• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕೆರಿಯರ್
  • /ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!

ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!

ರಾಜ್ಯ ಶಿಕ್ಷಣ ಇಲಾಖೆಯು ಮುಂಬರುವ 2026-27ನೇ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ನೀಡಲು ನಿರ್ಧರಿಸಿದೆ. ಡಿಜಿಟಲ್ ವ್ಯವಸ್ಥೆಯಿಂದ ಅಂಕಪಟ್ಟಿಯ ಅಸಲಿತನವನ್ನ ಸುಲಭವಾಗಿ ಪರಿಶೀಲಿಸಬಹುದು, ಇದರಿಂದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ತಡೆಯಲು ಮತ್ತು ಅಂಕಪಟ್ಟಿ ಕಳೆದುಹೋಗುವ ಕಿರಿಕಿರಿ ತಪ್ಪಿಸಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Written ByPuttaraj K Alur
Published: Nov 24, 2026, 15:13 IST|Updated: Nov 24, 2026, 15:23 IST
joinshare
ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!
Image Credit: Digital Marks Cards

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಕಿರುಚಿತ್ರಗಳ ಸಂಭ್ರಮಕ್ಕೆ ಸಾಕ್ಷಿಯಾದ ‘ಸಿನಿಮಿನಿ’ ಎರಡನೇ ಆವೃತ್ತಿಯ ಕಿರುಚಿತ್ರೋತ್ಸವ

ಕಿರುಚಿತ್ರಗಳ ಸಂಭ್ರಮಕ್ಕೆ ಸಾಕ್ಷಿಯಾದ ‘ಸಿನಿಮಿನಿ’ ಎರಡನೇ ಆವೃತ್ತಿಯ ಕಿರುಚಿತ್ರೋತ್ಸವ

2

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ: ರಾಕೇಶ್ ಶೆಟ್ಟಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

3

ಒಂದೇ ಒಂದು ತಪ್ಪಿನಿಂದ ₹1800 ಕೋಟಿ ಮೌಲ್ಯದ ಆಸ್ತಿ ಕಳೆದು ಕೊಂಡ ಖ್ಯಾತ ನಟ!

4

ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ: ಚಿನ್ನದ ಸಾಲ ಪಡೆದವರಿಗೆ ಬ್ಯಾಂಕ್‌ ನೋಟಿಸ್!

5

ಇನ್ಮುಂದೆ SSLC, PUC ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ: ಡಿಜಿಲಾಕರ್‌ನಲ್ಲೇ ಸಿಗಲಿದೆ ಮಾರ್ಕ್ಸ್‌ಕಾರ್ಡ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Digital Marks Cards: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ಮೇಲೆ ಒರಿಜಿನಲ್ ಮಾರ್ಕ್ಸ್ ಕಾರ್ಡ್‌ಗಾಗಿ ತಿಂಗಳುಗಟ್ಟಲೇ ಕಾಯುವುದು, ಆಮೇಲೆ ಆ ಕಾಗದದ ಅಂಕಪಟ್ಟಿ ಹರಿದುಹೋಗದಂತೆ ಅಥವಾ ಕಳೆದುಹೋಗದಂತೆ ಜೋಪಾನವಾಗಿ ಎತ್ತಿಡುವುದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೊಡ್ಡ ತಲೆನೋವಾಗಿತ್ತು. ಆದ್ರೆ ಇನ್ಮುಂದೆ ಆ ಟೆನ್ಷನ್ ಇರಲ್ಲ. ರಾಜ್ಯ ಶಿಕ್ಷಣ ಇಲಾಖೆ ಅಂಕಪಟ್ಟಿ ವಿತರಣೆ ವಿಧಾನದಲ್ಲಿ ಭಾರೀ ಬದಲಾವಣೆ ತರಲು ಮುಂದಾಗಿದ್ದು, 2026-27ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ ನೀಡಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲೇ ಅಂಕಪಟ್ಟಿಯನ್ನ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಡಿಜಿಲಾಕರ್‌ನಲ್ಲೇ ಸಿಗಲಿದೆ ಅಂಕಪಟ್ಟಿ!

ಮುಂಬರುವ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನ ನೇರವಾಗಿ ಕೇಂದ್ರ ಸರ್ಕಾರದ ಡಿಜಿಲಾಕರ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಈ ಡಿಜಿಟಲ್ ರೂಪದಲ್ಲಿ ಸಿಗುವ ಅಂಕಪಟ್ಟಿಗೆ ಸಂಪೂರ್ಣ ಅಧಿಕೃತ ಮಾನ್ಯತೆ ಇರಲಿದೆ. ಅಂದರೆ ಕಾಲೇಜು ಪ್ರವೇಶವಿರಲಿ ಅಥವಾ ಸರ್ಕಾರಿ/ಖಾಸಗಿ ಉದ್ಯೋಗದ ಸಂದರ್ಶನವಿರಲಿ, ಎಲ್ಲಾ ಕಡೆ ಇದನ್ನ ಒರಿಜಿನಲ್ ದಾಖಲೆಯಂತೆಯೇ ಬಳಸಬಹುದು. ಒಂದು ವೇಳೆ ಅಂಕಪಟ್ಟಿ ಕಳೆದುಹೋದ್ರೆ ಡುಪ್ಲಿಕೇಟ್ ಕಾಪಿಗಾಗಿ ಶಿಕ್ಷಣ ಮಂಡಳಿ ಕಚೇರಿಗಳಿಗೆ ಅಲೆದಾಡುವ, ಅರ್ಜಿ ಹಾಕಿ ಕಾಯುವ ಕಿರಿಕಿರಿ ಇನ್ನುಮುಂದೆ ತಪ್ಪಲಿದೆ.

ಡಿಜಿಟಲ್ ಅಂಕಪಟ್ಟಿಯ ಜೊತೆಗೆ ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನ 'ಅಪಾರ್ ಐಡಿ'ಗೆ (APAAR ID) ಲಿಂಕ್ ಮಾಡುವ ವ್ಯವಸ್ಥೆಯನ್ನೂ ಶಿಕ್ಷಣ ಇಲಾಖೆ ರೂಪಿಸುತ್ತಿದೆ. ಇದರಿಂದ ವಿದ್ಯಾರ್ಥಿಯ ಇಡೀ ವಿದ್ಯಾಭ್ಯಾಸದ ಸಂಪೂರ್ಣ ದಾಖಲೆಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸುರಕ್ಷಿತವಾಗಿ ಇರಲಿವೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳಿಗೆ ಸೇರುವಾಗ ಅಥವಾ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನ ಕ್ಷಣಾರ್ಧದಲ್ಲಿ ಹಂಚಿಕೊಳ್ಳಲು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ.

ನಕಲಿ ಮಾರ್ಕ್ಸ್ ಕಾರ್ಡ್ ಹಾವಳಿಗೆ ಬ್ರೇಕ್!

ಇತ್ತೀಚಿನ ದಿನಗಳಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಅಥವಾ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಯತ್ನಿಸುವ ಪ್ರಕರಣಗಳು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದವು. ಅಸಲಿ ಅಂಕಪಟ್ಟಿಯಲ್ಲಿರುವ ಅಂಕಗಳನ್ನ ಎಡಿಟ್ ಮಾಡಿ ವಂಚನೆ ಎಸಗುವ ಜಾಲಗಳೂ ಸಕ್ರಿಯವಾಗಿದ್ದವು. ಆದ್ರೆ ಈ ಹೊಸ ಡಿಜಿಟಲ್ ವ್ಯವಸ್ಥೆಯಲ್ಲಿ ಅಂಕಪಟ್ಟಿಯ ಅಸಲಿತನವನ್ನ ಆನ್‌ಲೈನ್‌ನಲ್ಲೇ ತಕ್ಷಣವೇ ಪರಿಶೀಲಿಸಲು ಸಾಧ್ಯವಾಗುವುದರಿಂದ, ಇಂತಹ ಎಲ್ಲಾ ಅಕ್ರಮ ಮತ್ತು ನಕಲಿ ದಂಧೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂಬುದು ಇಲಾಖೆಯ ಆಶಯವಾಗಿದೆ.

ಈ ಮಹತ್ವದ ಯೋಜನೆ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಸುಲಭವಾಗಿ ಮತ್ತು ಪಾರದರ್ಶಕವಾಗಿ ಅಂಕಪಟ್ಟಿ ತಲುಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಡಿಜಿಟಲ್ ವ್ಯವಸ್ಥೆಯನ್ನ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಯಾವುದೇ ತಾಂತ್ರಿಕ ತೊಂದರೆಗಳನ್ನ ಮೊದಲೇ ಗುರುತಿಸಿ, ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಡಿಜಿಟಲ್ ಕ್ರಾಂತಿ ವರದಾನವಾಗಲಿದೆ.

Add Zee News as a Preferred Source
TAGS:
Kannada News