• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಆರಂಭದಲ್ಲೇ ಸಿಕ್ಸರ್‌ಗಳ ಸುರಿಮಳೆ! ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮಾ!

ಆರಂಭದಲ್ಲೇ ಸಿಕ್ಸರ್‌ಗಳ ಸುರಿಮಳೆ! ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮಾ!

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾದರೂ, ಅಭಿಷೇಕ್ ಶರ್ಮಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲಿ 14 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಅವರ 13 ಸಿಕ್ಸರ್‌ಗಳ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಎರಡನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ ಬಾರಿಸಿ ಭಾರತಕ್ಕೆ ಉತ್ತಮ ಕೊಡುಗೆ ನೀಡಿದರು.

Written ByPuttaraj K Alur
Published: Oct 12, 2026, 10:49 AM IST|Updated: Oct 12, 2026, 11:00 AM IST
joinshare
ಆರಂಭದಲ್ಲೇ ಸಿಕ್ಸರ್‌ಗಳ ಸುರಿಮಳೆ! ವಿಶ್ವ ದಾಖಲೆ ಮುರಿದ ಅಭಿಷೇಕ್ ಶರ್ಮಾ!
Image Credit: Abhishek Sharma

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಕೇಂದ್ರ ಸಚಿವ ವಿ.ಸೋಮಣ್ಣನಿಗೆ ಶಿವಮೊಗ್ಗದಲ್ಲಿ ಪ್ರತಿಭಟನೆ ಬಿಸಿ

ಕೇಂದ್ರ ಸಚಿವ ವಿ.ಸೋಮಣ್ಣನಿಗೆ ಶಿವಮೊಗ್ಗದಲ್ಲಿ ಪ್ರತಿಭಟನೆ ಬಿಸಿ

2

ಮಂಡ್ಯದ ಕೆನ್ನಾಳು ಸರ್ಕಾರಿ ಶಾಲೆಯಲ್ಲಿ ಅಗ್ನಿ ಅವಘಡ, ಪೀಠೋಪಕರಣಗಳು ಸುಟ್ಟು ಭಸ್ಮ!

3

ದಸರಾ ಸಂಭ್ರಮದ ನಡುವೆ ಪರೀಕ್ಷೆ ಕಿರಿಕ್‌.. ನವರಾತ್ರಿ ಹೊತ್ತಲ್ಲಿ ಪರೀಕ್ಷೆ ಆಯೋಜನೆಗೆ ವಿದ್ಯಾರ್ಥಿಗಳ ಆಕ್ರೋಶ

4

ʼಸ್ವಚ್ಛ ರಾಜಕಾರಣ ಮಾಡುತ್ತಿರುವೆʼ ಎನ್ನುವ ಸಚಿವ ಕೃಷ್ಣ ಭೈರೇಗೌಡರೇ... ಇದು ನಿಜವಾಗಿಯೂ ಎಷ್ಟು ಸತ್ಯ?

5

ಅಮಿರ್ ಖಾನ್ ಸೊಸೆಯ ಮೇಲೆ ಹಲ್ಲೆ ನಡೆದಿತ್ತಾ? ಬಿಡುಗಡೆಯಾದ ಬೆನ್ನಲ್ಲೇ ವಿಡಿಯೋ ಹಂಚಿಕೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Abhishek Sharma World Record: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರೂ, ಮೊದಲ ಓವರ್‌ನಲ್ಲಿ ಸಿಕ್ಸರ್‌ಗಳನ್ನ ಬಾರಿಸುವ ವಿಚಾರದಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ಗುರುತಿಸಿಕೊಂಡಿರುವ ಅಭಿಷೇಕ್, ಐರ್ಲೆಂಡ್‌ನ ಅನುಭವಿ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ಅವರ ದಾಖಲೆಯನ್ನ ಹಿಂದಿಕ್ಕಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಆರಂಭ, ಆದರೆ ದೊಡ್ಡ ಇನ್ನಿಂಗ್ಸ್ ಇಲ್ಲ!

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾರಿಂದ ಅಭಿಮಾನಿಗಳು ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿದ್ದರು. ಆದರೆ ಆರಂಭಿಕ ಎರಡು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರೂ ಅದನ್ನ ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಕೇವಲ 10 ಎಸೆತಗಳನ್ನ ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 21 ರನ್ ಗಳಿಸಿದ್ದರು. 

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ಅವರು, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಇನ್ನು ಸರಣಿಯ ಎರಡನೇ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ಮುಂದುವರಿಯಿತು. 12 ಎಸೆತಗಳನ್ನ ಎದುರಿಸಿದ ಅಭಿಷೇಕ್, 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 20 ರನ್ ಗಳಿಸಿದರು. ಮತ್ತೊಮ್ಮೆ ಉತ್ತಮ ಆರಂಭ ಪಡೆದರೂ ದೊಡ್ಡ ಇನ್ನಿಂಗ್ಸ್ ಕಟ್ಟುವ ಅವಕಾಶವನ್ನು ಕೈಚೆಲ್ಲಿದರು. ಎರಡೂ ಪಂದ್ಯಗಳಲ್ಲಿ ಅಭಿಷೇಕ್ ಅವರ ವೈಯಕ್ತಿಕ ಸ್ಕೋರ್ ಕಡಿಮೆಯಿದ್ದರೂ, ಆರಂಭಿಕ ಓವರ್‌ಗಳಲ್ಲಿ ಬೌಲರ್‌ಗಳ ಮೇಲೆ ಒತ್ತಡ ಹೇರುವ ಅವರ ಸಾಮರ್ಥ್ಯ ಮತ್ತೊಮ್ಮೆ ಗಮನ ಸೆಳೆದಿದೆ.

ಮೊದಲ ಓವರ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ಗಳ ವಿಶ್ವ ದಾಖಲೆ

ಅಭಿಷೇಕ್ ಶರ್ಮಾರ ಈ ದಾಖಲೆ ವಿಶೇಷ ಗಮನ ಸೆಳೆಯಲು ಕಾರಣ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಅತಿಹೆಚ್ಚು ಸಿಕ್ಸರ್‌ಗಳನ್ನ ಬಾರಿಸಿದ ಆಟಗಾರ ಎಂಬ ದಾಖಲೆ ಅಭಿಷೇಕ್ ಹೆಸರಿಗೆ ಸೇರಿದೆ ಎಂದು ವರದಿಯಾಗಿದೆ. ಅವರು ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಓವರ್‌ನಲ್ಲಿ ಒಟ್ಟು 14 ಸಿಕ್ಸರ್‌ಗಳನ್ನ ಬಾರಿಸಿದ್ದಾರೆ. ಈ ಮೂಲಕ ಈ ಹಿಂದೆ 13 ಸಿಕ್ಸರ್‌ಗಳೊಂದಿಗೆ ದಾಖಲೆ ಹೊಂದಿದ್ದ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಅವರನ್ನ ಹಿಂದಿಕ್ಕಿದ್ದಾರೆ.

ಸಾಮಾನ್ಯವಾಗಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಬ್ಯಾಟರ್‌ಗಳು ಪಿಚ್‌ನ ಸ್ವರೂಪ, ಬೌಲರ್‌ನ ವೇಗ ಮತ್ತು ಚೆಂಡಿನ ಚಲನೆಯನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅಭಿಷೇಕ್ ಆರಂಭದಿಂದಲೇ ದೊಡ್ಡ ಹೊಡೆತಗಳಿಗೆ ಮುಂದಾಗುವ ಮೂಲಕ ತಮ್ಮದೇ ಆದ ಆಟದ ಶೈಲಿಯನ್ನ ರೂಪಿಸಿಕೊಂಡಿದ್ದಾರೆ. ಅವರ ನಿರ್ಭೀತ ಬ್ಯಾಟಿಂಗ್ ಎದುರಾಳಿ ತಂಡದ ಬೌಲರ್‌ಗಳಿಗೆ ಆರಂಭದಲ್ಲೇ ಸವಾಲು ಒಡ್ಡುತ್ತದೆ. ಈ ರೀತಿಯ ದಾಖಲೆಗಳು ಅಭಿಷೇಕ್ ಅವರ ಆಕ್ರಮಣಕಾರಿ ಆಟದ ಸಾಮರ್ಥ್ಯವನ್ನ ತೋರಿಸಿದರೂ, ಆರಂಭವನ್ನ ದೊಡ್ಡ ಇನ್ನಿಂಗ್ಸ್‌ಗಳಾಗಿ ಪರಿವರ್ತಿಸುವುದು ಮುಂದಿನ ದಿನಗಳಲ್ಲಿ ಅವರ ಪ್ರಮುಖ ಗುರಿಯಾಗಲಿದೆ.

ಸಂಜು ಸ್ಯಾಮ್ಸನ್ ಜೊತೆ ಉತ್ತಮ ಜೊತೆಯಾಟ

ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಸಂಜು ಸ್ಯಾಮ್ಸನ್ ಜೊತೆಗೂಡಿ ಭಾರತದ ಇನ್ನಿಂಗ್ಸ್‌ಗೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 41 ರನ್‌ಗಳ ಜೊತೆಯಾಟ ನೀಡಿತು. ನಾಲ್ಕು ಓವರ್‌ಗಳ ಅಂತ್ಯದ ವೇಳೆಗೆ ಈ ಜೋಡಿ ಬೇರ್ಪಟ್ಟಿತು. ಅಭಿಷೇಕ್ ಬೇಗನೆ ಔಟಾದರೂ, ಸಂಜು ಸ್ಯಾಮ್ಸನ್ ತಮ್ಮ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟದ ಮೂಲಕ ತಂಡದ ಇನ್ನಿಂಗ್ಸ್‌ಗೆ ಬಲ ತುಂಬಿದರು. ಅವರು ಭರ್ಜರಿ ಅರ್ಧಶತಕ ದಾಖಲಿಸಿ ಭಾರತವನ್ನ ದೊಡ್ಡ ಮೊತ್ತದತ್ತ ಮುನ್ನಡೆಸಿದರು. ಆರಂಭಿಕ ವಿಕೆಟ್‌ಗಳು ಬೇಗನೆ ಪತನಗೊಂಡಾಗ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಸಂಜು ಅವರ ಇನ್ನಿಂಗ್ಸ್ ತಂಡಕ್ಕೆ ಮಹತ್ವದ್ದಾಗಿತ್ತು. ಅಭಿಷೇಕ್ ಮತ್ತು ಸಂಜು ನೀಡಿದ ಆರಂಭವು ಭಾರತದ ರನ್‌ಗತಿಯನ್ನ ಹೆಚ್ಚಿಸಲು ನೆರವಾಯಿತು.

ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ಮೇಲೆ ನಿರೀಕ್ಷೆ

ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಕಡಿಮೆ ಸಮಯದಲ್ಲೇ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮೊದಲ ಓವರ್‌ನಲ್ಲೇ ಬೌಲರ್‌ಗಳ ಮೇಲೆ ದಾಳಿ ನಡೆಸುವ ಅವರ ಸಾಮರ್ಥ್ಯ ಟಿ20 ಮಾದರಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಬೇಕಾದರೆ ಆರಂಭಿಕ ರನ್‌ಗಳನ್ನ ಅರ್ಧಶತಕ ಅಥವಾ ಶತಕದಂತಹ ದೊಡ್ಡ ವೈಯಕ್ತಿಕ ಮೊತ್ತಗಳಾಗಿ ಪರಿವರ್ತಿಸುವ ಅಗತ್ಯವೂ ಇದೆ.

ವೆಸ್ಟ್ ಇಂಡೀಸ್ ವಿರುದ್ಧದ ಮುಂದಿನ ಪಂದ್ಯಗಳಲ್ಲಿ ಅಭಿಷೇಕ್ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ವಿಶ್ವ ದಾಖಲೆ ನಿರ್ಮಿಸಿರುವ ಈ ಯುವ ಆಟಗಾರ ತಮ್ಮ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ತಂಡದ ಗೆಲುವಿಗೂ ದೊಡ್ಡ ಕೊಡುಗೆ ನೀಡುವ ನಿರೀಕ್ಷೆಯಿದೆ. ಒಟ್ನಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗದಿದ್ದರೂ ಮೊದಲ ಓವರ್‌ನಲ್ಲಿ ಸಿಕ್ಸರ್‌ಗಳ ದಾಖಲೆಯ ಮೂಲಕ ಅಭಿಷೇಕ್ ಶರ್ಮಾ ಸುದ್ದಿಯಲ್ಲಿದ್ದಾರೆ. ಈಗ ಅಭಿಮಾನಿಗಳ ಕಣ್ಣು ಅವರ ಮುಂದಿನ ಇನ್ನಿಂಗ್ಸ್‌ನ ಮೇಲಿದೆ.

Add Zee News as a Preferred Source
TAGS:
Cricket
Kannada News