ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಯೋಜಿಸುತ್ತಿರುವವರಿಗಾಗಿ ಕೆಎಸ್‌ಆರ್‌ಟಿಸಿ ಒಂದು ದಿನದ ವಿಶೇಷ ಮೈಸೂರು ಪ್ಯಾಕೇಜ್ ಟೂರ್ ಘೋಷಿಸಿದೆ. ಈ ಟೂರ್ ಪ್ಯಾಕೇಜ್ ಎಲ್ಲಿಂದ ಎಲ್ಲಿಯವರೆಗೆ ಲಭ್ಯವಿದೆ? ದರ ಎಷ್ಟು? ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೈಸೂರು ಪ್ಯಾಕೇಜ್ ಟೂರ್ ಎಲ್ಲಿಂದ ಎಲ್ಲಿಗೆ?
ಕೆಎಸ್‌ಆರ್‌ಟಿಸಿ ಘೋಷಿಸಿರುವ ಈ ವಿಶೇಷ ಟೂರ್ ಪ್ಯಾಕೇಜ್ ಬೆಂಗಳೂರಿನಿಂದ ಮೈಸೂರಿಗೆ ಭೇಟಿ ನೀಡಲು ಬಯಸುವವರಿಗಾಗಿ ಆಗಿದೆ.
ಈ ವಿಶೇಷ ಮೈಸೂರು ಪ್ಯಾಕೇಜ್ ಟೂರ್ ಸೌಲಭ್ಯ ಎಷ್ಟು ದಿನಗಳವರೆಗೆ ಇರಲಿದೆ?
ಕೆಎಸ್‌ಆರ್‌ಟಿಸಿ ನೀಡಿರುವ ಮಾಹಿತಿಯ ಪ್ರಕಾರ, ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಘೋಷಿಸಲಾಗಿರುವ ಈ ಮೈಸೂರು ಪ್ಯಾಕೇಜ್ ಟೂರ್ ಸೌಲಭ್ಯವು ಅಕ್ಟೋಬರ್ 13ರ ಬುಧವಾರದಿಂದ ಎರಡು ವಾರಗಳವರೆಗೆ ಎಂದರೆ ಅಕ್ಟೋಬರ್ 28ರವರೆಗೆ ಲಭ್ಯವಿರುತ್ತದೆ.
ಈ ಮೈಸೂರು ಪ್ಯಾಕೇಜ್ ಟೂರ್ ಯಾವೆಲ್ಲಾ ಸ್ಥಳಗಳನ್ನು ಒಳಗೊಂಡಿರುತ್ತದೆ?
ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಮೈಸೂರಿಗೆ ‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳಲ್ಲಿ
ಮೈಸೂರು ಪ್ಯಾಕೇಜ್ ಟೂರ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ ಟೂರ್‌ನಲ್ಲಿ ಭೇಟಿ ನೀಡಲಾಗುವ ಪ್ರಮುಖ ಸ್ಥಳಗಳೆಂದರೆ..
* ನಿಮಿಷಾಂಬ
* ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ
* ದರಿಯಾ ದೌಲತ್
* ಗುಂಬಜ್
* ಸಂಗಮ
* ಸೈಂಟ್ ಫಿಲೋಮಿನಾ ಚರ್ಚ್
* ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ
* ಮೈಸೂರು ಅರಮನೆ
* ಚಾಮರಾಜೇಂದ್ರ ಮೃಗಾಲಯ (ಮೈಸೂರು ಝೂ)
* ಚಾಮುಂಡಿ ಬೆಟ್ಟ
ಮೈಸೂರು ಪ್ಯಾಕೇಜ್ ಟೂರ್ ಬಸ್ ವೇಳಾಪಟ್ಟಿ?
* ಬೆಳಿಗ್ಗೆ 6:00 ಗಂಟೆಗೆ ಬೆಂಗಳೂರಿನ ಸ್ಯಾಟಿಲೈಟ್ ಬಸ್ ನಿಲ್ದಾಣದಿಂದ ಹೊರಡಲಿರುವ ಅಶ್ವಮೇಧ ಕ್ಲಾಸಿಕ್ ಬಸ್ ಎಕ್ಸ್‌ಪ್ರೆಸ್‌ವೇ ಮಾರ್ಗವಾಗಿ ಸಾಗಿ ಬೆಳಿಗ್ಗೆ 8:00 ಗಂಟೆಗೆ ನಿಮಿಷಾಂಬ ದೇವಾಲಯಕ್ಕೆ ತೆರಳಲಿದೆ. ಇಲ್ಲಿ ಒಂದು ಗಂಟೆಯ ಸಮಯಾವಕಾಶ ಇರಲಿದ್ದು ದೇವಾಲಯದ ವೀಕ್ಷಣೆಯ ಜೊತೆಗೆ ಉಪಾಹಾರಕ್ಕೂ ಸಮಯ ನೀಡಲಾಗುತ್ತದೆ.
* ಬಳಿಕ ಬೆಳಗ್ಗೆ 9:00 ಗಂಟೆಗೆ ನಿಮಿಷಾಂಬ ದೇವಾಲಯದಿಂದ ಹೊರಟು ಮೊದಲಿಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಗುವುದು. ಅಲ್ಲಿಂದ ದರಿಯಾ ದೌಲತ್, ಗುಂಬಜ್, ಸಂಗಮಗಳನ್ನು ವೀಕ್ಷಿಸಿ 11:00 ಗಂಟೆಗೆ ಮೈಸೂರಿನತ್ತ ಪ್ರಯಾಣ.
* ಬೆಳಗ್ಗೆ 11:30 ಪ್ರಸಿದ್ಧ ಸೈಂಟ್ ಫಿಲೋಮಿನಾ ಚರ್ಚ್‌ಗೆ ಭೇಟಿ
* ಮಧ್ಯಾಹ್ನ 12:00 ಯಿಂದ 01:00 ಗಂಟೆವರೆಗೆ ಊಟದ ವಿರಾಮ ಇರಲಿದೆ.
* ಮಧ್ಯಾಹ್ನ 1:00 – 02:00 ಕಾವೇರಿ ಆರ್ಟ್ ಗ್ಯಾಲರಿ & ಕ್ರಾಫ್ಟ್ ಎಂಪೋರಿಯಂ
* ಮಧ್ಯಾಹ್ನ 2:00 – ಸಂಜೆ 04:00 ಮೈಸೂರು ಅರಮನೆ ವೀಕ್ಷಣೆ
* ಸಂಜೆ 04:00 ಗಂಟೆಗೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ.
* ಸಂಜೆ 5:30ಕ್ಕೆ ಚಾಮುಂಡಿಬೆಟ್ಟಕ್ಕೆ ಭೇಟಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ.
* ರಾತ್ರಿ 8:00 ಗಂಟೆಗೆ ಮೈಸೂರಿನಿಂದ ಎಕ್ಸ್‌ಪ್ರೆಸ್‌ವೇ ಮೂಲಕ ಬೆಂಗಳೂರಿನ ಕಡೆಗೆ ಪ್ರಯಾಣ.
ಮೈಸೂರು ಪ್ಯಾಕೇಜ್ ಟೂರ್ ದರ ವಿವರ:
ಮೈಸೂರು ಪ್ಯಾಕೇಜ್ ಟೂರ್‌ಗಾಗಿ ಕೆಎಸ್‌ಆರ್‌ಟಿಸಿ ವಯಸ್ಕರಿಗೆ 950 ರೂ. ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ): 750 ರೂ. ದರವನ್ನು ನಿಗದಿಪಡಿಸಿದೆ. ಆದಾಗ್ಯೂ, ಈ ದರವು ಕೇವಲ ಬಸ್ ಚಾರ್ಜ್ ಮಾತ್ರ ಆಗಿರುತ್ತದೆ. ಪ್ರಯಾಣಿಕರು ತಮ್ಮ ಆಹಾರ, ಪ್ರೇಕ್ಷಣೀಯ ಸ್ಥಳಗಳಲ್ಲಿ ಎಂಟ್ರಿ ಟಿಕೆಟ್ ದರಗಳನ್ನು ತಾವೇ ಭರಿಸಬೇಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.
1 ದಿನದ ಮೈಸೂರು ಪ್ಯಾಕೇಜ್ ಟೂರ್‌ಗೆ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ:
1 ದಿನದ ಮೈಸೂರು ಪ್ಯಾಕೇಜ್ ಟೂರ್ ಪ್ರವಾಸದ ಪ್ರಯೋಜನವನ್ನು ಪಡೆಯಲು ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಇದಕ್ಕಾಗಿ ವೆಬ್‌ಸೈಟ್: http://www.ksrtc.in ಮತ್ತು http://www.ksrtc.karnataka.gov.in ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
080-26252625, 7760990100, 7760990560, 7760990287