Bigg boss kannada: ಬಿಗ್‌ಬಾಸ್ ಮನೆಯಲ್ಲಿ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಗೊತ್ತಾ?
ಬಿಗ್‌ಬಾಸ್ ಮನೆಯಲ್ಲಿ ಪ್ರತಿ ವಾರವೂ ಸ್ಪರ್ಧಿಗಳ ಆಟ, ಮಾತು, ವರ್ತನೆಗಳನ್ನು ಗಮನಿಸುವ ಕಿಚ್ಚ ಸುದೀಪ್, ವಾರದ ಪಂಚಾಯಿತಿಯಲ್ಲಿ ಒಬ್ಬ ಸ್ಪರ್ಧಿಯ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ.
1/5
ಕಿಚ್ಚನ ಚಪ್ಪಾಳೆ
ಬಿಗ್‌ಬಾಸ್ ಮನೆಯಲ್ಲಿ ಪ್ರತಿ ವಾರವೂ ಸ್ಪರ್ಧಿಗಳ ಆಟ, ಮಾತು, ವರ್ತನೆಗಳನ್ನು ಗಮನಿಸುವ ಕಿಚ್ಚ ಸುದೀಪ್, ವಾರದ ಪಂಚಾಯಿತಿಯಲ್ಲಿ ಒಬ್ಬ ಸ್ಪರ್ಧಿಯ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಅದುವೇ ಕಿಚ್ಚನ ಚಪ್ಪಾಳೆ. ಈ ವಾರದ ಕಿಚ್ಚನ ಚಪ್ಪಾಳೆ ಗಗನ್ ಚಿನ್ನಪ್ಪ ಅವರಿಗೆ ಸಿಕ್ಕಿದೆ.
2/5
ಗಗನ್ ಅಭಿಮಾನಿಗಳಿಗೆ ಸಿಹಿ ಸುದ್ದಿ
ಮನೆಯೊಳಗಿನ ಅವರ ಆಟ ಹಾಗೂ ನಡೆಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಗಗನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
3/5
ಗಗನ್ ಕಮ್‌ಬ್ಯಾಕ್
ಈ ವಾರ ಬಿಗ್‌ಬಾಸ್ ಮನೆ ರಣರಂಗವಾಗಿ ಏರ್ಪಟ್ಟಿತ್ತು ಇದರಲ್ಲೂ ಬುದ್ಧಿಶಕ್ತಿ ಬಲ ಎಲ್ಲವೂ ಪ್ರಯೋಗಿಸಿ ಗಗನ್ ಚಿನ್ನಪ್ಪ ಬಹಳ ಉತ್ತಮವಾಗಿ ಆಟವಾಡಿದ್ದು, ಇದಕ್ಕೆ ತಕ್ಕ ಪ್ರತಿಫಲವಾಗಿ ಗಗನ್‌ಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಗಗನ್ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.
4/5
ಶಾಸ್ತ್ರಿಗೆ ಸಿಕ್ತು ಉಡುಗೊರೆ
ಇತ್ತ ಕಿರಣ್ ಶಾಸ್ತ್ರಿಗೆ ಕಿಚ್ಚ ಸುದೀಪ್ ತಮ್ಮ ಉಡುಪನ್ನು ಉಡುಗೊರೆಯಾಗಿ ನೀಡುವ ಮೂಲಕ ಈ ವಾರ ಕಿರಣ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹಾಡಿಹೊಗಳಿದ್ದಾರೆ.
5/5
ಕುಣಿದಾಡಿದ ಕಿರಣ್
ಕಿರಣ್ ವಯಸ್ಸಿನಲ್ಲಿ ಚಿಕ್ಕವನ್ನು ಇರಬಹುದು ಆದರೆ ಇಡೀ ಮನೆ ತಿರುಗಿ ನೋಡುವಂತೆ ನಿರ್ಧಾರ ತೆಗೆದುಕೊಂಡು ಮೂವರು ಯುವರಾಣಿಯರಿಗೆ ಕಳಪೆ ನೀಡಿ ಜೈಲಿಗೆ ಕಳುಹಿಸಿದ್ದೀರಿ ಎಂದು ಕಿಚ್ಚನ ಚಪ್ಪಾಳೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಂತೆ ಕಿರಣ್ ಶಾಸ್ತ್ರಿ ಸಂತಸದಿಂದ ಕುಣಿದಾಡಿದ್ದಾರೆ.