• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ: ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ ನೋಟಿಸ್!

ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ: ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ ನೋಟಿಸ್!

ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ಗಳಿಂದ ನೋಟಿಸ್ ನೀಡಲಾಗುತ್ತಿದೆ. 6–7 ತಿಂಗಳ ಹಿಂದೆ ಅಂತಾರಾಷ್ಟ್ರೀಯ ಸಂಘರ್ಷದ ಕಾರಣ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದ್ದಾಗ ಸಾಲ ಪಡೆದವರು, ಇದೀಗ ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಡವಿಟ್ಟ ಚಿನ್ನದ ಮೌಲ್ಯ ಕಡಿಮೆಯಾಗಿರುವುದರಿಂದ ಸಾಲದ ಮೌಲ್ಯ ಮತ್ತು ಭದ್ರತೆಯ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿದೆ. ಹೀಗಾಗಿ ಹೆಚ್ಚುವರಿ ಹಣ ಜಮೆ ಮಾಡುವಂತೆ ಅಥವಾ ಮತ್ತಷ್ಟು ಚಿನ್ನ ಅಡವಿಡುವಂತೆ ಬ್ಯಾಂಕ್‌ಗಳು ಸೂಚಿಸುತ್ತಿವೆ.

Written ByPuttaraj K Alur
Published: Nov 24, 2026, 15:38 IST|Updated: Nov 24, 2026, 15:46 IST
joinshare
ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ: ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ ನೋಟಿಸ್!
Image Credit: Gold Loan

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಕಿರುಚಿತ್ರಗಳ ಸಂಭ್ರಮಕ್ಕೆ ಸಾಕ್ಷಿಯಾದ ‘ಸಿನಿಮಿನಿ’ ಎರಡನೇ ಆವೃತ್ತಿಯ ಕಿರುಚಿತ್ರೋತ್ಸವ

ಕಿರುಚಿತ್ರಗಳ ಸಂಭ್ರಮಕ್ಕೆ ಸಾಕ್ಷಿಯಾದ ‘ಸಿನಿಮಿನಿ’ ಎರಡನೇ ಆವೃತ್ತಿಯ ಕಿರುಚಿತ್ರೋತ್ಸವ

2

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ: ರಾಕೇಶ್ ಶೆಟ್ಟಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

3

ಒಂದೇ ಒಂದು ತಪ್ಪಿನಿಂದ ₹1800 ಕೋಟಿ ಮೌಲ್ಯದ ಆಸ್ತಿ ಕಳೆದು ಕೊಂಡ ಖ್ಯಾತ ನಟ!

4

ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ: ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ ನೋಟಿಸ್!

5

ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Gold Loan Notice: ಚಿನ್ನದ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಆಭರಣಗಳನ್ನ ಅಡವಿಟ್ಟು ಸಾಲ ಪಡೆದಿದ್ದವರಿಗೆ ಇದೀಗ ಬೆಲೆ ಇಳಿಕೆಯ ಬಿಸಿ ತಟ್ಟುತ್ತಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಚಿನ್ನದ ಮೇಲಿನ ಸಾಲದ ಭದ್ರತಾ ಮೌಲ್ಯದಲ್ಲಿಯೂ ಇಳಿಕೆಯಾಗಿದೆ. ಇದರಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಪ್ರಸ್ತುತ ಮೌಲ್ಯದ ನಡುವಿನ ಅನುಪಾತದಲ್ಲಿ ವ್ಯತ್ಯಾಸ ಉಂಟಾಗಿದ್ದು, ಕೆಲವು ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೋಟಿಸ್ ನೀಡಲು ಆರಂಭಿಸಿವೆ. ಹೆಚ್ಚುವರಿ ಹಣವನ್ನ ಜಮೆ ಮಾಡುವಂತೆ ಅಥವಾ ಮತ್ತಷ್ಟು ಚಿನ್ನವನ್ನ ಅಡವಿಡುವಂತೆ ಸೂಚಿಸಲಾಗುತ್ತಿದೆ.

ಚಿನ್ನದ ಬೆಲೆ ಕುಸಿತವೇ ಸಂಕಷ್ಟಕ್ಕೆ ಕಾರಣ

ಕಳೆದ ಕೆಲವು ತಿಂಗಳುಗಳ ಹಿಂದೆ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಒಂದು ಹಂತದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1.75 ಲಕ್ಷದಿಂದ ₹1.85 ಲಕ್ಷದವರೆಗೂ ತಲುಪಿತ್ತು. ಈ ಹೆಚ್ಚಿನ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು ಅನೇಕರು ತಮ್ಮ ಚಿನ್ನಾಭರಣಗಳನ್ನ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಸಾಲ ಪಡೆದಿದ್ದರು. ಆದರೆ ಇದೀಗ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹30,000ರಷ್ಟು ಕುಸಿದಿರುವುದು ಬ್ಯಾಂಕ್‌ಗಳ ಆತಂಕಕ್ಕೆ ಕಾರಣವಾಗಿದೆ. ಚಿನ್ನದ ಮಾರುಕಟ್ಟೆ ಮೌಲ್ಯ ಕಡಿಮೆಯಾಗಿರುವುದರಿಂದ ಸಾಲದ ಭದ್ರತೆಯಾಗಿ ಇರಿಸಲಾಗಿದ್ದ ಆಭರಣಗಳ ಮೌಲ್ಯವೂ ಇಳಿಕೆಯಾಗಿದೆ. ಹೀಗಾಗಿ ಈ ಹಿಂದೆ ನೀಡಿದ್ದ ಸಾಲಕ್ಕೆ ಹೋಲಿಸಿದರೆ ಅಡವಿಟ್ಟ ಚಿನ್ನದ ಮೌಲ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ.

ಹೆಚ್ಚುವರಿ ಹಣ ಜಮೆ ಮಾಡಲು ಬ್ಯಾಂಕ್‌ಗಳ ಸೂಚನೆ

ಚಿನ್ನದ ಬೆಲೆ ಇಳಿಕೆಯಿಂದ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ನಡುವಿನ ಅನುಪಾತ ನಿಗದಿತ ಮಿತಿಯನ್ನ ಮೀರಿರುವ ಪ್ರಕರಣಗಳಲ್ಲಿ ಬ್ಯಾಂಕ್‌ಗಳು ಸಾಲಗಾರರನ್ನ ಸಂಪರ್ಕಿಸುತ್ತಿವೆ. ಸಾಲದ ಖಾತೆಯಲ್ಲಿ ಅಗತ್ಯವಿರುವ ಹೆಚ್ಚುವರಿ ಮೊತ್ತವನ್ನ ಜಮೆ ಮಾಡುವಂತೆ ಸೂಚಿಸಲಾಗುತ್ತಿದೆ. ಹಣ ಪಾವತಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಚಿನ್ನಾಭರಣಗಳನ್ನ ಅಡವಿಡುವಂತೆ ಕೆಲವು ಸಾಲಗಾರರಿಗೆ ತಿಳಿಸಲಾಗುತ್ತಿದೆ. ಈ ಸೂಚನೆಯಿಂದ ಈಗಾಗಲೇ ಸಾಲ ಪಡೆದಿರುವ ಗ್ರಾಹಕರಿಗೆ ಮತ್ತೊಂದು ಆರ್ಥಿಕ ಹೊರೆ ಎದುರಾಗಿದೆ. ಚಿನ್ನದ ಬೆಲೆ ಹೆಚ್ಚಿದ್ದ ಸಂದರ್ಭದಲ್ಲಿ ಸಾಲ ಪಡೆದವರು, ಈಗ ಬೆಲೆ ಕುಸಿದಿರುವುದರಿಂದ ತಮ್ಮ ಸಾಲದ ಭದ್ರತೆಯನ್ನ ಕಾಯ್ದುಕೊಳ್ಳಲು ಹೆಚ್ಚುವರಿ ಹಣ ಹೊಂದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲದ ಮೌಲ್ಯ ಮತ್ತು ಚಿನ್ನದ ಮೌಲ್ಯದ ಅನುಪಾತವೇನು?

ಚಿನ್ನದ ಸಾಲ ನೀಡುವಾಗ ಬ್ಯಾಂಕ್‌ಗಳು ಅಡವಿಟ್ಟ ಆಭರಣಗಳ ಮೌಲ್ಯವನ್ನ ಆಧರಿಸಿ ಸಾಲದ ಮೊತ್ತವನ್ನ ನಿರ್ಧರಿಸುತ್ತವೆ. ಸಾಲದ ಮೊತ್ತಕ್ಕೆ ಹೋಲಿಸಿದರೆ ಅಡವಿಟ್ಟ ಚಿನ್ನದ ಮಾರುಕಟ್ಟೆ ಮೌಲ್ಯ ಎಷ್ಟಿದೆ ಎಂಬುದನ್ನ ಸಾಲ-ಮೌಲ್ಯ ಅನುಪಾತ (Loan-to-Value Ratio - LTV) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಒಬ್ಬ ಗ್ರಾಹಕ ಚಿನ್ನದ ಮಾರುಕಟ್ಟೆ ಮೌಲ್ಯವನ್ನ ಆಧರಿಸಿ ಸಾಲ ಪಡೆದಿರುತ್ತಾರೆ. ನಂತರ ಚಿನ್ನದ ಬೆಲೆ ಕುಸಿದರೆ, ಅಡವಿಟ್ಟ ಆಭರಣಗಳ ಮೌಲ್ಯವೂ ಕಡಿಮೆಯಾಗುತ್ತದೆ. ಆದರೆ ಗ್ರಾಹಕರು ಪಡೆದಿರುವ ಸಾಲದ ಬಾಕಿ ಮೊತ್ತ ಅದೇ ಪ್ರಮಾಣದಲ್ಲಿ ಕಡಿಮೆಯಾಗುವುದಿಲ್ಲ. ಇದರಿಂದ ಸಾಲದ ಮೊತ್ತ ಮತ್ತು ಚಿನ್ನದ ಮೌಲ್ಯದ ನಡುವಿನ ಅನುಪಾತ ಹೆಚ್ಚಾಗುತ್ತದೆ. ನಿಗದಿತ ಮಿತಿಯನ್ನ ಮೀರಿದಾಗ ಸಾಲದ ಭದ್ರತೆಯನ್ನ ಸರಿಪಡಿಸಿಕೊಳ್ಳಲು ಬ್ಯಾಂಕ್‌ಗಳು ಹೆಚ್ಚುವರಿ ಹಣ ಅಥವಾ ಚಿನ್ನವನ್ನ ಕೇಳಬಹುದು.

ಸಾಲಗಾರರಿಗೆ ಹೆಚ್ಚಿದ ಹೊರೆ

ಚಿನ್ನದ ದರ ಇಳಿಕೆಯ ಪರಿಣಾಮ ಸಾಲಗಾರರು ತಮ್ಮ ಸಾಲದ ಖಾತೆಯ ಸ್ಥಿತಿಯನ್ನ ಪರಿಶೀಲಿಸಬೇಕಾದ ಅಗತ್ಯ ಎದುರಾಗಿದೆ. ಬ್ಯಾಂಕ್‌ಗಳಿಂದ ಬರುವ ಸಂದೇಶಗಳು ಅಥವಾ ನೋಟಿಸ್‌ಗಳನ್ನ ನಿರ್ಲಕ್ಷಿಸದೆ, ಸೂಚಿಸಿರುವ ಮೊತ್ತ ಮತ್ತು ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ಪಡೆಯಬೇಕಿದೆ. ಹೆಚ್ಚುವರಿ ಮೊತ್ತವನ್ನ ಪಾವತಿಸುವುದು ಅಥವಾ ಹೆಚ್ಚುವರಿ ಚಿನ್ನವನ್ನ ಅಡವಿಡುವುದು ಸಾಲದ ಭದ್ರತೆಯನ್ನ ನಿಗದಿತ ಮಟ್ಟದಲ್ಲಿ ಕಾಯ್ದುಕೊಳ್ಳಲು ಬ್ಯಾಂಕ್‌ಗಳು ನೀಡುತ್ತಿರುವ ಆಯ್ಕೆಗಳಾಗಿವೆ. 

ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದಾಗ ಸಾಲ ಪಡೆದವರಿಗೆ ಈಗಿನ ಬೆಲೆ ಕುಸಿತ ಅನಿರೀಕ್ಷಿತ ಹೊರೆ ತಂದಿದೆ. ಒಂದೆಡೆ ಚಿನ್ನದ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದ್ದರೆ, ಮತ್ತೊಂದೆಡೆ ಸಾಲದ ಬಾಕಿ ಮೊತ್ತವನ್ನ ನಿರ್ವಹಿಸುವ ಜವಾಬ್ದಾರಿ ಸಾಲಗಾರರ ಮೇಲೆಯೇ ಉಳಿದಿದೆ. ಹೀಗಾಗಿ ಚಿನ್ನದ ಸಾಲ ಪಡೆದವರು ಬ್ಯಾಂಕ್‌ಗಳ ಸೂಚನೆಗಳತ್ತ ಗಮನಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಲ ಪಾವತಿಸದಿದ್ದರೆ ಚಿನ್ನ ಹರಾಜು!

ಬ್ಯಾಂಕ್ ನೀಡಿರುವ ನೋಟಿಸ್‌ನಲ್ಲಿ ಸೂಚಿಸಿದ ಗಡುವಿನೊಳಗೆ ಗ್ರಾಹಕರು ಹೆಚ್ಚುವರಿ ಹಣ ಪಾವತಿಸದಿದ್ದರೆ ಅಥವಾ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಸಾಲದ ಒಪ್ಪಂದದ ನಿಯಮಗಳ ಪ್ರಕಾರ ಮುಂದಿನ ವಸೂಲಾತಿ ಕ್ರಮ ಆರಂಭವಾಗಬಹುದು. ನೋಟಿಸ್ ನೀಡಿದ ನಂತರವೂ ಸಾಲದ ಬಾಕಿ ತೀರಿಸದಿದ್ದರೆ, ಅಡವಿಟ್ಟ ಚಿನ್ನವನ್ನ ಹರಾಜು ಹಾಕುವ ಹಂತಕ್ಕೂ ಬ್ಯಾಂಕ್ ಮುಂದಾಗುವ ಸಾಧ್ಯತೆ ಇರುತ್ತದೆ. ಹರಾಜಿನಿಂದ ಬಂದ ಹಣವನ್ನ ಸಾಲದ ಬಾಕಿ ವಸೂಲಿಗೆ ಬಳಸಲಾಗುತ್ತದೆ. ಹೀಗಾಗಿ ಚಿನ್ನದ ಸಾಲ ಪಡೆದವರು ಬ್ಯಾಂಕ್‌ನ ಸೂಚನೆಗಳನ್ನ ನಿರ್ಲಕ್ಷಿಸದೆ, ನಿಗದಿತ ಸಮಯದೊಳಗೆ ಬಾಕಿ ಮೊತ್ತ ಪಾವತಿಸುವುದು ಅಥವಾ ಬ್ಯಾಂಕ್‌ನೊಂದಿಗೆ ಸಂಪರ್ಕಿಸಿ ಮುಂದಿನ ಕ್ರಮದ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ.

Add Zee News as a Preferred Source
TAGS:
Personal Finance
Kannada News