SOCIAL MEDIA

Newsletter

PARTNER SITES
Select Language Select State

ದಿನ ಭವಿಷ್ಯ 15-10-2026: ಗುರುವಾರದಂದು ಸೌಭಾಗ್ಯ ಯೋಗ.. ಈ ರಾಶಿಯವಿರಗೆ ಜಾಕ್‌ಪಾಟ್

Today Horoscope 15th October 2026: 15 ಅಕ್ಟೋಬರ್ 2026ರಂದು ಲಲಿತಾ ಪಂಚಮಿ ಇರಲಿದ್ದು ಇಂದು ಸೌಭಾಗ್ಯ ಯೋಗವು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written By Yashaswini V
Published: Oct 15, 2026, 08:59 AM IST | Updated: Oct 15, 2026, 09:01 AM IST
Join

Guruvara 15th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ ಇದೆ. ಇದನ್ನು ಲಲಿತಾ ಪಂಚಮಿ ಎಂತಲೂ ಕರೆಯಲಾಗುತ್ತದೆ. ಗುರುವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಸೌಭಾಗ್ಯ ಯೋಗ, ಬವ ಕರಣ ಇರಲಿದೆ.

ಮೇಷ ರಾಶಿ: 
ಸೌಭಾಗ್ಯ ಯೋಗ ಮೇಷ ರಾಶಿಯ ಜನರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದ.ೆ ಈ ಅವಧಿಯಲ್ಲಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಿರಿ. ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ, ಮಾನಸಿಕ ಒತ್ತಡವು ನಿಮ್ಮನ್ನು ಕಾಡಬಹುದು. ಧ್ಯಾನ ಮಾಡುವುದು ಒಳ್ಳೆಯದು.

ವೃಷಭ ರಾಶಿ: 
ಸೌಭಾಗ್ಯ ಯೋಗವು ವೃಷಭ ರಾಶಿಯ ಜನರಿಗೆ ಕೌಟುಂಬಿಕ ಸುಖವನ್ನು ಹೆಚ್ಚಿಸಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಬೆಂಬಲ ಸಿಗಲಿದೆ. ಆದಾಯಕ್ಕಿಂತ ವೆಚ್ಚಗಳು ಅಧಿಕವಾಗುವ ನಿರೀಕ್ಷೆ ಇರುವುದರಿಂದ ಎಚ್ಚರಿಕೆಯಿಂದ ಇರಿ. ಸಂಬಂಧಿಕರಿಂದ ಸಮಸ್ಯೆಗಳನ್ನು ಎದುರಿಸಬಹುದು.

ಮಿಥುನ ರಾಶಿ: 
ಲಲಿತಾ ಪಂಚಮಿಯು ಮಿಥುನ ರಾಶಿಯ ಜನರಿಗೆ ಅಷ್ಟು ಶುಭಕರವಾಗಿಲ್ಲ. ಆದಾಗ್ಯೂ, ಕೆಲವು ವಿಚಾರಗಳಲ್ಲಿ ನೀವು ನಿರೀಕ್ಷಿಸಿದ ಫಲಿತಾಂಶಗಳನ್ನು ಪಡೆಯದೆ ಇರಬಹುದು. ಹಣಕಾಸಿನ ಪರಿಸ್ಥಿತಿ ನಿರಾಶಾದಾಯಕವಾಗಿರಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿಗಳಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದಿನ ದಿನವು ಸಾಮಾನ್ಯವಾಗಿರಲಿದೆ. ಇಂದು ವೃತ್ತಿ ಬದುಕಿನಲ್ಲಿ ಶುಭ ಫಲಗಳು ಹೆಚ್ಚಾಗಬಹುದು. ಉದ್ಯಮಿಗಳಿಗೆ ಉತ್ತಮ ಲಾಭ ಸಿಗಲಿದ್ದು ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬ ಜೀವನದಲ್ಲಿ ಸಂತೋಷದಾಯಕ ವಾತಾವರಣ ಇರಲಿದೆ.

ಸಿಂಹ ರಾಶಿ:
ಸಿಂಹ ರಾಶಿಯ ಜನರಿಗೆ ಇಂದಿನ ದಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ಸೂಚನೆಗಳಿವೆ. ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ನಿರೀಕ್ಷೆ ಇದೆ. ಇಂದು ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ.

ತುಲಾ ರಾಶಿ: 
ಸೌಭಾಗ್ಯ ಯೋಗವು ತುಲಾ ರಾಶಿಯ ಜನರಿಗೆ ಶುಭದಾಯಕವಾಗಿರಲಿದೆ. ಇಂದು ಉದ್ಯಮಿಗಳು ಹೆಚ್ಚಿನ ಧನಲಾಭವನ್ನು ನಿರೀಕ್ಷಿಸಬಹುದು. ಹೊಸ ವ್ಯವಹಾರ ಆರಂಭಿಸಲು ಅತ್ಯುತ್ತಮ ಸಮಯ ಇದಾಗಿರಲಿದೆ. ಕುಟುಂಬ ಜೀವನದಲ್ಲಿ ಅನುಕೂಲಕರ ವಾತಾವರಣ ಇರಲಿದೆ.

ವೃಶ್ಚಿಕ ರಾಶಿ:
ಸೌಭಾಗ್ಯ ಯೋಗವು ಇಂದು ವೃಶ್ಚಿಕ ರಾಶಿಯ ಜನರಿಗೆ ಶುಭದಾಯಕವಾಗಿರಲಿದೆ. ಗುರುವಿನ ಅನುಗ್ರಹದಿಂದ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಪಡೆಯುವಿರಿ. ಕುಟುಂಬ ಜೀವನದಲ್ಲಿ ಉತ್ತಮ ವಾತಾವರಣ ಇರಲಿದೆ. ಪ್ರೇಮ ಜೀವನವು ಆಹ್ಲಾದಕರವಾಗಿರುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿವೆ.

ಧನು ರಾಶಿ:
ಧನು ರಾಶಿಯ ಜನರಿಗೆ ಇಂದು ಸಾಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ ಗೌರವ ಹೆಚ್ಚಾಗಲಿದೆ. ತಂದೆ ಕಡೆಯಿಂದ ಲಾಭವಾಗಲಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಇಂದಿನ ದಿನ ಅದೃಷ್ಟವನ್ನು ಹೊತ್ತು ತರಲಿದೆ. ಕುಟುಂಬಸ್ಥರೊಂದಿಗೆ ಮಾತನಾಡುವಾಗ ತಾಳ್ಮೆಯಿಂದ ಇರಿ.

ಮಕರ ರಾಶಿ:
ಮಕರ ರಾಶಿಯ ಜನರಿಗೆ ಇಂದಿನ ದಿನ ಅತ್ಯುತ್ತಮವಾಗಿದೆ. ಈ ದಿನ ಗುರು ಹಿರಿಯರ ವಿಶೇಷ ಅನುಗ್ರಹದಿಂದ ಉದ್ಯಮಿಗಳಿಗೆ ಉತ್ತಮ ಲಾಭದ ಸೂಚನೆಗಳಿವೆ. ಆದಾಯವು ಸಾಮಾನ್ಯವಾಗಿರಲಿದೆ. ಕುಟುಂಬಕ್ಕೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ಮಿಶ್ರ ಫಲಗಳು ಸಿಗಲಿವೆ. ಈ ಅವಧಿಯಲ್ಲಿ ಉದ್ಯೋಗಸ್ಥರು ಜಾಗರೂಕರಾಗಿರಿ. ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ವ್ಯವಹಾರಸ್ಥರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ತಾಂತ್ರಿಕ ಸಮಸ್ಯೆಗಳು ಉಲ್ಬಣಿಸಬಹುದು. ಖರೀದಿ ಮಾಡುವಾಗ ಜಾಗರೂಕರಾಗಿರಿ.

ಮೀನ ರಾಶಿ:
ಮೀನ ರಾಶಿಯ ಜನರಿಗೆ ಇಂದು ದಿನವು ಆಹ್ಲಾದಕರವಾಗಿರುತ್ತದೆ,. ಪ್ರೇಮ ಜೀವನವು ಬಲಗೊಳ್ಳುತ್ತದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಬೆಂಬಲ ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES