• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಇಡೀ ಸೀಸನ್‌ನ ಕಳಪೆ ನೀನುʼ : ಮುಲಾಜಿಲ್ಲದೇ ಶಾಸ್ತ್ರೀಗೆ ತಾಂಡವ್‌ ಕ್ಲಾಸ್

ಇಡೀ ಸೀಸನ್‌ನ ಕಳಪೆ ನೀನುʼ : ಮುಲಾಜಿಲ್ಲದೇ ಶಾಸ್ತ್ರೀಗೆ ತಾಂಡವ್‌ ಕ್ಲಾಸ್

ಕಿರಣ್‌ ಶಾಸ್ತ್ರೀ ಅವರ ಮೋಸದ ಆಟದಿಂದ ಇಡೀ ಮನೆಯವರಿಗೆ ಕಿರಿಕಿರಿ ಉಂಟಾಗಿದೆ. ಅಲ್ಲದೇ ನಿನ್ನೆಯ ಎಪಿಸೋಡ್‌ನಲ್ಲಿ ಕಿರಣ್‌ ಅವರ ಬಾಡಿ ಶೇಮಿಂಗ್‌ ಮಾತುಗಳಿಂದ ಮನೆಯಲ್ಲಿ ಜಗಳ ಮತ್ತಷ್ಟು ತಾರಕ್ಕಕ್ಕೇರಿದೆ. ಹೀಗಾಗಿ ತಾಂಡವ್‌ ರಾಮ್‌ ಅವರು ನೀನು ಇಡೀ ಸೀಸನ್‌ ನ ಕಳಪೆ ಎಂದು ಶಾಸ್ತ್ರೀ ಗೆ ಹೇಳಿದ್ದಾರೆ.

Written ByYashaswini V
Published: Nov 06, 2026, 11:14 IST|Updated: Nov 06, 2026, 11:16 IST
joinshare
ಇಡೀ ಸೀಸನ್‌ನ ಕಳಪೆ ನೀನುʼ : ಮುಲಾಜಿಲ್ಲದೇ ಶಾಸ್ತ್ರೀಗೆ ತಾಂಡವ್‌ ಕ್ಲಾಸ್

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ರೋಚಕ ತಿರುವು ಹಾಗೂ ಭಾರೀ ಹೈಡ್ರಾಮಾಗಳು ಕಂಡು ಬರುತ್ತಿವೆ. ಈ ವಾರ ಕಿರಣ್‌ ಶಾಸ್ತ್ರೀ ವಿವಾದಾತ್ಮಕ ನಡುವಳಿಕೆ ಹಾಗೂ ಸ್ವಾರ್ಥದ ಆಟದಿಂದ ಇಡೀ ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ತಾಂಡವ್‌ ರಾಮ್‌ ಅವರು ಕಿರಣ್‌ ಶಾಸ್ತ್ರೀ ವಿರುದ್ಧ ಸಿಡಿದೆದ್ದಿದ್ದು ಈ ಇಡೀ ಬಿಗ್‌ ಬಾಸ್ ಸೀಸನ್‌ನ ಕಳಪೆ ನೀನು ಎಂದು ನೇರವಾಗಿ ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹೌದು, ದೀಪಾವಳಿಯ ಈ ವಾರ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಅತ್ಯಂತ ಭಾವುಕ ಕ್ಷಣವಾಗಿದ್ದು, ತಮ್ಮ ಮನೆಯಿಂದ ಸ್ಪರ್ಧಿಗಳಿಗೆ ಪತ್ರ ಬಂದಿದ್ದು, ಟಾಸ್ಕ್‌ ಗೆಲ್ಲುವ ಮೂಲಕ ಅವರು ಪತ್ರ ಪಡೆಯುವ ಅವಕಾಶವನ್ನು ಬಿಗ್‌ ಬಾಸ್‌ ಕಲ್ಪಿಸಿತ್ತು. ಆದರೆ, ಕಿರಣ್‌ ಶಾಸ್ತ್ರೀ  ಅವರು ಟಾಸ್ಕ್‌ನಲ್ಲಿ ತೀವ್ರ ನಿಯಮ ಉಲ್ಲಂಘಿಸಿ ಕಳ್ಳಾಟವಾಡಿದ್ದಾರೆ. ಟಾಸ್ಕ್‌ನಲ್ಲಿ ತಮ್ಮ ಸ್ವಾರ್ಥದ ಆಟದಿಂದಾಗಿ ದೊಡ್ಮನೆಯ ಮತ್ತೊಬ್ಬ ಸ್ಪರ್ಧಿಗೆ ಬರಬೇಕಿದ್ದ ಪತ್ರವನ್ನು ಸಿಗದಿರುವಂತೆ ಮಾಡಿದ್ದಾರೆ ಎಂಬುದು ಮನೆಯವರ ವಾದವಾಗಿದೆ. ಅಷ್ಟೇ ಅಲ್ಲದೇ ಕಿರಣ್‌ ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ  ತಾನು ಬೇಕಂತಲೇ ಮಾಡಿದೀನಿ ಎಂದು ಭಂಡತನದಿಂದ ವಾದಕ್ಕೆ ಇಳಿದರು. ತಮ್ಮ ಸ್ವಾರ್ಥದ ಬುದ್ದಿಯನ್ನೇ ಸಮರ್ಥಿಸಿಕೊಂಡ ಅವರ ಈ ವರ್ತನೆ ಇಡೀ ಮನೆಯವರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದೆ.

 

ಯಾರಿಗೆ Letter ಸಿಗ್ಬೇಕಾಗಿತ್ತು? ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00 ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq #BBK13 #ColorsKannada #ಕಲರ್‌ಫುಲ್‌‌ಕತೆ #colorfulstory #KichchaSudeepa #CKBBKEngage https://t.co/YhBy8dL7ml

— Colors Kannada (@ColorsKannada) November 5, 2026

 ಕಿರಣ್‌ ಶಾಸ್ತ್ರೀ ಈಗಾಗಲೇ ತಮ್ಮ ನಡುವಳಿಕೆಯಿಂದ  ದೊಡ್ಮನೆಯಲ್ಲಿ ಕಳಪೆ ಪಟ್ಟ ಪಡೆದು ಹಲವು ಭಾರಿ ಜೈಲಿಗೆ ಹೋಗಿ ಬಂದ ಇತಿಹಾಸ ಇದೆ. ಅದಾಗ್ಯೂ, ಅವರು ತಮ್ಮನ್ನು ತಿದ್ದಿಕೊಳ್ಳುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಸ್ವಾರ್ಥದ ಆಟ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ಬಗ್ಗೆ ಈ ಹಿಂದೆ ವಾರಂತ್ಯದಲ್ಲಿ ಸುದೀಪ್‌ ಕೂಡ ಸಾಕಷ್ಟು ಬಾರೀ ಎಚ್ಚರಿಸಿದ್ದಾರೆ.

 

ನಿನ್ನೆಯ ಸಂಚಿಕೆಯಲ್ಲಿ ಕಿರಣ್‌ ಶಾಸ್ತ್ರಿ ಅವರ ವರ್ತನೆ ಮಿತಿ ಮೀರಿದ್ದು, ಮಹಿಳಾ ಸ್ಪರ್ಧಿಗಳಿಗೆ ಬಾಡಿ ಶೇಮಿಂಗ್‌ ಮಾಡುವಂತಹ ಮಾತುಗಳನ್ನ ಆಡಿದ್ದಾರೆ. ಮನೆಯಲ್ಲಿ ಊಟದ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೇ ಶಾಸ್ತ್ರೀ ಗಾನವಿಗೆ ತಿಂದು ತಿಂದು ಮೈ ಬೆಳೆಸಿಕೊಂಡಿದ್ದೀಯ ಎಂದು ಅಸಭ್ಯವಾಗಿ ಮಾತನಾಡಿದ್ದಾರೆ. ಕಿರಣ್‌ ಅವರ ವೈಯಕ್ತಿಕ ನಿಂದನೆ ಮತ್ತು ಬಾಡಿ ಶೇಮಿಂಗ್‌ ವಿಚಾರಕ್ಕೆ ತೀವ್ರ ಕೋಪಗೊಂಡ ಗಾನವಿ ವಾಗ್ವಾದಕ್ಕೆ ಇಳಿದಿದ್ದಾರೆ.  

ಕಿರಣ್ ಶಾಸ್ತ್ರಿ ಅವರು ಈಗಾಗಲೇ ತಮ್ಮ ಕೆಟ್ಟ ನಡವಳಿಕೆಗಾಗಿ ಬಿಗ್ ಬಾಸ್ ಮನೆಯಿಂದ 'ಕಳಪೆ' ಪಟ್ಟ ಪಡೆದು ಜೈಲಿಗೆ ಹೋಗಿ ಬಂದ ಇತಿಹಾಸ ಹೊಂದಿದ್ದಾರೆ. ಆದಾಗ್ಯೂ, ಜೈಲು ವಾಸದ ನಂತರವೂ ಅವರು ತಮ್ಮನ್ನು ತಿದ್ದಿಕೊಳ್ಳುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಅವರ ಸ್ವಾರ್ಥದ ಆಟ ಮತ್ತಷ್ಟು ಹೆಚ್ಚಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅವರಿಗೆ ತಮ್ಮ ಮಾತಿನ ಮೇಲಿನ ನಿಗಾ ಕೂಡ ತಪ್ಪುತ್ತಿದೆ.

ಶಾಸ್ತ್ರೀ ಅವರ ಈ ಮಾತಿಗೆ ಮತ್ತೊಬ್ಬ ಮಹಿಳಾ ಸ್ಪರ್ಧಿಯಾದ ಸೌಂದರ್ಯ ಶೆಟ್ಟಿ ಅವರು ತಕ್ಷಣವೇ ತಡೆದು, ಕಟು ಶಬ್ಧಗಳಿಂದ ಖಂಡಿಸಿದ್ದಾರೆ. ಕಿರಣ್‌ ಶಾಸ್ತ್ರಿ ಅವರ ಇಂತಹ ಮೋಸದ ಹಾಗೂ ಕುತಂತ್ರದ ಆಟವನ್ನು ತಾಂಡವ್‌ ರಾಮ್‌ ನೀನು ಈ ಸೀಸನ್‌ ನ ಕಳಪೆ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದೀಗ ಕಿರಣ್‌ ಶಾಸ್ತ್ರೀ ಅವರ ಈ ನಡೆಗೆ ಕಿಚ್ಚನ ಪಂಚಾಯ್ತಿಯಲ್ಲಿ ಸೂಕ್ತ ಶಿಕ್ಷೆ ಸಿಗುವುದೇ ಎಂದು ಕಾದು ನೋಡ ಬೇಕಿದೆ. 
 

Add Zee News as a Preferred Source
TAGS:
Bigg Boss Kannada Season 13
Bigg Boss Kannada
TV