• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

ಮನ್ಮುಲ್ ಹಗರಣ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿ ಆಗುತ್ತಿದ್ದು ಒಂದೆಡೆ ಶಾಸಕ ಹೆಚ್. ಟಿ.ಮಂಜು V/S ಡಾಲು ರವಿ ನಡುವೆ ರಾಜಕೀಯ ವೈಷಮ್ಯ.. ಮತ್ತೊಂದೆಡೆ ಶಾಸಕ ಹಾಗೂ ಮನ್ಮುಲ್ ನಿರ್ದೇಶಕನ ನಡುವಿನ ವಾಕ್ಸಮರ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ.

Written ByYashaswini V
Published: Oct 06, 2026, 03:19 PM IST|Updated: Oct 06, 2026, 03:21 PM IST
joinshare
ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಜಿಮ್ ಟ್ರೈನರ್ ಕೊ*ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ : ಎದೆ ಮೇಲೆ ಕಚ್ಚಿದ ಗುರುತು, ಬಾತ್‌ರೂಮ್‌ನಲ್ಲಿ ಒಟ್ಟಿಗೆ

ಜಿಮ್ ಟ್ರೈನರ್ ಕೊ*ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ : ಎದೆ ಮೇಲೆ ಕಚ್ಚಿದ ಗುರುತು, ಬಾತ್‌ರೂಮ್‌ನಲ್ಲಿ ಒಟ್ಟಿಗೆ

2

Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

3

ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ನಿಯಮ: 2026ರ ಹೊಸ SOP ಜಾರಿ

4

ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ

5

ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮನ್ಮುಲ್ ಹಗರಣ ವಿಚಾರ ಇದೀಗ ಶಾಸಕ ಹಾಗೂ ನಿರ್ದೇಶಕರ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮಹಿಳಾ ಅಧಿಕಾರಿಗೆ ಬೆದರಿಕೆ ಆರೋಪದ ಬಗ್ಗೆ ತನಿಖೆಗೆ ಶಾಸಕ ಹೆಚ್.ಟಿ. ಮಂಜು ಆಗ್ರಹಿಸಿದ್ದಾರೆ. ಇತ್ತ, ಆರೋಪ ನಿರಾಕರಿಸಿರುವ ಮನ್ಮುಲ್ ನಿರ್ದೇಶಕ ಡಾಲು ರವಿ, ಇದು ರಾಜಕೀಯ ಪಿತೂರಿ ಎಂದು ತಿರುಗೇಟು ನೀಡಿದ್ದಾರೆ.

ಹೌದು, ಮನ್ಮುಲ್ ನಿರ್ದೇಶಕ ಡಾಲು ರವಿ ವಿರುದ್ಧ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಅಧಿಕಾರಿ ತಮ್ಮ ನೋವನ್ನು ಶಾಸಕ ಹೆಚ್.ಟಿ.ಮಂಜು ಬಳಿ ತೋಡಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸೂಚಿಸಿದ್ದಾಗಿ ಶಾಸಕರು ಹೇಳಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಅಧಿಕಾರದ ದುರುಪಯೋಗ ಹಾಗೂ ಗುಣಮಟ್ಟದ ಹಾಲನ್ನು ಫೇಲ್ ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆಗೆ ಶಾಸಕ ಮಂಜು ಆಗ್ರಹಿಸಿದ್ದಾರೆ.

ಶಾಸಕರ ಆರೋಪ ತಳ್ಳಿ ಹಾಕಿದ ಡಾಲು ರವಿ:
ಆದ್ರೆ, ಶಾಸಕ ಹೆಚ್.ಟಿ.ಮಂಜು ಆರೋಪಗಳನ್ನು ಡಾಲು ರವಿ ತಳ್ಳಿಹಾಕಿದ್ದಾರೆ. ಯಾವುದೇ ಅಧಿಕಾರಿಗೆ ಬೆದರಿಕೆ ಹಾಕಿಲ್ಲ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಗದರಿಸಿ ಕೆಲಸ ಮಾಡಿಸಿದ್ದಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಆತ ನನ್ನ ವಿರುದ್ದ ಮನ್ಮುಲ್ ಚುನಾವಣೆಯಲ್ಲಿ ಹತಾಶನಾಗಿದ್ದಾನೆ. ನಾನು 2028 ಕ್ಕೆ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಗ್ತಿನಿ ಅಂತಾ. ನನ್ನನ್ನು ಈ ರೀತಿ ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದು ಈ ರೀತಿ ಆರೋಪ ಮಾಡುತ್ತಿದ್ದಾರೆ. ಆಕೆ ಭ್ರಷ್ಟ  ಅಧಿಕಾರಿಯಾಗಿದ್ದು ಕಮೀಷನ್ ದಂಧೆಯಲ್ಲಿದ್ದಾಳೆ. ಅಂತಹ  ಭ್ರಷ್ಟ ಅಧಿಕಾರಿಗೆ ಗದರಿ ನಮ್ಮ ತಾಲೂಕಿನ ಡೈರಿಗಳ ಕೆಲಸ ಮಾಡಿದ್ದೇನೆ. ಈಗ ಈತ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆ ಮಹಿಳಾ ಅಧಿಕಾರಿ ಎತ್ತಿ ಕಟ್ಟಿದ್ದಾರೆ. ಈತ ಕ್ಷೇತ್ರದಲ್ಲಿ ಶಾಸಕನಾಗಿ ಅಕ್ರಮ ಗಣಿಗಾರಿಕೆ ಕಮಿಷನ್ ಧಂಧೆ ಮಾಡ್ತಿದ್ದಾನೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಂದ್ರೆ ಈತನ ಎಲ್ಲಾ ದಂಧೆ ಅಕ್ರಮಗಳನ್ನು ಬಿಚ್ಚಿಡುವುದಾಗಿ ಮನ್ಮುಲ್ ನಿರ್ದೇಶಕ ಡಾಲು ರವಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ  ಮನ್ಮುಲ್ ವಿಚಾರ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದ್ದು. ಶಾಸಕ ಹೆಚ್. ಟಿ.ಮಂಜು V/S ಡಾಲು ರವಿ ನಡೂವೆ ರಾಜಕೀಯ ವೈಷಮ್ಯ ಎದುರಾಗಿದೆ. ಬೆದರಿಕೆ ಆರೋಪ ಹಾಗೂ ಹಾಲಿನ ಗುಣಮಟ್ಟದ ವಿವಾದದ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣ ಖಂಡಿಸಿ ಪ್ರೊಟೆಸ್ಟ್.:
ಇನ್ನು ಮನ್ಮುಲ್‌ ಹಾಲಿನ ಪುಡಿ ಕಲಬೆರಕೆ ಪ್ರಕರಣವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ಮಂಡ್ಯದ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಜಿಲ್ಲೆಯ ರೈತರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಮನ್ಮುಲ್ ನಲ್ಲಿ ಹಗರಣದ ಮೇಲೆ ಹಗರಣ ನಡೆಯುತ್ತಿವೆ. ಹಾಲಿನ ಪುಡಿ ಕಲಬೆರಕೆ ಪ್ರಕರಣದ ಹಿಂದೆ ಕಾಣದ ಕೈವಾಡ ಇದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ರೈತರಿಗೆ 2 ರೂ. ಪ್ರೋತ್ಸಾಹ ಧನ ನೀಡಲು ಆಗಲ್ಲ ಕೋಟ್ಯಾಂತರ ರೂ. ಹಗರಣ ಮಾಡ್ತಾರೆ. ಈ ಪ್ರಕರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. 

Add Zee News as a Preferred Source
TAGS:
Karnataka Politics
Kannada News