ಜ್ಯೋತಿಷ್ಯದಲ್ಲಿ ಬುದ್ದಿ, ತರ್ಕ, ಸಂವಹನದ ಅಂಶ ಎನ್ನಲಾಗುವ ಬುಧ ಡಿಸೆಂಬರ್‌ನಲ್ಲಿ ಕೆಲವರ ರಾಶಿಯನ್ನು ಬದಲಾಯಿಸಲಿದ್ದಾನೆ.
1/6
ಬುಧ ಗೋಚಾರ
ವೈದಿಕ ಜ್ಯೋತಿಷ್ಯದ ಪ್ರಕಾರ, ಡಿಸೆಂಬರ್ 02, 2026ರಂದು ಬುದ್ದಿ, ತರ್ಕ, ವೃತ್ತಿ ವ್ಯವಹಾರದ ಅಂಶನಾದ ಬುಧ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಅದೇ ರಾಶಿಯಲ್ಲಿ ವಿರಾಜಮಾನನಾಗಿರುವ ಸೂರ್ಯನೊಂದಿಗೆ ಸಂಯೋಗ ಹೊಂದಿ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತಾನೆ.
2/6
ಬುಧಾದಿತ್ಯ ರಾಜಯೋಗ ಪ್ರಭಾವ
ಡಿಸೆಂಬರ್‌ನಲ್ಲಿ ಮಂಗಳನ ರಾಶಿಯಲ್ಲಿ ಸೃಷ್ಟಿಯಾಗಲಿರುವ ಬುಧಾದಿತ್ಯ ರಾಜಯೋಗದ ಪ್ರಭಾವದಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದ್ದು, ಕಷ್ಟಗಳೆಲ್ಲಾ ಕಳೆದು ಶ್ರೀಮಂತರಾಗುವ ಸುಯೋಗವಿದೆ. ಇನ್ಮುಂದೆ ಅವರು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
3/6
ಮೇಷ ರಾಶಿ
ಡಿಸೆಂಬರ್‌ನಲ್ಲಿ ಬುಧ ಪಥ ಬದಲಾವಣೆಯು ಮೇಷ ರಾಶಿಯವರಿಗೆ ಫಲಪ್ರದವಾಗಿದ್ದು, ಜೀವನದಲ್ಲಿ ಇಷ್ಟು ದಿನಗಳು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಕೊನೆಗೊಳ್ಳಲಿವೆ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಬಡ್ತಿ ಸೂಚನೆಗಳಿವೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ನಿಮ್ಮ ಮಾತಿನ ಮೌಲ್ಯ ಹೆಚ್ಚಾಗುತ್ತದೆ.
4/6
ಮಿಥುನ ರಾಶಿ
ಬುಧಾದಿತ್ಯ ರಾಜಯೋಗದ ಪ್ರಭಾವದಿಂದಾಗಿ ಮಿಥುನ ರಾಶಿಯವರಿಗೆ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ ಇದಾಗಿರಲಿದೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದ್ದು, ನೀವು ಮಾಡುವ ಕೆಲಸವನ್ನು ಮೇಲಧಿಕಾರಿಗಳು ಗುರುತಿಸಿ ಮನ್ನಣೆ ನೀಡಲಿದ್ದಾರೆ. ಕುಟುಂಬದಲ್ಲೂ ಸಂತಸದ ವಾತಾವರಣ ಇರಲಿದೆ.
5/6
ಕನ್ಯಾ ರಾಶಿ
ಬುಧಾದಿತ್ಯ ರಾಜಯೋಗವು ಕನ್ಯಾ ರಾಶಿಯ ಜನರಿಗೆ ಹಣದ ಸುರಿಮಳೆಯನ್ನೇ ಸುರಿಸಲಿದ್ದು, ವೇತನ ಹೆಚ್ಚಳದ ಜೊತೆಗೆ ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವಿದೆ. ನಿಮ್ಮ ಇಷ್ಟು ವರ್ಷಗಳ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವ ಸುವರ್ಣಾವಕಾಶ ಸಿಗಲಿದ್ದು, ಕುಬೇರನ ಸಂಪತ್ತೇ ಕೈ ಸೇರುವ ನಿರೀಕ್ಷೆ ಇದೆ. ಸ್ವಂತ ಮನೆ ಕಟ್ಟುವ ನಿಮ್ಮ ಕನಸು ಸಾಕಾರಗೊಳ್ಳುವ ಸಮಯ ಇದಾಗಿರಲಿದೆ.
6/6
ತುಲಾ ರಾಶಿ
ಬುಧಾದಿತ್ಯ ರಾಜಯೋಗವು ತುಲಾ ರಾಶಿಯ ವ್ಯಾಪಾರಸ್ಥರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದ್ದು, ಶ್ರೀಮಂತರಾಗುವ ಸುಯೋಗವನ್ನು ನೀಡಲಿದೆ. ಅನಿರೀಕ್ಷಿತ ಧನಾಗಮನದಿಂದ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಕುಟುಂಬದಲ್ಲಿ ಮದುವೆಯಂತಹ ಶುಭ ಕಾರ್ಯಗಳು ಜರುಗುವ ಸೂಚನೆಗಳಿವೆ. ದಾಂಪತ್ಯದಲ್ಲಿ ಬಿರುಕು ಭಿನ್ನಾಭಿಪ್ರಾಯಗಳು ಕೊನೆಗೊಂಡು ಅನ್ಯೋನ್ಯವಾದ ಜೀವನನ್ನು ಅನುಭವಿಸುವಿರಿ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.