• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕಿನ ಸಂಕಷ್ಟ! ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯುತ್ತಿರುವ ಮಂಜಮ್ಮ ಜೋಗತಿ

ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕಿನ ಸಂಕಷ್ಟ! ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯುತ್ತಿರುವ ಮಂಜಮ್ಮ ಜೋಗತಿ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಆರ್ಥಿಕ ಸಂಕಷ್ಟದಿಂದ ಮತ್ತೆ ಬುಟ್ಟಿ ಹೆಣೆಯುವ ಕಾಯಕಕ್ಕೆ ಮರಳಿದ್ದಾರೆ. ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ವಾಸಿಸುತ್ತಿರುವ ಅವರು, ಒಂದು ಬುಟ್ಟಿ ತಯಾರಿಸಲು ಇಡೀ ದಿನ ಶ್ರಮಿಸುತ್ತಿದ್ದು, ₹300 ವೆಚ್ಚದ ಬುಟ್ಟಿಯನ್ನ ₹500ರಿಂದ ₹600ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸಮರ್ಪಕ ಮಾಶಾಸನ ದೊರೆಯದಿರುವುದು, ಕಾರ್ಯಕ್ರಮಗಳ ಆಹ್ವಾನ ಮತ್ತು ಗೌರವ ಸಂಭಾವನೆ ಕಡಿಮೆಯಾಗಿರುವುದು ಅವರ ಸಂಕಷ್ಟಕ್ಕೆ ಕಾರಣವಾಗಿದೆ. ಸ್ವಾಭಿಮಾನದಿಂದ ಬದುಕು ಸಾಗಿಸಲು ಸ್ವಂತ ಕಾಯಕವನ್ನೇ ಮತ್ತೆ ನೆಚ್ಚಿಕೊಂಡಿದ್ದಾರೆ.

Written ByPuttaraj K Alur
Published: Nov 23, 2026, 12:39 IST|Updated: Nov 23, 2026, 12:49 IST
joinshare
ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕಿನ ಸಂಕಷ್ಟ! ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯುತ್ತಿರುವ ಮಂಜಮ್ಮ ಜೋಗತಿ
Image Credit: Manjamma Jogathi

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

ಮದುವೆ ಸೀಸನ್‌ನಲ್ಲಿ ಚಿನ್ನದ ದರ ಭಾರೀ ಕುಸಿತ: ಬಂಗಾರ ಪ್ರಿಯರಿಗೆ ಗೋಲ್ಡ್ ಅಸೋಸಿಯೇಷನ್ ಎಚ್ಚರಿಕೆ!

2

ಪದ್ಮಶ್ರೀ ಗೌರವ ಪಡೆದ ಸಾಧಕಿಗೆ ಬದುಕಿನ ಸಂಕಷ್ಟ! ಹೊಟ್ಟೆಪಾಡಿಗಾಗಿ ಮತ್ತೆ ಬುಟ್ಟಿ ಹೆಣೆಯುತ್ತಿರುವ ಮಂಜಮ್ಮ ಜೋಗತಿ

3

10 ಗ್ರಾಂ ಚಿನ್ನ ₹1 ಲಕ್ಷಕ್ಕೆ ಕುಸಿಯುತ್ತಾ? ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; ತಜ್ಞರು ಹೇಳುವುದೇನು?

4

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

5

ರೈತರ ಸಂಕಷ್ಟದಲ್ಲಿ ರಾಜಕೀಯ ಬೇಡ, ಕೇಂದ್ರ ತಕ್ಷಣ ಬರ ಪರಿಹಾರ ಬಿಡುಗಡೆ ಮಾಡಲಿ: ಡಾ.ಜಿ.ಪರಮೇಶ್ವರ ಆಗ್ರಹ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Manjamma Jogathi: ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳನ್ನ ಪಡೆದಿರುವ ಮಂಜಮ್ಮ ಜೋಗತಿ ಅವರ ಬದುಕಿನಲ್ಲಿ ಇದೀಗ ಆರ್ಥಿಕ ಸಂಕಷ್ಟ ಎದುರಾಗಿದೆ. ಪ್ರಶಸ್ತಿ, ಪುರಸ್ಕಾರಗಳ ಮೂಲಕ ಗುರುತಿಸಿಕೊಂಡಿದ್ದ ಸಾಧಕಿ ಜೀವನ ನಿರ್ವಹಣೆಗಾಗಿ ಮತ್ತೆ ತಮ್ಮ ಹಳೆಯ ಕಾಯಕವಾದ ಬುಟ್ಟಿ ಹೆಣೆಯುವ ಕೆಲಸಕ್ಕೆ ಮರಳಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ವಾಸಿಸುತ್ತಿರುವ ಮಂಜಮ್ಮ ಜೋಗತಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಬಿಡುವಿನ ವೇಳೆಯಲ್ಲಿ ವೈರ್ ಬುಟ್ಟಿ ಹಾಗೂ ಬ್ಯಾಗ್‌ಗಳನ್ನ ತಯಾರಿಸುತ್ತಿದ್ದಾರೆ.

ಒಂದು ಕಾಲದಲ್ಲಿ ವೇದಿಕೆಗಳಲ್ಲಿ ಗೌರವ, ಸನ್ಮಾನ ಸ್ವೀಕರಿಸುತ್ತಿದ್ದ ಮಂಜಮ್ಮ ಜೋಗತಿ ಅವರಿಗೆ ಈಗ ಕಾರ್ಯಕ್ರಮಗಳ ಆಹ್ವಾನವೂ ಕಡಿಮೆಯಾಗಿದೆ. ಕಾರ್ಯಕ್ರಮಗಳಿಗೆ ತೆರಳಿ ಗೌರವ ಸಂಭಾವನೆ ಪಡೆಯುವ ಅವಕಾಶಗಳಿಲ್ಲದೆ ಆದಾಯದ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ಸಮರ್ಪಕವಾಗಿ ಮಾಶಾಸನ ದೊರೆಯದಿರುವುದು ಜೀವನ ನಿರ್ವಹಣೆಯ ಸಂಕಷ್ಟವನ್ನ ಹೆಚ್ಚಿಸಿದೆ. ಹೀಗಾಗಿ ಜೀವನ ಸಾಗಿಸಲು ಮತ್ತೆ ಕೈಯಿಂದ ಕೆಲಸ ಮಾಡುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಒಂದು ಬುಟ್ಟಿ ತಯಾರಿಸಲು ಇಡೀ ದಿನದ ಶ್ರಮ

ಮಂಜಮ್ಮ ಜೋಗತಿ ಅವರು ತಯಾರಿಸುವ ಬುಟ್ಟಿಯೊಂದಕ್ಕೆ ಸುಮಾರು 300 ರೂಪಾಯಿ ವೆಚ್ಚವಾಗುತ್ತದೆ. ಅದನ್ನ ಮಾರುಕಟ್ಟೆಯಲ್ಲಿ 500ರಿಂದ 600 ರೂಪಾಯಿವರೆಗೆ ಮಾರಾಟ ಮಾಡಬಹುದು. ಒಂದು ಬುಟ್ಟಿಯನ್ನ ಪೂರ್ಣಗೊಳಿಸಲು ಬರೋಬ್ಬರಿ ಒಂದು ದಿನದ ಶ್ರಮ ಬೇಕಾಗುತ್ತದೆ. ಕಚ್ಚಾ ವಸ್ತುಗಳನ್ನ ಖರೀದಿಸಿ, ಕೈಯಿಂದಲೇ ಬುಟ್ಟಿಯನ್ನ ಹೆಣೆಯುವ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮ್ಮ ತಂದೆ-ತಾಯಿಗಳಿಂದಲೇ ಈ ಕಲೆ ಕಲಿತಿರುವುದಾಗಿ ಮಂಜಮ್ಮ ಜೋಗತಿ ತಿಳಿಸಿದ್ದಾರೆ. ಈ ಹಿಂದೆ ಜೀವನೋಪಾಯಕ್ಕಾಗಿ ಮಾಡುತ್ತಿದ್ದ ಕೆಲಸವನ್ನ ಈಗ ಮತ್ತೆ ಮುಂದುವರಿಸುವ ಅನಿವಾರ್ಯತೆ ಎದುರಾಗಿದೆ. ಕೈಯಲ್ಲಿ ಕೆಲಸ ಮಾಡುವ ಶಕ್ತಿ ಇರುವವರೆಗೆ ಬೇರೆಯವರನ್ನ ಅವಲಂಬಿಸದೆ ಬದುಕಬೇಕೆಂಬ ನಿಲುವಿನಿಂದ ಅವರು ಈ ಕಾಯಕವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಶಸ್ತಿ ಬಂದ ಬಳಿಕ ಬದಲಾದ ಪರಿಸ್ಥಿತಿ

ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹಲವು ಗೌರವಗಳು ಲಭಿಸಿವೆ. ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆಯನ್ನ ಗುರುತಿಸಿ ವಿವಿಧ ವೇದಿಕೆಗಳಲ್ಲಿ ಆಹ್ವಾನಿಸಿ ಸನ್ಮಾನಿಸಲಾಗುತ್ತಿತ್ತು. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಗೌರವದ ಜೊತೆಗೆ ಗೌರವ ಸಂಭಾವನೆಯ ರೂಪದಲ್ಲಿಯೂ ಆದಾಯ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ ಕಾರ್ಯಕ್ರಮಗಳಿಗೆ ಆಹ್ವಾನಗಳು ಬರುತ್ತಿಲ್ಲ. ಇದರಿಂದ ಅವರ ಆದಾಯದ ಮೂಲವೂ ಕಡಿಮೆಯಾಗಿದೆ. ಪ್ರಶಸ್ತಿ ಪಡೆದ ನಂತರ ತಮ್ಮನ್ನ ಗುರುತಿಸಿ ಗೌರವಿಸುತ್ತಿದ್ದವರು ಈಗ ಕಾರ್ಯಕ್ರಮಗಳಿಗೆ ಕರೆಯುತ್ತಿಲ್ಲವೆಂಬುದು ಅವರ ಅಳಲು. ಸಮರ್ಪಕವಾಗಿ ಮಾಶಾಸನ ದೊರೆಯದಿರುವುದರಿಂದ ದೈನಂದಿನ ಖರ್ಚುಗಳನ್ನ ನಿಭಾಯಿಸುವುದೂ ಕಷ್ಟವಾಗುತ್ತಿದೆ.

ಭಿಕ್ಷಾಟನೆಗಿಂತ ಸ್ವಾವಲಂಬಿ ಬದುಕಿಗೆ ಆದ್ಯತೆ

ಆರ್ಥಿಕ ಸಂಕಷ್ಟ ಎದುರಾದರೂ ಭಿಕ್ಷಾಟನೆಗೆ ಹೋಗುವುದಕ್ಕಿಂತ ದುಡಿದು ಬದುಕುವುದೇ ಉತ್ತಮವೆಂಬ ನಿಲುವು ಮಂಜಮ್ಮ ಜೋಗತಿ ಅವರದ್ದು. ತಮ್ಮ ಕೈಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರುವವರೆಗೆ ಸ್ವಂತ ಶ್ರಮದಿಂದ ಜೀವನ ನಡೆಸಬೇಕೆಂಬ ಉದ್ದೇಶದಿಂದ ಬುಟ್ಟಿ ಹೆಣೆಯುವ ಕೆಲಸಕ್ಕೆ ಮರಳಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರೂ ಜೀವನ ನಿರ್ವಹಣೆಗಾಗಿ ಮತ್ತೆ ಹಳೆಯ ವೃತ್ತಿಯನ್ನ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬುಟ್ಟಿ ತಯಾರಿಸಲು ಇಡೀ ದಿನ ಶ್ರಮವಹಿಸಿ, ಅದನ್ನ 500ರಿಂದ 600 ರೂಪಾಯಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮರಿಯಮ್ಮನಹಳ್ಳಿಯಲ್ಲಿ ಮುಂದುವರಿದ ಬದುಕಿನ ಹೋರಾಟ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮಂಜಮ್ಮ ಜೋಗತಿ ಅವರ ಈ ಬದುಕಿನ ಹೋರಾಟ ಮುಂದುವರಿದಿದೆ. ಜಾನಪದ ಕಲೆಗೆ ಕೊಡುಗೆ ನೀಡಿದ ಸಾಧಕಿಯೊಬ್ಬರು ಜೀವನ ನಿರ್ವಹಣೆಗಾಗಿ ಮತ್ತೆ ಕೈಕಸುಬಿಗೆ ಮರಳಿರುವುದು ಅವರ ಪ್ರಸ್ತುತ ಪರಿಸ್ಥಿತಿಯನ್ನ ತೋರಿಸುತ್ತದೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಸಾಧನೆಯ ಗುರುತಾಗಿದ್ದರೂ, ದೈನಂದಿನ ಬದುಕಿಗೆ ನಿರಂತರ ಆದಾಯದ ಅಗತ್ಯವಿದೆ. ಕಾರ್ಯಕ್ರಮಗಳ ಕೊರತೆ, ಗೌರವ ಸಂಭಾವನೆ ಇಲ್ಲದಿರುವುದು ಮತ್ತು ಸಮರ್ಪಕ ಮಾಶಾಸನ ದೊರೆಯದಿರುವುದು ಮಂಜಮ್ಮ ಜೋಗತಿ ಅವರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಯಾರನ್ನೂ ಅವಲಂಬಿಸದೆ ತಮ್ಮ ಕೌಶಲ್ಯದ ಮೂಲಕ ಬದುಕು ಕಟ್ಟಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಒಟ್ನಲ್ಲಿ ಪದ್ಮಶ್ರೀ ಗೌರವ ಪಡೆದ ಜಾನಪದ ಸಾಧಕಿ ಮಂಜಮ್ಮ ಜೋಗತಿ ಅವರ ಬದುಕಿನಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟ ಈಗ ಗಮನ ಸೆಳೆದಿದೆ. ಒಂದು ದಿನದ ಶ್ರಮದಿಂದ ಬುಟ್ಟಿ ಹೆಣೆದು ಅಲ್ಪ ಆದಾಯ ಗಳಿಸುತ್ತಿರುವ ಅವರು, ಸ್ವಾಭಿಮಾನದಿಂದ ಬದುಕು ಸಾಗಿಸುವ ಹಾದಿಯನ್ನ ಆರಿಸಿಕೊಂಡಿದ್ದಾರೆ.

Add Zee News as a Preferred Source
TAGS:
Kannada News