• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಧರ್ಮ
  • /ಸೂರ್ಯಾಸ್ತದ ಬಳಿಕ ತುಳಸಿ ಎಲೆಗಳನ್ನ ಏಕೆ ಕೀಳಬಾರದು ಗೊತ್ತಾ? ಇದರ ಹಿಂದಿದೆ ಪುರಾಣದ ರೋಚಕ ಕಥೆ!

ಸೂರ್ಯಾಸ್ತದ ಬಳಿಕ ತುಳಸಿ ಎಲೆಗಳನ್ನ ಏಕೆ ಕೀಳಬಾರದು ಗೊತ್ತಾ? ಇದರ ಹಿಂದಿದೆ ಪುರಾಣದ ರೋಚಕ ಕಥೆ!

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ಬಳಿಕ ತುಳಸಿ ಎಲೆಗಳನ್ನ ಕೀಳಬಾರದು ಎಂಬ ಸಂಪ್ರದಾಯವಿದೆ. ಸಂಜೆ ವೇಳೆ ಮಹಾಲಕ್ಷ್ಮಿ ವಿಶ್ರಾಂತಿ ಪಡೆಯುತ್ತಾಳೆ ಎಂಬ ನಂಬಿಕೆಯ ಜೊತೆಗೆ, ತುಳಸಿ ಗಿಡವನ್ನ ದೇವಿ ವೃಂದಾಳ ಸ್ವರೂಪವೆಂದು ಪೂಜಿಸಲಾಗುತ್ತದೆ. ದೇವಿ ವೃಂದಾಳ ಪೌರಾಣಿಕ ಕಥೆಯೂ ಈ ಆಚರಣೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

Written ByPuttaraj K Alur
Published: Nov 21, 2026, 16:38 IST|Updated: Nov 21, 2026, 16:57 IST
joinshare
ಸೂರ್ಯಾಸ್ತದ ಬಳಿಕ ತುಳಸಿ ಎಲೆಗಳನ್ನ ಏಕೆ ಕೀಳಬಾರದು ಗೊತ್ತಾ? ಇದರ ಹಿಂದಿದೆ ಪುರಾಣದ ರೋಚಕ ಕಥೆ!
Image Credit: Tulsi Leaves

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Hindu Traditions: ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಮನೆಗಳಲ್ಲಿ ತುಳಸಿ ಗಿಡವನ್ನ ನೆಟ್ಟು ಪ್ರತಿದಿನ ಪೂಜಿಸುವ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಭಗವಾನ್ ವಿಷ್ಣುವಿಗೆ ತುಳಸಿ ಅತ್ಯಂತ ಪ್ರಿಯವಾದುದು ಎಂಬ ನಂಬಿಕೆಯಿದ್ದು, ವಿಷ್ಣುವಿನ ಪೂಜೆ ಮತ್ತು ನೈವೇದ್ಯದಲ್ಲಿ ತುಳಸಿ ದಳಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ಆದರೆ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನ ಕೀಳಬಾರದು ಎಂದು ಹಿರಿಯರು ಹೇಳುವುದನ್ನ ಕೇಳಿರಬಹುದು. ಈ ಸಂಪ್ರದಾಯದ ಹಿಂದೆ ಧಾರ್ಮಿಕ ನಂಬಿಕೆಗಳು ಮತ್ತು ಪುರಾಣದ ಕಥೆಗಳು ಅಡಗಿವೆ.

ಹಿಂದೂ ಸಂಪ್ರದಾಯದ ಪ್ರಕಾರ ತುಳಸಿ ಗಿಡದಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗುತ್ತದೆ. ಹೀಗಾಗಿ ತುಳಸಿ ಗಿಡವನ್ನ ಸಾಮಾನ್ಯ ಸಸ್ಯದಂತೆ ಪರಿಗಣಿಸದೆ ದೇವಿಯ ಸ್ವರೂಪವಾಗಿ ಪೂಜಿಸಲಾಗುತ್ತದೆ. ಅದರಲ್ಲೂ ಸಂಜೆ ಸಮಯದಲ್ಲಿ ತುಳಸಿ ಎಲೆಗಳನ್ನ ಕೀಳಬಾರದು ಎಂಬ ನಿಯಮಕ್ಕೆ ಧಾರ್ಮಿಕವಾಗಿ ಹಲವು ಕಾರಣಗಳನ್ನ ನೀಡಲಾಗಿದೆ.

ಸಂಜೆಯ ಬಳಿಕ ತುಳಸಿ ಎಲೆಗಳನ್ನ ಕೀಳಬಾರದು ಏಕೆ?

ಉಜ್ಜಯಿನಿಯ ಪಂಡಿತ ಹಾಗೂ ಜ್ಯೋತಿಷಿ ಮನೀಶ್ ಶರ್ಮಾ ಅವರ ವಿವರಣೆಯ ಪ್ರಕಾರ, ಸೂರ್ಯಾಸ್ತದ ನಂತರದ ಸಮಯವನ್ನ ಮಹಾಲಕ್ಷ್ಮಿಯ ವಿಶ್ರಾಂತಿಯ ಸಮಯವೆಂದು ಪರಿಗಣಿಸಲಾಗುತ್ತದೆ. ಆ ಸಂದರ್ಭದಲ್ಲಿ ಲಕ್ಷ್ಮಿ ದೇವಿಯು ಭಗವಾನ್ ವಿಷ್ಣುವಿನ ಧ್ಯಾನದಲ್ಲಿ ಲೀನಳಾಗಿರುತ್ತಾಳೆ ಎಂಬ ಧಾರ್ಮಿಕ ನಂಬಿಕೆಯಿದೆ. ಹೀಗಾಗಿ ಸಂಜೆ ವೇಳೆ ತುಳಸಿ ಎಲೆಗಳನ್ನ ಕೀಳುವುದರಿಂದ ದೇವಿಗೆ ನೋವುಂಟಾಗುತ್ತದೆ ಎಂಬ ಭಾವನೆ ಸಂಪ್ರದಾಯದಲ್ಲಿದೆ. ಇದರ ಜೊತೆಗೆ ತುಳಸಿ ಎಲೆಗಳಿಗೆ ಸಂಬಂಧಿಸಿದ ಮತ್ತೊಂದು ಪೌರಾಣಿಕ ನಂಬಿಕೆಯೂ ಇದೆ. ಕೆಲವು ಪುರಾಣ ಕಥೆಗಳ ಪ್ರಕಾರ, ತುಳಸಿ ಎಲೆಗಳು ರಾಧಾದೇವಿಯ ಸ್ವರೂಪವೆಂದು ಪರಿಗಣಿಸಲ್ಪಡುವ ದೇವಿ ವೃಂದಾಳ ಕೇಶದ ಅಂಶಗಳಾಗಿವೆ. ಈ ಕಾರಣದಿಂದಲೂ ಸಂಜೆಯ ವೇಳೆ ತುಳಸಿ ಎಲೆಗಳನ್ನ ಕೀಳುವುದನ್ನ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡದ ಹಿಂದಿರುವ ದೇವಿ ವೃಂದಾಳ ಕಥೆ ಏನು?

ಪೌರಾಣಿಕ ಕಥೆಗಳ ಪ್ರಕಾರ ದೇವಿ ವೃಂದಾ ಭಗವಾನ್ ವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಆಕೆ ತನ್ನ ದೇಹವನ್ನ ತ್ಯಜಿಸಿದ ಬಳಿಕ ಆಕೆಯ ದೇಹದಿಂದ ಗಂಡಕಿ ನದಿ ಹಾಗೂ ಕೂದಲಿನಿಂದ ತುಳಸಿ ಗಿಡ ಉದ್ಭವಿಸಿತು ಎಂಬ ನಂಬಿಕೆಯಿದೆ. ಹೀಗಾಗಿ ತುಳಸಿಯನ್ನ ಕೇವಲ ಒಂದು ಸಸ್ಯವಾಗಿ ನೋಡದೆ ದೇವಿ ವೃಂದಾಳ ಸ್ವರೂಪವೆಂದು ಪೂಜಿಸಲಾಗುತ್ತದೆ. ದೇವಿ ಭಾಗವತ ಪುರಾಣದ ಒಂಬತ್ತನೇ ಸ್ಕಂಧದ 24ನೇ ಅಧ್ಯಾಯದಲ್ಲಿಯೂ ತುಳಸಿಯ ಮಹತ್ವವನ್ನ ವಿವರಿಸಲಾಗಿದೆ ಎಂದು ಜ್ಯೋತಿಷಿ ಮನೀಶ್ ಶರ್ಮಾ ತಿಳಿಸಿದ್ದಾರೆ. ಈ ಅಧ್ಯಾಯದಲ್ಲಿ ಶಂಖಚೂಡ ಮತ್ತು ದೇವಿ ವೃಂದಾಳ ಕಥೆ ಉಲ್ಲೇಖವಾಗಿದೆ.

ಕಥೆಯ ಪ್ರಕಾರ, ದೇವತೆಗಳ ರಕ್ಷಣೆಗಾಗಿ ಭಗವಾನ್ ವಿಷ್ಣು ಶಂಖಚೂಡನ ರೂಪವನ್ನ ಧರಿಸಿ ದೇವಿ ವೃಂದಾಳ ಪತಿವ್ರತಾ ಧರ್ಮಕ್ಕೆ ಭಂಗ ತರುತ್ತಾನೆ. ಇದರಿಂದ ಆಕ್ರೋಶಗೊಂಡ ವೃಂದಾ ವಿಷ್ಣುವಿಗೆ ಕಲ್ಲಾಗುವಂತೆ ಶಾಪ ನೀಡುತ್ತಾಳೆ. ಇದಕ್ಕೆ ಪ್ರತಿಯಾಗಿ ವಿಷ್ಣು ಮುಂದಿನ ಜನ್ಮದಲ್ಲಿ ಆಕೆಯನ್ನ ವಿವಾಹವಾಗುವುದಾಗಿ ವಚನ ನೀಡುತ್ತಾನೆ. ಬಳಿಕ ವೃಂದಾ ತನ್ನ ದೇಹವನ್ನ ತ್ಯಜಿಸಿದಾಗ ಆಕೆಯ ಕೂದಲಿನಿಂದ ತುಳಸಿ ಗಿಡ ಹುಟ್ಟಿಕೊಂಡಿತು ಎಂಬುದು ಪೌರಾಣಿಕ ನಂಬಿಕೆ.

ತುಳಸಿಗೆ ಗೌರವ ನೀಡುವ ಸಂಪ್ರದಾಯ

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಜೆಯ ಸಮಯ ದೇವಾನುದೇವತೆಗಳ ವಿಶ್ರಾಂತಿಯ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ತುಳಸಿ ಎಲೆಗಳನ್ನ ಕೀಳುವುದರಿಂದ ಲಕ್ಷ್ಮಿ ದೇವಿಗೆ ನೋವಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಸೂರ್ಯಾಸ್ತದ ನಂತರ ತುಳಸಿ ದಳಗಳನ್ನ ಕೀಳದಿರುವ ಸಂಪ್ರದಾಯವನ್ನ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ.

ಒಟ್ನಲ್ಲಿ ತುಳಸಿ ಗಿಡಕ್ಕೆ ನೀಡುವ ಗೌರವ, ದೇವಿ ವೃಂದಾಳ ಪೌರಾಣಿಕ ಹಿನ್ನೆಲೆ ಮತ್ತು ಮಹಾಲಕ್ಷ್ಮಿಯ ಕುರಿತ ನಂಬಿಕೆಗಳು ಸಂಜೆ ವೇಳೆ ತುಳಸಿ ಎಲೆಗಳನ್ನ ಕೀಳಬಾರದು ಎಂಬ ಆಚರಣೆಯೊಂದಿಗೆ ಬೆಸೆದುಕೊಂಡಿವೆ. ಈ ಮಾಹಿತಿಗಳು ಧಾರ್ಮಿಕ ನಂಬಿಕೆಗಳು ಮತ್ತು ಪುರಾಣ ಕಥೆಗಳನ್ನು ಆಧರಿಸಿವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:
Astro Tips
Kannada News