• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ನೌಕರರ ವಿರೋಧ; ಡಿಸೆಂಬರ್‌ 3ರಂದು ದೇಶದಾದ್ಯಂತ ಬ್ಯಾಂಕ್‌ ಮುಷ್ಕರ!

ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ನೌಕರರ ವಿರೋಧ; ಡಿಸೆಂಬರ್‌ 3ರಂದು ದೇಶದಾದ್ಯಂತ ಬ್ಯಾಂಕ್‌ ಮುಷ್ಕರ!

ಸುಮಾರು 2.5 ಲಕ್ಷ ನೌಕರರನ್ನ ಪ್ರತಿನಿಧಿಸುವ ಮೂರು ಪ್ರಮುಖ ಬ್ಯಾಂಕ್ ಒಕ್ಕೂಟಗಳು ಡಿಸೆಂಬರ್ 3ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಡಿಸೆಂಬರ್ ಮೊದಲ ವಾರದಲ್ಲಿ ಚೆಕ್ ಕ್ಲಿಯರೆನ್ಸ್ ಮತ್ತು ನಗದು ವಹಿವಾಟುಗಳಿಗೆ ಅಡ್ಡಿಯಾಗುವ ಸಾಧ್ಯತೆಯಿರುವುದರಿಂದ, ಗ್ರಾಹಕರು ತಮ್ಮ ತುರ್ತು ಕೆಲಸಗಳನ್ನ ಮುಂಚಿತವಾಗಿ ಮುಗಿಸಿಕೊಳ್ಳುವುದು ಉತ್ತಮ.

Written ByPuttaraj K Alur
Published: Nov 25, 2026, 12:40 IST|Updated: Nov 25, 2026, 12:51 IST
joinshare
ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ನೌಕರರ ವಿರೋಧ; ಡಿಸೆಂಬರ್‌ 3ರಂದು ದೇಶದಾದ್ಯಂತ ಬ್ಯಾಂಕ್‌ ಮುಷ್ಕರ!
Image Credit: Bank Strike

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ನೌಕರರ ವಿರೋಧ; ಡಿಸೆಂಬರ್‌ 3ರಂದು ದೇಶದಾದ್ಯಂತ ಬ್ಯಾಂಕ್‌ ಮುಷ್ಕರ!

ಐಡಿಬಿಐ ಬ್ಯಾಂಕ್‌ ಖಾಸಗೀಕರಣಕ್ಕೆ ನೌಕರರ ವಿರೋಧ; ಡಿಸೆಂಬರ್‌ 3ರಂದು ದೇಶದಾದ್ಯಂತ ಬ್ಯಾಂಕ್‌ ಮುಷ್ಕರ!

2

ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಶಾಕ್‌! ಜಾಮೀನು ರದ್ದು, 15 ದಿನಗಳಲ್ಲಿ ಶರಣಾಗಲು ಆದೇಶ!

3

ಇಬ್ಬರು ಪುತ್ರಿಯರಿಗೆ KAS ಹುದ್ದೆ ಕೊಡಿಸಲು ₹2 ಕೋಟಿ ಲಂಚ? IPS ಅಧಿಕಾರಿಯ ವಿರುದ್ಧ ED ಗಂಭೀರ ಆರೋಪ!

4

ಆಶಾ ಕಾರ್ಯಕರ್ತೆಯರ ಕೆಲವು ಬೇಡಿಕೆಗಳನ್ನಾದರೂ ಈಡೇರಿಸಿ: ಸರ್ಕಾರಕ್ಕೆ ಸುಮಲತಾ ಅಂಬರೀಶ್ ಮನವಿ

5

53 ಎಸೆತಗಳಲ್ಲಿ 204 ರನ್! ಪ್ರತಿ 50 ರನ್‌ಗೆ ಕೇವಲ 12 ಎಸೆತ ತೆಗೆದುಕೊಂಡ ವೈಭವ್! ಈ ದಾಖಲೆ ಗಮನಿಸಿದ್ದೀರಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

December 3 Bank Strike: ಐಡಿಬಿಐ ಬ್ಯಾಂಕಿನ ಪಾಲನ್ನ ವಿದೇಶಿ ಖಾಸಗಿ ಸಂಸ್ಥೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನ ವಿರೋಧಿಸಿ ಬ್ಯಾಂಕ್ ನೌಕರರ ಮೂರು ಪ್ರಮುಖ ಸಂಘಟನೆಗಳು ಡಿಸೆಂಬರ್‌ 3ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರದಲ್ಲಿ ದೇಶದಾದ್ಯಂತ ಸುಮಾರು 2.5 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಡಿಸೆಂಬರ್‌ 3ರಂದು ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA) ಮತ್ತು ಬ್ಯಾಂಕ್ ನೌಕರರ ಒಕ್ಕೂಟ (BEFI) ಜಂಟಿಯಾಗಿ ಮುಷ್ಕರ ಘೋಷಿಸಿವೆ. ಐಡಿಬಿಐ ಬ್ಯಾಂಕಿನ ಷೇರುಗಳನ್ನ ವಿದೇಶಿ ಖಾಸಗಿ ಸಂಸ್ಥೆಗೆ ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನ ಹಿಂಪಡೆಯಬೇಕು ಎಂಬುದು ಈ ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.

ಮುಷ್ಕರಕ್ಕೆ ಕಾರಣವೇನು?

ಸರ್ಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕಿನ ಶೇ.60.72ರಷ್ಟು ಪಾಲನ್ನ ಕೆನಡಾ ಮೂಲದ ಫೇರ್‌ಫ್ಯಾಕ್ಸ್ ಗ್ರೂಪ್ ಎಂಬ ವಿದೇಶಿ ಖಾಸಗಿ ಸಂಸ್ಥೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ಅಕ್ಟೋಬರ್‌ 14ರಂದು ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಈ ಮಾರಾಟ ಪ್ರಕ್ರಿಯೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಭಾರತೀಯ ಬ್ಯಾಂಕೊಂದರ ನಿಯಂತ್ರಣವನ್ನ ವಿದೇಶಿ ಖಾಸಗಿ ಕಂಪನಿಗೆ ಹಸ್ತಾಂತರಿಸುವುದು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಮಾರಕವಾಗಬಹುದು ಎಂಬ ಆತಂಕವನ್ನ ಬ್ಯಾಂಕ್ ನೌಕರರ ಸಂಘಟನೆಗಳು ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಘಟನೆಗಳು, ಮಾರಾಟ ಪ್ರಕ್ರಿಯೆಯನ್ನ ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿವೆ.

ಷೇರು ಮಾರಾಟದ ಲೆಕ್ಕಾಚಾರ ಹೇಗಿದೆ?

ಪ್ರಸ್ತಾವಿತ ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ತಮ್ಮ ಪಾಲಿನ ಷೇರುಗಳನ್ನ ಮಾರಾಟ ಮಾಡಲು ಮುಂದಾಗಿವೆ. ಇದರಲ್ಲಿ ಕೇಂದ್ರ ಸರ್ಕಾರದ ಶೇ.30.48ರಷ್ಟು ಪಾಲು ಮಾರಾಟವಾಗಲಿದ್ದು, ಇದರ ಅಂದಾಜು ಮೌಲ್ಯ ₹26,620 ಕೋಟಿ ಎಂದು ತಿಳಿಸಲಾಗಿದೆ. ಇನ್ನು ಎಲ್‌ಐಸಿ ಹೊಂದಿರುವ ಶೇ.30.24ರಷ್ಟು ಪಾಲಿನ ಅಂದಾಜು ಮೌಲ್ಯ ₹26,440 ಕೋಟಿ ಆಗಿದೆ. ಈ ಎರಡೂ ಪಾಲುಗಳನ್ನ ಸೇರಿಸಿದರೆ ಐಡಿಬಿಐ ಬ್ಯಾಂಕಿನ ಶೇ.60.72ರಷ್ಟು ಷೇರು ಮಾರಾಟ ಪ್ರಸ್ತಾವನೆ ಇದಾಗಿದೆ. ಫೇರ್‌ಫ್ಯಾಕ್ಸ್ ಗ್ರೂಪ್ ಪ್ರತಿ ಷೇರಿಗೆ ₹81ರಂತೆ ಬಿಡ್ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮೋದನೆ ದೊರೆತ ನಂತರ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಠೇವಣಿದಾರರ ಹಣದ ಸುರಕ್ಷತೆ ಬಗ್ಗೆ ಆತಂಕ

ಐಡಿಬಿಐ ಬ್ಯಾಂಕಿನಲ್ಲಿ ಸಾಮಾನ್ಯ ಜನರು ₹3.5 ಲಕ್ಷ ಕೋಟಿಗೂ ಅಧಿಕ ಹಣವನ್ನ ಠೇವಣಿಯಾಗಿ ಇರಿಸಿದ್ದಾರೆ. ಇದೇ ಬ್ಯಾಂಕ್ ಸುಮಾರು ₹2.5 ಲಕ್ಷ ಕೋಟಿ ಮೊತ್ತದ ಸಾಲವನ್ನ ವಿತರಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಠೇವಣಿ ಮತ್ತು ಸಾಲದ ವಹಿವಾಟು ಹೊಂದಿರುವ ಬ್ಯಾಂಕನ್ನ ಖಾಸಗಿ ಸಂಸ್ಥೆಗೆ ಮಾರಾಟ ಮಾಡುವುದರಿಂದ ಕೋಟ್ಯಂತರ ಠೇವಣಿದಾರರ ಹಣದ ಸುರಕ್ಷತೆಗೆ ಧಕ್ಕೆಯಾಗಬಹುದು ಎಂಬುದು ಬ್ಯಾಂಕ್ ನೌಕರರ ಸಂಘಟನೆಗಳ ವಾದವಾಗಿದೆ. ಆದ್ದರಿಂದ ಐಡಿಬಿಐ ಬ್ಯಾಂಕಿನ ಪಾಲು ಮಾರಾಟ ಮಾಡುವ ನಿರ್ಧಾರವನ್ನ ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕೆಂದ ಸಂಘಟನೆಗಳು ಆಗ್ರಹಿಸಿವೆ. ಇದರ ಜೊತೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ಪ್ರಕ್ರಿಯೆಯನ್ನ ನಿಲ್ಲಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿವೆ.

ಬ್ಯಾಂಕ್ ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಡಿಸೆಂಬರ್‌ 3ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಸುಮಾರು 2.5 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ಶಾಖೆಗಳ ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಚೆಕ್ ಕ್ಲಿಯರೆನ್ಸ್, ನಗದು ವಹಿವಾಟು ಸೇರಿದಂತೆ ಶಾಖೆಗಳಲ್ಲಿ ನಡೆಯುವ ವಿವಿಧ ಬ್ಯಾಂಕಿಂಗ್ ಸೇವೆಗಳ ಮೇಲೆ ಮುಷ್ಕರದ ಪರಿಣಾಮ ಉಂಟಾಗಬಹುದು.

ಈ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಪ್ರಮುಖ ಬ್ಯಾಂಕ್ ವಹಿವಾಟುಗಳು ಮತ್ತು ಅಗತ್ಯ ಕೆಲಸಗಳನ್ನ ಡಿಸೆಂಬರ್‌ 3ಕ್ಕೂ ಮುನ್ನವೇ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಐಡಿಬಿಐ ಬ್ಯಾಂಕಿನ ಷೇರು ಮಾರಾಟದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಬ್ಯಾಂಕ್ ನೌಕರರ ಸಂಘಟನೆಗಳು, ಡಿಸೆಂಬರ್‌ 3ರಂದು ದೇಶದಾದ್ಯಂತ ಮುಷ್ಕರ ನಡೆಸುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಲು ಸಜ್ಜಾಗಿವೆ.

Add Zee News as a Preferred Source
TAGS:
Personal Finance
Kannada News