• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬಿಗ್ ಬಾಸ್ ರೋಚಕ ಟಾಸ್ಕ್ ಗೆದ್ದು ಬೀಗಿದ ಗಗನ್‌ಗೆ ನೂತನ ಕ್ಯಾಪ್ಟನ್ ಪಟ್ಟ.! ಉಳಿದವರ ಗತಿ ಏನು?

ಬಿಗ್ ಬಾಸ್ ರೋಚಕ ಟಾಸ್ಕ್ ಗೆದ್ದು ಬೀಗಿದ ಗಗನ್‌ಗೆ ನೂತನ ಕ್ಯಾಪ್ಟನ್ ಪಟ್ಟ.! ಉಳಿದವರ ಗತಿ ಏನು?

ಈ ವಾರದ ಕಠಿಣ ಟಾಸ್ಕ್‌ನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಗಗನ್ ಅವರು ನೂತನ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ನಾಮಿನೇಷನ್ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಬಚಾವ್ ಆಗಿದ್ದಾರೆ.. ಇದೀಗ ಎಲಿಮಿನೇಷನ್‌ ತೂಗುಗತ್ತಿ ಇತರ ಸ್ಪರ್ಧಿಗಳ ಮೇಲಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written ByKrishna NK
Published: Oct 17, 2026, 01:44 PM IST|Updated: Oct 17, 2026, 01:45 PM IST
joinshare
ಬಿಗ್ ಬಾಸ್ ರೋಚಕ ಟಾಸ್ಕ್ ಗೆದ್ದು ಬೀಗಿದ ಗಗನ್‌ಗೆ ನೂತನ ಕ್ಯಾಪ್ಟನ್ ಪಟ್ಟ.! ಉಳಿದವರ ಗತಿ ಏನು?
Image Credit: Gagan Chinnappa

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

"ಐ ಲವ್ ಯು ಡ್ಯಾಡ್ ಆಂಡ್‌ ಮಾಮ್" : ತಂದೆ-ತಾಯಿಗೆ ಮೆಸೇಜ್ ಕಳುಹಿಸಿ ಯುವತಿ ಆತ್ಮಹ*ತ್ಯೆ

2

ಹಬ್ಬದ ಸೀಸನ್‌ನಲ್ಲಿ ಟೊಯೋಟಾ ಅಗ್ಗದ ಕಾರು ಬಿಡುಗಡೆ! ಸುರಕ್ಷತಾ ಫೀಚರ್ಸ್‌ ಮಾತ್ರ ಸೂಪರ್!

3

ಮಾಧ್ಯಮದ ಹೆಸರಲ್ಲಿ ವಸೂಲಿ: ಸಲೂನ್ ಮೇಲೆ ದಾಳಿ ಮಾಡಿ ಸಿಕ್ಕಿಬಿದ್ದ ಐನಾತಿ ಲೇಡಿ ಗ್ಯಾಂಗ್!

4

SBIಯಲ್ಲಿ 180 ದಿನಗಳ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ? ಹಿರಿಯ ನಾಗರಿಕರಿಗೆ ಎಷ್ಟು ಲಾಭ!

5

ಕಾವ್ಯ ಮಾರನ್‌ - ಅನಿರುದ್ಧ್​ ಮದುವೆ.. ಇಬ್ಬರ ಆಸ್ತಿ ಲೆಕ್ಕಚಾರ ಕೇಳಿದ್ರೆ ನಿಮ್ಮ ತಲೆ ಗಿರ್‌ ಅನ್ನುತ್ತೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss News captain Gagan : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಲೇ ಇದೆ. ದೊಡ್ಮನೆ ವಾರದ ಕ್ಯಾಪ್ಟನ್ ಆಗುವುದು ಅಂದರೆ ಅದು ಸುಲಭದ ಮಾತಲ್ಲ. ಈಗ ಗಗನ್ ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಆಟದ ಮೂಲಕ ಬಿಗ್ ಬಾಸ್ ಮನೆಯ ನೂತನ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ.

ಹೌದು.. ಬಿಗ್ ಹೌಸ್‌ನಲ್ಲಿ ಪ್ರತಿದಿನದ ಜಗಳ, ಮನಸ್ತಾಪಗಳು ಮತ್ತು ಇವೆಲ್ಲದರ ನಡುವೆ ವಾರದ ಕ್ಯಾಪ್ಟನ್ ಪಟ್ಟ ಅಲಂಕರಿಸುವುದು ಎಲ್ಲ ಸ್ಪರ್ಧಿಗಳ ದೊಡ್ಡ ಕನಸು. ಆದರೆ ಇದು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಮನೆಯ ಕ್ಯಾಪ್ಟನ್ ಆಗುವುದರಿಂದ ಸಿಗುವ ದೊಡ್ಡ ಲಾಭವೆಂದರೆ ಎಲಿಮಿನೇಷನ್ ಭಯದಿಂದ ಮುಕ್ತಿ. ಗಗನ್ ಅವರಿಗೆ ಈಗ ಈ ಅದೃಷ್ಟ ಒಲಿದು ಬಂದಿದ್ದು, ಅವರ ಆಟಕ್ಕೆ ಇದೊಂದು ದೊಡ್ಡ ಮೈಲೇಜ್ ಅಂತ ಹೇಳಬಹುದು..

ಈ ಬಾರಿ ಕ್ಯಾಪ್ಟನ್ಸಿ ಗಾಗಿ ನಡೆದ ಟಾಸ್ಕ್‌ನಲ್ಲಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಗಾನವಿ, ಕಿರಣ್ ಶಾಸ್ತ್ರಿ, ಗಗನ್ ಮತ್ತು ಯಶಸ್ ಈ ರೇಸ್‌ನಲ್ಲಿದ್ದರು. ಬಿಗ್ ಬಾಸ್ ನೀಡಿದ ನೀರನ್ನು ಉಳಿಸಿಕೊಳ್ಳುವ ಈ ಕಠಿಣ ಟಾಸ್ಕ್‌ನಲ್ಲಿ ಮೊದಲು ಕಿರಣ್ ಶಾಸ್ತ್ರಿ ಅವರು ಆಟದಿಂದ ಹೊರಬಿದ್ದರು. ಆನಂತರ ಗಾನವಿ ಕೂಡ ಹಿನ್ನಡೆ ಅನುಭವಿಸಿ ಸ್ಪರ್ಧೆಯಿಂದ ಹೊರಬಂದರು.

ಕೊನೆಯ ಹಂತದಲ್ಲಿ ಯಶಸ್ ಹಾಗೂ ಗಗನ್ ನಡುವೆ ತೀವ್ರ ಹೋರಾಟ ನಡೆದು, ರೋಚಕ ಸನ್ನಿವೇಶ ನಿರ್ಮಾಣವಾಯಿತು. ಇಬ್ಬರ ನಡುವೆ ನಡೆದ ಈ ನಿಕಟ ಪೈಪೋಟಿಯಲ್ಲಿ ಕೊನೆಗೂ ಗಗನ್ ಅವರು ಮೇಲುಕೈ ಸಾಧಿಸಿ ಕ್ಯಾಪ್ಟನ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಲವು ವಾರಗಳ ನಿರಂತರ ಆಟದ ಬಳಿಕ ಗಗನ್ ಅವರಿಗೆ ಸಿಕ್ಕಿರುವ ಈ ದೊಡ್ಡ ಜಯವು ಅವರ ಮುಂದಿನ ಆಟಕ್ಕೆ ಹೊಸ ಉತ್ಸಾಹ ನೀಡಲಿದೆ.

ಈಗಾಗಲೇ ನಾಮಿನೇಷನ್‌ನಿಂದ ಬಚಾವ್ ಆಗಿರುವ ಗಗನ್, ಸಿಕ್ಕಿರುವ ಈ ಉತ್ತಮ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಮತ್ತು ಮನೆಯ ಇತರ ಸದಸ್ಯರೊಂದಿಗೆ ಹೇಗೆ ಆಟವಾಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:
Bigg Boss Kannada Season 13