Vaibhav Sooryavanshi: ಕ್ರಿಕೆಟ್ ಅಂಗಳದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಅವರ ಇನ್ನಿಂಗ್ಸ್‌ನಲ್ಲಿರುವ ವಿಶೇಷ ಅಂಕಿಅಂಶವೊಂದು ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕೇವಲ 53 ಎಸೆತಗಳನ್ನ ಎದುರಿಸಿ ಬರೋಬ್ಬರಿ 204 ರನ್ ಕಲೆಹಾಕಿರುವ ವೈಭವ್, ತಮ್ಮ ಇನ್ನಿಂಗ್ಸ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ರನ್‌ಗಳ ಮಳೆ ಹರಿಸಿದ್ದಾರೆ. ಆದರೆ ಅವರ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಪ್ರತಿ 50 ರನ್‌ಗಳ ಮೈಲಿಗಲ್ಲು ತಲುಪಲು ಅವರು ತೆಗೆದುಕೊಂಡ ಎಸೆತಗಳ ಸಂಖ್ಯೆ.
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಂಕಿಅಂಶಗಳ ಪ್ರಕಾರ, ಅವರು ಒಟ್ಟು 53 ಎಸೆತಗಳಲ್ಲಿ 204 ರನ್ ಗಳಿಸಿದ್ದಾರೆ. ಇದರಲ್ಲಿ 28 ಸಿಕ್ಸರ್‌ಗಳು ಹಾಗೂ 7 ಬೌಂಡರಿಗಳು ಸೇರಿವೆ. ಉಳಿದಂತೆ 6 ಸಿಂಗಲ್ಸ್ ಮತ್ತು ಒಂದು ಎರಡು ರನ್ ಗಳಿಸಿದ್ದಾರೆ. ವಿಶೇಷವೆಂದರೆ ಎದುರಿಸಿದ ಎಸೆತಗಳಲ್ಲಿ 11 ಎಸೆತಗಳು ಡಾಟ್ ಬಾಲ್ ಆಗಿವೆ. ಮೂರು ರನ್ ಗಳಿಸಿದ ಯಾವುದೇ ಎಸೆತ ಈ ಇನ್ನಿಂಗ್ಸ್‌ನಲ್ಲಿ ದಾಖಲಾಗಿಲ್ಲ. ಇನ್ನು ಈ ಇನ್ನಿಂಗ್ಸ್‌ನಲ್ಲಿರುವ ಪ್ರಮುಖ ವಿಶೇಷತೆಯೆಂದರೆ ಪ್ರತಿ 50 ರನ್‌ಗಳ ವಿಭಾಗವನ್ನ ತಲುಪಲು ವೈಭವ್ ತೆಗೆದುಕೊಂಡ ಎಸೆತಗಳ ಸಂಖ್ಯೆ.
ಮೊದಲ 50 ರನ್‌ಗಳಿಗೆ 16 ಎಸೆತ!
A Star i̶s̶ ̶b̶o̶r̶n̶ that 𝗸𝗲𝗲𝗽𝘀 𝘀𝗵𝗶𝗻𝗶𝗻𝗴 🌟 Vaibhav Sooryavanshi never ceases to amaze! 👏 #TeamIndia | #RisingStarsAsiaCup | #INDAvUAE https://t.co/aXWuDVnmsx
— BCCI (@BCCI) November 24, 2026
ವೈಭವ್ ಸೂರ್ಯವಂಶಿ ತಮ್ಮ ಮೊದಲ 50 ರನ್‌ಗಳನ್ನ ಗಳಿಸಲು 16 ಎಸೆತಗಳನ್ನ ಎದುರಿಸಿದ್ದಾರೆ. ಆರಂಭಿಕ 50 ರನ್‌ಗಳ ಹಂತ ತಲುಪಿದ ಬಳಿಕ ಅವರ ಬ್ಯಾಟಿಂಗ್ ವೇಗ ಮತ್ತಷ್ಟು ಹೆಚ್ಚಾಗಿರುವುದು ಅಂಕಿಅಂಶಗಳಲ್ಲಿ ಕಂಡುಬರುತ್ತದೆ.
50ರಿಂದ 100 ರನ್‌ಗಳವರೆಗೆ ಕೇವಲ 12 ಎಸೆತ!
ಮೊದಲ 50 ರನ್‌ಗಳನ್ನ 16 ಎಸೆತಗಳಲ್ಲಿ ಗಳಿಸಿದ್ದ ವೈಭವ್, ನಂತರದ 50 ರನ್‌ಗಳನ್ನ ಸೇರಿಸಲು ತೆಗೆದುಕೊಂಡಿದ್ದು ಕೇವಲ 12 ಎಸೆತಗಳು. ಅಂದರೆ 50 ರನ್‌ಗಳಿಂದ 100 ರನ್‌ಗಳ ಗಡಿ ತಲುಪುವವರೆಗೆ ಅವರ ಬ್ಯಾಟಿಂಗ್ ವೇಗ ಮತ್ತಷ್ಟು ಹೆಚ್ಚಾಗಿದೆ.
@BCCI https://t.co/ZkU0tSw6nU
— Lucifer 🏏🎬 (@LuciferM_04) November 24, 2026
100ರಿಂದ 150 ರನ್‌ಗಳವರೆಗೆ ಮತ್ತೆ 12 ಎಸೆತ!
ಇನ್ನಿಂಗ್ಸ್‌ನ ಮೂರನೇ 50 ರನ್‌ಗಳ ವಿಭಾಗದಲ್ಲೂ ವೈಭವ್ ಅದೇ ವೇಗವನ್ನ ಮುಂದುವರಿಸಿದ್ದಾರೆ. 100 ರನ್‌ಗಳಿಂದ 150 ರನ್‌ಗಳವರೆಗೆ ತಲುಪಲು ಅವರು ಎದುರಿಸಿದ್ದು ಕೇವಲ 12 ಎಸೆತಗಳನ್ನ. ಈ ಮೂಲಕ ಸತತ ಎರಡು 50 ರನ್‌ಗಳ ಮೈಲಿಗಲ್ಲುಗಳನ್ನ ತಲಾ 12 ಎಸೆತಗಳಲ್ಲಿ ತಲುಪಿದ್ದಾರೆ.
150ರಿಂದ 200 ರನ್‌ಗಳವರೆಗೆ 12 ಎಸೆತ!
ಇನ್ನು 150 ರನ್‌ಗಳ ಗಡಿ ದಾಟಿದ ಬಳಿಕವೂ ವೈಭವ್ ಅವರ ಬ್ಯಾಟಿಂಗ್ ವೇಗದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮುಂದಿನ 50 ರನ್‌ಗಳನ್ನ ಗಳಿಸಲು ಮತ್ತೆ 12 ಎಸೆತಗಳನ್ನೇ ತೆಗೆದುಕೊಂಡಿದ್ದಾರೆ. ಈ ಮೂಲಕ 50ರಿಂದ 200 ರನ್‌ಗಳವರೆಗಿನ ಮೂರು ಸತತ 50 ರನ್‌ಗಳ ವಿಭಾಗಗಳನ್ನ ಕೇವಲ 12 ಎಸೆತಗಳ ಅಂತರದಲ್ಲಿ ಪೂರ್ಣಗೊಳಿಸಿದ್ದಾರೆ. ಒಟ್ಟಾರೆ ನೋಡಿದರೆ, ಮೊದಲ 50 ರನ್‌ಗಳಿಗೆ 16 ಎಸೆತಗಳನ್ನ ತೆಗೆದುಕೊಂಡಿದ್ದ ವೈಭವ್, ನಂತರದ ಮೂರು 50 ರನ್‌ಗಳ ವಿಭಾಗಗಳನ್ನ ತಲಾ 12 ಎಸೆತಗಳಲ್ಲಿ ಪೂರ್ಣಗೊಳಿಸಿರುವುದು ಈ ಇನ್ನಿಂಗ್ಸ್‌ನ ವಿಶೇಷ ಅಂಕಿಅಂಶವಾಗಿದೆ.
ಎಸಿಸಿ ಮೆನ್ಸ್ ರೈಸಿಂಗ್ ಸ್ಟಾರ್ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮರೈಟ್ಸ್ (UAE) ವಿರುದ್ಧ ನಡೆದ ಪಂದ್ಯದಲ್ಲಿ ವೈಭವ್ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ವೈಭವ್ ಆಟಕ್ಕೆ ಅನೇಕ ದಿಗ್ಗಜ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತ್ತು.
ಈ ಟಾರ್ಗೆಟ್ ಬೆನ್ನತ್ತಿದ ಭಾರತ ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ಸಾದಿಸಿತು. 53 ಎಸೆತಗಳಲ್ಲಿ 204 ರನ್, 28 ಸಿಕ್ಸರ್‌ಗಳು, 7 ಬೌಂಡರಿಗಳು ಹಾಗೂ ಸತತ ಮೂರು 50 ರನ್‌ಗಳ ಮೈಲಿಗಲ್ಲುಗಳನ್ನ ತಲಾ 12 ಎಸೆತಗಳಲ್ಲಿ ತಲುಪಿದ ಸಾಧನೆ... ವೈಭವ್ ಸೂರ್ಯವಂಶಿ ಅವರ ಈ ಇನ್ನಿಂಗ್ಸ್‌ನಲ್ಲಿರುವ ಅಂಕಿಅಂಶಗಳು ನಿಜಕ್ಕೂ ವಿಶೇಷ ಗಮನ ಸೆಳೆಯುತ್ತಿವೆ.