• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ... ಇದಕ್ಕೆ ಇಲ್ಲಿವೆ 5 ಪ್ರಮುಖ ಕಾರಣ!

ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ... ಇದಕ್ಕೆ ಇಲ್ಲಿವೆ 5 ಪ್ರಮುಖ ಕಾರಣ!

Written ByYashaswini V
Published: Nov 21, 2026, 06:35 IST|Updated: Nov 21, 2026, 06:36 IST
joinshare

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ. ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು? ಅಮೆರಿಕದ ಬಡ್ಡಿದರಕ್ಕೂ ಚಿನ್ನಕ್ಕೂ ಏನು ಸಂಬಂಧ? ಡಾಲರ್ ಮೌಲ್ಯದಿಂದ ಚಿನ್ನದ ಬೆಲೆ ಮೇಲೆ ಪರಿಣಾಮ ಏನು? ಎಂಬ ಮಾಹಿತಿ ಇಲ್ಲಿದೆ. 

Gold Rate Down1/6

ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣಗಳೇನು?

ಬಡವರು, ಮಧ್ಯಮ ವರ್ಗದವರು ಇನ್ನು ಮುಂದೆ ಚಿನ್ನ ಖರೀದಿಸಲು ಸಾಧ್ಯವೇ ಇಲ್ಲವೇನೋ ಅಂದುಕೊಳ್ಳುವಂತಾಗಿತ್ತು. ಆದರೆ, ಆಗಸದತ್ತ ಮುಖ ಮಾಡಿದ್ದ ಚಿನ್ನದ ಬೆಲೆಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಇಳಿಕೆ ಕಂಡು ಬಂದಿದೆ. ಪ್ರತಿ ಗ್ರಾಂ 22k ಚಿನ್ನ ₹12,000ಕ್ಕಿಂತಲೂ ಕಡಿಮೆ ಆಗಿದೆ. ಹಾಗಾದರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಏರಿಳಿತ ಯಾಕೆ? ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ನಿಮಗೂ ಈ ಪ್ರಶ್ನೆಗಳಿದ್ದರೆ ಇದಕ್ಕೆ ಐದು ಪ್ರಮುಖ ಕಾರಣಗಳಿವೆ.
Gold Rate Down2/6

ಮೊದಲನೆಯದು – ಅಮೆರಿಕದ ಬಡ್ಡಿದರ ನೀತಿ

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ನಿರ್ಧಾರ ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬಡ್ಡಿದರ ಹೆಚ್ಚಾಗುವ ನಿರೀಕ್ಷೆ ಮೂಡಿದಾಗ ಹೂಡಿಕೆದಾರರು ಚಿನ್ನದಿಂದ ಹಣವನ್ನು ಬೇರೆ ಹೂಡಿಕೆಗಳತ್ತ ವರ್ಗಾಯಿಸಬಹುದು. ಇದರಿಂದ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇರುತ್ತದೆ.
Gold Rate Down3/6

ಎರಡನೆಯದು – ಅಮೆರಿಕನ್ ಡಾಲರ್ ಮೌಲ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಮುಖ್ಯವಾಗಿ ಡಾಲರ್‌ನಲ್ಲಿ ನಡೆಯುತ್ತದೆ. ಡಾಲರ್ ಬಲಿಷ್ಠವಾದಾಗ ಬೇರೆ ದೇಶಗಳ ಹೂಡಿಕೆದಾರರಿಗೆ ಚಿನ್ನ ಖರೀದಿಸುವುದು ದುಬಾರಿಯಾಗಬಹುದು. ಇದರಿಂದ ಬೇಡಿಕೆ ಮತ್ತು ಬೆಲೆಯ ಮೇಲೆ ಪರಿಣಾಮ ಉಂಟಾಗುತ್ತದೆ.
Gold Rate Down4/6

ಮೂರನೆಯದು – ಜಾಗತಿಕ ಯುದ್ಧ ಮತ್ತು ರಾಜಕೀಯ ಪರಿಸ್ಥಿತಿ

ಯಾವುದೇ ದೇಶಗಳ ನಡುವೆ ಯುದ್ಧ, ರಾಜಕೀಯ ಉದ್ವಿಗ್ನತೆ ಅಥವಾ ಆರ್ಥಿಕ ಬಿಕ್ಕಟ್ಟು ಎದುರಾದಾಗ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಇದರಿಂದ ಬೆಲೆ ಏರಿಕೆಯಾಗಬಹುದು. ಆದರೆ ಪರಿಸ್ಥಿತಿ ಸುಧಾರಿಸಿದರೆ ಚಿನ್ನದ ಬೇಡಿಕೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
Gold Rate Down5/6

ನಾಲ್ಕನೆಯದು – ಲಾಭ ಕಾಯ್ದುಕೊಳ್ಳುವ ಹೂಡಿಕೆದಾರರು

ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿದಾಗ ಅನೇಕ ಹೂಡಿಕೆದಾರರು ತಮ್ಮ ಚಿನ್ನವನ್ನು ಮಾರಾಟ ಮಾಡಿ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಇಂತಹ ಮಾರಾಟ ಹೆಚ್ಚಾದಾಗ ಬೆಲೆ ಕುಸಿಯಬಹುದು.
Gold Rate Down6/6

ಐದನೆಯದು – ಕೇಂದ್ರ ಬ್ಯಾಂಕುಗಳ ಚಿನ್ನದ ಖರೀದಿ

ಭಾರತ ಸೇರಿದಂತೆ ಹಲವು ದೇಶಗಳ ಕೇಂದ್ರ ಬ್ಯಾಂಕುಗಳು ತಮ್ಮ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನಕ್ಕೆ ಮಹತ್ವ ನೀಡುತ್ತವೆ. ಕೇಂದ್ರ ಬ್ಯಾಂಕುಗಳ ಖರೀದಿ ಹೆಚ್ಚಾದರೆ ಚಿನ್ನದ ಬೆಲೆಗೆ ಬೆಂಬಲ ಸಿಗಬಹುದು. ಈ ಎಲ್ಲಾ ಅಂಶಗಳ ಪರಿಣಾಮವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಸದ್ಯ ಏರಿಳಿತ ಮುಂದುವರಿದಿದೆ. Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ.
TAGS:
Personal Finance

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.