ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಕಟಕ ರಾಶಿಯಲ್ಲಿರುವ ಮಂಗಳನು ತುಲಾ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯರನ್ನು ಚತುರ್ಥ ಭಾವದಲ್ಲಿ ನೋಡುತ್ತಿದ್ದಾನೆ. ಮಂಗಳ ದೃಷ್ಟಿ ಯೋಗವು ಕೆಲವು ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್ ಎಂತಲೇ ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
1/6
ಮೇಷ ರಾಶಿ
ಮೇಷ ರಾಶಿಯವರ ನಾಲ್ಕನೇ ಮನೆಯಲ್ಲಿ ಮಂಗಳ ದೃಷ್ಟಿ ಯೋಗದಿಂದ ಈ ರಾಶಿಯ ಜನರಿಗೆ ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಶುಭ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಇನ್ನೂ ಮದುವೆ ಆಗದವರಿಗೆ ಸಿರಿವಂತ ಕುಟುಂಬದಿಂದ ವಿವಾಹ ಪ್ರಸ್ತಾಪಗಳು ಬರಬಹುದು. ಸ್ವಂತ ಮನೆ ಖರೀದಿಸುವ ಸುಯೋಗವೂ ಇದೆ.
2/6
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸಂಪತ್ತಿನ ಮನೆಯಲ್ಲಿ ಮಂಗಳ ಸಂಚಾರದಿಂದಾಗಿ ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ದಕ್ಷತೆ ಇರಲಿದ್ದು, ನಿಮ್ಮ ಪ್ರತಿಭೆಗೆ ಮನ್ನಣೆ ಸಿಗುವ ಅವಕಾಶಗಳಿವೆ. ವ್ಯವಹಾರದಲ್ಲಿ ಬಂಪರ್ ಆರ್ಥಿಕ ಹರಿವನ್ನು ನಿರೀಕ್ಷಿಸಬಹುದು. ಮಕ್ಕಳ ವಿಚಾರವಾಗಿ ಶುಭ ಸಮಾಚಾರವನ್ನು ನಿರೀಕ್ಷಿಸಬಹುದಾಗಿದೆ.
3/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಸ್ವ ರಾಶಿಯಲ್ಲೇ ವಿರಾಜಮಾನನಾಗಿರುವ ಮಂಗಳ ನಾಲ್ಕನೇ ಮನೆಯಲ್ಲಿ ಶುಭ ಗ್ರಹಗಳ ಉಪಸ್ಥಿತಿಯಿಂದ ಭೂ ವಿವಾದಗಳು ಸುಸೂತ್ರವಾಗಿ ಬಗೆಹರಿಯಲು ಸಹಕಾರಿ ಆಗಿವೆ. ವಿದೇಶಿ ಪ್ರಯಾಣದ ನಿಮ್ಮ ಕನಸು ಕೈಗೂಡಲಿದ್ದು, ವ್ಯವಹಾರದಲ್ಲೂ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.
4/6
ಕನ್ಯಾ ರಾಶಿ
ಮಂಗಳ ದೃಷ್ಟಿ ಯೋಗವು ಕನ್ಯಾ ರಾಶಿಯ ಜನರಿಗೆ ಆದಾಯದಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಲಿದೆ. ಬೇರೆಡೆ ಸಿಲುಕಿರುವ ನಿಮ್ಮ ಹಣ ಕೈ ಸೇರಲಿದೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ನ್ಯಾಯಾಲಯ ಪ್ರಕರಣಗಳಲ್ಲಿ ನಿಮ್ಮ ಪರವಾಗಿ ತೀರ್ಪನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯುವಿರಿ. ಒಟ್ಟಾರೆ ಇದು ನಿಮಗೆ ಬಯಸಿದ್ದೆಲ್ಲಾ ಸಿಗುವ ಸುವರ್ಣ ಯುಗ ಎಂತಲೇ ಹೇಳಬಹುದು.
5/6
ತುಲಾ ರಾಶಿ
ಮಂಗಳ ದೃಷ್ಟಿ ಯೋಗವು ತುಲಾ ರಾಶಿಯ ಜನರಿಗೆ ರಾಜ ವೈಭೋಗದ ಜೀವನವನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗ ರಂಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ನಿಮ್ಮ ಅದೃಷ್ಟ ಖುಲಾಯಿಸಲಿದ್ದು ರಾಜರಂತೆ ಬದುಕುವಿರಿ. ವ್ಯವಹಾರ ವಿಸ್ತರಣೆಗೆ ಚಿಂತಿಸುತ್ತಿರುವವರಿಗೆ ಅನುಕೂಲಕರ ಸಮಯ. ಮನೆಯಲ್ಲಿ ಮಕ್ಕಳ ಮದುವೆ ಮಾತುಕತೆಗಳು ಸಕಾರಾತ್ಮಕವಾಗಿರಲಿವೆ.
6/6
ಮಕರ ರಾಶಿ
ಮಕರ ರಾಶಿಯವರಿಗೆ ಏಳನೇ ಮನೆಯಲ್ಲಿ ಮಂಗಳ ದೃಷ್ಟಿ ಯೋಗವು ಕುಟುಂಬದಲ್ಲಿ ಸುಖ, ಸೌಕರ್ಯಗಳನ್ನು ಹೆಚ್ಚದಿಸಲಿದೆ. ವೃತ್ತಿ, ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ಉದ್ಯೋಗದಲ್ಲಿ ನಿಮ್ಮ ಆದ್ಯತೆ ಗಮನಾರ್ಹವಾಗಿ ಹೆಚ್ಚಾಗಲಿದೆ. ನಿರುದ್ಯೋಗಿಗಳಿಗೆ ನೀವು ಬಯಸಿದ ಕೆಲಸ ಸಿಗುವ ಸೂಚನೆಗಳಿವೆ. ಹಣಕಾಸಿನ ಪರಿಸ್ಥಿತಿಯೂ ಸಹ ಮೊದಲಿಗಿಂತ ಉತ್ತಮಗೊಳ್ಳಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.