• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ದಾದಾ ದರ್ಬಾರ್‌.. IPL ಟ್ರೋಫಿಯೇ ಟಾರ್ಗೆಟ್‌, DC ಬಿಗ್‌ ಪ್ಲಾನ್

ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ದಾದಾ ದರ್ಬಾರ್‌.. IPL ಟ್ರೋಫಿಯೇ ಟಾರ್ಗೆಟ್‌, DC ಬಿಗ್‌ ಪ್ಲಾನ್

ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ಅವರು ನೇಮಕ ಆಗಿದ್ದಾರೆ. ಈ ಹಿಂದೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿರುವ ಅವರು ಇದೀಗ ತಂಡದಲ್ಲಿ ಮಹತ್ವದ ಹುದ್ದೆ ಅಲಂಕರಿಸಿದ್ದಾರೆ.‌

Written ByBhimappa
Published: Oct 06, 2026, 06:54 PM IST|Updated: Oct 06, 2026, 06:59 PM IST
joinshare
ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ದಾದಾ ದರ್ಬಾರ್‌.. IPL ಟ್ರೋಫಿಯೇ ಟಾರ್ಗೆಟ್‌, DC ಬಿಗ್‌ ಪ್ಲಾನ್
Image Credit: RCB_DC_2027

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಅಪ್ಪಿತಪ್ಪಿಯೂ ಈ ರೀತಿ ಸ್ವಸ್ತಿಕ ಹಾಕಬೇಡಿ... ಹೀಗೆ ಮಾಡುವುದರಿಂದ ಬಡತನ.. ನೀವು ಮಾಡಿದ್ದು ತಪ್ಪು ಅಷ್ಟೇ!

ಅಪ್ಪಿತಪ್ಪಿಯೂ ಈ ರೀತಿ ಸ್ವಸ್ತಿಕ ಹಾಕಬೇಡಿ... ಹೀಗೆ ಮಾಡುವುದರಿಂದ ಬಡತನ.. ನೀವು ಮಾಡಿದ್ದು ತಪ್ಪು ಅಷ್ಟೇ!

2

ರೇಣುಕಾಸ್ವಾಮಿ ಕೊಲೆ ಪ್ರಕರಣ : ಸುಪ್ರೀಂ ಕದ ತಟ್ಟಿದ ವಿಜಯಲಕ್ಷ್ಮಿ, ಪವಿತ್ರಾ ಗೌಡಗೆ ನೆಮ್ಮದಿಯ ಸುದ್ದಿ

3

ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ದಾದಾ ದರ್ಬಾರ್‌.. IPL ಟ್ರೋಫಿಯೇ ಟಾರ್ಗೆಟ್‌, DC ಬಿಗ್‌ ಪ್ಲಾನ್

4

ಹುಣಸೆ ಬೀಜ ಎಸೆಯುವ ಅಭ್ಯಾಸ ಬಿಡಿ! ಈ ಪುಟ್ಟ ಬೀಜದಲ್ಲಿದೆ ಹಲವು ಆರೋಗ್ಯಕಾರಿ ಗುಣಗಳು

5

ಸುಳ್ಯ ಶಾಸಕಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು, ಹೇಗಿದೆ ಆರೋಗ್ಯ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Dada Sourav Ganguly appointed as head coach of Delhi Capitals: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಐಪಿಎಲ್ 2027ಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಈಗ ತಂಡದ ತರಬೇತಿ ಮತ್ತು ಕಾರ್ಯತಂತ್ರದ ಜವಾಬ್ದಾರಿಯನ್ನು ಗಂಗೂಲಿ ಅವರು ವಹಿಸಿಕೊಳ್ಳಲಿದ್ದಾರೆ. 2027ರ ಐಪಿಎಲ್ ಟೂರ್ನಮೆಂಟ್‌ ಸಮೀಪಿಸುತ್ತಿದ್ದಂತೆ ಎಲ್ಲ ತಂಡಗಳಲ್ಲಿ ಕೆಲವೊಂದು ಬದಲಾವಣೆಗಳು ನಡೆಯುತ್ತಿವೆ. ಚೆನ್ನೈ ಸೂಪರ್‌ ಕಿಂಗ್ಸ್‌ ಸಿಎಸ್‌ಕೆ ತಂಡದ ಮುಖ್ಯ ಕೋಚ್‌ ಆಗಿ ಟೀಮ್‌ ಇಂಡಿಯಾದ ಲೆಜೆಂಡ್ರಿ ಕ್ರಿಕೆಟರ್‌ ಜಹೀರ್‌ ಖಾನ್‌ ಅವರು ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ಕೋಚ್ ಆಗಿ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ನೇಮಕ ಆಗಿದ್ದಾರೆ. ಈ ಹಿಂದೆಯೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿರುವ ಸೌರವ್ ಗಂಗೂಲಿ ಅವರು ಇದೀಗ ತಂಡದಲ್ಲಿ ಮಹತ್ವದ ಹುದ್ದೆಯನ್ನು ಅಲಂಕರಿಸಿದ್ದಾರೆ.      

ಸೌರವ್ ಗಂಗೂಲಿ ಅವರ ಅನುಭವವನ್ನು ಪರಿಗಣಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 2027ರ ಐಪಿಎಲ್ ಟೂರ್ನಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಲಿದೆ. ದಾದಾ ಇದ್ರೆ ತಂಡದ ಗತಿಯನ್ನೇ ಬದಲಾವಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಇದೆ. ತಂಡವು ಇನ್ನಷ್ಟು ಪ್ರದರ್ಶನವನ್ನು ಸುಧಾರಿಸುವ ಆಶಯವನ್ನು ಹೊಂದಿದೆ. ಜೆಎಸ್‌ಡಬ್ಲ್ಯೂ ಮತ್ತು ಜಿಎಂಆರ್ ಸಹ-ಮಾಲೀಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅಕ್ಟೋಬರ್ 6 ರಂದು ಅಧಿಕೃತ ಘೋಷಣೆಯನ್ನು ಮಾಡಿದೆ. ಹೇಮಾಂಗ್ ಬದನಿ ಬದಲಿಗೆ ಸೌರವ್‌ ಗಂಗೂಲಿ ಅವರು ಈಗ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಹೇಮಾಂಗ್ ಬದನಿ ಅವರು ಐಪಿಎಲ್ 2025 ಮತ್ತು 2026ರ ಸೀಸನ್‌ಗಳಲ್ಲಿ ತಂಡದೊಂದಿಗೆ ಈ ಪಾತ್ರವನ್ನು ನಿರ್ವಹಿಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಸೌರವ್‌ ಗಂಗೂಲಿ ಅವರಿಗೆ ಇದು ಹೊಸ ಹುದ್ದೆ ಅಷ್ಟೇ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಜೊತೆಗೆ ಸೌರವ್‌ ಗಂಗೂಲಿ ಅವರು ಈ ಮೊದಲೇ ಸಂಬಂಧ ಹಳೆಯದು. ಸೌರವ್‌ ಗಂಗೂಲಿ ಅವರು 2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಲಹೆಗಾರರಾಗಿ ನೇಮಕ ಆಗಿದ್ದರು. ಅಂದಿನಿಂದ, ಗಂಗೂಲಿ ಅವರು ಫ್ರಾಂಚೈಸಿಯ ಕ್ರಿಕೆಟ್ ಸೆಟಪ್‌ನಲ್ಲಿ ಅನೇಕ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಗಂಗೂಲಿ ಅವರು ಪುರುಷ ಮತ್ತು ಮಹಿಳಾ ತಂಡಗಳೆರಡಕ್ಕೂ ಕ್ರಿಕೆಟ್ ನಿರ್ದೇಶಕರಾಗಿದ್ದಾರೆ. ಆಟಗಾರನಾಗಿ ನಿವೃತ್ತಿ ಹೊಂದಿದ ನಂತರ, ಗಂಗೂಲಿ ಕ್ರಿಕೆಟ್ ಆಡಳಿತದಲ್ಲಿ ಪಾತ್ರ ವಹಿಸಿದ್ದರು. ಬಿಸಿಸಿಐನ ಉಸ್ತುವಾರಿ ವಹಿಸಿಕೊಂಡರು.

ಗಂಗೂಲಿ ನೇಮಕ, ಡೆಲ್ಲಿ ಕ್ಯಾಪಿಟಲ್ಸ್ ಹೊಸ ಆರಂಭ
ದೆಹಲಿ ಕ್ಯಾಪಿಟಲ್ಸ್‌ನೊಂದಿಗೆ ಗಂಗೂಲಿ ಅವರಿಗೆ ಹಳೆಯ ಟಚ್‌ ಇರುವುದರಿಂದ ತಂಡವನ್ನ ಪುಶ್‌ ಮಾಡಲಿದ್ದಾರೆ. ಈಗ ಮುಖ್ಯ ಕೋಚ್ ಆಗಿದ್ದರಿಂದ ತಂಡಕ್ಕೆ ಮೊದಲ ಐಪಿಎಲ್ ಟ್ರೋಫಿ ನೀಡುವುದು ಜವಾಬ್ದಾರಿ ಅವರ ಮೇಲಿದೆ. ದೆಹಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ಗಂಗೂಲಿ ಅವರ ನೇಮಕದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ದಾದಾ ಯಾವಾಗಲೂ ದೆಹಲಿ ಕ್ಯಾಪಿಟಲ್ಸ್‌ನ ಪ್ರಮುಖ ಭಾಗವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಜಿಂದಾಲ್ ಪ್ರಕಾರ, ಆಡಳಿತದಲ್ಲಿ ತೊಡಗಿಸಿಕೊಂಡಿರುವ ಮತ್ತು ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಗಂಗೂಲಿ ಈಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್ ಪಾತ್ರ ವಹಿಸಿಕೊಂಡಿದ್ದಾರೆ. ಗಂಗೂಲಿ ಅವರ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟ್ಲಸ್‌ ತಂಡವು ಐಪಿಎಲ್ ಪ್ರಶಸ್ತಿಗೆ ಭರ್ಜರಿ ತಯಾರಿ ನಡೆಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟ್ಲಸ್‌ಗೆ ಮುಖ್ಯ ಕೋಚ್ ಆಗಿ ನೇಮಕ ಬೆನ್ನಲ್ಲೇ ದಾದಾ ಮೊದಲ ಮಾತು
ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ ನಂತರ ಸೌರವ್ ಗಂಗೂಲಿ ಅವರು ಮಾತನಾಡಿ, ಐಪಿಎಲ್‌ನಲ್ಲಿ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂದರೆ ಮೊದಲಿನಿಂದಲೂ ನನಗೆ ಬಹಳ ಪ್ರೀತಿ ಇದೆ. ಡೆಲ್ಲಿ ಟೀಮ್‌ ಎಂದರೆ ಹೃದಯಕ್ಕೆ ಹತ್ತಿರವಾದ ತಂಡ ಎಂದಿದ್ದಾರೆ. ಫ್ರಾಂಚೈಸ್ ಮಾಲೀಕರು, ನಿರ್ವಹಣೆ ಮತ್ತು ಸಹಾಯಕ ಸಿಬ್ಬಂದಿ ಮತ್ತು ಆಟಗಾರರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದೇನೆ. ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರಿದ್ದಾರೆ. ತಂಡವು ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇನ್ನಷ್ಟು ಪುಶ್‌ ಮಾಡಿದರೆ ಮುಂದಿನ ಬಾರಿ ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಯಾವುದೇ ಅನುಮಾನ ಬೇಡ ಎಂದು ದಾದಾ ಸೌರವ್‌ ಗಂಗೂಲಿ ಅವರು ಹೇಳಿದ್ದಾರೆ.

ಹೊಸ ಋತುವಿನಲ್ಲಿ ತಂಡದೊಂದಿಗೆ ಕೆಲಸ ಮಾಡಲು ಮತ್ತು ಬಲಿಷ್ಠ ಮತ್ತು ನಿರ್ಭೀತ ತಂಡವನ್ನು ನಿರ್ಮಿಸಲು ಉತ್ಸುಕನಾಗಿದ್ದೇನೆ. ಐಪಿಎಲ್‌ನಲ್ಲಿ ಸದ್ಯ 10 ತಂಡಗಳು ಇದ್ದು ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಕೂಡ ಒಂದಾಗಿದೆ. ಹೀಗಾಗಿ 9 ತಂಡಗಳು ಕೂಡ ಬಲಿಷ್ಠವಾಗಿದ್ದು ಇವುಗಳನ್ನೆಲ್ಲ ಮಣಿಸಿ ಟ್ರೋಫಿ ಎತ್ತಿಹಿಡಿಯುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು ಸಾಕಷ್ಟು ಶ್ರಮ ವಹಿಸಲಾಗುವುದು. ತಂಡವನ್ನು ಕೂಡ ಸಿದ್ಧಪಡಿಸಲಾಗುವುದು. ತಂಡದ ಪ್ರತಿ ಆಟಗಾರನನ್ನು ಒಬ್ಬ ಯೋಧನಂತೆ ಸಿದ್ಧ ಮಾಡಲಾಗುತ್ತದೆ. ಎಲ್ಲ ಟೀಕೆ, ಟಿಪ್ಪಣಿಗಳನ್ನು ಬದಿಗೊತ್ತಿ ಐಪಿಎಲ್‌ ಟ್ರೋಫಿ ಮೇಲೆ ಗಮನ ಹರಿಸಲಾಗುವುದು ಎಂದು ಟೀಮ್‌ ಇಂಡಿಯಾದ ಮಾಜಿ ನಾಯಕ, ಸದ್ಯ ಡೆಲ್ಲಿ ಕ್ಯಾಪಿಟ್ಲಸ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕರಾದ ಸೌರವ್ ಗಂಗೂಲಿ‌ ಅವರು ಹೇಳಿದ್ದಾರೆ.
 

Add Zee News as a Preferred Source
TAGS:
T20