SOCIAL MEDIA

Newsletter

PARTNER SITES
Select Language Select State

EPFO PM-VBRY ಯೋಜನೆಯಲ್ಲಿ ಇಂತಹ ಉದ್ಯೋಗಿಗಳಿಗೆ ಸಿಗುತ್ತೆ ₹15,000... ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ

ನೌಕರರ ಭವಿಷ್ಯ ನಿಧಿ ಸಂಸ್ಥೆ ಕೇಂದ್ರ ಸರ್ಕಾರದ ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ ಅರ್ಹ ಉದ್ಯೋಗಿಗಳಿಗೆ ₹15,000 ವರೆಗೆ ವಿಶೇಷ ಮೊತ್ತವನ್ನು ನೀಡುತ್ತದೆ. ಯಾರೆಲ್ಲಾ ಇದರ ಲಾಭ ಪಡೆಯಬಹುದು? ಎಂಬ ಮಹತ್ವದ ಮಾಹಿತಿ ಇಲ್ಲಿದೆ.

Written By Yashaswini V
Published: Oct 19, 2026, 11:17 AM IST | Updated: Oct 19, 2026, 11:19 AM IST
Join

ಕೇಂದ್ರ ಸರ್ಕಾರವು ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುವ ಅರ್ಹ ಉದ್ಯೋಗಿಗಳಿಗಾಗಿ ಪ್ರಧಾನ ಮಂತ್ರಿ ವಿಕ್ಷಿತ್‌ ಭಾರತ್‌ ರೋಜ್‌ಗಾರ್‌ ಯೋಜನೆ (PM-VBRY) ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ನಿರ್ವಹಿಸಲ್ಪಡುವ ಈ ಯೋಜನೆಯಡಿ ಅರ್ಹ ಉದ್ಯೋಗಿಗಳಿಗೆ ₹15,000 ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

PM-VBRY ಯೋಜನೆಯ ಉದ್ದೇಶವೇನು?
ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳನ್ನು ನೌಕರರ ಭವಿಷ್ಯ ನಿಧಿ (EPF) ವ್ಯವಸ್ಥೆಗೆ ಪ್ರವೇಶಿಸುವ ಅರ್ಹ ಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಔಪಚಾರಿಕ ಉದ್ಯೋಗವನ್ನು ಉತ್ತೇಜಿಸುವುದು ಇದರ ಮುಖ್ಯ ಗುರಿ ಆಗಿದೆ. ಆದಾಗ್ಯೂ, ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ ₹15,000 ವರೆಗೆ ಪ್ರೋತ್ಸಾಹ ಧನ ಪಡೆಯಲು ಕೆಲವು ಅರ್ಹತೆಗಳನ್ನು ಹಾಗೂ ಸೇವಾ ಷರತ್ತುಗಳನ್ನು ಪೂರೈಸುವುದು ಅಗತ್ಯವಾಗಿದೆ.

₹15,000 ವರೆಗೆ ಪ್ರೋತ್ಸಾಹ ಧನ ಪಡೆಯಲು ಅರ್ಹತಾ ಮಾನದಂಡ: 
ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ, ಉದ್ಯೋಗಿ ಕೇವಲ ಒಂದು ಕಂಪನಿಗೆ ಸೇರುವ ಮೂಲಕ ₹15,000 ಸ್ವಯಂಚಾಲಿತವಾಗಿ ಪಡೆಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದು ನೌಕರರ ವೇತನ ಮಿತಿ, ಅರ್ಹ ಇಪಿಎಫ್ ವೇತನಗಳು, ಉದ್ಯೋಗ ಮತ್ತು ಯೋಜನೆಯ ಅವಶ್ಯಕತೆಗಳ ಅನುಸರಣೆ ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ.

* ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯು ಆಗಸ್ಟ್ 1, 2025 ರಿಂದ ಜುಲೈ 31, 2027 ರ ನಡುವೆ ರಚಿಸಲಾದ ಅರ್ಹ ಉದ್ಯೋಗಗಳನ್ನು ಒಳಗೊಂಡಿದೆ. 
* ₹ 1 ಲಕ್ಷದವರೆಗೆ ಮಾಸಿಕ ವೇತನ ಗಳಿಸುವ ಉದ್ಯೋಗಿಗಳು ಇತರ ಷರತ್ತುಗಳಿಗೆ ಒಳಪಟ್ಟು ಅರ್ಹತೆ ಪಡೆಯಬಹುದು.
* ಪ್ರೋತ್ಸಾಹಕವು ಒಂದು ತಿಂಗಳ ಅರ್ಹ ಇಪಿಎಫ್ ವೇತನಕ್ಕೆ ಸಮನಾಗಿರುತ್ತದೆ, ಇದನ್ನು ₹ 15,000 ಕ್ಕೆ ಮಿತಿಗೊಳಿಸಲಾಗುತ್ತದೆ.

* ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಯಾರು ಅರ್ಹರು?
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯ ಭಾಗ ʼಎʼ ಅಡಿಯಲ್ಲಿ ಅರ್ಹತೆ ಪಡೆಯಲು, ಯಾವುದೇ ಉದ್ಯೋಗಿಯು ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರಿದ ಬಳಿಕ ಇಪಿಎಫ್‌ ಸದಸ್ಯರಾಗಿ ನೋಂದಾಯಿಸಬೇಕು. ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯು 1 ಆಗಸ್ಟ್ 2025 ಮತ್ತು 31 ಜುಲೈ 2027 ರ ನಡುವೆ ಸಂಸ್ಥೆಗಳಿಗೆ ಸೇರುವ ಅರ್ಹ ಉದ್ಯೋಗಿಗಳನ್ನು ಒಳಗೊಳ್ಳುತ್ತದೆ, ಅವರು ನಿಗದಿತ ಸದಸ್ಯತ್ವ, ವೇತನ ಮತ್ತು ಉದ್ಯೋಗ ಪರಿಸ್ಥಿತಿಗಳನ್ನು ಪೂರೈಸಿದಾಗ  ₹15,000 ಪ್ರೋತ್ಸಾಹ ಧನ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ.

ಮೊದಲ ಬಾರಿಗೆ ಇಪಿಎಫ್ ಸದಸ್ಯರು ಎಂದರೆ ಏನು?
ಮೊದಲ ಬಾರಿಗೆ ಇಪಿಎಫ್‌ ಸದಸ್ಯರು ಎಂದರೆ ಉದ್ಯೋಗಿ ಆಗಸ್ಟ್ 1, 2025 ಕ್ಕಿಂತ ಮೊದಲು ಇಪಿಎಫ್ ಸದಸ್ಯರಾಗಿರಬಾರದು. ಅಂತಹವರು ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು.

ಇಂತಹ ಉದ್ಯೋಗಿಗಳಿಗಷ್ಟೇ ₹15,000 ಪ್ರೋತ್ಸಾಹ ಧನ:
ಯಾವ ಉದ್ಯೋಗಿ 1 ಆಗಸ್ಟ್ 2025 ಮತ್ತು 31 ಜುಲೈ 2027 ರ ನಡುವೆ ಮೊದಲ ಬಾರಿಗೆ ಔಪಚಾರಿಕವಾಗಿ ಕೆಲಸಕ್ಕೆ ಸೇರುತ್ತಾರೋ ಅಂತಹ ಉದ್ಯೋಗಿಗಳಿಗಷ್ಟೇ ₹15,000 ಪ್ರೋತ್ಸಾಹ ಧನ ಸಿಗಲಿದೆ.

₹15,000 ಪ್ರೋತ್ಸಾಹ ಧನ ಪಡೆಯಲು ಮಾಸಿಕ ವೇತನ ಎಷ್ಟಿರಬೇಕು?
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಡಿ  ₹15,000 ಪ್ರೋತ್ಸಾಹ ಧನ ಪಡೆಯಲು ಯೋಜನೆಯ ವ್ಯಾಖ್ಯಾನಕ್ಕೆ ಒಳಪಟ್ಟು ವೇತನವು ₹ 1 ಲಕ್ಷದವರೆಗೆ ಇರಬೇಕು.

ಪ್ರೋತ್ಸಾಹ ಧನ ಪಾವತಿ ವಿಧಾನ:
ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿಯಲ್ಲಿ ಷರತ್ತುಗಳಿಗೆ ಒಳಪಟ್ಟು ಎರಡು ಕಂತುಗಳಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ಪಡೆಯಲು ಎಷ್ಟು ದಿನಗಳು ಕೆಲಸ ಮಾಡಿರಬೇಕು? 
ಪಿಎಂ-ವಿಬಿಆರ್‌ವೈ (PM-VBRY) ಯೋಜನೆಯಲ್ಲಿ ₹15,000ವರೆಗೆ ಪ್ರೋತ್ಸಾಹ ಧನ ಪಡೆಯಲು ಉದ್ಯೋಗದ ಅವಧಿ ಮೊದಲ ಕಂತಿಗೆ ಆರು ತಿಂಗಳು ನಿರಂತರ ಸೇವೆ; ಎರಡನೇ ಕಂತಿಗೆ 12 ತಿಂಗಳು ಪೂರ್ಣಗೊಂಡಿರಬೇಕು.

ಆದಾಗ್ಯೂ, ಎಲ್ಲರಿಗೂ ಕೂಡ ಪಿಎಂ-ವಿಬಿಆರ್‌ವೈ (PM-VBRY) ಯೋಜನೆ ಅಡಿ ₹15,000 ಪ್ರೋತ್ಸಾಹ ಧನವೇ ಸಿಗುವುದಿಲ್ಲ. ಈ ಮೊತ್ತವು ಉದ್ಯೋಗಿಯ ಅರ್ಹ ವೇತನವನ್ನು ಆಧರಿಸಿರುತ್ತದೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES