• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ನವರಾತ್ರಿ ಯಾವಾಗ ಆರಂಭ? ಕಲಶ ಸ್ಥಾಪನೆಗೆ ಶುಭ ಮುಹೂರ್ತ ಇಲ್ಲಿದೆ!

ನವರಾತ್ರಿ ಯಾವಾಗ ಆರಂಭ? ಕಲಶ ಸ್ಥಾಪನೆಗೆ ಶುಭ ಮುಹೂರ್ತ ಇಲ್ಲಿದೆ!

Navaratri: ದುರ್ಗಾ ದೇವಿಯ ಆರಾಧನೆಗೆ ಮೀಸಲಾಗಿರುವ ಅತ್ಯಂತ ಪವಿತ್ರ ಹಬ್ಬವಾದ ಶಾರದಿಯಾ ನವರಾತ್ರಿ ಈ ವರ್ಷ ಅಕ್ಟೋಬರ್ 11 ರ ಭಾನುವಾರದಂದು ಪ್ರಾರಂಭವಾಗುತ್ತದೆ. ನವರಾತ್ರಿಯ ಈ ಪವಿತ್ರ ಹಬ್ಬವು ಅಕ್ಟೋಬರ್ 20 ರ ಮಂಗಳವಾರ ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳುತ್ತದೆ.

Written ByRamya. R. Gowda
Published: Oct 08, 2026, 03:07 PM IST|Updated: Oct 08, 2026, 04:06 PM IST
joinshare
ನವರಾತ್ರಿ ಯಾವಾಗ ಆರಂಭ? ಕಲಶ ಸ್ಥಾಪನೆಗೆ ಶುಭ ಮುಹೂರ್ತ ಇಲ್ಲಿದೆ!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

2

ಹಣ್ಣು ಮಾತ್ರವಲ್ಲ, ಎಲೆಗಳೂ ಸೂಪರ್! ಸೀತಾಫಲದ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳೇನು?

3

ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

4

ಈ 5 ಪ್ಲೇಯರ್ಸ್‌ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್..‌ ರಜತ್‌ ಪಾಟೀದಾರ್‌ ಸೇರಿ ಈ ನಾಲ್ವರು..

5

ವಿಬಿಜಿ-ರಾಮ್-ಜಿ ಯೋಜನೆಯಡಿ ಅಳತೆಗೆ ತಕ್ಕಂತೆ ಕೂಲಿ ಪಡೆಯಿರಿ! ಡಿಐಇಸಿ ವೀರಭದ್ರಪ್ಪ ಸಜ್ಜನ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವರಾತ್ರಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ ದುರ್ಗಾದೇವಿಯ ಆರಾಧನೆಗೆ ಮೀಸಲಾಗಿರುವ ಶಾರದೀಯ ನವರಾತ್ರಿ ಈ ಬಾರಿ ಅಕ್ಟೋಬರ್ 11ರಿಂದ ಆರಂಭವಾಗಲಿದೆ.ಒಂಬತ್ತು ದಿನಗಳ ಕಾಲ ಭಕ್ತರು ನವದುರ್ಗೆಯರನ್ನು ಆರಾಧಿಸಿ, ಅಕ್ಟೋಬರ್ 20ರಂದು ವಿಜಯದಶಮಿಯೊಂದಿಗೆ ಹಬ್ಬವನ್ನು ಮುಕ್ತಾಯಗೊಳಿಸಲಿದ್ದಾರೆ.

ಆದ್ರೆ ಈ ಬಾರಿಯ ನವರಾತ್ರಿಗೆ ವಿಶೇಷ ಮಹತ್ವವಿದೆ ದುರ್ಗಾದೇವಿ ಈ ಬಾರಿ ಆನೆಯ ಮೇಲೆ ಆಗಮಿಸಲಿದ್ದಾಳೆ ಎಂಬ ಧಾರ್ಮಿಕ ನಂಬಿಕೆ ಇದೆ.ಹಾಗಾದ್ರೆ ನವರಾತ್ರಿ ಯಾವಾಗ ಆರಂಭ? ಕಲಶ ಸ್ಥಾಪನೆಗೆ ಶುಭ ಸಮಯ ಯಾವುದು? ಪ್ರಮುಖ ದಿನಗಳು ಯಾವುವು? ದೇವಿ ಯಾವ ವಾಹನದಲ್ಲಿ ಆಗಮಿಸಿ, ಯಾವ ವಾಹನದಲ್ಲಿ ನಿರ್ಗಮಿಸಲಿದ್ದಾಳೆ.

ನವರಾತ್ರಿ ಆರಂಭ
ಶಾರದೀಯ ನವರಾತ್ರಿ ಅಕ್ಟೋಬರ್ 11, ಭಾನುವಾರದಿಂದ ಆರಂಭವಾಗಲಿದೆ.ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದೆಯಂದು ಕಲಶ ಸ್ಥಾಪನೆ ಮಾಡಿ, ದುರ್ಗಾದೇವಿಯ ಮೊದಲ ರೂಪವಾದ ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ.ಒಂಬತ್ತು ದಿನಗಳ ಕಾಲ ಭಕ್ತರು ದೇವಿಯ ವಿವಿಧ ರೂಪಗಳನ್ನು ಆರಾಧಿಸಲಿದ್ದಾರೆ. ಉಪವಾಸ, ಜಪ, ದುರ್ಗಾ ಸಪ್ತಶತಿ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ.


ಅಕ್ಟೋಬರ್ 11 – ನವರಾತ್ರಿ ಆರಂಭ
ಮೊದಲ ದಿನ – ಶೈಲಪುತ್ರಿ ದೇವಿ ಆರಾಧನೆ

ಕಲಶ ಸ್ಥಾಪನೆಗೆ ಶುಭ ಸಮಯ: ನವರಾತ್ರಿಯ ಮೊದಲ ದಿನದ ಪ್ರಮುಖ ಆಚರಣೆಯೇ ಕಲಶ ಸ್ಥಾಪನೆ ಅಕ್ಟೋಬರ್ 11ರಂದು ಅಭಿಜಿತ್ ಮುಹೂರ್ತ ಬೆಳಗ್ಗೆ 11:36ರಿಂದ ಮಧ್ಯಾಹ್ನ 12:24ರವರೆಗೆ ಇರಲಿದೆ ಎಂದು ನೀಡಿರುವ ಪಂಚಾಂಗ ಮಾಹಿತಿಯಲ್ಲಿ ತಿಳಿಸಲಾಗಿದೆ.ಈ ಸಮಯದಲ್ಲಿ ಕಲಶ ಸ್ಥಾಪನೆ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದ್ರೆ ಸೂರ್ಯೋದಯ ಹಾಗೂ ಸ್ಥಳೀಯ ಸಮಯದ ವ್ಯತ್ಯಾಸದಿಂದಾಗಿ ಶುಭ ಸಮಯದಲ್ಲಿ ಬದಲಾವಣೆಯಾಗಬಹುದು. ಹೀಗಾಗಿ ನಿಮ್ಮ ಸ್ಥಳೀಯ ಪಂಚಾಂಗದ ಪ್ರಕಾರ ಸಮಯವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

ಕಲಶ ಸ್ಥಾಪನೆ ಶುಭ ಮುಹೂರ್ತ
11:36 AM – 12:24 PM

ನವರಾತ್ರಿಯ ಪ್ರಮುಖ ದಿನಗಳು ಇನ್ನು ನವರಾತ್ರಿಯ ಪ್ರಮುಖ ದಿನಗಳತ್ತ ಗಮನಹರಿಸಿದ್ರೆ ಅಕ್ಟೋಬರ್ 16ರಂದು ಬೆಳವರನ ಪೂಜೆ ನಡೆಯಲಿದೆ. ದುರ್ಗಾ ಪೂಜಾ ಸಂಪ್ರದಾಯದಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಅಕ್ಟೋಬರ್ 17ರಂದು ಮಹಾ ಸಪ್ತಮಿ. ಈ ದಿನ ನವಪತ್ರಿಕಾ ಪ್ರವೇಶ ಸೇರಿದಂತೆ ಹಲವು ಪ್ರಮುಖ ಆಚರಣೆಗಳು ನಡೆಯಲಿವೆ. ಅಕ್ಟೋಬರ್ 18ರಂದು ದುರ್ಗಾಷ್ಟಮಿ. ದೇವಿಯ ಎಂಟನೇ ರೂಪವಾದ ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಉಪವಾಸ, ವಿಶೇಷ ಪೂಜೆ ಹಾಗೂ ಕನ್ಯಾ ಪೂಜೆಯಂತಹ ಆಚರಣೆಗಳು ನಡೆಯಲಿವೆ. ಅಕ್ಟೋಬರ್ 19ರಂದು ಮಹಾನವಮಿ ಮತ್ತು ಸಂಧಿ ಪೂಜೆ. ಅಷ್ಟಮಿ-ನವಮಿಯ ಸಂಧಿಕಾಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಅಕ್ಟೋಬರ್ 20ರಂದು ವಿಜಯದಶಮಿ. ಇದರೊಂದಿಗೆ ನವರಾತ್ರಿ ಹಬ್ಬಕ್ಕೆ ತೆರೆ ಬೀಳಲಿದೆ.

ಆನೆಯ ಮೇಲೆ ದುರ್ಗಾದೇವಿ!
ಈ ಬಾರಿಯ ನವರಾತ್ರಿಯ ಮತ್ತೊಂದು ವಿಶೇಷತೆ ಎಂದರೆ ದುರ್ಗಾದೇವಿಯ ವಾಹನ. ಧಾರ್ಮಿಕ ನಂಬಿಕೆ ಮತ್ತು ಸಾಂಪ್ರದಾಯಿಕ ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ವರ್ಷ ತಾಯಿ ದುರ್ಗೆ ಆನೆಯ ಮೇಲೆ ಆಗಮಿಸಲಿದ್ದಾಳೆ ಎನ್ನಲಾಗುತ್ತಿದೆ. ಆನೆಯನ್ನು ಸಮೃದ್ಧಿ, ಸ್ಥಿರತೆ ಮತ್ತು ಸಂಪತ್ತಿನ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ದೇವಿಯ ಆನೆಯ ಮೇಲಿನ ಆಗಮನವು ಉತ್ತಮ ಮಳೆ, ಕೃಷಿ ಪ್ರಗತಿ, ಸಂತೋಷ, ಸಮೃದ್ಧಿ ಮತ್ತು ಶಾಂತಿಯ ಸಂಕೇತ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ. ಆದ್ರೆ ಇದು ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಪಂಚಾಂಗ-ಜ್ಯೋತಿಷ್ಯ ಲೆಕ್ಕಾಚಾರಗಳನ್ನ ಆಧರಿಸಿದ ವಿಚಾರವಾಗಿದ್ದು, ವೈಜ್ಞಾನಿಕ ಮುನ್ಸೂಚನೆಯಲ್ಲ ಎಂಬುದನ್ನು ಗಮನಿಸಬೇಕು.

ದುರ್ಗಾ ಸಪ್ತಶತಿ ಪಠಣ
ನವರಾತ್ರಿ ಕೇವಲ ಉಪವಾಸದ ಹಬ್ಬವಲ್ಲ.. ಇದು ಶಕ್ತಿ ಆರಾಧನೆ ಮತ್ತು ಆಧ್ಯಾತ್ಮಿಕ ಸಾಧನೆಯ ಸಮಯವೂ ಹೌದು.ಈ ಸಂದರ್ಭದಲ್ಲಿ ದುರ್ಗಾ ಸಪ್ತಶತಿ, ದೇವಿ ಕವಚ, ಸಿದ್ಧ ಕುಂಜಿಕಾ ಸ್ತೋತ್ರ ಸೇರಿದಂತೆ ದೇವಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಿಸುವುದು ಧಾರ್ಮಿಕವಾಗಿ ಪುಣ್ಯಕರವೆಂದು ನಂಬಲಾಗಿದೆ.ಭಕ್ತರು ತಮ್ಮ ನಂಬಿಕೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ದೇವಿಯನ್ನು ಆರಾಧಿಸಿ, ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಒಟ್ಟಿನಲ್ಲಿ ಅಕ್ಟೋಬರ್ 11ರಂದು ಕಲಶ ಸ್ಥಾಪನೆಯೊಂದಿಗೆ ಆರಂಭವಾಗುವ ಶಾರದೀಯ ನವರಾತ್ರಿ, ಅಕ್ಟೋಬರ್ 20ರಂದು ವಿಜಯದಶಮಿಯೊಂದಿಗೆ ಮುಕ್ತಾಯವಾಗಲಿದೆ.

ಆನೆಯ ಮೇಲೆ ದುರ್ಗಾದೇವಿಯ ಆಗಮನ ಶುಭದ ಸಂಕೇತ ಎನ್ನುವ ನಂಬಿಕೆ ಈ ನವರಾತ್ರಿ ನಿಮ್ಮ ಮನೆ-ಮನಗಳಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತರಲಿ ಅನ್ನೋದೇ ಎಲ್ಲರ ಆಶಯವಾಗಿದೆ. 

Add Zee News as a Preferred Source
TAGS:
Kannada News