SOCIAL MEDIA

Newsletter

PARTNER SITES
Select Language Select State

8ನೇ ವೇತನ ಆಯೋಗ ಬಿಗ್‌ ಅಪ್ಡೇಟ್:‌ ಸರ್ಕಾರಿ ನೌಕರರಿಗೆ ನಿಜಕ್ಕೂ ವೇತನ ಹೆಚ್ಚಳ ಆಗೋದು ಯಾವಾಗ?

8th Pay Commission Big Update: ಸರ್ಕಾರಿ ನೌಕರರು ಮತ್ತು ನಿವೃತ್ತಿದಾರರು (ಪಿಂಚಣಿದಾರರು) ಬಹಳ ದಿನಗಳಿಂದ ಕಾಯುತ್ತಿರುವುದು ಇದೇ ವಿಷಯಕ್ಕಾಗಿ. ಸಂಬಳ ಮತ್ತು ಪಿಂಚಣಿ ಯಾವಾಗ ಜಾಸ್ತಿಯಾಗುತ್ತೆ ಮತ್ತು ಎಷ್ಟು ಜಾಸ್ತಿಯಾಗುತ್ತೆ ಅಂತಾ. ಪೂರ್ತಿ ಮಾಹಿತಿಗಾಗಿ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

Written By Yashaswini V
Published: Oct 08, 2026, 10:34 AM IST | Updated: Oct 08, 2026, 10:38 AM IST
Join

8th Pay Commission Big Update: 8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ಶಿಫಾರಸ್ಸು ನೀಡಲು 18 ತಿಂಗಳ ಅವಧಿಯ ಗಡುವು ಕೊಟ್ಟಿತ್ತು. ಈಗ 11 ತಿಂಗಳು ಮುಗಿದಿದ್ದು ಇಲ್ಲಿಯವರೆಗೆ ವೇತನ ಆಯೋಗವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಗುಂಪುಗಳ ಜೊತೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಿದೆ. ನವೆಂಬರ್ ವೇಳೆಗೆ ಪೂರ್ಣಗೊಂಡರೆ 2027ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ ಎಂದು  ಹೇಳಲಾಗುತ್ತಿದೆ.

ಕೇಂದ್ರ ಸರ್ಕಾಕ್ಕೆ ಆಯೋಗ ವರದಿ ಸಲ್ಲಿಸುವ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ಒಬ್ಬ ತಜ್ಞರು ನವೆಂಬರ್ ವೇಳೆಗೆ ಸಮಾಲೋಚನೆ ಪ್ರಕ್ರಿಯೆ ಮುಗಿದರೆ 2027ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬಹುದು ಎಂದು ಹೇಳುತ್ತಾರೆ. ಇನ್ನೊಬ್ಬ ತಜ್ಞರು ನವೆಂಬರ್ ವೇಳೆಗೆ ಸಮಾಲೋಚನೆ ಪ್ರಕ್ರಿಯೆ ಮುಗಿಯುವುದು ಕಷ್ಟ. ಪ್ರಕ್ರಿಯೆ ಪೂರ್ಣಗೊಂಡರೂ 2027ರ ಮೇ ತಂಗಳವರೆಗೆ ಕಾಲಾವಕಾಶ ಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ಮೇ ತಿಂಗಳಲ್ಲಿ ಅಥವಾ ಅಷ್ಟೊರೊಳಗೆ  8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ಶಿಫಾರಸ್ಸು ಸಲ್ಲಿಸುವ ಎಲ್ಲಾ ಸಾಧ್ಯತೆ ಇದೆ. ನಿಖರವಾದ ದಿನಾಂಕ ಇನ್ನೂ ದೃಢಪಡಿಸಲಾಗಿಲ್ಲ.

ಸಮಾಲೋಚನೆ ಪ್ರಕ್ರಿಯೆ ಹೇಗೆ ಸಾಗುತ್ತಿದೆ?
8ನೇ ಸಿಪಿಸಿ ಕಳೆದ 11 ತಿಂಗಳಲ್ಲಿ ಇದುವರೆಗೆ 14 ಸ್ಥಳಗಳಿಗೆ ಭೇಟಿ ನೀಡಿ ನೂರಾರು ಉದ್ಯೋಗಿ ಮತ್ತು ಪಿಂಚಣಿದಾರರ ಸಂಘಗಳೊಂದಿಗೆ ಚರ್ಚೆ ನಡೆಸಿದೆ. ದೇಶದ ಬೇರೆ ಬೇರೆ ನಗರಗಳಲ್ಲಿ ಸಭೆ ನಡೆಸುತ್ತಿದ್ದ ವೇತನ ಆಯೋಗವು ಇದೇ ಅಕ್ಟೋಬರ್ 7 ಹಾಗೂ 8ರಂದು ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿದೆ. ಮುಂದೆ ಅಕ್ಟೋಬರ್ 22–23 ರಂದು ಮುಂಬೈನಲ್ಲಿ ಸಭೆ ನಡೆಯಲಿದೆ. ಬಳಿಕ ಎಲ್ಲಾ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಕೆಲಸ ಆಗಲಿದೆ.

8ನೇ ವೇತನ ಆಯೋಗದ ವರದಿ ಸಲ್ಲಿಕೆಯಾದ ನಂತರ  ಏನಾಗಲಿದೆ?
8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಸಿದ್ಧಪಡಿಸಿದ ಬಳಿಕ ಅದರ ಕೆಲಸ ಮುಗಿಯುವುದಿಲ್ಲ. ಮೊದಲು ಆಯೋಗವು ತನ್ನ ವರದಿಯನ್ನು ಕೇಂದ್ರ ಸರ್ಕಾರವು ಆಯ್ಕೆ ಮಾಡಿದ ಸಚಿವರ ಗುಂಪಿ(Group of Ministers)ಗೆ ಪರಿಶೀಲನೆಗಾಗಿ ಕಳುಹಿಸಲಿದೆ. Group of Ministers 8ನೇ ವೇತನ ಆಯೋಗದಿಂದ ನಿರ್ಧಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣಗಳನ್ನು ಕೇಳಬಹುದು. ಅಷ್ಟೇಯಲ್ಲ, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಬಹುದು. ಈ ಪರಿಶೀಲನೆಯ ನಂತರ ಕೇಂದ್ರ ಸರ್ಕಾರವು ಶಿಫಾರಸುಗಳನ್ನು ಬಹಿರಂಗಗೊಳಿಸುತ್ತದೆ.

8ನೇ ವೇತನ ಆಯೋಗದ ಶಿಫಾರಸು ಜಾರಿಗೆ 3–6 ತಿಂಗಳು ಬೇಕಾಗಬಹುದು!
ವೇತನ ಆಯೋಗವು ಯಾವಾಗ ವರದಿಯನ್ನು ಸಲ್ಲಿಸುತ್ತದೆ ಎನ್ನುವುದರ ಮೇಲೆ ಕೇಂದ್ರ ಸರ್ಕಾರ ವರದಿಯನ್ನು ಯಾವಾಗ ಜಾರಿ ಮಾಡುತ್ತದೆ ಎನ್ನುವುದು  ನಿರ್ಧಾರವಾಗುತ್ತದೆ. ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಶನ್‌ನ ಸಿ. ಶ್ರೀಕುಮಾರ್ ಅವರು ಹೇಳುವ ಪ್ರಕಾರ ಕೇಂದ್ರ ಸರ್ಕಾರವು ಶಿಫಾರಸುಗಳನ್ನು ಜಾರಿಗೆ ತರಲು ಸುಮಾರು ಮೂರರಿಂದ ನಾಲ್ಕು ತಿಂಗಳು ತೆಗೆದುಕೊಳ್ಳಬಹುದು. ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟದ ಎಸ್‌ಬಿ ಯಾದವ್ ಅವರ ಪ್ರಕಾರ ಸರ್ಕಾರವು ಪರಿಶೀಲನಾ ಪ್ರಕ್ರಿಯೆ ಮತ್ತು ಅಂತಿಮ ನಿರ್ಣಯಕ್ಕಾಗಿ ನಾಲ್ಕರಿಂದ ಆರು ತಿಂಗಳುಗಳನ್ನು ತೆಗೆದುಕೊಳ್ಳಬಹುದು.

8ನೇ ವೇತನ ಆಯೋಗದ ವೇತನ ಹೆಚ್ಚಳದ ಪ್ರಮುಖ ಸಂಗತಿ ಏನು?
8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ವರದಿ ಸಲ್ಲಿಸಲು ಕೊಟ್ಟಿರುವ 18 ತಿಂಗಳ ಗಡುವು 2027ರ ಮೇ ತಿಂಗಳಿಗೆ ಮುಗಿಯುತ್ತದೆ. ಇದರ ಬಳಿಕ ವರದಿಯ ಪರಿಶೀಲನೆಗೆ ಇನ್ನು ಕೆಲ ತಿಂಗಳ ಸಮಯಾವಕಾಶ ಬೇಕಾಗಬಹುದು. ಹೊಸ ವೇತನ ಮಾಪಕಗಳು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದರೂ ಹೊಸ ಶಿಫಾರಸುಗಳ ಜಾರಿಗೆ 2027ರ ಅಂತ್ಯದವರೆಗೆ ಕಾಯಬೇಕಾಗಬಹುದು  ಎನ್ನಲಾಗುತ್ತಿದೆ. 

ಇಲ್ಲಿಯವರೆಗೆ ನೌಕರರ ಮತ್ತು ಪಿಂಚಣಿದಾರರ ಸಭೆ ಎಲ್ಲೆಲ್ಲಿ ನಡೆದಿದೆ?
ಕಳೆದ 11 ತಿಂಗಳಲ್ಲಿ 8ನೇ ಸಿಪಿಸಿ ದೆಹಲಿ, ಕೋಲ್ಕತ್ತಾ, ಭುವನೇಶ್ವರ, ಲಕ್ನೋ, ಶ್ರೀನಗರ, ಹೈದರಾಬಾದ್, ಪುಣೆ, ಡೆಹ್ರಾಡೂನ್, ಚೆನ್ನೈ, ಜೈಪುರ, ಪುದುಚೇರಿ ಮತ್ತು ಚಂಡೀಗಢ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಭೆಗಳನ್ನು ನಡೆಸಿದೆ. ಅಕ್ಟೋಬರ್ 7–8 ರಂದು ಬೆಂಗಳೂರಿನಲ್ಲಿ ಸಭೆಗಳು ನಡೆದಿದೆ. ಈ ಸಮಾಲೋಚನೆಗಳು ಆಯೋಗವು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವ ಮೊದಲು ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರಕ್ರಿಯೆಯ ಭಾಗವಾಗಿದೆ.

8ನೇ ವೇತನ ಆಯೋಗದ ಬಾಕಿ: ಅನುಷ್ಠಾನ ವಿಳಂಬ ಏಕೆ ಮುಖ್ಯ?
ಪರಿಷ್ಕೃತ ವೇತನ ಜಾರಿಗೆ ಬರುವ ದಿನಾಂಕ ಮತ್ತು ಅದರ ನಿಜವಾದ ಅನುಷ್ಠಾನದ ನಡುವಿನ ಅವಧಿಗೆ ನೌಕರರು ಮತ್ತು ಪಿಂಚಣಿದಾರರು ಬಾಕಿ ಪಡೆಯಬಹುದು. ಹೊಸ ವೇತನ ಮಾಪಕಗಳು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಆದ್ದರಿಂದ ದೀರ್ಘಾವಧಿಯ ಅನುಷ್ಠಾನ ಪ್ರಕ್ರಿಯೆಯು ಸರ್ಕಾರದ ಅಂತಿಮ ನಿರ್ಧಾರಕ್ಕೆ ಒಳಪಟ್ಟು ದೀರ್ಘಾವಧಿಯವರೆಗೆ ಬಾಕಿಗಳನ್ನು ಪಾವತಿಸಬಹುದು.

ಹಿಂದಿನ ವರದಿಗಳು ಎಷ್ಟು ಸಮಯ ತೆಗೆದುಕೊಂಡಿದ್ದವು?
ಹಿಂದಿನ ವೇತನ ಆಯೋಗಗಳು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ವಿಭಿನ್ನ ರೀತಿಯಲ್ಲಿ ಸಮಯಗಳನ್ನು ತೆಗೆದುಕೊಂಡಿವೆ. 7ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ನೇಮಕ ಮಾಡಲಾಗಿತ್ತು. ಅದು ನವೆಂಬರ್ 2015ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 6ನೇ ವೇತನ ಆಯೋಗವನ್ನು ಅಕ್ಟೋಬರ್ 2006 ರಲ್ಲಿ ನೇಮಕ ಮಾಡಲಾಗಿತ್ತು. ಅದು ಮಾರ್ಚ್ 2008ರಲ್ಲಿ ತನ್ನ ವರದಿಯನ್ನು ಸಲ್ಲಿಕೆ ಮಾಡಿತ್ತು. ವರದಿಯನ್ನು ತಯಾರಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಇಲ್ಲಿಯವರೆಗೆ ಆಗಿರುವ ಬೆಳವಣಿಗೆಗಳು ಹೇಳುತ್ತವೆ.

 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES