• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /3% DA ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್‌ ಅಸ್ತು.. ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ

3% DA ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್‌ ಅಸ್ತು.. ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ

ಕೇಂದ್ರ ಸರ್ಕಾರಿ ನೌಕರರ ಡಿಎ ಅನ್ನು ಶೇ. 3 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

Written ByYashaswini V
Published: Oct 28, 2026, 04:19 PM IST|Updated: Oct 28, 2026, 04:21 PM IST
joinshare
3% DA ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್‌ ಅಸ್ತು.. ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಸಿಂಹಗರ್ಜನೆ

ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಸಿಂಹಗರ್ಜನೆ

2

ದರ್ಶನ್‌ಗೆ ಮತ್ತೆ ಕಾಡ್ತಿದ್ಯಾ ಆ ಒಂದು ಆರೋಗ್ಯ ಸಮಸ್ಯೆ!.. ಜೈಲಿನಲ್ಲಿ ಆರೋಗ್ಯ ತಪಾಸಣೆಗೆ ಮನವಿ

3

ನವೆಂಬರ್ 1 ರಿಂದ “ವಾರ್ಡ್ ಒನ್” ಅಭಿಯಾನ: ತಳಮಟ್ಟದಿಂದ ಅಭಿವೃದ್ದಿಗೆ ಪ್ಲ್ಯಾನ್

4

ದರ್ಶನ್ ಕೇಸ್‌ಗೆ ಬಿಗ್ ಟ್ವಿಸ್ಟ್; ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ.. ಹೇಳಿದ್ದೇನು?

5

ಪರಿಷತ್ ಚುನಾವಣೆ ಫಲಿತಾಂಶ; ಜನರ ಸಂದೇಶದ ಕೂಲಂಕುಷ ಅಧ್ಯಯನ: ಸಿಎಂ ಡಿ ಕೆ ಶಿವಕುಮಾರ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

DA Hike Confirmed : ಬಹು ನಿರೀಕ್ಷಿತ ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿ ಭತ್ಯೆ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ತುಟ್ಟಿ ಭತ್ಯೆ ಪರಿಷ್ಕರಣೆಯನ್ನು ಅಂಗೀಕರಿಸಲಾಗಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಯಲ್ಲಿ 3% ಹೆಚ್ಚಳ ಮಾಡಲಾಗಿದ್ದು, ಇದೇ ವೇಳೆ ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿ ಪರಿಹಾರ (ಡಿಆರ್) ವನ್ನು ಶೇ. 1 ರಷ್ಟು ಹೆಚ್ಚಳ ಹೆಚ್ಚಿಸಲು ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಇದು ಜುಲೈ 1, 2026 ರಿಂದ ಜಾರಿಗೆ ಬರುತ್ತದೆ.

ಬುಧವಾರ (ಅ. 28) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆ (ಡಿಎ) ಶೇಕಡಾ 3 ರಷ್ಟು ಹೆಚ್ಚಳಕ್ಕೆ ಮತ್ತು ತುಟ್ಟಿ ಪರಿಹಾರ (ಡಿಆರ್) ಶೇಕಡಾ 1 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದ್ದು, ಈ ಹೆಚ್ಚಳವು ಡಿಎ ಮತ್ತು ಡಿಆರ್ ದರವನ್ನು ಕ್ರಮವಾಗಿ ಮೂಲ ವೇತನ ಮತ್ತು ಪಿಂಚಣಿಯ 60% ರಿಂದ 63% ಕ್ಕೆ ಏರಿಸುತ್ತದೆ.

ಯಾವ ಆಧಾರದ ಮೇಲೆ ತುಟ್ಟಿಭತ್ಯೆ ಪರಿಷ್ಕರಣೆ? 
7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಸೂತ್ರಕ್ಕೆ ಅನುಗುಣವಾಗಿ ಈ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ.

ವಾಸ್ತವವಾಗಿ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಮೂಲಕ ಅಳೆಯಲಾದ ಹಣದುಬ್ಬರದ ದತ್ತಾಂಶವನ್ನು ಆಧರಿಸಿ ಸರ್ಕಾರವು ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ (DA) ಘೋಷಿಸುತ್ತದೆ. ಕೊನೆಯ ತುಟ್ಟಿ ಭತ್ಯೆ ಹೆಚ್ಚಳವನ್ನು ಏಪ್ರಿಲ್ 18, 2026 ರಂದು ಘೋಷಿಸಲಾಗಿತ್ತು. ಆಗ ಕೇಂದ್ರ ಸಚಿವ ಸಂಪುಟವು 2% ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿತು.

ತುಟ್ಟಿ ಭತ್ಯೆ ಶೇ. 63ಕ್ಕೆ ಏರಿಕೆ:
3% ತುಟ್ಟಿ ಭತ್ಯೆ ಏರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ ನಂತರ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ. 63ಕ್ಕೆ ಏರಿಕೆ ಏರಿಕೆ ಆಗುತ್ತದೆ.

ಹೆಚ್ಚುತ್ತಿರುವ ಹಣದುಬ್ಬರವನ್ನು ನಿಭಾಯಿಸಲು AICPI ಸೂಚ್ಯಂಕವನ್ನು ಆಧರಿಸಿ ಸರ್ಕಾರಿ ನೌಕರರು ಮಾತ್ತು ಪಿಂಚಣಿದಾರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಮೊದಲಿಗೆ ಜನವರಿ ಮತ್ತು ಎರಡನೆ ಬಾರಿಗೆ ಜುಲೈ ತಿಂಗಳಿನಿಂದ ಜಾರಿಗೆ ಬರುವಂತೆ ಈ ಡಿಎ ಮತ್ತು ಡಿಆರ್‌ ಅನ್ನು ಪರಿಷ್ಕರಿಸಲಾಗುತ್ತದೆ. ಇಂದು ಕ್ಯಾಬಿನೆಟ್‌ ಅನುಮೋದನೆ ಪಡೆದಿರುವ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಪರಿಷ್ಕರಣೆಯು ಜುಲೈ 2026ರ ಡಿಎ & ಡಿಆರ್‌ ಪರಿಷ್ಕರಣೆಗೆ ಸಂಬಂಧಿಸಿದೆ ಎಂಬುದು ಗಮನಾರ್ಹವಾಗಿದೆ.

ಡಿಎ ಎಂದರೆ ಏನು?
ಡಿಎ ಎಂದರೆ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಪಾವತಿಸುವ ಜೀವನ ವೆಚ್ಚ ಹೊಂದಾಣಿಕೆ.  

ಡಿಆರ್‌ ಎಂದರೆ ಏನು?
ಡಿಆರ್ ಎಂದರೆ ಪಿಂಚಣಿದಾರರಿಗೆ ಅನುಗುಣವಾದ ಪ್ರಯೋಜನ.

ಡಿಎ ಹಾಗೂ ಡಿಆರ್‌ ಎರಡೂ ಬೆಲೆ ಏರಿಕೆಯ ಪರಿಣಾಮವನ್ನು ಸರಿದೂಗಿಸಲು ಉದ್ದೇಶಿಸಲಾಗಿದೆ.

ಡಿಎ, ಡಿಆರ್‌ ಹೆಚ್ಚಳದಿಂದ ಯಾರಿಗೆ ಲಾಭ?
ಜುಲೈ 2026ರಿಂದ ಡಿಎ ಹೆಚ್ಚಳವು 5.5 ಮಿಲಿಯನ್‌ಗಿಂತಲೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಡಿಆರ್‌ ಹೆಚ್ಚಳವು ಸುಮಾರು 6.9 ಮಿಲಿಯನ್ ಪಿಂಚಣಿದಾರರಿಗೆ ನೇರ ಪ್ರಯೋಜನವನ್ನು ನೀಡಲಿದೆ. ಡಿಎ ಹೆಚ್ಚಳದ ನಂತರ ನೌಕರರ ಮಾಸಿಕ ಸಂಬಳ ಎಷ್ಟು ಹೆಚ್ಚಾಗುತ್ತದೆ.

ಈಗ ಸಂಬಳ ಎಷ್ಟು ಹೆಚ್ಚಾಗುತ್ತದೆ?
ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು (DA) ಶೇ. 3 ರಷ್ಟು ಹೆಚ್ಚಿಸಿದ ನಂತರ, ತುಟ್ಟಿಭತ್ಯೆ 60% ರಿಂದ 63% ಕ್ಕೆ ಏರಿದೆ. ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ವೇತನವು ತಿಂಗಳಿಗೆ ₹540 ರಿಂದ ₹3,000 ಅಥವಾ ಅದಕ್ಕಿಂತ ಹೆಚ್ಚು ಹೆಚ್ಚಾಗಿದೆ. ಉದಾಹರಣೆಗೆ, ₹18,000 ಮೂಲ ವೇತನ ಹೊಂದಿರುವ ನೌಕರರು ತಿಂಗಳಿಗೆ ಹೆಚ್ಚುವರಿಯಾಗಿ ₹540, ₹25,000 ಮೂಲ ವೇತನ ಹೊಂದಿರುವವರು ಹೆಚ್ಚುವರಿಯಾಗಿ ₹750, ₹50,000 ಮೂಲ ವೇತನ ಹೊಂದಿರುವವರು ಹೆಚ್ಚುವರಿಯಾಗಿ ₹1,500 ಮತ್ತು ₹1 ಲಕ್ಷ ಮೂಲ ವೇತನ ಹೊಂದಿರುವವರು ಹೆಚ್ಚುವರಿಯಾಗಿ ₹3,000 ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. 
 

Add Zee News as a Preferred Source
TAGS:
Personal Finance