ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರಕರಣ ಸಂಬಂಧಪಟ್ಟಂತೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿಜಟಾಪಟಿ ಕೇಸ್ ಸಂಬಂಧಪಟ್ಟಂತೆ ಮತ್ತೆ ನಟಿ ಧನ್ವೀರ್‌ಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
1/5
ಧನ್ವೀರ್‌ಗೆ ಕಾನೂನು ಸಂಕಷ್ಟ
ನಟ ಧನ್ವೀರ್‌ಗೆ ಮತ್ತೆ ಪೊಲೀಸ್ ವಿಚಾರಣೆಯ ಸಂಕಷ್ಟ ಎದುರಾಗಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆ ತಂದಿದ್ದ ಧನ್ವೀರ್‌ಗೆ ಇದೀಗ ಮತ್ತೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
2/5
ವಿಚಾರಣೆಗೆ ಹಾಜರಾಗದ ಧನ್ವೀರ್‌ಗೆ ಶಾಕ್
ಬಸವೇಶ್ವರ ನಗರ, ಆರ್.ಆರ್. ನಗರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ನಟ ಧನ್ವೀರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೂರು ಪೊಲೀಸ್ ಠಾಣೆಗಳ ಪೊಲೀಸರು ಈ ಹಿಂದೆ ನೋಟಿಸ್ ನೀಡಿದ್ದರು. ಆದರೆ ಧನ್ವೀರ್ ಯಾವುದೇ ಠಾಣೆಯ ವಿಚಾರಣೆಗೂ ಹಾಜರಾಗಿರಲಿಲ್ಲ.
3/5
ತನಿಖೆಗೆ ನೀಡಿದ್ದ ತಡೆಯನ್ನು ತೆರವು
ಬದಲಾಗಿ, ಪ್ರಕರಣಗಳ ತನಿಖೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಧನ್ವೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ತನಿಖೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಆದರೆ ಶನಿವಾರ ನಡೆದ ವಾದ-ಪ್ರತಿವಾದದ ಬಳಿಕ ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆಯನ್ನು ತೆರವುಗೊಳಿಸಿದೆ.
4/5
ಧನ್ವೀರ್‌ಗೆ ಎರಡನೇ ಬಾರಿಗೆ ನೋಟಿಸ್
ಹೈಕೋರ್ಟ್‌ನ ಈ ಆದೇಶದಿಂದ ಮತ್ತೆ ತನಿಖೆ ಮುಂದುವರಿಸಲು ಪೊಲೀಸರಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಬಸವೇಶ್ವರ ನಗರ, ಆರ್.ಆರ್. ನಗರ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಧನ್ವೀರ್‌ಗೆ ಎರಡನೇ ಬಾರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
5/5
ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಇಂದು ಮೂರು ಪೊಲೀಸ್ ಠಾಣೆಗಳಿಂದಲೂ ಪ್ರತ್ಯೇಕವಾಗಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಹೈಕೋರ್ಟ್‌ನಿಂದ ತನಿಖೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ನಟ ಧನ್ವೀರ್‌ಗೆ ಮತ್ತೆ ಪೊಲೀಸ್ ವಿಚಾರಣೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ.