• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!

42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!

AB de Villiers Century : 42ನೇ ವಯಸ್ಸಿನಲ್ಲೂ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಅಬ್ಬರ ಮಾತ್ರ ಕೊಂಚವೂ ತಗ್ಗಿಲ್ಲ. ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ ಎಬಿಡಿ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪಡೆಗೆ 8 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.

Written ByKrishna NK
Published: Oct 09, 2026, 10:27 PM IST|Updated: Oct 09, 2026, 10:28 PM IST
joinshare
42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!
Image Credit: AB de Villiers

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

2

42ನೇ ವಯಸ್ಸಿನಲ್ಲೂ ಮಿಸ್ಟರ್‌ 360 ರೌದ್ರಾವತಾರ: 11 ಸಿಕ್ಸರ್, 40 ಎಸೆತಗಳಲ್ಲಿ 111 ರನ್ ಚಚ್ಚಿದ ಎಬಿಡಿ!

3

ಭಾರತೀಯ ಐಟಿ ಕಂಪನಿಗಳಿಗೆ ʻಟ್ರಂಪಾಘಾತʼ : ʻPERMʼನಿಂದ ಭಾರತೀಯ ಟೆಕ್​ ಕಂಪನಿಗಳು ಔಟ್

4

ಎಚ್ಚರ.. ಎಚ್ಚರ..! ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

5

42ರ ಹರೆಯದಲ್ಲೂ ಎಬಿಡಿ ಅಬ್ಬರ: 37 ಎಸೆತಗಳಲ್ಲಿ ಭರ್ಜರಿ ಶತಕ, ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಆಟ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಅಬ್ಬರ ಮಾತ್ರ ಎಳ್ಳಷ್ಟೂ ಕಡಿಮೆಯಾಗಿಲ್ಲ. ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇವರ ಸ್ಫೋಟಕ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಆಸೀಸ್ ನೀಡಿದ್ದ ಬೃಹತ್ ಗುರಿ
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್, ಡಿ'ಆರ್ಸಿ ಶಾರ್ಟ್ (66 ರನ್) ಹಾಗೂ ನಾಯಕ ಡೇವಿಡ್ ವಾರ್ನರ್ (48 ರನ್) ಅವರ ಜವಾಬ್ದಾರಿಯುತ ಆಟದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ದಕ್ಷಿಣ ಆಫ್ರಿಕಾ ಪರ ಹಾರ್ಡಸ್ ವಿಲ್ಜೋಯೆನ್ 3 ವಿಕೆಟ್ ಪಡೆದು ಮಿಂಚಿದರೆ, ಮಾರ್ಚಂಟ್ ಡಿ ಲ್ಯಾಂಗೆ ಮತ್ತು ಇಮ್ರಾನ್ ತಾಹಿರ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಎಬಿಡಿ ಅಜೇಯ 111 ರನ್ ಅಬ್ಬರ
206 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಬಲ ನೀಡಿತು. ಕೇವಲ 40 ಎಸೆತಗಳನ್ನು ಎದುರಿಸಿದ ಎಬಿಡಿ, 11 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 111 ರನ್ ಚಚ್ಚಿದರು. 42ನೇ ವಯಸ್ಸಿನಲ್ಲೂ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಬೌಂಡರಿಗಳ ಮಳೆ ಹರಿಸಿದ ಡಿವಿಲಿಯರ್ಸ್ ಆಟ ಕಂಡು ಅವರ ಪತ್ನಿ, ಮಕ್ಕಳು ಹಾಗೂ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಸಂಭ್ರಮಿಸಿದರು.

ಇವರಿಗೆ ಅತ್ಯುತ್ತಮ ಸಾಥ್ ನೀಡಿದ ರಿಚರ್ಡ್ ಲಿವಿ 29 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರೆ, ಜೆಪಿ ಡುಮಿನಿ 27 ರನ್ ಕೊಡುಗೆ ನೀಡಿದರು. ಪರಿಣಾಮ ದಕ್ಷಿಣ ಆಫ್ರಿಕಾ ತಂಡವು ಕೇವಲ 15.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ (26ಕ್ಕೆ 2) ಹೊರತುಪಡಿಸಿ ಉಳಿದ ಯಾವುದೇ ಬೌಲರ್‌ಗಳಿಗೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

Add Zee News as a Preferred Source
TAGS:
Cricket