ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದೆ. ಮನೆಯ ಸ್ಪರ್ಧಿಗಳ ನಡುವೆ ಮಹಾ ರಾಣಿಯ ಪಟ್ಟಕ್ಕಾಗಿ ನಡೆಯುತ್ತಿರುವ ಪೈಪೋಟಿ ಒಂದೆಡೆಯಾದರೆ, ಮತ್ತೊಂದೆಡೆ ತಂತ್ರ – ಪ್ರತಿತಂತ್ರಗಳ ಆಟ ಜೋರಾಗಿದೆ. ಈ ವಾರದ ಮಹಾರಾಣಿ ಪಟ್ಟಕ್ಕಾಗಿ ನಡೆಯುತ್ತಿರುವ ಸ್ಪರ್ಧೆ ಇದೀಗ ಕುತೂಹಲದ ಘಟ್ಟ ತಲುಪಿದೆ. ಅದರಲ್ಲೂ ಸೌಂದರ್ಯ ಶೆಟ್ಟಿಯನ್ನು ಆಟದಿಂದ ಹೊರಗಿಡಲು ಗಾನವಿ ಮತ್ತು ಆಸಿಯಾ ತಂಡಗಳು ರೂಪಿಸಿದ ಸೀಕ್ರೆಟ್ ಮಾಸ್ಟರ್ ಪ್ಲ್ಯಾನ್ ಎಲ್ಲರ ಗಮನ ಸೆಳೆದಿದೆ.
ಈ ವಾರದ ರಾಜಕುಮಾರಿ ಪಟ್ಟದ ಟಾಸ್ಕ್‌ನಲ್ಲಿ ಮೂರು ತಂಡಗಳು ಕಣಕ್ಕೆ ಇಳಿದಿದ್ದವು. ಗಾನವಿ ಪರವಾಗಿ ಧನುಷ್, ಮಂಜುನಾಥ್ ಹಾಗೂ ಗಗನ್ ಚಿನ್ನಪ್ಪ ಆಟವಾಡಿದರೆ, ಸೌಂದರ್ಯ ಶೆಟ್ಟಿ ಪರವಾಗಿ ಯಶಸ್ ಮತ್ತು ತಾಂಡವ್ ರಾಮ್ ಸ್ಪರ್ಧಿಸಿದ್ದರು. ಇನ್ನು ಆಸಿಯಾ ಪರವಾಗಿ ಕಿರಣ್ ಶಾಸ್ತ್ರಿ ಹಾಗೂ ಪ್ರಶಾಂತ್ ತಮ್ಮ ಸಾಮಾರ್ಥ್ಯ ಪ್ರದರ್ಶಿಸಿದ್ದರು. ಸೌಂದರ್ಯ ಶೆಟ್ಟಿಯನ್ನು ಆಟದಿಂದ ಹೊರಗಿಡಲು ಆಸಿಯಾ ಹಾಗೂ ಗಾನವಿ ಗೌಡ ತಂಡ ಮಾಡಿದ ಸೀಕ್ರೆಟ್ ಪ್ಲ್ಯಾನ್ ಈ ಬಾರಿಯ ಹೈಲೆಟ್ ಆಗಿದೆ. ಈ ಮಧ್ಯೆ ಗಾನವಿ ಹಾಗೂ ಜಗ್ಗು ನಡುವೆ ಮಾತಿನ ಚಕಮಕಿಯಲ್ಲಿ ಮಂಜ ಮಧ್ಯೆ ಪ್ರವೇಶಿಸಿ ಗಾನವಿ ಪರ ಮಾತನಾಡಿರುವುದು ಜಗಳಕ್ಕೆ ಕಾರಣವಾಗಿದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರವಲ್ಲದೇ ಜಗಳವೂ ಜೋರಾಗಿದೆ. ಗಾನವಿ ಹಾಗೂ ಜಗ್ಗು ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸಿದೆ. ಈ ವೇಳೆ ಮಂಜು ಮಧ್ಯ ಪ್ರವೇಶಿಸಿದ್ದು, ಗಾನವಿ ಪರವಾಗಿ ಮಾತನಾಡಿದ್ದಾರೆ. ಜಗದೀಶ್ ವಿರುದ್ಧ ಆಕ್ರೋಶ ಹೊರ ಹಾಕಿದ ಮಂಜು ಮಾಡಿರೋದು ಒಂದೇ ಒಂದು ಸಿನಿಮಾ, ಗಂಡಸರ ಹಾಗೇ ನಡೆದುಕೋ ಎಂದು ಖಡಕ್ ಆಗಿ ಹೇಳಿದ್ದಾರೆ. ಮಂಜು ಅವರ ಈ ಮಾತು ಮನೆಯಲ್ಲಿ ಮತ್ತೊಂದು ವಾಗ್ವಾದಕ್ಕೆ ಕಾರಣವಾಗಿರುವ ಪ್ರೋಮೋ ರಿಲೀಸ್ ಆಗಿದೆ.
ಯುವರಾಣಿ ಗಾನವಿ ಪರ ನಿಂತ ಮಂಜುನಾಥ್! ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00 ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq #BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKBBKPromo https://t.co/fLATCzSdNc
— Colors Kannada (@ColorsKannada) November 17, 2026
ಗಾನವಿ ಪರವಾಗಿ ನಿಂತು ಮಂಜು ಅವರ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಗಾನವಿ ಮತ್ತು ಜಗ್ಗಿ ನಡುವಿನ ಕಿತ್ತಾಟಕ್ಕೆ ಮಂಜು ಎಂಟ್ರಿ ಕೊಟ್ಟಿರುವುದರಿಂದ ಮನೆಯ ವಾತಾವರಣ ಮತ್ತಷ್ಟು ಕಾವೇರಿದೆ. ಗಾನವಿ ಪರ ಮಂಜ ನಿಂತಿರುವುದು ಅವರ ಆಟದ ಭಾಗವೇ ಅಥವಾ ಸ್ನೇಹದ ದೃಷ್ಟಿಯಿಂದ ನೀಡಿದ ಬೆಂಬಲವೇ ಎಂಬ ಕುತೂಹಲ ವೀಕ್ಷಕರಲ್ಲಿದೆ.
ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆದ ಇಂತಹ ಘಟನೆಗಳು ವಾರಾಂತ್ಯದ ಸಂಚಿಕೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗುವುದು ಸಾಮಾನ್ಯ. ಹೀಗಾಗಿ ಈ ಬಾರಿಯ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಗಾನವಿ, ಜಗ್ಗಿ ಮತ್ತು ಮಂಜು ನಡುವಿನ ಗಲಾಟೆಯನ್ನು ಪ್ರಸ್ತಾಪಿಸುತ್ತಾರಾ ಎಂಬ ನೀರಿಕ್ಷೆ ಹೆಚ್ಚಾಗಿದೆ. ಈ ಮೂವರಿಗೂ ವಾರಾಂತ್ಯದಲ್ಲಿ ಯಾವ ರೀತಿ ಕ್ಲಾಸ್ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.