ಬೆಂಗಳೂರು:ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026-27ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆ-1 ರ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2027ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 27ರಿಂದ ಪರೀಕ್ಷೆಗಳು ಆರಂಭವಾಗಿ ಮಾರ್ಚ್ 18ರವರೆಗೆ ನಡೆಯಲಿವೆ. ಪರೀಕ್ಷೆಗಳು ಸಾಮಾನ್ಯವಾಗಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಯೊಂದಿಗೆ ಪರೀಕ್ಷೆ-1 ಆರಂಭವಾಗಲಿದೆ. ಮಾರ್ಚ್ 1ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದ್ದು, ಮಾರ್ಚ್ 2ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಭಾಷೆಗಳ ಪರೀಕ್ಷೆಗಳು ನಡೆಯಲಿವೆ.
ಮಾರ್ಚ್ 3ರಂದು ರಾಜ್ಯಶಾಸ್ತ್ರ ಮತ್ತು ಮನೋವಿಜ್ಞಾನ, ಮಾರ್ಚ್ 4ರಂದು ಸಮಾಜಶಾಸ್ತ್ರ ಮತ್ತು ಭೌತಶಾಸ್ತ್ರ ಹಾಗೂ ಮಾರ್ಚ್ 5ರಂದು ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಪರೀಕ್ಷೆ ನಿಗದಿಯಾಗಿದೆ. ಮಾರ್ಚ್ 6ರಂದು ಮಹಾಶಿವರಾತ್ರಿ ರಜೆ ಇರುವುದರಿಂದ ಅಂದು ಪರೀಕ್ಷೆ ನಡೆಯುವುದಿಲ್ಲ.
ಮಾರ್ಚ್ 8ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 9ರಂದು ಅರ್ಥಶಾಸ್ತ್ರ ಮತ್ತು ಭೂಗರ್ಭಶಾಸ್ತ್ರ ಪರೀಕ್ಷೆ ಇರಲಿದೆ. ಮಾರ್ಚ್ 11ರಂದು ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ ಹಾಗೂ ವಿವಿಧ ವೃತ್ತಿಪರ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಈ ವಿಷಯಗಳಿಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.15ರವರೆಗೆ ಪರೀಕ್ಷಾ ಅವಧಿ ನಿಗದಿಪಡಿಸಲಾಗಿದೆ.
ಮಾರ್ಚ್ 12ರಂದು ವ್ಯವಹಾರ ಅಧ್ಯಯನ (ಬಿಸಿನೆಸ್ ಸ್ಟಡೀಸ್) ಮತ್ತು ಗಣಿತ, ಮಾರ್ಚ್ 13ರಂದು ಐಚ್ಛಿಕ ಕನ್ನಡ, ತರ್ಕಶಾಸ್ತ್ರ ಹಾಗೂ ಗೃಹವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 15ರಂದು ಸಂಖ್ಯಾಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಕ ವಿಜ್ಞಾನ ಪರೀಕ್ಷೆಗಳು ನಿಗದಿಯಾಗಿವೆ.
ಮಾರ್ಚ್ 16ರಂದು ಸಮಾಜಶಾಸ್ತ್ರ (ಸಂಖ್ಯಾಶಾಸ್ತ್ರ/ವಿದ್ಯುನ್ಮಾನಶಾಸ್ತ್ರ) ಎಂದು ನೀಡಲಾಗಿರುವ ವಿಷಯಗಳ ಪರೀಕ್ಷೆ ನಡೆಯಲಿದ್ದು, ಮಾರ್ಚ್ 17ರಂದು ಹಿಂದಿ ಪರೀಕ್ಷೆ ಇರಲಿದೆ. ಮಾರ್ಚ್ 18ರಂದು ಇತಿಹಾಸ ವಿಷಯದ ಪರೀಕ್ಷೆಯೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ-1 ಮುಕ್ತಾಯಗೊಳ್ಳಲಿದೆ.
ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕ, ವಿಷಯ ಮತ್ತು ಸಮಯವನ್ನು ಸರಿಯಾಗಿ ಪರಿಶೀಲಿಸಿಕೊಂಡು ಅಧ್ಯಯನದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವುದು ಮುಖ್ಯವಾಗಿದೆ. ಪರೀಕ್ಷೆಗೆ ಮುನ್ನ ವಿಷಯವಾರು ಪುನರಾವರ್ತನೆಗೆ ಹೆಚ್ಚಿನ ಆದ್ಯತೆ ನೀಡಬೇಕು.