ನಿನ್ನೆಯಷ್ಟೇ ಕೇಂದ್ರ ಸರ್ಕಾರ ಇನ್ಮುಂದೆ ಯುಪಿ ಪಾವತಿ ಸಂಪೂರ್ಣ ಉವಿತವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನೀವು ಯುಪಿಐ ಬಳಕೆದಾರರಾಗಿದ್ದು ದೈನಂದಿನ ವಹಿವಾಟುಗಳಿಗಾಗಿ ಯುಪಿಐ ಪಾವತಿಯನ್ನೇ ಅವಲಂಬಿಸಿದ್ದರೆ ಈ ಮಾಹಿತಿಯನ್ನು ತಿಳಿಯುವುದು ತುಂಬಾ ಅಗತ್ಯ.
1/6
ಯುಪಿಐ ವಹಿವಾಟ ಇನ್ನು ಉಚಿತವಲ್ಲ
ಕೇಂದ್ರ ಸರ್ಕಾರ ಸೆಪ್ಟೆಂಬರ್ 15ರಂದು ತನ್ನ ಘೋಷಣೆಯಲ್ಲಿ ₹2000 ಮೇಲ್ಪಟ್ಟ ಎಲ್ಲಾ ಯುಪಿಐ ವಹಿವಾಟುಗಳಿಗೂ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿದೆ. ಆದಾಗ್ಯೂ, ಈ ಶುಲ್ಕಗಳು ವ್ಯಕ್ತಿಯಿಂದ ವ್ಯಾಪಾರಿಗೆ (P2M) ವರ್ಗಾವಣೆ ಆಗುವ ಹಣಕ್ಕೆ ಮಾತ್ರ ಎಂಬುದು ಗಮನಾರ್ಹವಾಗಿದೆ. ಈ ಕುರಿತಂತೆ ಸರ್ಕಾರ ಹೇಳಿರುವುದೇನು? ಯಾವ ರೀತಿಯ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದು? ಎಷ್ಟು ಶುಲ್ಕ ವಿಧಿಸಲಾಗುವುದು ಎಂಬ ಮಹತ್ವದ ಮಾಹಿತಿ ಇಲ್ಲಿದೆ.
2/6
ಯುಪಿಐ ವಹಿವಾಟುಗಳಿಗೆ ಶುಲ್ಕ
ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಸೆಪ್ಟೆಂಬರ್ 15 ರಂದು ಮಹತ್ವದ ಘೋಷಣೆ ಮಾಡಿದ್ದು, ವ್ಯಕ್ತಿಯಿಂದ ವ್ಯಾಪಾರಿಗೆ (P2M) 2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಶೇ. 0.4 ರಷ್ಟು ಶುಲ್ಕವನ್ನು ನಿಗದಿಪಡಿಸಿದೆ. ಇದೇ ಸಂದರ್ಭದಲ್ಲಿ 75,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಪಾವತಿಗಳಿಗೆ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಿ ಆದೇಶಿಸಿದೆ. ಈ ನಿಯಮವು ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.
3/6
ಇಂತಹ ವಹಿವಾಟಿಗೆ ಶೂನ್ಯ MDR
ಆದಾಗ್ಯೂ, ಯುಪಿಐ ಕ್ಯೂಆರ್ ಕೋಡ್‌ಗಳ ಮೂಲಕ ತಿಂಗಳಿಗೆ 1 ಲಕ್ಷ ರೂ.ವರೆಗೆ ಗಳಿಸುವ ಸಣ್ಣ ವ್ಯಾಪಾರಿಗಳಿಗೆ ಇದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಒಂದು ಉದಾಹರಣೆಯೆಂದರೆ ಸರ್ಕಾರವು ಯಾವುದೇ ಹೊಸ ಶುಲ್ಕದಿಂದ ಶೇ. 96 ರಷ್ಟು ವ್ಯಾಪಾರಿ ವಹಿವಾಟುಗಳನ್ನು ರಕ್ಷಿಸುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿ
4/6
ಶೂನ್ಯ MDR ಅಂತ್ಯ
₹2000 ಮೇಲ್ಪಟ್ಟ ವ್ಯಾಪಾರ ವಹಿವಾಟಿಗೆ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದ ಈ ಮಹತ್ವದ ಕ್ರಮದಿಂದಾಗಿ ಜನವರಿ 2020 ರಿಂದಲೂ ಜಾರಿಯಲ್ಲಿರುವ ಶೂನ್ಯ-ವ್ಯಾಪಾರಿ ರಿಯಾಯಿತಿ ದರ (MDR) ಅಂತ್ಯಗೊಳ್ಳುತ್ತದೆ.
5/6
ವ್ಯಕ್ತಿಯಿಂದ ವ್ಯಕ್ತಿಗೆ ವಹಿವಾಟಿನ ಮೇಲಿಲ್ಲ ಶುಲ್ಕ
ಸರ್ಕಾರದ ಈ ಹೊಸ ಆದೇಶವು ವ್ಯಕ್ತಿಯಿಂದ ವ್ಯಾಪಾರಿಗಳಿಗೆ ಮಾತ್ರವೇ ಹೊರತು, ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ವಹಿವಾಟುಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಮದು ಸ್ಪಷ್ಟಪಟಿಸಲಾಗಿದೆ.
6/6
ಡಿಜಿಟಲ್ ವಹಿವಾಟುಗಳಿಗಿಲ್ಲ ಶುಲ್ಕ
ಇದೇ ಸಂದರ್ಭದಲ್ಲಿ ಗೂಗಲೆ ಪೇ, ಫೋನ್‌ಪೇ ಯಂತಹ ಇತರ ಡಿಜಿಟಲ್ ವೇದಿಕೆಗಳ ಮೂಲಕ ನಡೆಸಲಾಗುವ ಯುಪಿಐ ವಹಿವಾಟುಗಳು ಎಂದಿನಂತೆ ಉಚಿತ ವಹಿವಾಟುಗಳನ್ನು ಮುಂದುವರೆಸುತ್ತವೆ. ಇವುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.