10,000mAh ಬೃಹತ್ ಬ್ಯಾಟರಿ, 120Hz AMOLED ಡಿಸ್‌ಪ್ಲೇ! ವಿವೋ Y600 5G ಫೋನ್ ಬಿಡುಗಡೆ
ವಿವೋ ಹೊಸ Y600 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. 10,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300e ಪ್ರೊಸೆಸರ್ ಮತ್ತು 50MP ಮುಖ್ಯ ಕ್ಯಾಮೆರಾ ಇದರ ಪ್ರಮುಖ ವೈಶಿಷ್ಟ್ಯಗಳು. 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿರುವ ಈ ಫೋನ್‌ನ ಆರಂಭಿಕ ಬೆಲೆ ಚೀನಾದಲ್ಲಿ ಅಂದಾಜು ₹27,000 ಆಗಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿದೆ.
Vivo Y600 5G Smartphone: ಬೃಹತ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಮತ್ತೊಂದು 5G ಸ್ಮಾರ್ಟ್‌ಫೋನ್ ಅನ್ನ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ವಿವೋ ಬಿಡುಗಡೆ ಮಾಡಿದೆ. ಕಂಪನಿಯ Y ಸರಣಿಗೆ ಸೇರ್ಪಡೆಯಾಗಿರುವ ಹೊಸ Vivo Y600 ಫೋನ್ 10,000mAh ಬ್ಯಾಟರಿ, 120Hz AMOLED ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್ ಸೌಲಭ್ಯವನ್ನ ಹೊಂದಿದೆ. ಬಜೆಟ್ ಸ್ನೇಹಿ ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗಿರುವ ಈ ಫೋನ್ ನಾಲ್ಕು RAM ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ.
ಇತ್ತೀಚೆಗೆ ವಿವೋ 10,200mAh ಬ್ಯಾಟರಿ ಹೊಂದಿರುವ Y600s Pro ಮಾದರಿಯನ್ನ ಪರಿಚಯಿಸಿತ್ತು. ಇದೀಗ ಅದೇ ಸರಣಿಯಲ್ಲಿ Vivo Y600 ಅನ್ನ ಬಿಡುಗಡೆ ಮಾಡಿದ್ದು, ದೊಡ್ಡ ಬ್ಯಾಟರಿ ಸಾಮರ್ಥ್ಯ ಇದರ ಪ್ರಮುಖ ವೈಶಿಷ್ಟ್ಯವಾಗಿದೆ.
Vivo Y600 ಬೆಲೆ ಎಷ್ಟು?
ವಿವೋ Y600 ಸ್ಮಾರ್ಟ್‌ಫೋನ್ ಚೀನಾದ ಮಾರುಕಟ್ಟೆಯಲ್ಲಿ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ RAM ಮತ್ತು ಆಂತರಿಕ ಸ್ಟೋರೇಜ್ ಆಯ್ಕೆ ಮಾಡಿಕೊಳ್ಳಬಹುದು.
- 6GB RAM + 128GB ಸ್ಟೋರೇಜ್: CNY 1,999, ಅಂದಾಜು ₹27,000
- 8GB RAM + 128GB ಸ್ಟೋರೇಜ್: CNY 2,099, ಅಂದಾಜು ₹28,500
- 6GB RAM + 256GB ಸ್ಟೋರೇಜ್: CNY 2,199, ಅಂದಾಜು ₹30,000
- 8GB RAM + 256GB ಸ್ಟೋರೇಜ್: CNY 2,499, ಅಂದಾಜು ₹33,000
ಈ ಫೋನ್ ಸಫೈರ್ ಬ್ಲೂ, ಡೈಮಂಡ್ ಗೋಲ್ಡ್ ಮತ್ತು ಅಬ್ಸಿಡಿಯನ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇಲ್ಲಿ ನೀಡಿರುವ ಭಾರತೀಯ ರೂಪಾಯಿ ಬೆಲೆಗಳು ಚೀನಾದ ಬೆಲೆಯನ್ನ ಆಧರಿಸಿದ ಅಂದಾಜು ಮೊತ್ತಗಳಾಗಿವೆ.
| ವಿವೋ Y600 | ವೈಶಿಷ್ಟ್ಯಗಳು |
| ಡಿಸ್ಪ್ಲೇ (Display) | 6.83 ಇಂಚುಗಳು, AMOLED, 120Hz |
| ಪ್ರೊಸೆಸರ್ | ಮೀಡಿಯಾ ಟೆಕ್ ಡೈಮೆನ್ಸಿಟಿ 7300e |
| ಸ್ಟೋರೇಜ್ | 8 GB + 256 GB |
| ಬ್ಯಾಟರಿ | 10000mAh, 44W |
| ಕ್ಯಾಮೆರಾ | 50MP, 8MP |
| OS | ಆಂಡ್ರಾಯ್ಡ್ 16, ಒರಿಜಿನ್ OS 6 |
6.83 ಇಂಚಿನ AMOLED ಡಿಸ್‌ಪ್ಲೇ
Vivo Y600 ಫೋನ್ 6.83 ಇಂಚಿನ AMOLED ಡಿಸ್‌ಪ್ಲೇಯನ್ನ ಹೊಂದಿದೆ. ಇದರ ರೆಸಲ್ಯೂಶನ್ 2800 x 1260 ಪಿಕ್ಸೆಲ್‌ಗಳಾಗಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು HDR ತಂತ್ರಜ್ಞಾನವನ್ನ ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300e ಪ್ರೊಸೆಸರ್ ನೀಡಲಾಗಿದೆ. ಇದು 8GB ವರೆಗೆ LPDDR4X RAM ಮತ್ತು 256GB ವರೆಗೆ UFS 3.1 ಆಂತರಿಕ ಸ್ಟೋರೇಜ್ ಹೊಂದಿರುವ ಆಯ್ಕೆಗಳಲ್ಲಿ ಲಭ್ಯವಿದೆ. ಆಪರೇಟಿಂಗ್ ಸಿಸ್ಟಮ್ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಆಧಾರಿತ OriginOS 6ನಲ್ಲಿ ಕಾರ್ಯನಿರ್ವಹಿಸುತ್ತದೆ.
10,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್
Vivo Y600ನ ಪ್ರಮುಖ ಆಕರ್ಷಣೆ ಇದರ 10,000mAh ಸಾಮರ್ಥ್ಯದ ಬ್ಯಾಟರಿ. ದೊಡ್ಡ ಬ್ಯಾಟರಿಯ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಕಂಪನಿ ಒದಗಿಸಿದೆ. ಇದಲ್ಲದೆ ಈ ಫೋನ್ ರಿವರ್ಸ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನ ಬೆಂಬಲಿಸುತ್ತದೆ. ಅಂದರೆ ಹೊಂದಾಣಿಕೆಯ ಇತರ ಸಾಧನಗಳಿಗೆ ಫೋನ್‌ನಿಂದಲೇ ವೈರ್ಡ್ ಸಂಪರ್ಕದ ಮೂಲಕ ಚಾರ್ಜಿಂಗ್ ಒದಗಿಸುವ ಸೌಲಭ್ಯವಿದೆ.
50MP ಕ್ಯಾಮೆರಾ ಮತ್ತು ಇತರ ವೈಶಿಷ್ಟ್ಯಗಳು
ಕ್ಯಾಮೆರಾ ವಿಭಾಗದಲ್ಲಿ Vivo Y600 ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ಮತ್ತೊಂದು ದ್ವಿತೀಯ ಕ್ಯಾಮೆರಾವನ್ನ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಫೋನ್ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆ ಒದಗಿಸುತ್ತದೆ. ಸಂಪರ್ಕ ಸೌಲಭ್ಯಗಳಲ್ಲಿ 5G, Wi-Fi, Bluetooth ಮತ್ತು IR ಬ್ಲಾಸ್ಟರ್ ಸೇರಿವೆ. ಇದರೊಂದಿಗೆ NFC ಹಾಗೂ ಡಿಸ್‌ಪ್ಲೇ ಒಳಗೆ ಅಳವಡಿಸಿರುವ ಫಿಂಗರ್‌ಪ್ರಿಂಟ್ ಸೆನ್ಸರ್ ಕೂಡ ಲಭ್ಯವಿದೆ. ಒಟ್ನಲ್ಲಿ Vivo Y600 ಫೋನ್ 10,000mAh ಬ್ಯಾಟರಿ, 120Hz AMOLED ಪರದೆ, 5G ಸಂಪರ್ಕ ಮತ್ತು ನಾಲ್ಕು ಸ್ಟೋರೇಜ್ ರೂಪಾಂತರಗಳೊಂದಿಗೆ ಚೀನಾದ ಮಾರುಕಟ್ಟೆಗೆ ಪ್ರವೇಶಿಸಿದೆ. ಶೀಘ್ರವೇ ಇದು ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡುವ ಸಾಧ್ಯತೆ ಇದೆ.