• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಐದು ವರ್ಷಗಳಾದರೂ ಮಾಸದ ಅಪ್ಪು ನೆನಪು.. ಪುಣ್ಯಸ್ಮರಣೆ ದಿನ ಕಂಠೀರವದಲ್ಲಿ ಅಭಿಮಾನಿಗಳ ಮಹಾಪೂರ!

ಐದು ವರ್ಷಗಳಾದರೂ ಮಾಸದ ಅಪ್ಪು ನೆನಪು.. ಪುಣ್ಯಸ್ಮರಣೆ ದಿನ ಕಂಠೀರವದಲ್ಲಿ ಅಭಿಮಾನಿಗಳ ಮಹಾಪೂರ!

ಕರ್ನಾಟಕದ ಮನೆಮನೆಯಲ್ಲೂ ಪ್ರೀತಿಯಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ.

Written ByRamya. R. Gowda
Published: Oct 29, 2026, 08:16 AM IST|Updated: Oct 29, 2026, 08:20 AM IST
joinshare
ಐದು ವರ್ಷಗಳಾದರೂ ಮಾಸದ ಅಪ್ಪು ನೆನಪು.. ಪುಣ್ಯಸ್ಮರಣೆ ದಿನ ಕಂಠೀರವದಲ್ಲಿ ಅಭಿಮಾನಿಗಳ ಮಹಾಪೂರ!

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
WPL 2027 Auction: ₹1.10 ಕೋಟಿಗೆ ಸೋಫಿ ಮೊಲಿನ್ಯೂ ಖರೀದಿಸಿದ ಯುಪಿ ವಾರಿಯರ್ಸ್, ಆರ್‌ಸಿಬಿಗೆ ನಿರಾಸೆ!

WPL 2027 Auction: ₹1.10 ಕೋಟಿಗೆ ಸೋಫಿ ಮೊಲಿನ್ಯೂ ಖರೀದಿಸಿದ ಯುಪಿ ವಾರಿಯರ್ಸ್, ಆರ್‌ಸಿಬಿಗೆ ನಿರಾಸೆ!

2

ಐದು ವರ್ಷಗಳಾದರೂ ಮಾಸದ ಅಪ್ಪು ನೆನಪು.. ಪುಣ್ಯಸ್ಮರಣೆ ದಿನ ಕಂಠೀರವದಲ್ಲಿ ಅಭಿಮಾನಿಗಳ ಮಹಾಪೂರ!

3

ಬುಧನ ನಕಾರಾತ್ಮಕ ಪ್ರಭಾವವೇ ಜಾಕ್‌ಪಾಟ್ ಆಗುತ್ತಾ? ಉದ್ಯೋಗ, ಆರ್ಥಿಕ ಲಾಭದ ಯೋಗ ಯಾರಿಗೆ?

4

ಕೂದಲಿಗೆ ಎಣ್ಣೆ ಹಚ್ಚಲು ಉತ್ತಮ ಸಮಯ ಯಾವುದು? ಬೆಳಿಗ್ಗೆ ಅಥವಾ ರಾತ್ರಿ?

5

ಬಾತ್ರೂಮ್ ನಲ್ಲಿ ಸೋಪು ಬೇಗ ಕರಗುತ್ತದೆಯೇ?.. ಈ ಸಿಂಪಲ್ ಟಿಪ್ಸ್ ನಿಂದ ಹೆಚ್ಚು ಕಾಲ ಬಾಳಿಕೆ ಬರುತ್ತದೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Puneeth Rajkumar Death Anniversary:ಕರ್ನಾಟಕದ ಮನೆಮನೆಯಲ್ಲೂ ಪ್ರೀತಿಯಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಆದರೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ನೆನಪು ಮಾತ್ರ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇಂದು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ರಕ್ತದಾನ, ಅನ್ನಸಂತರ್ಪಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ. ಹಾಗಾದ್ರೆ, ಅಪ್ಪು ಪುಣ್ಯಸ್ಮರಣೆ ದಿನದ ವಿಶೇಷತೆಗಳೇನು? ಈ ಸ್ಟೋರಿ ನೋಡಿ.


ಅಪ್ಪು.. ಈ ಹೆಸರಿನಲ್ಲೇ ಒಂದು ಭಾವನೆ ಇದೆ.. ಕೋಟ್ಯಂತರ ಕನ್ನಡಿಗರ ಪಾಲಿಗೆ ಪುನೀತ್ ರಾಜ್‌ಕುಮಾರ್ ಕೇವಲ ನಟನಲ್ಲ, ಮನೆ ಮಗನಿದ್ದಂತೆ. ತಮ್ಮ ಅಭಿನಯ, ಸರಳತೆ, ನಗು ಮತ್ತು ಸಮಾಜಮುಖಿ ಕಾರ್ಯಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದವರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. 2021ರ ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಸುದ್ದಿ ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು.


ಅಂದು ಬೆಳಿಗ್ಗೆ ಎಂದಿನಂತೆ ಜಿಮ್‌ನಲ್ಲಿ ವರ್ಕೌಟ್ ಮುಗಿಸಿದ್ದ ಅಪ್ಪು ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬ ವೈದ್ಯರನ್ನು ಸಂಪರ್ಕಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯಕೀಯ ಪ್ರಯತ್ನಗಳ ನಡುವೆಯೂ ಪುನೀತ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಆಘಾತಕಾರಿ ಸುದ್ದಿ ಕೇಳಿ ಕನ್ನಡಿಗರು ಕಣ್ಣೀರಿಟ್ಟಿದ್ದರು. ಇಂದಿಗೂ ಅಪ್ಪು ಅಗಲಿಕೆಯ ನೋವು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿದೆ.

ಇಂದು ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ. ಬೆಳಗ್ಗಿನಿಂದಲೇ ಅಭಿಮಾನಿಗಳು ಸ್ಮಾರಕದತ್ತ ಆಗಮಿಸಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.


ಅಪ್ಪು ಎಂದರೆ ಕೇವಲ ಸಿನಿಮಾ ಅಲ್ಲ.. ಸೇವೆಯ ಸಂಕೇತವೂ ಹೌದು. ತಮ್ಮ ಬದುಕಿನಲ್ಲಿ ಸಮಾಜಮುಖಿ ಕಾರ್ಯಗಳಿಗೆ ಮಹತ್ವ ನೀಡಿದ್ದ ಪುನೀತ್ ಅವರ ನೆನಪಿನಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಅನ್ನಸಂತರ್ಪಣೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅಪ್ಪು ತೋರಿಸಿಕೊಟ್ಟ ಮಾನವೀಯತೆಯ ಹಾದಿಯಲ್ಲಿ ಸಾಗುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.


ಐದು ವರ್ಷಗಳು ಕಳೆದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ ಸಿನಿಮಾಗಳು, ಹಾಡುಗಳು, ನಗು ಮತ್ತು ಜನಪರ ಕಾಳಜಿ ಸದಾ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿರುತ್ತವೆ. ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದೆಂದಿಗೂ ಅಮರ. ಅದಕ್ಕೇ ಹೇಳೋದು.. ರಾಜಕುಮಾರನ ನೆನಪು ಎಂದಿಗೂ ಅಜರಾಮರ!

 

Add Zee News as a Preferred Source
TAGS:
Sandalwood