• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕೇತು ಸಂಚಾರ: 5 ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿ.. ಅದೃಷ್ಟವೋ ಅದೃಷ್ಟ

ಕೇತು ಸಂಚಾರ: 5 ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿ.. ಅದೃಷ್ಟವೋ ಅದೃಷ್ಟ

Written ByYashaswini V
Published: Oct 13, 2026, 08:34 AM IST|Updated: Oct 13, 2026, 08:36 AM IST
joinshare
ಜ್ಯೋತಿಷ್ಯದಲ್ಲಿ ಕೇತುವನ್ನು ಪಾಪ ಗ್ರಹ ಎನ್ನಲಾಗುತ್ತದೆ. ಆದರೂ, ಕೇತು ಶುಭ ಸ್ಥಾನದಲ್ಲಿದ್ದಾಗ ಶುಭ ಫಲವನ್ನೇ ನೀಡುತ್ತಾನೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಮಘಾ ನಕ್ಷತ್ರದಲ್ಲಿ ಕೇತು ಸಂಚಾರವು ಕೆಲವು ರಾಶಿಯರಿಗೆ ಅದೃಷ್ಟವನ್ನು ಹೊತ್ತು ತರಲಿದೆ ಎನ್ನಲಾಗುತ್ತಿದೆ. 

Ketu Nakshatra Transit Effect1/6

ಕೇತು ಸಂಚಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ, ಕ್ರೂರ, ನೆರಳು ಗ್ರಹ ಎನ್ನಲಾಗುವ ಕೇತು ಮಗಾ ನಕ್ಷತ್ರದಲ್ಲಿ ಸಂಚರಿಸಲಿದ್ದು ಈ ಅವಧಿಯಲ್ಲಿ ಐದು ರಾಶಿಯವರ ಜೀವನದಲ್ಲಿ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿ ಆಗಲಿದ್ದಾನೆ. ಕೇತು ಭುಕ್ತಿಯಿಂದ ಈ ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ವೃತ್ತಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ಸೂಚನೆಗಳಿವೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Ketu Nakshatra Transit Effect2/6

ಮೇಷ ರಾಶಿ

ಕೇತು ಸಂಚಾರವು ಮೇಷ ರಾಶಿಯ ಜನರಿಗೆ ಹಣಕಾಸಿನ ಭರವಸೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ವ್ಯಾಪಾರಸ್ಥರಿಗೆ ಅಪಾರ ಲಾಭವಾಗಲಿದ್ದು, ಹೊಸ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಅನುಕೂಲಕರ ಪರಿಸ್ಥಿತಿ ಇರಲಿದೆ. ಹಣಕಾಸಿನ ಸ್ಥಿತಿಯೂ ಸುಧಾರಣೆಗೊಳ್ಳಲಿದೆ.
Ketu Nakshatra Transit Effect3/6

ಸಿಂಹ ರಾಶಿ

ಕೇತು ನಕ್ಷತ್ರ ಬದಲಾವಣೆಯು ಸಿಂಹ ರಾಶಿಯ ಜನರಿಗೆ ಹೊಸ ಭರವಸೆಗಳನ್ನು ತರಲಿದೆ. ಈ ಸಮಯದಲ್ಲಿ ಹಣಕಾಸಿನ ಸ್ಥಿತಿಯೂ ಸುಧಾರಣೆಗೊಳ್ಳಲಿದೆ. ಮಾನಸಿಕ ಒತ್ತಡಗಳು ಕಡಿಮೆ ಆಗಲಿದ್ದು ವೈಯಕ್ತಿಕ ಜೀವನದಲ್ಲೂ ಶಾಂತಿ, ನೆಮ್ಮದಿ ನೆಲೆಸಲಿದೆ. ವಿವಾಹ ಮಾತುಕತೆಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿದೆ.
Ketu Nakshatra Transit Effect4/6

ವೃಶ್ಚಿಕ ರಾಶಿ

ಮಘಾ ನಕ್ಷತ್ರದಲ್ಲಿ ಕೇತು ಸಂಚಾರವು ವೃಶ್ಚಿಕ ರಾಶಿಯ ಜನರಿಗೆ ಕೆಲಸದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ವ್ಯವಹಾರದಲ್ಲಿ ಹೊಸ ಹೊಸ ಅವಕಾಶಗಳು ಸಿಗಲಿದ್ದು, ಆದಾಯವೂ ಗಮನಾರ್ಹವಾಗಿ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವ ಸೂಚನೆಗಳಿವೆ. ಐಷಾರಾಮಿ ವಾಹನ, ಚಿನ್ನದ ಆಭರಣ ಖರೀದಿಸುವ ಸೂಚನೆಗಳಿವೆ.
Ketu Nakshatra Transit Effect5/6

ಧನು ರಾಶಿ

ಮಘಾ ನಕ್ಷತ್ರದಲ್ಲಿ ಕೇತು ಸಂಚಾರದಿಂದ ಧನು ರಾಶಿಯ ಜನರಿಗೆ ಶುಭ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವ್ಯವಹಾರವು ಪ್ರಗತಿಯ ಹಾದಿಯನ್ನು ತುಳಿಯಲಿದ್ದು, ಕೌಟುಂಬಿಕ ವ್ಯವಹಾರಗಳಲ್ಲಿ ಭಾರೀ ಏಳ್ಗೆಯನ್ನು ಕಾಣುವಿರಿ. ವೃತ್ತಿ ಬದುಕಿನಲ್ಲಿ ಎದುರಾಗಿರುವ ಅಡೆತಡೆಗಳು ನಿವಾರಣೆ ಆಗಲಿವೆ. ಉದ್ಯಮಿಗಳಿಗೆ ವಿದೇಶ ವ್ಯವಹಾರದಿಂದ ಲಾಭವಾಗಲಿದೆ.
Ketu Nakshatra Transit Effect6/6

ಮೀನ ರಾಶಿ

ಕೇತು ನಕ್ಷತ್ರ ಬದಲಾವಣೆಯು ಮೀನ ರಾಶಿಯವರಿಗೆ ವ್ಯವಹಾರದಲ್ಲಿ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕಾರಿ ಆಗದಲಿದೆ. ಈ ಸಮಯದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದ್ದು, ವೆಚ್ಚಗಳು ಕಡಿಮೆ ಆಗಲಿವೆ. ಇದರಿಂದ ಭವಿಷ್ಯಕ್ಕಾಗಿ ಉತ್ತಮ ಮೊತ್ತವನ್ನು ಕಲೆಹಾಕುವ ಸೂಚನೆಗಳೂ ಇವೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ದಿನ ಭವಿಷ್ಯ 13-10-2026: ಮಂಗಳವಾರದಂದು ಪ್ರೀತಿ ಯೋಗ.. ಈ ರಾಶಿಯವರಿಗೆ ಶುಭ

ದಿನ ಭವಿಷ್ಯ 13-10-2026: ಮಂಗಳವಾರದಂದು ಪ್ರೀತಿ ಯೋಗ.. ಈ ರಾಶಿಯವರಿಗೆ ಶುಭ

2

ಸುಳ್ಯದಲ್ಲಿ ವಿದ್ಯುತ್‌ ಆಘಾತದಿಂದ ಇಬ್ಬರು ಯುವಕರು ಸಾವು, ಬಾಲಕನಿಗೆ ಗಾಯ

3

ದಸರಾ ವೇಳೆ ಮೈಸೂರಿಗೆ ಹೋಗಲು ಪ್ಲಾನ್‌ ಮಾಡುವವರಿಗಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್‌

4

'ಪ್ರೇಮದ ಊರಲಿ’ OTT ಪ್ರಸಾರದ ಬಗ್ಗೆ ಚಿತ್ರತಂಡದಿಂದ ಮಹತ್ವದ ಮಾಹಿತಿ

5

ಸಂಗೀತಾ ಭಟ್‌ ಅಲ್ಲದಿದ್ದರೆ... ಈ ವಾರ ಬಿಗ್‌ ಬಾಸ್‌ ನಿಂದ ಯಾರು ಹೊರಬೇಕಿತ್ತು? ಅತಿ ಕಡಿಮೆ ವೋಟ್‌ ಪಡೆದಿದ್ದು ಇವರೇನಾ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.