿಯನ್ನು ಕಾವಲುಗಾರರಿಗೆ ವಹಿಸಲಾಗಿದೆ. ಈ ಇಡೀ ಆಟದಲ್ಲಿ ಗಗನ್ ಚಿನ್ನಪ್ಪ ಅವರು ಉಸ್ತುವಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಮತ್ತೊಂದೆಡೆ ತಾಂಡವ್ ರಾಮ್ ಅವರು ಲೂಟಿಕೋರರ ತಂಡದಲ್ಲಿ ಆಡುತ್ತಿದ್ದಾರೆ. ಇವರ ಜೊತೆಗೆ ಸೌಂದರ್ಯಾ ಶೆಟ್ಟಿ, ಆಸಿಯಾ, ಲಕ್ಷ್ಮಿ ಗೌಡ, ಕುಮಾರಿ ಹಾಗೂ ಸೋನಿಕಾ ಕೂಡ ಇದ್ದಾರೆ. ಈ ಟಾಸ್ಕ್ ನಡೆಯುತ್ತಿದ್ದ ವೇಳೆ ತಾಂಡವ್ ರಾಮ್ ಅವರು ಆಟದ ಒಂದು ನಿಯಮವನ್ನು ಉಲ್ಲಂಘನೆ ಮಾಡಿದರು. ನಿಯಮ ಮುರಿದ ಕಾರಣ ಅವರಿಗೆ ಶಿಕ್ಷೆ ನೀಡುವುದು ಅನಿವಾರ್ಯವಾಯಿತು. ಸ್ನೇಹದ ಸಲುಗೆ ಬಳಸಿ ಹೇಗಾದರೂ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಾಂಡವ್ ರಾಮ್ ಸಾಕಷ್ಟು ಪ್ರಯತ್ನ ಪಟ್ಟರಾದರೂ, ಗಗನ್ ಚಿನ್ನಪ್ಪ ಅವರ ಮುಂದೆ ಅವರ ಯಾವುದೇ ತಂತ್ರ ನಡೆಯಲಿಲ್ಲ.

ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ತಾಂಡವ್ ರಾಮ್ ಅವರು 30 ನಿಮಿಷಗಳ ಕಾಲ ಜೈಲಿಗೆ ಹೋಗಲೇಬೇಕು ಎಂದು ಗಗನ್ ಚಿನ್ನಪ್ಪ ಕಡಕ್ ಆದೇಶ ಹೊರಡಿಸಿದರು. ಸ್ನೇಹಿತನಾಗಿದ್ದರೂ ಆಟದ ನಿಯಮಗಳಿಗೆ ಬೆಲೆ ಕೊಟ್ಟು, ಸ್ನೇಹದ ಮುಲಾಜಿಗೆ ಅವಕಾಶ ನೀಡದೆ ಗಗನ್ ಅವರು ತಾಂಡವ್ ಅವರನ್ನು ಜೈಲಿಗೆ ಕಳುಹಿಸಿದರು. ಈ ಘಟನೆ ಮನೆ ಮಂದಿಗೆ ಸ್ನೇಹಕ್ಕಿಂತ ನ್ಯಾಯವೇ ಮೇಲು ಎಂಬುವುದನ್ನು ಎತ್ತಿ ತೋರಿತು.

ಮತ್ತೊಂದೆಡೆ, ಕಾವಲುಗಾರರ ತಂಡದಲ್ಲಿ ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್ ಮತ್ತು ಧನುಷ್ ಇದ್ದಾರೆ. ಆದರೆ ಪ್ರಶಾಂತ್ ಹಾಗೂ ಗಾನವಿ ಅವರು ಲೂಟಿಕೋರರ ತಂಡದ ಪರವಾಗಿ ನಿಂತು ಆಡುತ್ತಿದ್ದಾರೆ ಎಂಬ ಅನುಮಾನ ಕೆಲ ಸ್ಪರ್ಧಿಗಳಲ್ಲಿ ಮೂಡಿದೆ. ಅದರಲ್ಲೂ ಯಶಸ್ ಅವರು ಈ ಕುರಿತು ಬಲವಾದ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಗಾನವಿ ಅವರು ಕಣ್ಣೀರು ಹಾಕಿದ್ದು, ಮನೆಯಲ್ಲಿ ಹೊಸದಾದ ಮನಸ್ತಾಪಗಳಿಗೆ ಹಾಗೂ ಹೈಡ್ರಾಮಾಗೆ ಇದು ದಾರಿ ಮಾಡಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಸ್ನೇಹ ಮತ್ತು ಆಟದ ತಿರುವುಗಳು ಬಿಗ್ ಬಾಸ್ ಮನೆಯಲ್ಲಿ ಯಾವೆಲ್ಲಾ ಬದಲಾವಣೆ ತರಲಿವೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Bigg Boss Kannada Season 13