• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ

ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ

premada oorali: ‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’! ರುಕ್ಮಿಣಿ ವಸಂತ್‌ಗಾಗಿ ಬರೆಯಲಾಗಿದ್ದ ಕಥೆ ಈಗ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ!

Written ByRamya. R. Gowda
Published: Oct 06, 2026, 02:46 PM IST|Updated: Oct 06, 2026, 02:53 PM IST
joinshare
ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

Train Ticket Booking: ದಶಕಗಳ ಹಿಂದಿನ ಪಿಎನ್‌ಆರ್‌ ನಿಯಮ ಬದಲಿಸಲು ಮುಂದಾದ ಭಾರತೀಯ ರೈಲ್ವೆ

2

ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆಗೆ ಹೊಸ ನಿಯಮ: 2026ರ ಹೊಸ SOP ಜಾರಿ

3

ರೆಬೆಲ್ ಸ್ಟಾರ್ ದಿವಂಗತ ಅಂಬರೀಶ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವಂತೆ ಮನವಿ

4

ರಾಜಕೀಯ ಕೆಸರಾಟಕ್ಕೆ ಸಾಕ್ಷಿ ಆಗ್ತಿದೆ ಮನ್ಮುಲ್ ಹಗರಣ!

5

ರುಕ್ಮಿಣಿ ವಸಂತ್‌ಗಾಗಿಯೇ ತಯಾರಾದ "ಪ್ರೇಮದ ಊರಲಿ" ಆದರೆ ಕೊನೆ ಕ್ಷಣದಲ್ಲಿ ನಡೆದಿದ್ದೇ ಬೇರೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’! ರುಕ್ಮಿಣಿ ವಸಂತ್‌ಗಾಗಿ ಬರೆಯಲಾಗಿದ್ದ ಕಥೆ ಈಗ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ!


ಸ್ಯಾಂಡಲ್‌ವುಡ್‌ ಬಾಕ್ಸಾಫೀಸ್‌ನಲ್ಲಿ ಸದ್ಯ ಸದ್ದು ಮಾಡ್ತಿರೋ ಸಿನಿಮಾ ಅಂದ್ರೆ ‘ಪ್ರೇಮದ ಊರಲಿ’. ಕೇವಲ 10 ದಿನಗಳಲ್ಲೇ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಸಿನಿಮಾ ಈಗ ಹಾಟ್ ಟಾಪಿಕ್ ಆಗಿದೆ. ಆದ್ರೆ ಇದೇ ಸಿನಿಮಾದ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ನಟಿ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಅಷ್ಟೇ ಅಲ್ಲ, ಸಿನಿಮಾಗೆ ಅವರ ಹೆಸರನ್ನೇ ಟೈಟಲ್ ಆಗಿ ಇಡೋ ಪ್ಲಾನ್ ಕೂಡ ಇತ್ತಂತೆ.ಹಾಗಾದ್ರೆ ‘ರುಕ್ಮಿಣಿ ವಸಂತ’ ಅನ್ನೋ ಟೈಟಲ್ ಹುಟ್ಟಿದ್ದು ಹೇಗೆ? ಯಾಕೆ ಆಮೇಲೆ ‘ಪ್ರೇಮದ ಊರಲಿ’ ಆಯ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.


ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಪ್ರೇಮದ ಊರಲಿ’ ಸಿನಿಮಾದದ್ದೇ ಹವಾ ಜೋರಾಗಿದೆ ಮನೋಜ್ ಕುಮಾರ್ ನಿರ್ದೇಶನ, ಶ್ರೀರಾಮ್ ಅಭಿನಯದ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಕೇವಲ 10 ದಿನಗಳಲ್ಲಿ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದ್ದು, ಇದೇ ಸಮಯದಲ್ಲಿ ಸಿನಿಮಾಗೆ ಸಂಬಂಧಿಸಿದ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ.


‘ಪ್ರೇಮದ ಊರಲಿ’ಗೆ ಮೊದಲು ‘ರುಕ್ಮಿಣಿ ವಸಂತ’!
ಹೌದು.. ‘ಪ್ರೇಮದ ಊರಲಿ’ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಬೇಕಿತ್ತಂತೆ.ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ರುಕ್ಮಿಣಿ ವಸಂತ್ ಅವರ ಅಭಿನಯದ ಮೇಲೆ ಅಪಾರ ಅಭಿಮಾನವಿತ್ತು.ಹೀಗಾಗಿ ಕಥೆ ಬರೆಯುವಾಗಲೇ ಪ್ರಮುಖ ನಾಯಕಿಯ ಪಾತ್ರವನ್ನು ರುಕ್ಮಿಣಿ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿತ್ತು.ಇಷ್ಟೇ ಅಲ್ಲ.. ಆರಂಭದಲ್ಲಿ ಸಿನಿಮಾಗೆ ‘ರುಕ್ಮಿಣಿ ವಸಂತ’ ಎಂದೇ ಟೈಟಲ್ ಇಡಲು ಚಿತ್ರತಂಡ ಪ್ಲಾನ್ ಮಾಡಿತ್ತು.ಆದ್ರೆ ಈ ಟೈಟಲ್‌ನ ಹಿಂದೆ ಇದ್ದದ್ದು ನಟಿಯ ಹೆಸರಷ್ಟೇ ಅಲ್ಲ.. ಕಥೆಯಲ್ಲಿದ್ದ ಇಬ್ಬರು ಪಾತ್ರಗಳ ಹೆಸರೂ ಇದೇ ಆಗಿತ್ತು. ಸಿನಿಮಾದ ಕಥೆಯಲ್ಲಿ ಇಬ್ಬರು ಪ್ರಮುಖ ನಾಯಕಿಯರ ಪಾತ್ರಗಳಿದ್ದವು. ಒಂದು ಪಾತ್ರಕ್ಕೆ ‘ರುಕ್ಮಿಣಿ’ ಅಂತ ಹೆಸರಿಟ್ಟಿದ್ರೆ, ಮತ್ತೊಂದು ಪಾತ್ರಕ್ಕೆ ‘ವಸಂತ’ ಅಂತ ಹೆಸರಿಡಲಾಗಿತ್ತು. ಈ ಎರಡು ಪಾತ್ರಗಳ ಹೆಸರುಗಳನ್ನು ಸೇರಿಸಿ ‘ರುಕ್ಮಿಣಿ ವಸಂತ’ ಎಂಬ ಟೈಟಲ್ ಇಡಲಾಗಿತ್ತು.


ಇದರ ಜೊತೆಗೆ ನಿರ್ದೇಶಕರಿಗೆ ನಟಿ ರುಕ್ಮಿಣಿ ವಸಂತ್ ಅವರ ಮೇಲಿದ್ದ ಅಭಿಮಾನವೂ ಈ ಶೀರ್ಷಿಕೆಗೆ ಮತ್ತೊಂದು ಕಾರಣವಾಗಿತ್ತು. ಹೀಗಾಗಿ ನಟಿಯ ಹೆಸರು ಹಾಗೂ ಕಥೆಯ ಪಾತ್ರಗಳು ಎರಡನ್ನೂ ಗಮನದಲ್ಲಿಟ್ಟುಕೊಂಡು ಈ ಟೈಟಲ್ ಫೈನಲ್ ಮಾಡುವ ಯೋಚನೆ ಮಾಡಲಾಗಿತ್ತು.


ಆದ್ರೆ ಸಿನಿಮಾ ಶುರುವಾಗುವ ವೇಳೆಗೆ ರುಕ್ಮಿಣಿ ವಸಂತ್ ಬೇರೆ ದೊಡ್ಡ ಬಜೆಟ್ ಹಾಗೂ ಪರಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.ಕಾಲ್‌ಶೀಟ್ ಹಾಗೂ ಡೇಟ್‌ಗಳ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಇದರ ಜೊತೆಗೆ ‘ಪ್ರೇಮದ ಊರಲಿ’ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗ್ತಿದ್ದ ಕಾರಣ, ರುಕ್ಮಿಣಿ ಅವರನ್ನು ಸಿನಿಮಾಗೆ ಕರೆತರಲು ಸಾಧ್ಯವಾಗಲಿಲ್ಲ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಾಗದಿದ್ದರೂ, ನಿರ್ದೇಶಕರು ಮಾತ್ರ ಅವರ ಮೇಲಿನ ಅಭಿಮಾನವನ್ನ ಬಿಟ್ಟುಕೊಡಲಿಲ್ಲ. ಕಥೆಯಲ್ಲಿದ್ದ ಇಬ್ಬರು ನಾಯಕಿಯರ ಹೆಸರುಗಳಾದ ‘ರುಕ್ಮಿಣಿ’ ಮತ್ತು ‘ವಸಂತ’ ಅನ್ನೇ ಉಳಿಸಿಕೊಂಡರು.

ಆದ್ರೆ ಸಿನಿಮಾದ ಟೈಟಲ್ ಮಾತ್ರ ಬದಲಾಯ್ತು.‘ರುಕ್ಮಿಣಿ ವಸಂತ’ ಎನ್ನುವ ಶೀರ್ಷಿಕೆಗೆ ಬದಲಾಗಿ ‘ಪ್ರೇಮದ ಊರಲಿ’ ಅನ್ನೋ ಟೈಟಲ್ ಫೈನಲ್ ಆಯ್ತು.ಹೀಗೆ ರುಕ್ಮಿಣಿ ವಸಂತ್ ಅವರ ಹೆಸರಿನೊಂದಿಗೆ ಆರಂಭವಾದ ಒಂದು ಕಥೆ, ಇಂದು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿರುವ ‘ಪ್ರೇಮದ ಊರಲಿ’ ಆಗಿ ಪ್ರೇಕ್ಷಕರ ಮುಂದೆ ಬಂದಿದೆ.ಇನ್ನು ಸದ್ಯ ಸಿನಿಮಾದಲ್ಲಿ ನಟಿ ತಪಸ್ವಿನಿ ಪೂಣಚ್ಚ ‘ರುಕ್ಮಿಣಿ’ ಪಾತ್ರದಲ್ಲಿ ಮಿಂಚಿದ್ರೆ, ರಮಿಕಾ ಶಿವು ‘ವಸಂತ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗಾಗಿ ತೆರೆಮೇಲೆ ರುಕ್ಮಿಣಿ ವಸಂತ್ ಇಲ್ಲದಿದ್ದರೂ.. ಅವರ ಹೆಸರಿನ ಕನೆಕ್ಷನ್ ಮಾತ್ರ ಸಿನಿಮಾದ ಕಥೆಯಲ್ಲಿ ಹಾಗೆಯೇ ಉಳಿದಿದೆ.


ಹೀಗೆ ರುಕ್ಮಿಣಿ ವಸಂತ್‌ಗಾಗಿ ರೂಪುಗೊಂಡಿದ್ದ ಕಥೆ, ಕೊನೆಗೆ ‘ಪ್ರೇಮದ ಊರಲಿ’ ಆಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ

Add Zee News as a Preferred Source
TAGS:
Cinema