• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..

ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ನಡೆದ ಭೀಕರ ಘಟನೆ. ಅತ್ತಿಬೆಲೆಯ ಶ್ರೀ ವರಸಿದ್ದಿ ಫಿಲ್ಲಿಂಗ್ ಸ್ಟೇಷನ್‌ಗೆ ವೇಗವಾಗಿ ಬಂದ ಜಾಗ್ವಾರ್ ಕಾರು ಏಕಾಏಕಿ ಬಂಕ್ ಗೆ ನುಗ್ಗಿದೆ.

Written ByBhimappa
Published: Oct 08, 2026, 04:57 PM IST|Updated: Oct 08, 2026, 05:02 PM IST
joinshare
ಪೆಟ್ರೋಲ್ ಬಂಕ್‌ಗೆ ನುಗ್ಗಿದ ಜಾಗ್ವಾರ್ ಕಾರು, ಧಗಧಗ.. ಯುವಕ ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ..
Image Credit: Jaguar car

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

2

ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ.. ನವದುರ್ಗೆಯರ ಪ್ರತಿಷ್ಠಾಪನೆ, ಆರಾಧನೆ, ನೃತ್ಯ- ಸಂಗೀತ ವೈಭವ

3

ಶ್ರೇಯಸ್‌ ಅಯ್ಯರ್‌ ನೇತೃತ್ವದ T20 ತಂಡದಲ್ಲಿ ಭಾರೀ ಬದಲಾವಣೆ.. ವೈಭವ್‌ ಸೂರ್ಯವಂಶಿ ಸೇರಿ ಈ ಪ್ಲೇಯರ್ಸ್‌ಗೆ ಚಾನ್ಸ್‌

4

ವಿಲ್ಲಾದಲ್ಲಿ ಸೀಕ್ರೆಟ್ ಟ್ರೇನಿಂಗ್, 40-50 ಲಕ್ಷ ಡೀಲ್ : KPSC ನೇಮಕಾತಿ ಹಗರಣದ ಸ್ಫೋಟಕ ಮಾಹಿತಿ

5

ಅಪ್ರಾಪ್ತ ಮಗಳ ಮೇಲೆಯೇ ಅ*ತ್ಯಾಚಾರ: ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Jaguar car crashes into Sri Varasiddi filling station: ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆ ಜೀವಂತ ಸಾಕ್ಷಿ. ಯುವತಿಯೊಬ್ಬಳ ಜೊತೆ ಐಷಾರಾಮಿ ಜಾಗ್ವಾರ್ ಕಾರಿನಲ್ಲಿ ಹೊರಟಿದ್ದ ಯುವಕನ ಹುಚ್ಚಾಟಕ್ಕೆ ಪೆಟ್ರೋಲ್ ಬಂಕ್‌ ನಲ್ಲಿ ಕಾರು ಹೊತ್ತಿ ಉರಿದಿದೆ. ವೇಗವಾಗಿ ಬಂದ ಜಾಗ್ವಾರ್ ಮೊದಲು ಪೆಟ್ರೋಲ್ ಪಂ ಗೆ ಡಿಚ್ಚಿ ಹೊಡೆದು ಬಂಕ್ ನ ಸಿಬ್ಬಂದಿಗೆ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಪೆಟ್ರೋಲ್ ಬಂಕ್‌ಗೂ ವ್ಯಾಪಿಸಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಅಷ್ಟಕ್ಕೂ ಈ ಭೀಕರ ಅವಘಡ ನಡೆದಿದ್ದೆಲ್ಲಿ,ಹೇಗಾಯ್ತು,ತೋರಿಸ್ತೀವಿ ನೋಡಿ ಈ ರಿಪೋರ್ಟ್‌ನಲ್ಲಿ..

ಪೆಟ್ರೋಲ್ ಬಂಕ್‌ಗೆ ಡೆಡ್ಲಿ ಡಿಚ್ಚಿ ಕೊಟ್ಟ ಜಾಗ್ವಾರ್ ಕಾರು,ಡಿಕ್ಕಿಯ ಬೆನ್ನಲ್ಲೇ ಹೊತ್ತಿ ಉರಿದ ಕಾರು,ಕಾರಿನಿಂದ ಬಂಕ್‌ಗೂ ವ್ಯಾಪಿಸಿದ ಬೆಂಕಿ, ಕೆಲವೇ ಕ್ಷಣಗಳಲ್ಲಿ ಇಡೀ ಪೆಟ್ರೋಲ್ ಬಂಕ್‌ನಲ್ಲಿ ಆತಂಕದ ವಾತಾವರಣ. ಇದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ನಡೆದ ಭೀಕರ ಘಟನೆ. ಅತ್ತಿಬೆಲೆಯ ಶ್ರೀ ವರಸಿದ್ದಿ ಫಿಲ್ಲಿಂಗ್ ಸ್ಟೇಷನ್‌ಗೆ ವೇಗವಾಗಿ ಬಂದ ಜಾಗ್ವಾರ್ ಕಾರು ಏಕಾಏಕಿ ಬಂಕ್ ಗೆ ನುಗ್ಗಿದೆ. ನೇರವಾಗಿ ಪೆಟ್ರೋಲ್ ಪಂಪ್‌ಗೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ಪರಿಣಾಮ, ಪಂಪ್ ಪಕ್ಕದಲ್ಲಿ ಕೆಲಸ ಮಾಡುತ್ತ ನಿಂತಿದ್ದ ಬಿಹಾರ ಮೂಲದ ಗುಡ್ಡು ಕುಮಾರ್‌ನ ಮೇನೆ ಪಂಪ್ ಬಿದ್ದಿದೆ. ಇದರಿಂದ ಗುಡ್ಡು ಕುಮಾರ್‌ಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಜಾಗ್ವಾರ್ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಪೆಟ್ರೋಲ್ ಬಂಕ್‌ಗೂ ವ್ಯಾಪಿಸಿದೆ. ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಂಕ್‌ನಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ಗ್ಯಾಸ್ ಕೂಡ ಶೇಖರಣೆ ಮಾಡಲಾಗಿದ್ದರಿಂದ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿತ್ತು. ಕೂಡಲೇ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅದೃಷ್ಟವಶಾತ್ ಬೆಂಕಿ ಮತ್ತಷ್ಟು ವ್ಯಾಪಿಸುವ ಮುನ್ನವೇ ನಿಯಂತ್ರಣಕ್ಕೆ ಬಂದಿದ್ದು, ಭಾರೀ ಪ್ರಮಾಣದ ಪ್ರಾಣಾಪಾಯವೊಂದು ತಪ್ಪಿದೆ.

ಇನ್ನು ಈ ಭೀಕರ ಅವಘಡದ ಹಿಂದೆ ಇದ್ದಿದ್ದು ಕುಡಿದ ಮತ್ತಿನ ಡ್ರೈವಿಂಗ್ ಅನ್ನೋ ಆರೋಪ ಕೇಳಿಬಂದಿದೆ. ಜಾಗ್ವಾರ್ ಕಾರು ಚಲಾಯಿಸುತ್ತಿದ್ದ ಸಂಜಯ್‌ನೇ ಘಟನೆಗೆ ಕಾರಣ ಎನ್ನಲಾಗಿದೆ. ಬೆಂಗಳೂರಿನ ಹೊಸರೋಡ್ ನಿವಾಸಿಯಾಗಿರುವ ಸಂಜಯ್, ಕಳೆದ ಡಿಸೆಂಬರ್‌ನಲ್ಲಿ KA-03-MG-3579 ನೋಂದಣಿ ಸಂಖ್ಯೆಯ ಸೆಕೆಂಡ್ ಹ್ಯಾಂಡ್ ಜಾಗ್ವಾರ್ ಕಾರನ್ನು ಖರೀದಿಸಿದ್ದ. ಬರೋಬ್ಬರಿ 28 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಖರೀದಿಸಿದ್ದ ಸಂಜಯ್, ಕಳೆದ ಏಳು ತಿಂಗಳಿಂದ ಇಎಂಐ ಪಾವತಿಸಿರಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ನಿನ್ನೆ ರಾತ್ರಿ ಹೆಚ್‌ಎಸ್‌ಆರ್ ಲೇಔಟ್‌ನಿಂದ ಯುವತಿಯೊಬ್ಬಳ ಜೊತೆ ಜಾಗ್ವಾರ್‌ನಲ್ಲಿ ಹೊರಟಿದ್ದ ಸಂಜಯ್, ಹೊಸೂರು ಕಡೆಗೆ ತೆರಳುತ್ತಿದ್ದ.

ಈ ವೇಳೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದ್ದು, ಅತ್ತಿಬೆಲೆ ಗಡಿಭಾಗದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಮೊದಲು ಬಂಕ್  ಡಿಕ್ಕಿ ಹೊಡೆದು, ಬಳಿಕ ಪಂಪ್ ಸಿಬ್ಬಂದಿ ಮೇಲೆ ಬಿದ್ದಿದೆ. ಡಿಕ್ಕಿಯ ಬೆನ್ನಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಸಂಜಯ್ ಮತ್ತು ಯುವತಿ ಕೆಳಗಿಳಿದು ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾರೆ. ಆದರೆ ಗಾಯಗೊಂಡಿದ್ದ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಸಂಜಯ್‌ನನ್ನು ಬಂಕ್ ಸಿಬ್ಬಂದಿಯೇ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಅತ್ತಿಬೆಲೆಯಲ್ಲಿ ಜಾಗ್ವಾರ್ ಕಾರಿನ ಅಟ್ಟಹಾಸ
ಪೆಟ್ರೋಲ್ ಬಂಕ್‌ಗೆ ಡೆಡ್ಲಿ ಡಿಚ್ಚಿ ಕೊಟ್ಟ ಜಾಗ್ವಾರ್
ಸಿಬ್ಬಂದಿಗೆ ಡಿಕ್ಕಿ ಪಂಪ್‌ಗೆ ಗುದ್ದಿದ ಕಾರು
ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದ ಜಾಗ್ವಾರ್
ಬಂಕ್‌ಗೆ ಬೆಂಕಿ ತಪ್ಪಿದ ಭಾರೀ ಅನಾಹುತ

ಒಂದು ಕ್ಷಣದ ನಿರ್ಲಕ್ಷ್ಯ, ಕುಡಿದ ಮತ್ತಿನಲ್ಲಿ ಸ್ಟೆರಿಂಗ್ ಹಿಡಿದ ಪರಿಣಾಮ ಐಷಾರಾಮಿ ಜಾಗ್ವಾರ್ ಕಾರು ಬೆಂಕಿಗಾಹುತಿಯಾಗಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಬಂಕ್‌ಗೂ ಬೆಂಕಿ ವ್ಯಾಪಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಬೆಂಕಿ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಶೇಖರಣಾ ಪ್ರದೇಶಕ್ಕೆ ಮತ್ತಷ್ಟು ವ್ಯಾಪಿಸದೇ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಗಾಯಗೊಂಡಿರುವ ಬಂಕ್ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸಂಬಂಧ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Add Zee News as a Preferred Source
TAGS:
Kannada News