SOCIAL MEDIA

Newsletter

PARTNER SITES
Select Language Select State

Viral Video: ಯಮನಿಗೇ ಸವಾಲು ಹಾಕಿದ ಯುವತಿ! ಮೈ ಜುಮ್ಮೆನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಮಹಾರಾಷ್ಟ್ರದ ಶ್ರೀರಾಮಪುರದಲ್ಲಿ ಮರಳಿನ ಲಾರಿಗೆ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ಷಣಾರ್ಧದಲ್ಲಿ ಯುವತಿ ಲಾರಿಯ ಬಂಪರ್‌ ಹಿಡಿದುಕೊಂಡು ವಾಹನದ ಕೆಳಗೆ ಸಿಲುಕುವುದನ್ನ ತಪ್ಪಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದು, ಆಕೆಯ ಸಮಯಪ್ರಜ್ಞೆ ಕುರಿತು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Written By Puttaraj K Alur
Published: Oct 10, 2026, 04:41 PM IST | Updated: Oct 10, 2026, 04:55 PM IST
Image Credit: Maharashtra CCTV accident
Join

Viral Video: ರಸ್ತೆಯಲ್ಲಿ ಸಂಚರಿಸುವಾಗ ಒಂದು ಕ್ಷಣದ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂಬುದಕ್ಕೆ ಮಹಾರಾಷ್ಟ್ರದ ಶ್ರೀರಾಮಪುರದಲ್ಲಿ ನಡೆದ ಭೀಕರ ಅಪಘಾತದ ದೃಶ್ಯವೇ ಸಾಕ್ಷಿಯಾಗಿದೆ. ಮರಳು ಸಾಗಿಸುತ್ತಿದ್ದ ಲಾರಿ ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೀಗ ಈ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ದೃಶ್ಯಗಳನ್ನ ನೋಡಿದ ನೆಟ್ಟಿಗರು, ‘ಯಮನಿಗೇ ಸವಾಲು ಹಾಕಿದ ಯುವತಿ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಸ್ಕೂಟರ್‌ಗೆ ಡಿಕ್ಕಿ ಹೊಡೆದ ಲಾರಿ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ, ಮಹಾರಾಷ್ಟ್ರದ ಶ್ರೀರಾಮಪುರದಲ್ಲಿ ಯುವತಿಯೊಬ್ಬಳು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಮರಳು ಸಾಗಿಸುತ್ತಿದ್ದ ಭಾರೀ ಲಾರಿಯೊಂದು ಆಕೆಯ ಸ್ಕೂಟರ್‌ಗೆ ಡಿ*ಕ್ಕಿ ಹೊಡೆದಿದೆ. ಭಾರೀ ವಾಹನದ ಡಿ*ಕ್ಕಿಯಿಂದ ಯುವತಿಯ ಜೀವಕ್ಕೆ ಗಂಭೀರ ಅಪಾಯ ಎದುರಾಗಿತ್ತು. ದೊಡ್ಡ ವಾಹನದ ಚಕ್ರಗಳ ಕೆಳಗೆ ಸಿಲುಕಿದ್ದರೆ ಭೀಕರ ದುರಂತ ಉಂಟಾಗಬಹುದಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಮುಂದಿನ ಕ್ಷಣದಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಪಾಯವನ್ನ ಅರಿತ ಯುವತಿ ಕ್ಷಣಾರ್ಧದಲ್ಲೇ ತನ್ನ ಚಾಣಾಕ್ಷತನದಿಂದ ಜೀವ ಉಳಿಸಿಕೊಂಡಿದ್ದಾಳೆ. ಆಕೆ ಲಾರಿಯ ಬಂಪರ್‌ ಹಿಡಿದುಕೊಂಡು ವಾಹನದ ಕೆಳಗೆ ಸಿಲುಕುವುದನ್ನ ತಪ್ಪಿಸಿಕೊಂಡಿದ್ದಾಳೆ. ಆಕೆಯ ಸಮಯಪ್ರಜ್ಞೆ ಮತ್ತು ತಕ್ಷಣದ ಪ್ರತಿಕ್ರಿಯೆಯೇ ಈ ಭಯಾನಕ ಸನ್ನಿವೇಶದಲ್ಲಿ ಪಾರಾಗಲು ನೆರವಾದಂತೆ ವಿಡಿಯೋದಲ್ಲಿ ಕಾಣಿಸುತ್ತದೆ.

ಒಂದು ಕ್ಷಣದ ನಿರ್ಧಾರ, ದೊಡ್ಡ ಅಪಾಯದಿಂದ ಪಾರು!

 ಅಪಘಾತ ಸಂಭವಿಸಿದಾಗ ಗಾಬರಿಯಾಗುವುದು ಸಹಜ. ಅದರಲ್ಲೂ ಮರಳಿನಂತಹ ಭಾರವಾದ ವಸ್ತುಗಳನ್ನ ಸಾಗಿಸುವ ದೊಡ್ಡ ವಾಹನದ ಸಮೀಪ ಸ್ಕೂಟರ್‌ನಲ್ಲಿ ಸಂಚರಿಸುವಾಗ ಅಪಾಯದ ತೀವ್ರತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಯುವತಿ ತಕ್ಷಣವೇ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆಯುವ ಕ್ಷಣದಿಂದ ಯುವತಿ ಅಪಾಯದಿಂದ ಪಾರಾಗಲು ಪ್ರಯತ್ನಿಸುವ ದೃಶ್ಯಗಳು ನೋಡುಗರಲ್ಲಿ ಆತಂಕ ಮೂಡಿಸುತ್ತವೆ. ಕೆಲವೇ ಸೆಕೆಂಡುಗಳಲ್ಲಿ ನಡೆದ ಈ ಘಟನೆ ಎಷ್ಟು ಅಪಾಯಕಾರಿ ಎಂಬುದು ಸಿಸಿಟಿವಿ ದೃಶ್ಯಗಳನ್ನ ನೋಡಿದಾಗ ಅರಿವಾಗುತ್ತದೆ. ಯುವತಿ ಪ್ರಾಣಾಪಾಯದಿಂದ ಪಾರಾಗಿರುವುದು ಅದೃಷ್ಟದ ಸಂಗತಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಇಂತಹ ಪರಿಸ್ಥಿತಿಯಲ್ಲಿ ಭಾರೀ ವಾಹನದ ಬಂಪರ್‌ ಹಿಡಿಯುವುದು ಸುರಕ್ಷಿತ ಕ್ರಮವಲ್ಲ. ಇದು ಆ ಕ್ಷಣದ ತುರ್ತು ಪ್ರತಿಕ್ರಿಯೆಯಾಗಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರೂ, ಇತರರು ಅನುಸರಿಸಬಾರದು. ಅಪಘಾತದ ಸಂದರ್ಭದಲ್ಲಿ ಸಾಧ್ಯವಾದಷ್ಟು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ತಕ್ಷಣವೇ ಅಪಾಯದಿಂದ ದೂರ ಸರಿಯಲು ಪ್ರಯತ್ನಿಸುವುದು ಮುಖ್ಯ.

ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌!

ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯ ಧೈರ್ಯ, ಸಮಯಪ್ರಜ್ಞೆ ಮತ್ತು ಕೂದಲೆಳೆ ಅಂತರದಲ್ಲಿ ಪಾರಾದ ರೀತಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ‘ಯಮನಿಗೆ ಸವಾಲ್‌ ಹಾಕಿದ ಯುವತಿ’, ‘ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿಕೊಂಡಳು’ ಎಂಬಂತಹ ಶೀರ್ಷಿಕೆಗಳೊಂದಿಗೆ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

ಭಾರೀ ವಾಹನಗಳ ಬಳಿ ಎಚ್ಚರಿಕೆ ಅತ್ಯಗತ್ಯ

ಈ ಘಟನೆ ಮತ್ತೊಮ್ಮೆ ರಸ್ತೆ ಸುರಕ್ಷತೆಯ ಮಹತ್ವವನ್ನ ನೆನಪಿಸಿದೆ. ಮರಳು, ಮಣ್ಣು ಹಾಗೂ ಇತರ ಭಾರವಾದ ವಸ್ತುಗಳನ್ನ ಸಾಗಿಸುವ ಲಾರಿಗಳಂತಹ ದೊಡ್ಡ ವಾಹನಗಳ ಸಮೀಪ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಚಾಲಕರಿಗೆ ಕಾಣದಿರುವ ಪ್ರದೇಶಗಳಲ್ಲಿ ಸಂಚರಿಸುವುದನ್ನ ತಪ್ಪಿಸುವುದು ಮತ್ತು ಸಂಚಾರ ನಿಯಮಗಳನ್ನ ಪಾಲಿಸುವುದು ಅಪಘಾತದ ಅಪಾಯ ಕಡಿಮೆ ಮಾಡಲು ನೆರವಾಗಬಹುದು.

ಒಂದು ಕ್ಷಣದ ಅವಘಡಕ್ಕೆ ಜೀವವನ್ನೇ ಕಳೆದುಕೊಳ್ಳಬಹುದು. ಹೀಗಾಗಿ ವಾಹನ ಚಲಾಯಿಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಶ್ರೀರಾಮಪುರದ ಈ ಘಟನೆ ಯುವತಿಯ ಕೂದಲೆಳೆ ಅಂತರದ ಪಾರಾಗುವಿಕೆಯಿಂದಾಗಿ ವೈರಲ್‌ ಆಗಿದ್ದರೂ, ಇದರ ಹಿಂದಿರುವ ಗಂಭೀರ ಸಂದೇಶ ಮಾತ್ರ ಸ್ಪಷ್ಟವಾಗಿದೆ: ಪ್ರತಿಯೊಬ್ಬರೂ ಕೂಡ ರಸ್ತೆಯಲ್ಲಿ ಎಚ್ಚರಿಕೆ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES