• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ತ್ರಿಗ್ರಹಿ ಯೋಗದಿಂದ 3 ರಾಶಿಯವರಿಗೆ ಅದೃಷ್ಟ.. ವೃತ್ತಿಯಲ್ಲಿ ಏಳ್ಗೆ, ವ್ಯವಹಾರದಲ್ಲಿ ಬಂಪರ್‌ ಜಾಕ್‌ಪಾಟ್

ತ್ರಿಗ್ರಹಿ ಯೋಗದಿಂದ 3 ರಾಶಿಯವರಿಗೆ ಅದೃಷ್ಟ.. ವೃತ್ತಿಯಲ್ಲಿ ಏಳ್ಗೆ, ವ್ಯವಹಾರದಲ್ಲಿ ಬಂಪರ್‌ ಜಾಕ್‌ಪಾಟ್

Written ByYashaswini V
Published: Oct 29, 2026, 08:54 AM IST|Updated: Oct 29, 2026, 08:56 AM IST
joinshare

ಜ್ಯೋತಿಷ್ಯದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಮೂರು ಗ್ರಹಗಳು ಒಟ್ಟಿಗೆ ಸೇರಿದಾಗ ʼತ್ರಿಗ್ರಹಿ ಯೋಗʼ ನಿರ್ಮಾಣವಾಗಲಿದೆ. 

Trigrahi Yoga Effect1/6

ತುಲಾ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃತ್ತಿ-ವ್ಯವಹಾರ, ತರ್ಕಕಾರಕನಾದ ಬುಧ, ಆತ್ಮಕಾರಕನಾದ ಸೂರ್ಯ ಹಾಗೂ ಸಂಪತ್ತಿನ ಅಂಶನಾದ ಶುಕ್ರ ಈ ಮೂರೂ ಗ್ರಹಗಳು ಪ್ರಸ್ತುತ ತುಲಾ ರಾಶಿಯಲ್ಲಿ ಸಂಚರಿಸುತ್ತಿವೆ.
Trigrahi Yoga Effect2/6

ತ್ರಿಗ್ರಹಿ ಯೋಗ

ತುಲಾ ರಾಶಿಯಲ್ಲಿ ಬುಧ, ಸೂರ್ಯ, ಶುಕ್ರರ ಮೈತ್ರಿಯಿಂದ ಶಕ್ತಿಶಾಲಿ ತ್ರಿಗ್ರಹಿ ಯೋಗ ನಿರ್ಮಾಣವಾಗಿದೆ. ಇದರ ಪ್ರಭಾವದಿಂದ ಮೂರು ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌ ಎಂತಲೇ ಹೇಳಲಾಗುತ್ತಿದೆ.
Trigrahi Yoga Effect3/6

ತ್ರಿಗ್ರಹಿ ಯೋಗ ಪ್ರಭಾವ

ತುಲಾ ರಾಶಿಯಲ್ಲಿ ನಿರ್ಮಾಣವಾಗಿರುವ ಶಕ್ತಿಶಾಲಿ ತ್ರಿಗ್ರಹಿ ಯೋಗದ ಪ್ರಭಾವದಿಂದ ಮೂರು ರಾಶಿಯ ಜನರ ಜೀವನದಲ್ಲಿ ವೃತ್ತಿ-ವ್ಯವಹಾರದಲ್ಲಿ ಭರ್ಜರಿ ಲಾಭ, ಪ್ರೇಮ ಸಂಬಂಧದಲ್ಲಿ ಸುಧಾರಣೆ ಜೊತೆಗೆ ಸಮಾಜದಲ್ಲಿ ಅವರ ಕೀರ್ತಿ, ಗೌರವ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
Trigrahi Yoga Effect4/6

ಸಿಂಹ ರಾಶಿ

ತ್ರಿಗ್ರಹಿ ಯೋಗದಿಂದ ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ವ್ಯವಹಾರ ಜೀವನದಲ್ಲಿ ಪ್ರಗತಿಯ ಅವಕಾಶಗಳಿದ್ದು, ಕೈ ತುಂಬಾ ಹಣ ಸಿಗಲಿದೆ. ಪ್ರೇಮ ಜೀವನವೂ ಸಹ ಸುಧಾರಿಸಲಿದೆ. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
Trigrahi Yoga Effect5/6

ತುಲಾ ರಾಶಿ

ಸ್ವ ರಾಶಿಯಲ್ಲೇ ತ್ರಿಗ್ರಹಿ ಯೋಗ ನಿರ್ಮಾಣವು ತುಲಾ ರಾಶಿಯವರಿಗೆ ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸಲಿದೆ. ವ್ಯವಹಾರದಲ್ಲಿ ಹಿಂದೆಂದೂ ಕಂಡರಿಯದಷ್ಟು ಲಾಭವನ್ನು ಕಾಣುವಿರಿ. ಕುಟುಂಬದಲ್ಲಿ ಸುಖ, ಸೌಕರ್ಯಗಳು ಹೆಚ್ಚಾಗಲಿವೆ. ಮಕ್ಕಳ ಮದುವೆ ವಿಚಾರವಾಗಿ ಶುಭ ಸಮಾಚಾರ ಕೇಳುವಿರಿ.
Trigrahi Yoga Effect6/6

ಮಕರ ರಾಶಿ

ತ್ರಿಗ್ರಹಿ ಯೋಗದಿಂದ ಮಕರ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಇದ್ದ ಬಿರುಕು ಸರಿ ಹೋಗಲಿದೆ. ವ್ಯವಹಾರ ವಿಸ್ತರಣೆಗೆ ತುಂಬಾ ಪ್ರಾಶಸ್ತ್ಯವಾದ ಸಮಯ ಇದಾಗಿರಲಿದೆ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಮಕ್ಕಳಿಂದ ಸಂತಸದ ಸುದ್ದಿಯನ್ನು ನಿರೀಕ್ಷಿಸಬಹುದು. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ದಿನ ಭವಿಷ್ಯ 29-10-2026: ಗುರುವಾರದಂದು ಪರಿಘ ಯೋಗ.. ಈ ರಾಶಿಯವರಿಗೆ ಧನ ಯೋಗ

ದಿನ ಭವಿಷ್ಯ 29-10-2026: ಗುರುವಾರದಂದು ಪರಿಘ ಯೋಗ.. ಈ ರಾಶಿಯವರಿಗೆ ಧನ ಯೋಗ

2

WPL 2027 Auction: ₹1.10 ಕೋಟಿಗೆ ಸೋಫಿ ಮೊಲಿನ್ಯೂ ಖರೀದಿಸಿದ ಯುಪಿ ವಾರಿಯರ್ಸ್, ಆರ್‌ಸಿಬಿಗೆ ನಿರಾಸೆ!

3

ಐದು ವರ್ಷಗಳಾದರೂ ಮಾಸದ ಅಪ್ಪು ನೆನಪು.. ಪುಣ್ಯಸ್ಮರಣೆ ದಿನ ಕಂಠೀರವದಲ್ಲಿ ಅಭಿಮಾನಿಗಳ ಮಹಾಪೂರ!

4

ಬುಧನ ನಕಾರಾತ್ಮಕ ಪ್ರಭಾವವೇ ಜಾಕ್‌ಪಾಟ್ ಆಗುತ್ತಾ? ಉದ್ಯೋಗ, ಆರ್ಥಿಕ ಲಾಭದ ಯೋಗ ಯಾರಿಗೆ?

5

ಕೂದಲಿಗೆ ಎಣ್ಣೆ ಹಚ್ಚಲು ಉತ್ತಮ ಸಮಯ ಯಾವುದು? ಬೆಳಿಗ್ಗೆ ಅಥವಾ ರಾತ್ರಿ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.