ಇತ್ತೀಚೆಗೆ ಗ್ರಹಗಳ ಕಮಾಂಡರ್ ಮಂಗಳ ಚಂದ್ರನ ರಾಶಿಗೆ ಪದಾರ್ಪಣೆ ಮಾಡಿದ್ದು ಕೆಲವರ ಅದೃಷ್ಟ ಖುಲಾಯಿಸಲಿದೆ.
1/6
ಮಂಗಳ ಗೋಚಾರ
ವೈದಿಕ ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 18, 2026ರಂದು ಗ್ರಹಗಳ ಕಮಾಂಡರ್ ಮಂಗಳ ಚಂದ್ರನ ರಾಶಿಯಾದ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ನವೆಂಬರ್ 12, 2026ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಮಂಗಳ ಮುಂದಿನ ಒಂದೂವರೆ ತಿಂಗಳುಗಳವರೆಗೆ ಐದು ರಾಶಿಯವರಿಗೆ ಸಕಲವೂ ಕೈಗೂಡುವ ಅದೃಷ್ಟದ ಸಮಯ ಇದಾಗಿದ್ದು ಭರ್ಜರಿ ಜಾಕ್‌ಪಾಟ್ ಪಡೆಯುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
2/6
ಮೇಷ ರಾಶಿ
ಮಂಗಳ ಗೋಚಾರ ಫಲವಾಗಿ ಮೇಷ ರಾಶಿಯ ಜನರು ಉದ್ಯೋಗ ರಂಗದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ವ್ಯವಹಾರದಲ್ಲಿ ಪ್ರಗತಿಯ ಸೂಚನೆಗಳಿವೆ. ಉದ್ಯೋಗಸ್ಥರಿಗೆ ಜವಾಬ್ದಾರಿಗಳು ಹೆಚ್ಚಾಗುವ ನಿರೀಕ್ಷೆ ಇದ್ದು, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳಲಿವೆ.
3/6
ವೃಷಭ ರಾಶಿ
ಮಂಗಳ ಸಂಚಾರದಿಂದ ವೃಷಭ ರಾಶಿಯ ಜನರಿಗೆ ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳು ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಅದೃಷ್ಟದ ಸಮಯ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.
4/6
ಕನ್ಯಾ ರಾಶಿ
ಮುಂದಿನ ಒಂದೂವರೆ ತಿಂಗಳು ಮಂಗಳ ಗ್ರಹವು ಕನ್ಯಾ ರಾಶಿಯ ಜನರಿಗೆ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ದಿಢೀರ್ ಧನಲಾಭವು ನಿಮ್ಮ ಭವಿಷ್ಯಕ್ಕಾಗಿ ಉತ್ತಮ ಮೊತ್ತವನ್ನು ಕಲೆಹಾಕಲು ಫಲಪ್ರದವಾಗಿರಲಿದೆ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳು ಸಿಗಲಿವೆ.
5/6
ತುಲಾ ರಾಶಿ
ಮಂಗಳ ಗೋಚಾರವು ತುಲಾ ರಾಶಿಯ ಉದ್ಯೋಗಿಗಳಿಗೆ ಕೀರ್ತಿ, ಮನ್ನಣೆಯನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗುವ ನಿರೀಕ್ಷೆ ಇದೆ. ದೀರ್ಘಾವಧಿಯಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
6/6
ವೃಶ್ಚಿಕ ರಾಶಿ
ಮಂಗಳ ಗೋಚಾರ ಫಲವಾಗಿ ವೃಶ್ಚಿಕ ರಾಶಿಯ ಜನರ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಉದ್ಯೋಗಸ್ಥರಿಗೆ ಹೊಸ ಹೊಸ ಅವಕಾಶಗಳು ಸಿಗುವ ನಿರೀಕ್ಷೆ ಇದ್ದು, ರಾಜಯೋಗವನ್ನು ಅನುಭವಿಸುವ ಸೂಚನೆಗಳಿವೆ. ಹೊಸ ಆಸ್ತಿ ಖರೀದಿಸುವ ನಿಮ್ಮ ಕನಸಿಗೆ ಪೂರಕವಾದ ವಾತಾವರಣ ಇರಲಿದೆ. ಹೊಸ ವಾಹನ ಖರೀದಿಸುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.