• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /Asian Games 2026; ಗೋಲ್ಡ್‌ ಮೆಡೆಲ್‌ ಗೆದ್ದವರಿಗೆ ಕೋಟಿ ಹಣ.. ಬೆಳ್ಳಿ, ಕಂಚಿನ ಪದಕಕ್ಕೆ ದುಡ್ಡಿನ ಸುರಿಮಳೆ?

Asian Games 2026; ಗೋಲ್ಡ್‌ ಮೆಡೆಲ್‌ ಗೆದ್ದವರಿಗೆ ಕೋಟಿ ಹಣ.. ಬೆಳ್ಳಿ, ಕಂಚಿನ ಪದಕಕ್ಕೆ ದುಡ್ಡಿನ ಸುರಿಮಳೆ?

ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದ ಕೊಡುಗೆ ಕೂಡ ನೀಡಲಾಗುತ್ತಿದೆ.

Written ByBhimappa
Published: Oct 06, 2026, 02:09 PM IST|Updated: Oct 06, 2026, 02:20 PM IST
joinshare
Asian Games 2026; ಗೋಲ್ಡ್‌ ಮೆಡೆಲ್‌ ಗೆದ್ದವರಿಗೆ ಕೋಟಿ ಹಣ.. ಬೆಳ್ಳಿ, ಕಂಚಿನ ಪದಕಕ್ಕೆ ದುಡ್ಡಿನ ಸುರಿಮಳೆ?
Image Credit: asian_games_2026_cm

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

2

ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ನಿಯಮ: 2026ರ ಹೊಸ SOP ಜಾರಿ

3

ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ

4

ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

5

ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Asian Games 2026: Gold medalists get Rs 1 crore: 2026 ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳನ್ನು ಸಿಎಂ ಡಿ.ಕೆ ಶಿವಕುಮಾರ್‌ ಅವರು ಗೌರವಿಸಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಕ್ರೀಡಾಪಟುಗಳಿಗಾಗಿ ಹಲವು ಪ್ರಮುಖ ಮತ್ತು ಐತಿಹಾಸಿಕ ಯೋಜನೆ ಹಾಗೂ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ನಗದು ಪ್ರೋತ್ಸಾಹ ಧನ ನೀಡಲಾಗಿದೆ.

ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಎಲ್ಲ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದರು. ಇದರಿಂದ ಪದಕ ಪಟ್ಟಿಯಲ್ಲಿ ಭಾರತ ಉತ್ತಮವಾದ ಸ್ಥಾನವನ್ನು ಪಡೆದು ಐತಿಹಾಸಿಕವಾದ ಸಾಧನೆ ಮಾಡಿತು. ಪ್ರತಿ ಬಾರಿಗಿಂತ ಈ ಸಲ ಉತ್ತಮ ರೀತಿಯಲ್ಲಿ ಭಾರತ ಕ್ರೀಡಾಪಟುಗಳು ಪ್ರದರ್ಶನ ತೋರಿದ್ದರಿಂದ ದೊಡ್ಡ ಮಟ್ಟದಲ್ಲಿ ಪದಕಗಳು ಹರಿದು ಬಂದವು. ಹೀಗಾಗಿಯೇ ಈ ಸಲ ಭಾರತವೂ 21 ಚಿನ್ನದ ಪದಕ, 27 ಬೆಳ್ಳಿ ಪದಕ, 37 ಕಂಚಿನ ಪದಕಗಳು ಸೇರಿ ಒಟ್ಟು 85 ಪದಕಗಳು ಒಲಿದು ಬಂದಿವೆ.    

ಏಷ್ಯನ್ ಗೇಮ್ಸ್- 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ 5.00 ಲಕ್ಷ ನಗದು ಪ್ರೋತ್ಸಾಹ ಧನವನ್ನು ಸರ್ಕಾರ ಮಂಜೂರು ಮಾಡಿರುವುದು ಖುಷಿಯ ಸಂಗತಿಯಾಗಿದೆ. ಸರ್ಕಾರ ದೊಡ್ಡ ಮೊತ್ತದ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದರಿಂದ ಕ್ರೀಡಾ ಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. ಭಾಗವಹಿಸಿದ್ದ ಕರ್ನಾಟಕದ 20 ಕ್ರೀಡಾಪಟುಗಳಿಗೆ ತಲಾ 5.00 ಲಕ್ಷ ನಗದು ಘೋಷಣೆ ಮಾಡಿರುವುದು ಸಮಾನವಾಗಿ ಎಲ್ಲರಿಗೂ ಅವಕಾಶ ಸಿಕ್ಕಂತೆ ಆಗಿದೆ.    

ಈ ಯೋಜನೆಯಡಿ ಅಥ್ಲೆಟಿಕ್ಸ್‌ನ ಯಶಸ್ ಪಾಲಾಕ್ಷ, ಸುಪ್ರಿಯಾ ಸಿಂಡಿಗೆರೆ ಬಸವರಾಜು, ಉನ್ನತಿ ಅಯ್ಯಪ್ಪ, ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಸಿಂಧು ಶ್ರೀ, ಬ್ಯಾಡ್ಮಿಂಟನ್‌ನ ಆಯುಷ್ ಶೆಟ್ಟಿ, ಕ್ರಿಕೆಟ್‌ನ ಶ್ರೇಯಾಂಕಾ ಪಾಟೀಲ್, ಸೈಕ್ಲಿಂಗ್ ಟ್ರ್ಯಾಕ್‌ನ ಕೀರ್ತಿ ರಂಗಸ್ವಾಮಿ, ಈಕ್ವೆಸ್ಟ್ರಿಯನ್‌ನ ಫವಾದ್ ಮಿರ್ಜಾ, ಗಾಲ್ಫ್‌ನ ಅದಿತಿ ಅಶೋಕ್, ಪ್ರಣವಿ ಎಸ್. ಅರಸ್, ಹಾಕಿ ಆಟಗಾರ ಮೋಹಿತ್ ಹೆಚ್.ಎಸ್., ಶೂಟಿಂಗ್‌ನ ತಿಲೋತ್ತಮಾ ಸೇನ್, ಈಜು ಪಟುಗಳಾದ ಆಕಾಶ್ ಮಣಿ, ಶ್ರೀಹರಿ ನಟರಾಜ್, ದಕ್ಷಿಣ್ ಎಸ್., ಅನೀಶ್ ಗೌಡ, ಟೇಬಲ್ ಟೆನ್ನಿಸ್‌ನ ಯಶಸ್ವಿನಿ ಘೋರ್ಪಡೆ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್‌ನ ದೀಪು ಮಲ್ಲೇಶ್ ಅವರು ಈ ಲಾಭ ಪಡೆಯಲಿದ್ದಾರೆ.  

​ನಗದು ಪುರಸ್ಕಾರ ಮೊತ್ತ ಭಾರಿ ಹೆಚ್ಚಳ
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರ ಮೊತ್ತವನ್ನು ರಾಜ್ಯ ಸರ್ಕಾರವು ಪರಿಷ್ಕರಿಸಿ ಗಮನಾರ್ಹವಾಗಿ ಹೆಚ್ಚಿಸಿದೆ. ಈ ಹಿಂದೆ ಚಿನ್ನದ ಪದಕಕ್ಕೆ 35.00 ಲಕ್ಷ ರೂಪಾಯಿ, ಬೆಳ್ಳಿ ಪದಕಕ್ಕೆ 25.00 ಲಕ್ಷ ರೂಪಾಯಿ ಹಾಗೂ ಕಂಚಿನ ಪದಕಕ್ಕೆ 15.00 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಇದೀಗ ಪರಿಷ್ಕೃತ ಆದೇಶದಂತೆ ಚಿನ್ನದ ಪದಕ ವಿಜೇತರಿಗೆ 1.00 ಕೋಟಿ ರೂಪಾಯಿಗಳು, ಬೆಳ್ಳಿ ಪದಕ ವಿಜೇತರಿಗೆ 75.00 ಲಕ್ಷ ರೂಪಾಯಿಗಳು ಮತ್ತು ಕಂಚಿನ ಪದಕ ವಿಜೇತರಿಗೆ 50.00 ಲಕ್ಷ ರೂಪಾಯಿಗಳ ಬಹುಮಾನವನ್ನು ನಿಗದಿಪಡಿಸಲಾಗಿದೆ. 

​ಪರಿಷ್ಕೃತ ಬಹುಮಾನ ಪಡೆದ ಪದಕ ವಿಜೇತರು

ಈ ಬಾರಿ ಪದಕ ಗೆದ್ದ 08 ಕ್ರೀಡಾಪಟುಗಳಿಗೆ ಹೆಚ್ಚಿಸಿದ ನಗದು ಬಹುಮಾನದ ಜೊತೆಗೆ, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ನೀಡಲಾಗುವ 5.00 ಲಕ್ಷ ರೂಪಾಯಿಗಳ ಹೆಚ್ಚುವರಿ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತಿದೆ.  

​ಶ್ರೇಯಾಂಕಾ ಆರ್. ಪಾಟೀಲ್ ಕ್ರಿಕೆಟ್ -ಮಹಿಳಾ ತಂಡ: ಚಿನ್ನದ ಪದಕಕ್ಕಾಗಿ 1.00 ಕೋಟಿ ರೂಪಾಯಿಗಳು ಸಿಗಲಿದೆ 
​ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್): 4x400 ಮಹಿಳಾ ರಿಲೇಯಲ್ಲಿ ಚಿನ್ನ ರೂ. 1.00 ಕೋಟಿ ಹಾಗೂ 4x400 ಮಿಕ್ಸ್‌ಡ್ ರಿಲೇಯಲ್ಲಿ ಬೆಳ್ಳಿ ರೂ. 75.00 ಲಕ್ಷ ಪಡೆದು ಒಟ್ಟು 1.75 ಕೋಟಿ ರೂಪಾಯಿಗಳ ನಗದು ಪುರಸ್ಕಾರ.  

​ಪ್ರಣವಿ ಎಸ್. ಅರಸ್ ಗಾಲ್ಫ್ ಆಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ರೂ. 1.00 ಕೋಟಿ ರೂಪಾಯಿಗಳು. ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ರೂ. 75.00 ಲಕ್ಷ ಪಡೆದು ಒಟ್ಟು 1.75 ಕೋಟಿ ರೂಪಾಯಿಗಳ ನಗದು ಪುರಸ್ಕಾರ, ಮೋಹಿತ್ ಹೆಚ್.ಎಸ್. ಹಾಕಿ- ಪುರುಷರ ತಂಡ ಚಿನ್ನದ ಪದಕಕ್ಕಾಗಿ 1.00 ಕೋಟಿ ರೂಪಾಯಿಗಳು. ​ತಿಲೋತ್ತಮಾ ಸೇನ್ ಶೂಟಿಂಗ್- 50ಮೀ ರೈಫಲ್ ತಂಡ: ಬೆಳ್ಳಿ ಪದಕಕ್ಕಾಗಿ 75.00 ಲಕ್ಷ ರೂಪಾಯಿಗಳು, ಅದಿತಿ ಅಶೋಕ್ ಗಾಲ್ಫ್ -ಮಹಿಳಾ ತಂಡ ಬೆಳ್ಳಿ ಪದಕಕ್ಕಾಗಿ 75.00 ಲಕ್ಷ ರೂಪಾಯಿ, ಆಯುಷ್ ಶೆಟ್ಟಿ ಬ್ಯಾಡ್ಮಿಂಟನ್ -ಪುರುಷರ ತಂಡ ಕಂಚಿನ ಪದಕಕ್ಕಾಗಿ 50.00 ಲಕ್ಷ ರೂಪಾಯಿಗಳ, ಸ್ನೇಹಾ ಎಸ್.ಎಸ್. ಅಥ್ಲೆಟಿಕ್ಸ್ -4x100 ರಿಲೇ: ಕಂಚಿನ ಪದಕಕ್ಕಾಗಿ 50.00 ಲಕ್ಷ ನಗದು ಪುರಸ್ಕಾರ ಪಡೆದಿದ್ದಾರೆ.

​ನೇರ ನೇಮಕಾತಿ ಹಾಗೂ ಕ್ರೀಡಾಪಟುಗಳಿಗೆ 2% ಮೀಸಲಾತಿ ಜಾರಿ

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಅರ್ಹ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರದ 'ಗುಂಪು-ಬಿ' ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಈ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ, ದಿನಾಂಕ 03-10-2026 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಎಲ್ಲಾ ಹಂತದ ಗುಂಪು-ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇಕಡಾ 2% ಮೀಸಲಾತಿಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.  

​'ಗುರಿ: ಒಲಿಂಪಿಕ್ಸ್' ಯೋಜನೆಗೆ ಸೇರ್ಪಡೆ

ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು 2026-27ನೇ ಸಾಲಿನ 'ಗುರಿ ಒಲಿಂಪಿಕ್ಸ್' ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಪೂರ್ವ ತರಬೇತಿ ಮತ್ತು ಸಿದ್ಧತೆಗಾಗಿ ಪ್ರಸ್ತುತ ಸಾಲಿನಲ್ಲಿ ತಲಾ 10.00 ಲಕ್ಷ ರೂಪಾಯಿಗಳ ನಗದು ಪ್ರೋತ್ಸಾಹ ಧನ ನೀಡಲಾಗುವುದು‌ ಎಂದು ಪ್ರಕಟಣೆ ತಿಳಿಸಲಾಗಿದೆ. 
 

Add Zee News as a Preferred Source
TAGS:
Asian Games