• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ನವೆಂಬರ್ 1 ರಿಂದ “ವಾರ್ಡ್ ಒನ್” ಅಭಿಯಾನ: ತಳಮಟ್ಟದಿಂದ ಅಭಿವೃದ್ದಿಗೆ ಪ್ಲ್ಯಾನ್

ನವೆಂಬರ್ 1 ರಿಂದ “ವಾರ್ಡ್ ಒನ್” ಅಭಿಯಾನ: ತಳಮಟ್ಟದಿಂದ ಅಭಿವೃದ್ದಿಗೆ ಪ್ಲ್ಯಾನ್

ಇದೇ ವೇಳೆ ವಿಭಾಗವಾರು ಒಂದು ವಾರ್ಡ್ ಆಯ್ಕೆ ಮಾಡಿಕೊಂಡು ಅಭಿಯಾನ ನಡೆಸಲು ಸಚಿವ ಕಬಿಜಿ ಸೂಚನೆ ನೀಡಿದ್ರು.

Written ByChetana Devarmani
Published: Oct 28, 2026, 05:20 PM IST|Updated: Oct 28, 2026, 05:22 PM IST
joinshare
ನವೆಂಬರ್ 1 ರಿಂದ “ವಾರ್ಡ್ ಒನ್” ಅಭಿಯಾನ: ತಳಮಟ್ಟದಿಂದ ಅಭಿವೃದ್ದಿಗೆ ಪ್ಲ್ಯಾನ್

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಸ್ಪೇನ್‌ನಲ್ಲಿ ಭೀಕರ ರೈಲು ಅಪಘಾತ.. ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ, 40ಕ್ಕೂ ಹೆಚ್ಚು ಮಂದಿ ಸಾವು! ಅಪಘಾತಕ್ಕೆ ಬೆಚ್ಚಿಬಿದ್ದ Spain

ಸ್ಪೇನ್‌ನಲ್ಲಿ ಭೀಕರ ರೈಲು ಅಪಘಾತ.. ಮತ್ತೊಂದು ರೈಲಿನ ಹಿಂಭಾಗಕ್ಕೆ ಡಿಕ್ಕಿ, 40ಕ್ಕೂ ಹೆಚ್ಚು ಮಂದಿ ಸಾವು! ಅಪಘಾತಕ್ಕೆ ಬೆಚ್ಚಿಬಿದ್ದ Spain

2

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ.. ಭಕ್ತರಿಗಾಗಿ ಭರ್ಜರಿ ಸಿದ್ಧತೆ!

3

ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಸಿಂಹಗರ್ಜನೆ

4

ದರ್ಶನ್‌ಗೆ ಮತ್ತೆ ಕಾಡ್ತಿದ್ಯಾ ಆ ಒಂದು ಆರೋಗ್ಯ ಸಮಸ್ಯೆ!.. ಜೈಲಿನಲ್ಲಿ ಆರೋಗ್ಯ ತಪಾಸಣೆಗೆ ಮನವಿ

5

ನವೆಂಬರ್ 1 ರಿಂದ “ವಾರ್ಡ್ ಒನ್” ಅಭಿಯಾನ: ತಳಮಟ್ಟದಿಂದ ಅಭಿವೃದ್ದಿಗೆ ಪ್ಲ್ಯಾನ್

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸಿಲಿಕಾನ್ ಸಿಟಿಯನ್ನು ವಾರ್ಡ್ ಮಟ್ಟದಿಂದ ಅಭಿವೃದ್ದಿಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಹೊಸ ಅಭಿಯಾನ ಆರಂಭಿಸಿದ್ದಾರೆ ..ಪಾದಚಾರಿ ಒತ್ತುವರಿ ತೆರವು,ಖಾಲಿ ಸೈಟ್ ಸ್ವಚ್ಚತೆ ಅಭಿಯಾನ ಮಾದರಿಯ ಹೊಸ ಅಭಿಯಾನ ನವೆಂಬರ್ 1 ರಿಂದ ಅರಂಭವಾಗಲಿದೆ .ಹಾಗಾದ್ರೆ ಯಾವುದು ಅಭಿಯಾನ ಅಂದ್ರಾ ಈ ಸ್ಟೋರಿ ನೋಡಿ...

ಜಿಬಿಎ ಕೇಂದ್ರ ಕಚೇರಿಯಲ್ಲಿ ಇಂದು ಐದು ಪಾಲಿಕೆಯ ಆಯುಕ್ತರು ಹಾಗು ಮುಖ್ಯ ಆಯುಕ್ತರ ಜೊತೆ ಬೆಂಗಳೂರು ಉಸ್ತುವಾರಿ ಸಚಿವ ಕೆಬಿಜಿ ಮಹತ್ವದ ಸಭೆ ನಡೆಸಿದ್ರು. ಇದೇ ವೇಳೆ ವಿಭಾಗವಾರು ಒಂದು ವಾರ್ಡ್ ಆಯ್ಕೆ ಮಾಡಿಕೊಂಡು ಅಭಿಯಾನ ನಡೆಸಲು ಸಚಿವ ಕಬಿಜಿ ಸೂಚನೆ ನೀಡಿದ್ರು. ನವೆಂಬರ್ ರಿಂದ ಆರಂಭಿಸಿ ತಿಂಗಳಾದ್ಯಂತ ಅಭಿಯಾನ ನಡೆಸಿ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲು ಸೂಚನೆ ನೀಲಾಗಿದೆ ಎಂದು ಕೆಬಿಜಿ ತಿಳಿಸಿದ್ರು.

ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಪ್ರತಿ ವಿಭಾಗದಿಂದ ಒಂದು ವಾರ್ಡ್‌ನ್ನು ಆಯ್ಕೆ ಮಾಡಿಕೊಂಡು, ಆ ವಾರ್ಡ್‌ನಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಕಾರ್ಯ ಕೈಗೊಳ್ಳಲಾಗುವುದು. ನವೆಂಬರ್ 1ರಂದು ಪ್ರತಿ ವಿಭಾಗದಿಂದ ಒಂದೊಂದು ವಾರ್ಡ್‌ನ್ನು ಆಯ್ಕೆ ಮಾಡಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಆ ವಾರ್ಡ್‌ನಲ್ಲಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಆಯ್ಕೆ ಮಾಡಲಾದ ವಾರ್ಡ್‌ಗಳಲ್ಲಿ ಪ್ರಮುಖವಾಗಿ ರಸ್ತೆ ಮತ್ತು ಜಂಕ್ಷನ್‌ಗಳ ದುರಸ್ತಿ, ತೀವ್ರ ಸ್ವಚ್ಛತಾ ಕಾರ್ಯ, ವಾರ್ಡ್‌ನಾದ್ಯಂತ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳ ಕರ್ಬ್‌ಸ್ಟೋನ್‌ಗಳು ಹಾಗೂ ಸ್ಲ್ಯಾಬ್‌ಗಳ ದುರಸ್ತಿ, ಒಳಚರಂಡಿ ಚೇಂಬರ್‌ಗಳ ಮೇಲ್ಭಾಗದ ಮುಚ್ಚಳಗಳ ದುರಸ್ತಿ, ಬೀದಿ ದೀಪಗಳ ದುರಸ್ತಿ, ಮರದ ಒಣ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು.ಜೊತೆಗೆ ಸಣ್ಣಪುಟ್ಟ ತ್ಯಾಜ್ಯ,ಮಣ್ಣು ಗುಡ್ಡೆಗಳು ಮತ್ತು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು.
ಇದರೊಂದಿಗೆ ಬೆಸ್ಕಾಂನ ವಿದ್ಯುತ್ ಕಂಬಗಳು ಹಾಗೂ ಆರ್‌ಎಂಯು ಘಟಕಗಳ ಸ್ಥಳಾಂತರ ಅಥವಾ ದುರಸ್ತಿ, ಜಲಮಂಡಳಿಯ ನೀರಿನ ಸೋರಿಕೆ ತಡೆಗಟ್ಟುವ ಉದ್ದೇಶವಿದೆ.ಅಗತ್ಯವಿರುವಲ್ಲಿ ಪೈಪ್‌ಗಳ ದುರಸ್ತಿ ಅಥವಾ ತೆರವು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಕೆಬಿಜಿ ತಿಳಿಸಿದ್ದಾರೆ..

ನವೆಂಬರ್ ತಿಂಗಳ ಅಂತ್ಯದೊಳಗೆ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ .
ರಸ್ತೆಗಳು ಹಾಗೂ ಜಂಕ್ಷನ್‌ಗಳ ದುರಸ್ತಿ ಮತ್ತು ಅಭಿವೃದ್ಧಿಯಿಂದ ಸಂಚಾರ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಂಕ್ಷನ್‌ಗಳ ದುರಸ್ತಿ ಹಾಗೂ ಸುಧಾರಣಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೆಬಿಜಿ ತಿಳಿಸಿದರು.

ಒಟ್ಟಾರೆ ವಾರ್ಡ್ ಮಟ್ಟದಿಂದ ಅಭಿವೃದ್ದಿಗೆ ಅಭಿಯಾನ ಆರಂಭಿಸಿರುವ ಕೆಬಿಜಿ ಸಂಕಲ್ಪವನ್ನು ಜಿಬಿಎ ಎಇ ,ಎಇಇ ಗಳು ಎಷ್ಟರಮಟ್ಟಿಗೆ ಯಶಸ್ವಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 
 

Add Zee News as a Preferred Source
TAGS:
Kannada News