• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ ರಚನೆಗೆ ಸರ್ಕಾರ ಅನುಮೋದನೆ ನೀಡಿದೆಯಾದರೂ, ಅಗತ್ಯವಿರುವ 5,000ಕ್ಕೂ ಹೆಚ್ಚು ಹುದ್ದೆಗಳಿಗೆ ಇನ್ನೂ ಆರ್ಥಿಕ ಇಲಾಖೆಯ ಅನುಮೋದನೆ ಸಿಗದೆ ಸಿಬ್ಬಂದಿಯ ಅಭಾವ ಎದುರಾಗಿದೆ. ಈ ಕುರಿತಾದ ವರದಿ ಇಲ್ಲಿದೆ

Written ByRamya. R. Gowda
Published: Oct 08, 2026, 04:28 PM IST|Updated: Oct 08, 2026, 04:32 PM IST
joinshare
ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಶ್ರೇಯಸ್‌ ಅಯ್ಯರ್‌ ನೇತೃತ್ವದ T20 ತಂಡದಲ್ಲಿ ಭಾರೀ ಬದಲಾವಣೆ.. ವೈಭವ್‌ ಸೂರ್ಯವಂಶಿ ಸೇರಿ ಈ ಪ್ಲೇಯರ್ಸ್‌ಗೆ ಚಾನ್ಸ್‌

ಶ್ರೇಯಸ್‌ ಅಯ್ಯರ್‌ ನೇತೃತ್ವದ T20 ತಂಡದಲ್ಲಿ ಭಾರೀ ಬದಲಾವಣೆ.. ವೈಭವ್‌ ಸೂರ್ಯವಂಶಿ ಸೇರಿ ಈ ಪ್ಲೇಯರ್ಸ್‌ಗೆ ಚಾನ್ಸ್‌

2

ವಿಲ್ಲಾದಲ್ಲಿ ಸೀಕ್ರೆಟ್ ಟ್ರೇನಿಂಗ್, 40-50 ಲಕ್ಷ ಡೀಲ್ : KPSC ನೇಮಕಾತಿ ಹಗರಣದ ಸ್ಫೋಟಕ ಮಾಹಿತಿ

3

ಅಪ್ರಾಪ್ತ ಮಗಳ ಮೇಲೆಯೇ ಅ*ತ್ಯಾಚಾರ: ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

4

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

5

ಹಣ್ಣು ಮಾತ್ರವಲ್ಲ, ಎಲೆಗಳೂ ಸೂಪರ್! ಸೀತಾಫಲದ ಎಲೆಗಳಲ್ಲಿರುವ ಆರೋಗ್ಯಕಾರಿ ಗುಣಗಳೇನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ ರಚನೆಗೆ ಸರ್ಕಾರ ಅನುಮೋದನೆ ನೀಡಿದೆಯಾದರೂ, ಅಗತ್ಯವಿರುವ 5,000ಕ್ಕೂ ಹೆಚ್ಚು ಹುದ್ದೆಗಳಿಗೆ ಇನ್ನೂ ಆರ್ಥಿಕ ಇಲಾಖೆಯ ಅನುಮೋದನೆ ಸಿಗದೆ ಸಿಬ್ಬಂದಿಯ ಅಭಾವ ಎದುರಾಗಿದೆ. ಈ ಕುರಿತಾದ ವರದಿ ಇಲ್ಲಿದೆ

ಬೆಂಗಳೂರಲ್ಲಿ 5 ನಗರ ಪೊಲೀಸ್ ಕಮಿಷನರೇಟ್‌ಗಳ ರಚನೆಗೆ ಸಿಬ್ಬಂದಿ ಕೊರತೆ 5000 ಹುದ್ದೆಗಳಿಗೆ ಇನ್ನೂ ದೊರೆತಿಲ್ಲ ಅನುಮೋದನೆ ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳನ್ನು ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಆದರೆ ಇದಕ್ಕೆ ಅಗತ್ಯವಿರುವ ಒಟ್ಟು 6,550 ಹೆಚ್ಚುವರಿ ಹುದ್ದೆಗಳ ಪೈಕಿ 5,000ಕ್ಕೂ ಹೆಚ್ಚು ಹುದ್ದೆಗಳಿಗೆ ಇನ್ನೂ ಅನುಮೋದನೆಯೇ ದೊರೆತಿಲ್ಲ...ಇದರಿಂದ ಹೊಸ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಸಿಬ್ಬಂದಿಯ ಕೊರತೆಯ ಸವಾಲು ಎದುರಾಗಲಾಗಿದೆ.

ಸದ್ಯ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಬಲಪಡಿಸಲು ,ವಿಕೇಂದ್ರೀಕರಣ ಸಹಕಾರಿಯಾಗಲಿದೆ.. ಆದರೆ, ಅಗತ್ಯ ಸಿಬ್ಬಂದಿ ಲಭ್ಯವಿಲ್ಲದಿದ್ದರೆ ಹೊಸ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಧಕ್ಕೆಯಾಗಬಹುದು ಎಂದು ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಐದು ಕಮಿಷನರೇಟ್‌ಗಳಿಗೆ ಅಗತ್ಯವಿರುವ 6,550 ಹೆಚ್ಚುವರಿ ಹುದ್ದೆಗಳ ಪೈಕಿ ಹಣಕಾಸು ಇಲಾಖೆ ಇದುವರೆಗೆ ಕೇವಲ 1,022 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿದೆ. ಈಗಾಗಲೇ ನಗರ ಪೊಲೀಸ್ ಇಲಾಖೆಯಲ್ಲಿ ಸುಮಾರು 3,000 ಸಿಬ್ಬಂದಿ ಕೊರತೆಯಿದೆ.

ಸದ್ಯ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಗೂ ಸಿಎಆರ್ ಕಾನ್ಸ್‌ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿಯಿಂದ  ಕಮಿಷನರೇಟ್‌ಗಳಿಗೆ ಅಗತ್ಯವಿರುವ ಸಿಬ್ಬಂದಿ ಕೊರತೆ ತಕ್ಷಣಕ್ಕೆ ನೀಗುವುದಿಲ್ಲ, ಹೀಗಾಗಿ ಇದು ಯಾವ ರೀತಿ ಪರಿಣಾಮ ಬೀರುತ್ತೆ ಕಾದುನೋಡಬೇಕಾಗಿದೆ

Add Zee News as a Preferred Source
TAGS:
Kannada News