• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡು ಬಂದಿದ್ದು, ಬಂಗಾರದ ಭರಾಟೆ ಜೋರಾಗಿಯೇ ಇದೆ. ಈ ಮಧ್ಯೆ, ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಚಿನ್ನ ಖರೀದಿದಾರರಿಗೆ ಮಹತ್ವದ ಎಚ್ಚರಿಕೆ ಒಂದನ್ನು ನೀಡಿದೆ.

Written ByYashaswini V
Published: Nov 23, 2026, 13:07 IST|Updated: Nov 23, 2026, 13:08 IST
joinshare
ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

2

ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕಿನ ಸಂಕಷ್ಟ! ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯುತ್ತಿರುವ ಮಂಜಮ್ಮ ಜೋಗತಿ

3

10 ಗ್ರಾಂ ಚಿನ್ನ ₹1 ಲಕ್ಷಕ್ಕೆ ಕುಸಿಯುತ್ತಾ? ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; ತಜ್ಞರು ಹೇಳುವುದೇನು?

4

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

5

ರೈತರ ಸಂಕಷ್ಟದಲ್ಲಿ ರಾಜಕೀಯ ಬೇಡ, ಕೇಂದ್ರ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಲಿ: ಡಾ.ಜಿ.ಪರಮೇಶ್ವರ ಆಗ್ರಹ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮದುವೆ ಸೀಸನ್ ನಡುವೆಯೇ ಕಳೆದ 10 ದಿನಗಳಲ್ಲಿ ಬಂಗಾರದ ಬೆಲೆ ಭಾರೀ ಇಳಿಕೆಯಾಗಿದ್ದು, ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಶೇ. 20ರಿಂದ 25ರಷ್ಟು ಹೆಚ್ಚಾಗಿದೆ. ಇದೇ ವೇಳೆ, ಬೆಲೆ ಇಳಿಕೆಯ ಭರಾಟೆಯಲ್ಲಿ ಮೋಸ ಹೋಗದಂತೆ ಚಿನ್ನ ಖರೀದಿಸುವ ಮುನ್ನ HUID ಕೋಡ್, ಶುದ್ಧತೆ, ನಿವ್ವಳ ತೂಕ ಮತ್ತು ಅಧಿಕೃತ ಜಿಎಸ್‌ಟಿ ಬಿಲ್ ಪರಿಶೀಲಿಸುವಂತೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

ಚಿನ್ನ ಖರೀದಿ: ಮೋಸ ಹೋಗದಂತೆ ಗ್ರಾಹಕರಿಗೆ ಎಚ್ಚರಿಕೆ:
ಮದುವೆ ಸೀಸನ್‌ನ ಸಂಭ್ರಮದ ನಡುವೆಯೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ಆಭರಣ ಪ್ರಿಯರು ಹಾಗೂ ಮದುವೆ ಮನೆಯವರಿಗೆ ದೊಡ್ಡ ಮಟ್ಟದ ಸಂತಸ ತಂದಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ದರ ನಿರಂತರವಾಗಿ ಕುಸಿಯುತ್ತಿದ್ದು, ರಾಜಧಾನಿ ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ. ಆದರೆ, ಬೆಲೆ ಇಳಿಕೆಯ ಭರಾಟೆಯಲ್ಲಿ ಗ್ರಾಹಕರು ಮೋಸ ಹೋಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಮಹತ್ವದ ಸೂಚನೆ ನೀಡಿದೆ.

ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ, ಕೇವಲ 10 ದಿನಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 14,720 ರೂಪಾಯಿಗಳಷ್ಟು ಗಣನೀಯ ಇಳಿಕೆ ಕಂಡುಬಂದಿದೆ. ಗಗನಕ್ಕೇರಿದ್ದ ಚಿನ್ನದ ದರ ದಿಢೀರ್ ಕುಸಿತ ಕಂಡಿರುವುದು, ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದ ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿದೆ. ಮುಂಬರುವ ಡಿಸೆಂಬರ್ 15ರವರೆಗೆ ರಾಜ್ಯದಲ್ಲಿ ಮದುವೆಗಳ ಸೀಸನ್ ಜೋರಾಗಿರುವುದರಿಂದ, ಬಂಗಾರ ಖರೀದಿಸಲು ಇದೇ ಸುಸಂದರ್ಭ ಎಂದು ಭಾವಿಸಿ ಜನರು ಚಿನ್ನದ ಅಂಗಡಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಆಭರಣ ಮಳಿಗೆಗಳಲ್ಲಿ ಗ್ರಾಹಕರ ಸಂಖ್ಯೆ ಶೇ. 20-25ರಷ್ಟು ಹೆಚ್ಚಳ: 
ಚಿನ್ನದ ಬೆಲೆ ಇಳಿಕೆಯ ನೇರ ಪರಿಣಾಮ ಬೆಂಗಳೂರಿನ ಚಿನ್ನಾಭರಣ ಮಾರುಕಟ್ಟೆಯ ಮೇಲೂ ಕಂಡುಬಂದಿದೆ. ನಗರದ ಪ್ರಮುಖ ಆಭರಣ ಮಳಿಗೆಗಳಲ್ಲಿ ಸಾಮಾನ್ಯ ದಿನಗಳಿಗಿಂತ ಗ್ರಾಹಕರ ಸಂಖ್ಯೆ ಶೇಕಡಾ 20ರಿಂದ 25ರಷ್ಟು ಹೆಚ್ಚಾಗಿದೆ. ನೆಕ್ಲೇಸ್, ಬಳೆ, ಸರ ಸೇರಿದಂತೆ ಮದುವೆ ಆಭರಣಗಳ ಖರೀದಿ ಜೋರಾಗಿದ್ದು, ಚಿನ್ನದ ಮಾರುಕಟ್ಟೆಯಲ್ಲಿ ವಹಿವಾಟು ಮತ್ತೆ ಚುರುಕುಗೊಂಡಿದೆ.

ಗ್ರಾಹಕರಿಗೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ ಏನು? 
ಒಂದೆಡೆ ಚಿನ್ನದ ಖರೀದಿ ಭರಾಟೆ ಜೋರಾಗಿದ್ದರೆ, ಮತ್ತೊಂದೆಡೆ ಕರ್ನಾಟಕ ಗೋಲ್ಡ್ ಅಸೋಸಿಯೇಷನ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಬೆಲೆ ಕಡಿಮೆಯಾಗಿದೆ ಎಂಬ ಆತುರದಲ್ಲಿ ಗುಣಮಟ್ಟವನ್ನು ಕಡೆಗಣಿಸಬಾರದು ಎಂದು ಅಸೋಸಿಯೇಷನ್ ತಿಳಿಸಿದೆ. 

ಗ್ರಾಹಕರು ಚಿನ್ನ ಖರೀದಿಸುವಾಗ ಈ ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು:
* HUID ಕೋಡ್ ಮತ್ತು ಹಾಲ್‌ಮಾರ್ಕ್: ಪ್ರತಿಯೊಂದು ಚಿನ್ನದ ಆಭರಣದ ಮೇಲೆ 6 ಅಂಕಿಗಳ ವಿಶಿಷ್ಟ HUID (Hallmark Unique Identification) ಸಂಖ್ಯೆ ಮತ್ತು ಬಿಐಎಸ್ (BIS) ಹಾಲ್‌ಮಾರ್ಕ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
* ಶುದ್ಧತೆ : ನೀವು ಖರೀದಿಸುತ್ತಿರುವ ಚಿನ್ನ 22 ಕ್ಯಾರೆಟ್ ಅಥವಾ 18 ಕ್ಯಾರೆಟ್ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
* ನಿಖರ ತೂಕ: ಆಭರಣದಲ್ಲಿ ಹರಳುಗಳಿದ್ದರೆ , ಹರಳುಗಳ ತೂಕವನ್ನು ಕಳೆದು ಕೇವಲ ಚಿನ್ನದ ನಿವ್ವಳ ತೂಕಕ್ಕೆ  ಮಾತ್ರ ಹಣ ಪಾವತಿಸುತ್ತಿದ್ದೀರಾ ಎಂಬುದನ್ನು ಗಮನಿಸಬೇಕು.
* ಅಧಿಕೃತ ಬಿಲ್ : ಯಾವುದೇ ಕಾರಣಕ್ಕೂ ಕಚ್ಚಾ ಚೀಟಿ  ಪಡೆಯದೆ, ಮೇಕಿಂಗ್ ಚಾರ್ಜ್ ಮತ್ತು ಜಿಎಸ್‌ಟಿ ವಿವರಗಳಿರುವ ಅಧಿಕೃತ ಪಕ್ಕಾ ಬಿಲ್ ಅನ್ನು ಕಡ್ಡಾಯವಾಗಿ ಪಡೆಯಬೇಕು.
ಒಟ್ಟಿನಲ್ಲಿ, ಮದುವೆ ಸೀಸನ್‌ನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದ್ದು, ಎಚ್ಚರಿಕೆಯಿಂದ ಶುದ್ಧ ಚಿನ್ನವನ್ನು ಖರೀದಿಸುವ ಮೂಲಕ ಈ ಅವಕಾಶದ ಲಾಭ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.
 

Add Zee News as a Preferred Source
TAGS:
Personal Finance