• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 04-11-2026: ಬುಧವಾರದಂದು ಬ್ರಹ್ಮ ಯೋಗ.. ಈ ರಾಶಿಯವರಿಗೆ ಅದೃಷ್ಟ

ದಿನ ಭವಿಷ್ಯ 04-11-2026: ಬುಧವಾರದಂದು ಬ್ರಹ್ಮ ಯೋಗ.. ಈ ರಾಶಿಯವರಿಗೆ ಅದೃಷ್ಟ

Today Horoscope 4th November 2026: 04 ನವೆಂಬರ್ 2026ರಂದು ಪೂರ್ವಾ ನಕ್ಷತ್ರದಲ್ಲಿ ಬ್ರಹ್ಮ ಯೋಗ ಇರಲಿದ್ದು, ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Nov 04, 2026, 06:29 AM IST|Updated: Nov 04, 2026, 08:32 AM IST
joinshare
ದಿನ ಭವಿಷ್ಯ 04-11-2026: ಬುಧವಾರದಂದು ಬ್ರಹ್ಮ ಯೋಗ.. ಈ ರಾಶಿಯವರಿಗೆ ಅದೃಷ್ಟ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
BBK 13 : ಸೇಡಿಗಾಗಿ ಕೀಳುಮಟ್ಟದ ಆಟವಾಡಿದ್ರಾ ಶಾಸ್ತ್ರಿ! ಫಿನಾಲೆ ಅವಕಾಶವನ್ನೇ ಕಳೆದುಕೊಳ್ತಾರಾ?

BBK 13 : ಸೇಡಿಗಾಗಿ ಕೀಳುಮಟ್ಟದ ಆಟವಾಡಿದ್ರಾ ಶಾಸ್ತ್ರಿ! ಫಿನಾಲೆ ಅವಕಾಶವನ್ನೇ ಕಳೆದುಕೊಳ್ತಾರಾ?

2

ದೀಪಾವಳಿ ಹೊತ್ತಲ್ಲೇ ಮಿಂಟೋ ಆಸ್ಪತ್ರೆಯಿಂದ ಪಟಾಕಿಯಿಂದ ಉಂಟಾದ ಅವಘಡಗಳ ಅಂಕಿ ಅಂಶ ಬಿಡುಗಡೆ

3

ದಿನ ಭವಿಷ್ಯ 04-11-2026: ಬುಧವಾರದಂದು ಬ್ರಹ್ಮ ಯೋಗ.. ಈ ರಾಶಿಯವರಿಗೆ ಅದೃಷ್ಟ

4

ಕಬ್ಬಿನ ದರ ಬಿಕ್ಕಟ್ಟು ಇತ್ಯರ್ಥವಾಗಿಲ್ಲ; ನಾಳೆಯವರೆಗೆ ಗಡುವು ಕೇಳಿದ ಸಚಿವ ಸತೀಶ್ ಜಾರಕಿಹೊಳಿ!

5

ಮೊಣಕೈ, ಮೊಣಕಾಲುಗಳಿಗೆ ಪ್ರತಿದಿನ ತೆಂಗಿನ ಎಣ್ಣೆ ಹಚ್ಚಿದರೆ ಗುಣವಾಗುತ್ತೆ ಈ ಸಮಸ್ಯೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Budhvara 4th November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಬುಧವಾರದ ಈ ದಿನ ಪೂರ್ವಾ ನಕ್ಷತ್ರ, ಬ್ರಹ್ಮ ಯೋಗ, ಬವ ಕರಣ ಇರಲಿದೆ.

ಮೇಷ ರಾಶಿ:
ಬ್ರಹ್ಮ ಯೋಗವು ಮೇಷ ರಾಶಿಯ ಜನರಿಗೆ ಇಂದು ವಿಶೇಷವಾಗಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದಲ್ಲಿ ಜಯದ ಜೊತೆಗೆ, ಹಣಕಾಸಿನ ಪರಿಸ್ಥಿತಿಯೂ ಬಲಗೊಳ್ಳಲಿದೆ. ಉದ್ಯೋಗಿಗಳಿಗೆ ಬಡ್ತಿ ಸೂಚನೆಗಳಿವೆ. ಉದ್ಯಮಿಗಳಿಗೆ ಹೊಸ ಪ್ರಾಜೆಕ್ಟ್‌ ಕೈ ಸೇರಬಹುದು.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ಇಂದು ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಬಹುದು. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಇಂದು ನಿಮ್ಮ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಬಹುದು.  

ಮಿಥುನ ರಾಶಿ: 
ಬ್ರಹ್ಮ ಯೋಗವು ಮಿಥುನ ರಾಶಿಯವರಿಗೆ ಅವರು ಮಾಡುವ ಎಲ್ಲಾ ಕೆಲಸಗಳಲ್ಲೂ ಸುಧಾರಣೆಯನ್ನು ತರಲಿದೆ. ನಿರ್ವಹಣಾ ಕೌಶಲ್ಯಗಳು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಹಣಕಾಸಿನ ಪರಿಸ್ಥಿತಿಯೂ ಸುಧಾರಣೆಗೊಳ್ಳಲಿದೆ. ಒಡಹುಟ್ಟಿದವರೊಂದಿಗಿನ ಭೇಟಿ ಮನಸ್ಸಿಗೆ ಮುದ ನೀಡಲಿದೆ.  

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಹಣಕಾಸಿನ ಫಲಿತಾಂಶಗಳು ಉತ್ತಮವಾಗಿರಲಿವೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬಾಕಿ ಇರುವ ಕೆಲಸಗಳನ್ನೂ ಪೂರ್ಣಗೊಳಿಸುವಿರಿ. ವೃತ್ತಿಯಲ್ಲಿ ಪ್ರಗತಿಯ ಅವಕಾಶಗಳಿವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳಿಗೆ ಹೆಗಲೇರಬಹುದು.  

ಸಿಂಹ ರಾಶಿ:
ಬ್ರಹ್ಮ ಯೋಗವು ಸಿಂಹ ರಾಶಿಯ ಜನರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಬಲಗೊಳ್ಳಲಿವೆ. ಉದ್ಯೋಗಸ್ಥರಿಗೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಅನಿರೀಕ್ಷಿತ ಲಾಭದಿಂದ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗಲಿದೆ.  

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಬ್ರಹ್ಮ ಯೋಗ ಪ್ರಭಾವದಿಂದ ಸಕಾರಾತ್ಮಕತೆ ಹೆಚ್ಚಾಗಲಿದೆ. ಇಂದು ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದರಿಂದ ಆರ್ಥಿಕ ಸಂಕಷ್ಟದಿಂದ ಪರಿಹಾರ ಪಡೆಯುವ ಸೂಚನೆಗಳಿವೆ. ಉದ್ಯಮಿಗಳಿಗೆ ಲಾಭ ಹೆಚ್ಚಾಗಲಿದೆ.  

ತುಲಾ ರಾಶಿ: 
ತುಲಾ ರಾಶಿಯವರಿಗೆ ಇಂದು ಬ್ರಹ್ಮ ಯೋಗದ ಪ್ರಭಾವವು ಸಾಕಾರಾತ್ಮಕವಾಗಿರಲಿದ್ದು ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವ ಸೂಚನೆಗಳಿವೆ. ವೃತ್ತಿ ಜೀವನದಲ್ಲಿ ಪ್ರಗತಿಯ ಅವಕಾಶಗಳಿವೆ. ದಾಂಪತ್ಯದಲ್ಲಿ ಸುಖ ಸಂತೋಷಗಳು ಹೆಚ್ಚಾಗಲಿದೆ. ಉದ್ಯಮಿಗಳಿಗೆ ಇಂದಿನ ದಿನ ಅತ್ಯುತ್ತಮವಾಗಿದೆ.  

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದು ಹಲವು ರೀತಿಯಲ್ಲಿ ಪ್ರಯೋಜನಕಾರಿ ಆದ ದಿನವಾಗಿದೆ. ಆದಾಯದ ಮೂಲಗಳು ಹೆಚ್ಚಾಗುವ ನಿರೀಕ್ಷೆ ಇದ್ದು, ಹಿಂದೆ ಮಾಡಿರುವ ಹೂಡಿಕೆಗಳಿಂದಲೂ ಉತ್ತಮ ಲಾಭವನ್ನು ನೀಡಲಿದೆ. ಉದ್ಯೋಗಿಗಳಿಗೆ ನಿಮ್ಮ ಕಾರ್ಯಕ್ಷಮತೆಗೆ ಮೇಲಧಿಕಾರಿಗಳು ಮನ್ನಣೆ ನೀಡಲಿದ್ದಾರೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವ ನಿರೀಕ್ಷೆ ಇದೆ. 

ಧನು ರಾಶಿ:
ಧನು ರಾಶಿಯವರಿಗೆ ಇಂದು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಕೌಟುಂಬಿಕ ಜೀವನದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ನೀವು ಮಾಡುವ ಕೆಲಸದಲ್ಲಿ ಕುಟುಂಬಸ್ಥರ ಸಹಕಾರ ಸಿಗಲಿದೆ. ವ್ಯವಹಾರದಲ್ಲಿ ಯೋಜನೆಗಳನ್ನು ಬದಲಾಯಿಸುವುದು ಲಾಭದಾಯಕವಾಗಿದೆ.

ಮಕರ ರಾಶಿ:
ಬ್ರಹ್ಮ ಯೋಗವು ಮಕರ ರಾಶಿಯವರಿಗೆ ನೀವು ಮಾಡುವ ಕೆಲಸದಲ್ಲಿ ಪ್ರಗತಿಯ ಅವಕಾಶಗಳನ್ನು ನೀಡಲಿದೆ. ಉದ್ಯಮಿಗಳಿಗೆ ಲಾಭಾಂಶಗಳು ಅಧಿಕಗೊಳ್ಳಲಿವೆ. ವೈಯಕ್ತಿಕ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಕೆಲವು ವಸ್ತುಗಳನ್ನು ಖರೀದಿಸಬೇಕಾಗಬಹುದು. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.  

ಕುಂಭ ರಾಶಿ:
ಕುಂಭ ರಾಶಿಯವರು ಇಂದು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿದೆ. ಕೆಲವು ಅನಿರೀಕ್ಷಿತ ಖರ್ಚುಗಳು ನಿಮ್ಮ ಬಜೆಟ್‌ ಅನ್ನು ಹಾಳು ಮಾಡಬಹುದು. ಮಾನಸಿಕ ಒತ್ತಡಗಳು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬಬೇಡಿ.  

ಮೀನ ರಾಶಿ:
ಮೀನ ರಾಶಿಯವರು ಇಂದು ನೀವು ಮಾಡುವ ಕೆಲಸಗಳ ಬಗ್ಗೆ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಾಗಿದೆ. ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು. ಬಾಕಿ ಇರುವ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯವಹಾರದಲ್ಲಿಯೂ ಎಚ್ಚರಿಕೆ ಅಗತ್ಯವಾಗಿದೆ.  

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Dina Bhavishya
Horoscope Today