• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

ಈ ವಾರ ಹೂಡಿಕೆದಾರರಿಗೆ ನಾಲ್ಕು ಹೊಸ ಮ್ಯೂಚುವಲ್ ಫಂಡ್ NFOಗಳು ಲಭ್ಯವಾಗಲಿವೆ. ಬಂಧನ್, ಕ್ವಾಂಟ್, ಬರೋಡಾ ಬಿಎನ್‌ಪಿ ಪರಿಬಾಸ್ ಮತ್ತು ಇನ್ವೆಸ್ಕೋ ಸಂಸ್ಥೆಗಳು ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ. ಇವುಗಳಲ್ಲಿ ಮೂರು ಫಂಡ್‌ಗಳಲ್ಲಿ ಕನಿಷ್ಠ ₹1,000ರಿಂದ ಹಾಗೂ ಕ್ವಾಂಟ್ ಫಂಡ್‌ನಲ್ಲಿ ₹5,000ರಿಂದ ಹೂಡಿಕೆ ಮಾಡಬಹುದು. ನವೆಂಬರ್ 23ರಿಂದ ವಿವಿಧ ದಿನಾಂಕಗಳಲ್ಲಿ ಚಂದಾದಾರಿಕೆ ಆರಂಭವಾಗಲಿದ್ದು, ಡಿಸೆಂಬರ್ ಮೊದಲ ವಾರದವರೆಗೆ ಅವಕಾಶವಿದೆ.

Written ByPuttaraj K Alur
Published: Nov 22, 2026, 18:01 IST|Updated: Nov 22, 2026, 18:22 IST
joinshare
₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!
Image Credit: Mutual Fund

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

2

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

3

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

4

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

5

ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸ್ಫೋಟಕ ತಿರುವು : ಇಡಿ ಅಧಿಕಾರಿಗಳಿಂದ ಮಹತ್ವದ ಮಾಹಿತಿ ಬಹಿರಂಗ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mutual Fund NFO 2026: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರಿಗೆ ಈ ವಾರ ನಾಲ್ಕು ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ನವೆಂಬರ್ 23ರಿಂದ ನಾಲ್ಕು ಹೊಸ ಮ್ಯೂಚುವಲ್ ಫಂಡ್‌ಗಳ ಎನ್‌ಎಫ್‌ಒ (New Fund Offer - NFO) ಚಂದಾದಾರಿಕೆಗೆ ಲಭ್ಯವಾಗಲಿವೆ. ವಿಶೇಷವೆಂದರೆ ಈ ಪೈಕಿ ಮೂರು ಫಂಡ್‌ಗಳಲ್ಲಿ ಕೇವಲ ₹1,000ರಿಂದಲೇ ಹೂಡಿಕೆ ಆರಂಭಿಸಬಹುದು. ಮತ್ತೊಂದು ಫಂಡ್‌ನಲ್ಲಿ ಕನಿಷ್ಠ ₹5,000 ಹೂಡಿಕೆ ಮಾಡಬೇಕಾಗುತ್ತದೆ.

ಈ ನಾಲ್ಕು ಹೊಸ ಫಂಡ್‌ಗಳಲ್ಲಿ ಎರಡು ಇಂಡೆಕ್ಸ್ ಫಂಡ್‌ಗಳು, ಒಂದು ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್ ಮತ್ತು ಒಂದು ಶಾರ್ಟ್ ಡ್ಯುರೇಶನ್ ಡೆಟ್ ಫಂಡ್ ಸೇರಿವೆ. ಪ್ರತಿ ಫಂಡ್‌ನ ಹೂಡಿಕೆ ಆರಂಭದ ದಿನಾಂಕ, ಕೊನೆಯ ದಿನಾಂಕ ಮತ್ತು ಕನಿಷ್ಠ ಹೂಡಿಕೆ ಮೊತ್ತ ವಿಭಿನ್ನವಾಗಿದೆ. ಎಸಿಇ ಎಂಎಫ್ (ACE MF) ದತ್ತಾಂಶಗಳ ಆಧಾರದ ಮೇಲೆ ಈ ಫಂಡ್‌ಗಳ ವಿವರಗಳನ್ನ ಪ್ರಕಟಿಸಲಾಗಿದೆ.

ಬಂಧನ್ ನಿಫ್ಟಿ ಕಮೋಡಿಟೀಸ್ ಇಂಡೆಕ್ಸ್ ಫಂಡ್

ಬಂಧನ್ ಮ್ಯೂಚುವಲ್ ಫಂಡ್‌ನ ಹೊಸ ಇಂಡೆಕ್ಸ್ ಫಂಡ್ ನವೆಂಬರ್ 23ರಂದು ಹೂಡಿಕೆಗೆ ತೆರೆಯಲಿದೆ. ಡಿಸೆಂಬರ್ 3ರವರೆಗೆ ಈ ಎನ್‌ಎಫ್‌ಒನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಈ ಫಂಡ್‌ನಲ್ಲಿ ಕನಿಷ್ಠ ₹1,000ರಿಂದ ಹೂಡಿಕೆ ಆರಂಭಿಸಬಹುದು. ಈ ಯೋಜನೆಯು ನಿಫ್ಟಿ ಕಮೋಡಿಟೀಸ್ ಸೂಚ್ಯಂಕವನ್ನ ಅನುಸರಿಸುತ್ತದೆ. ಅಂದರೆ ಈ ಸೂಚ್ಯಂಕದಲ್ಲಿರುವ ಷೇರುಗಳ ಕಾರ್ಯಕ್ಷಮತೆಗೆ ಅನುಗುಣವಾಗಿ ಫಂಡ್‌ನ ಹೂಡಿಕೆ ಕಾರ್ಯನಿರ್ವಹಿಸಲಿದೆ.

ಕ್ವಾಂಟ್ ನಿಫ್ಟಿ ನೆಕ್ಸ್ಟ್ 50 ಇಂಡೆಕ್ಸ್ ಫಂಡ್

ಕ್ವಾಂಟ್ ಮ್ಯೂಚುವಲ್ ಫಂಡ್‌ನ ಹೊಸ ಇಂಡೆಕ್ಸ್ ಫಂಡ್ ನವೆಂಬರ್ 25ರಂದು ಚಂದಾದಾರಿಕೆಗೆ ತೆರೆಯಲಿದೆ. ಡಿಸೆಂಬರ್ 7 ಈ ಎನ್‌ಎಫ್‌ಒನಲ್ಲಿ ಹೂಡಿಕೆ ಮಾಡಲು ಕೊನೆಯ ದಿನವಾಗಿದೆ. ಇತರ ಮೂರು ಫಂಡ್‌ಗಳಿಗೆ ಹೋಲಿಸಿದರೆ ಈ ಯೋಜನೆಯ ಕನಿಷ್ಠ ಹೂಡಿಕೆ ಮೊತ್ತ ಸ್ವಲ್ಪ ಹೆಚ್ಚಿದೆ. ಇಲ್ಲಿ ಕನಿಷ್ಠ ₹5,000 ಹೂಡಿಕೆ ಮಾಡಬೇಕಾಗುತ್ತದೆ. ಈ ಫಂಡ್ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವನ್ನ ಟ್ರ್ಯಾಕ್ ಮಾಡಲಿದೆ.

ಬರೋಡಾ ಬಿಎನ್‌ಪಿ ಪರಿಬಾಸ್ ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್

ಬರೋಡಾ ಬಿಎನ್‌ಪಿ ಪರಿಬಾಸ್ ಮ್ಯೂಚುವಲ್ ಫಂಡ್ ಹೊಸ ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್ ಅನ್ನ ನವೆಂಬರ್ 25ರಂದು ಬಿಡುಗಡೆ ಮಾಡಲಿದೆ. ಈ ಎನ್‌ಎಫ್‌ಒ ಡಿಸೆಂಬರ್ 8ರಂದು ಮುಕ್ತಾಯಗೊಳ್ಳಲಿದೆ. ಕನಿಷ್ಠ ₹1,000 ಹೂಡಿಕೆಯೊಂದಿಗೆ ಈ ಯೋಜನೆಯಲ್ಲಿ ಭಾಗವಹಿಸಬಹುದು. ಬ್ಯಾಲೆನ್ಸ್ಡ್ ಹೈಬ್ರಿಡ್ ಫಂಡ್‌ಗಳಲ್ಲಿ ಸಾಮಾನ್ಯವಾಗಿ ಈಕ್ವಿಟಿ ಮತ್ತು ಡೆಟ್ ಎರಡೂ ವಿಧದ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಲಾಗುತ್ತದೆ. ಅಂದರೆ ಷೇರುಗಳು ಹಾಗೂ ಸಾಲಪತ್ರಗಳಲ್ಲಿ ಸಮತೋಲಿತವಾಗಿ ಹೂಡಿಕೆ ಮಾಡುವ ಸ್ವರೂಪವನ್ನ ಈ ಫಂಡ್ ಹೊಂದಿರುತ್ತದೆ.

ಇನ್ವೆಸ್ಕೋ ಇಂಡಿಯಾ ಫೈನಾನ್ಶಿಯಲ್ ಸರ್ವೀಸಸ್ ಡೆಟ್ ಫಂಡ್

ಇನ್ವೆಸ್ಕೋ ಇಂಡಿಯಾದ ಹೊಸ ಡೆಟ್ ಫಂಡ್ ಕೂಡ ನವೆಂಬರ್ 25ರಿಂದ ಹೂಡಿಕೆಗೆ ಲಭ್ಯವಾಗಲಿದೆ. ಡಿಸೆಂಬರ್ 7ರವರೆಗೆ ಈ ಯೋಜನೆಯಲ್ಲಿ ಹಣ ಹೂಡಲು ಅವಕಾಶವಿದೆ. ಕನಿಷ್ಠ ₹1,000 ಹೂಡಿಕೆಯೊಂದಿಗೆ ಈ ಫಂಡ್‌ನಲ್ಲಿ ಭಾಗವಹಿಸಬಹುದು. ಇದೊಂದು ಶಾರ್ಟ್ ಡ್ಯುರೇಶನ್ ಡೆಟ್ ಫಂಡ್ ಆಗಿದ್ದು, ಮುಖ್ಯವಾಗಿ ಕಡಿಮೆ ಅವಧಿಯ ಡೆಟ್ ಸಾಧನಗಳಲ್ಲಿ ಹೂಡಿಕೆ ಮಾಡಲಿದೆ.

ನಾಲ್ಕು ಫಂಡ್‌ಗಳ ಹೂಡಿಕೆ ದಿನಾಂಕಗಳ ವಿವರ

ಮ್ಯೂಚುವಲ್ ಫಂಡ್   ಆರಂಭದ ದಿನಾಂಕಕೊನೆಯ ದಿನಾಂಕಕನಿಷ್ಠ ಹೂಡಿಕೆ
ಬಂಧನ್ ನಿಫ್ಟಿ ಕಮೋಡಿಟೀಸ್ನ. 23ಡಿ. 3   ₹1,000
ಕ್ವಾಂಟ್ ನಿಫ್ಟಿ ನೆಕ್ಸ್ಟ್ 50ನ. 25  ಡಿ. 7₹5,000   
ಬರೋಡಾ ಬಿಎನ್‌ಪಿ ಪರಿಬಾಸ್ ಹೈಬ್ರಿಡ್ನ. 25ಡಿ. 8   ₹1,000
ಇನ್ವೆಸ್ಕೋ ಫೈನಾನ್ಶಿಯಲ್ ಸರ್ವೀಸಸ್ ಡೆಟ್ನ. 25ಡಿ. 7  ₹1,000

ಒಟ್ನಲ್ಲಿ ಈ ವಾರ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಲ್ಕು ಹೊಸ ಎನ್‌ಎಫ್‌ಒಗಳು ಲಭ್ಯವಾಗಲಿವೆ. ಆದರೆ ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ. ಹಿಂದಿನ ಅವಧಿಯ ಆದಾಯ ಮುಂದೆಯೂ ಖಚಿತವಾಗಿ ದೊರೆಯುತ್ತದೆ ಎಂಬ ಭರವಸೆ ಇರುವುದಿಲ್ಲ. ಹೂಡಿಕೆ ಮಾಡುವ ಮೊದಲು ಯೋಜನೆಯ ವಿವರಗಳನ್ನ ಪರಿಶೀಲಿಸಿ, ಅಗತ್ಯವಿದ್ದರೆ ಹಣಕಾಸು ತಜ್ಞರ ಸಲಹೆ ಪಡೆಯುವುದು ಸೂಕ್ತ.

Add Zee News as a Preferred Source
TAGS:
Personal Finance
Kannada News