ದಿನ ಭವಿಷ್ಯ 02-11-2026: ಸೋಮವಾರದಂದು ಶುಭ ಯೋಗ, ಯಾವ ರಾಶಿಗೆ ಏನು ಫಲ?
Today Horoscope 31st October 2026: 02 ನವೆಂಬರ್ 2026ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara 02nd November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಸೋಮವಾರದ ಈ ದಿನ ಆಶ್ಲೇಷಾ ನಕ್ಷತ್ರ, ಶುಭ ಯೋಗ, ತೈತಿಲ ಕರಣ ಇರಲಿದೆ.
ಮೇಷ ರಾಶಿ:
ಇಂದು ಮೇಷ ರಾಶಿಯ ಜನರಿಗೆ ಮಿಶ್ರ ಫಲಗಳು ಸಿಗುವ ಸೂಚನೆಗಳಿವೆ. ದಿನವಿಡೀ ಆಲಸ್ಯ ನಿಮ್ಮನ್ನು ಕಾಡಲಿದ್ದು, ಮಾಡುವ ಕೆಲಸಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಕುಟುಂಬದವರೊಂದಿಗೆ ಸಮಯ ಕಳೆಯುವ ಅವಕಾಶಗಳು ಸಿಗಲಿವೆ.
ವೃಷಭ ರಾಶಿ:
ವೃಷಭ ರಾಶಿಯವರಿಗೆ ಇಂದು ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ವಾತಾವರಣ ಸಂತೋಷದಿಂದ ಕೂಡಿರಲಿದೆ. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ಆದರೆ, ಇಂದು ಯಾವುದೇ ರೀತಿಯ ಹೂಡಿಕೆಗಳಿಗೆ ಕೈ ಹಾಕದೆ ಇರುವುದು ಒಳ್ಳೆಯದು.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಇಂದಿನ ದಿನವು ತುಂಬಾ ಉತ್ಸಾಹಭರಿತವಾಗಿರಲಿದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆಗೆ ಮನ್ನಣೆ ಸಿಗಲಿದೆ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಆರೋಗ್ಯವೂ ಸುಧಾರಣೆಗೊಳ್ಳಲಿದೆ. ಕುಟುಂಬದಲ್ಲಿ ಸಂತೋಷ ಮನೆಮಾಡಲಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ವಿಶೇಷವಾಗಿ ಲಾಭದಾಯಕವಾದ ದಿನವಾಗಿದೆ. ಕೆಲಸದಲ್ಲಿ ಉತ್ತಮ ಫಲ ಸಿಗುವ ನಿರೀಕ್ಷೆ ಇದೆ. ಕುಟುಂಬ ವಾತಾವರಣವು ಸಂತೋಷದಿಂದ ಕೂಡಿರಲಿದೆ. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ಹಣಕಾಸಿನ ಪರಿಸ್ಥಿತಿಯೂ ಬಲಗೊಳ್ಳಲಿದೆ. ಆರೋಗ್ಯದ ಬಗ್ಗೆ ನಿಗಾವಹಿಸಿ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಉತ್ತಮ ಫಲಗಳು ಸಿಗಲಿವೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಲ್ಲೂ ಸುಧಾರಣೆಯನ್ನು ಕಾಣುವಿರಿ. ನಿಮ್ಮ ಬಹುಕಾಲದ ಆಸೆಗಳು ನೆರವೇರುವ ಸುಮಧುರ ಸಮಯ ಇದಾಗಿರಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಮಾಡುವ ಪ್ರತಿ ಕೆಲಸದಲ್ಲೂ ಸಕಾರಾತ್ಮಕ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಉದ್ಯೋಗಸ್ಥರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ತುಲಾ ರಾಶಿ:
ತುಲಾ ರಾಶಿಯ ಜನರಿಗೆ ಇಂದು ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷೆ ಇದೆ. ದಿನದ ಆರಂಭದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಉದ್ಯಮಿಗಳು ಬಂಪರ್ ಆದಾಯವನ್ನು ಪಡೆಯುವ ಸೂಚನೆಗಳಿವೆ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದಿನ ಇದನವು ಉತ್ತಮವಾಗಿರುತ್ತದೆ. ಕೆಲಸದಲ್ಲಿ ಹೆಚ್ಚಿನ ಶ್ರಮ ಬೇಕಾಗಬಹುದು. ಸಂಜೆ ದಿಢೀರ್ ಪ್ರಯಾಣಕ್ಕೆ ಸಿದ್ಧವಾಗಿರಿ. ಈ ದಿನ ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯವಾಗಬಹುದು. ಮುಂದಿನ ದಿನಗಳಲ್ಲಿ ಅವರಿಂದ ಭಾರೀ ಪ್ರಯೋಜನವಾಗಬಹುದು. ಕುಟುಂಬ ಜೀವನದಲ್ಲಿ ತಾಳ್ಮೆ ಕಾದುಕೊಳ್ಳಿ.
ಧನು ರಾಶಿ:
ಧನು ರಾಶಿಯ ಜನರಿಗೆ ಇಂದು ಅನುಕೂಲಕರವಾದ ಸಮಯ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಅನವಶ್ಯಕ ವಾದ-ವಿವಾದಗಳಲ್ಲಿ ಸಿಲುಕದೇ ಇರುವುದು ಒಳ್ಳೆಯದು. ನಿಮ್ಮ ಬಹುಕಾಲದ ಆಸೆಗಳು ನನಸಾಗುವ ದಿನ. ಹಣಕಾಸಿನ ಪರಿಸ್ಥಿತಿಯೂ ಸುಧಾರಣೆಗೊಳ್ಳಲಿದೆ.
ಮಕರ ರಾಶಿ:
ಮಕರ ರಾಶಿಯವರು ಇಂದು ಯಾರೊಂದಿಗೂ ಜಗಳವಾಗದಂತೆ ನಿಗಾವಹಿಸಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ನಿರೀಕ್ಷಿಸಬಹುದು. ಆರೋಗ್ಯದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ವ್ಯವಹಾರಸ್ಥರಿಗೆ ಅನುಕೂಲಕರ ದಿನ.
ಕುಂಭ ರಾಶಿ:
ಕುಂಭ ರಾಶಿಯವರು ಇಂದು ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಟೀಮ್ ವರ್ಕ್ನಲ್ಲಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆ ಇದೆ. ಉದ್ಯಮಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.
ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಎಲ್ಲಾ ರೀತಿಯಲ್ಲೂ ಧನಾತ್ಮಕ ಫಲಿತಾಂಶಗಳು ಸಿಗಬಹುದು. ವ್ಯವಹಾರಸ್ಥರಿಗೆ ನಿಮ್ಮ ನಿರಂತರ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ದೀರ್ಘಾವಧಿಯಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕುಟುಂಬಸ್ಥರ ಆರೋಗ್ಯ ಕಾಳಜಿಯ ವಿಷಯವಾಗಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.