• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದೀಪಾವಳಿಗೂ ಮುನ್ನವೇ ಸಿಂಹ ರಾಶಿಗೆ ಗುರು ಪ್ರವೇಶ: ಈ ರಾಶಿಯವರಿಗೆ ಗುರು ದೆಸೆ ಆರಂಭ.. ಹಠಾತ್‌ ಧನ ವೃದ್ಧಿ

ದೀಪಾವಳಿಗೂ ಮುನ್ನವೇ ಸಿಂಹ ರಾಶಿಗೆ ಗುರು ಪ್ರವೇಶ: ಈ ರಾಶಿಯವರಿಗೆ ಗುರು ದೆಸೆ ಆರಂಭ.. ಹಠಾತ್‌ ಧನ ವೃದ್ಧಿ

Written ByYashaswini V
Published: Oct 23, 2026, 08:46 AM IST|Updated: Oct 23, 2026, 08:50 AM IST
joinshare

ಜ್ಯೋತಿಷ್ಯದಲ್ಲಿ ಜ್ಞಾನ, ಸಂಪತ್ತಿನ ಅಂಶ ಎನ್ನಲಾಗುವ ಗುರು ಶೀಘ್ರದಲ್ಲೇ ಸೂರ್ಯನ ರಾಶಿಗೆ ಪ್ರವೇಶಿಸಲಿದ್ದಾನೆ. 

Guru Dese Effect1/6

ಗುರು ಸಂಚಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಜ್ಞಾನ, ಸಂಪತ್ತು, ಶಿಕ್ಷಣ, ಅದೃಷ್ಟದ ಗ್ರಹ ಎನ್ನಲಾಗುವ ಗುರು ಅಕ್ಟೋಬರ್‌ 31, 2026ರಂದು ಚಂದ್ರನ ಕರ್ಕಾಟಕ ರಾಶಿಯನ್ನು ತೊರೆದು ಸೂರ್ಯ ಅಧಿಪತ್ಯದ ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
Guru Dese Effect2/6

ಸೂರ್ಯನ ರಾಶಿಯಲ್ಲಿ ಗುರು ಸಂಚಾರ

ದೀಪಾವಳಿಗೂ ಮೊದಲೇ ಸೂರ್ಯನ ಸಿಂಹ ರಾಶಿಯಲ್ಲಿ ಗುರು ಸಂಚಾರವು ತುಂಬಾ ಶುಭಪ್ರದವಾಗಿದ್ದು ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಗುರು ದೆಸೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
Guru Dese Effect3/6

ದೀಪಾವಳಿಗೂ ಮೊದಲೇ ಗುರು ದೆಸೆ

ಜ್ಯೋತಿಷ್ಯದ ಪ್ರಕಾರ, ದೀಪಾವಳಿಗೂ ಮೊದಲೇ ಮೂರು ರಾಶಿಯವರಿಗೆ ʼಗುರು ದೆಸೆʼ ಆರಂಭವಾಗಲಿದ್ದು, ವೃತ್ತಿ, ವ್ಯವಹಾರ, ಹಣಕಾಸಿನ ಪರಿಸ್ಥಿತಿಗಳಲ್ಲಿ ಭಾರೀ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
Guru Dese Effect4/6

ಮೇಷ ರಾಶಿ

ಗುರು ದೆಸೆ ಪ್ರಭಾವವು ಮೇಷ ರಾಶಿಯ ಜನರಿಗೆ ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವೃತ್ತಿ, ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳು ಸಿಗಲಿದ್ದು, ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ನಿರೀಕ್ಷೆ ಇದೆ. ಜೀವನದ ಪ್ರತಿ ಆಯಾಮದಲ್ಲೂ ಸಕಾರಾತ್ಮಕತೆ ಹೆಚ್ಚಾಗಲಿದೆ. ಹೂಡಿಕೆಗಳಿಂದ ಹಠಾತ್‌ ಧನಲಾಭವಿದೆ.
Guru Dese Effect5/6

ಸಿಂಹ ರಾಶಿ

ಸ್ವ ರಾಶಿಗೆ ಸೂರ್ಯ ಪ್ರವೇಶಿಸುತ್ತಿದ್ದಂತೆ ಸಿಂಹ ರಾಶಿಯವರ ಅದೃಷ್ಟವೇ ಖುಲಾಯಿಸಲಿದೆ. ಗುರು ದೆಸೆ ಪ್ರಭಾವದಿಂದ ಮದುವೆ ಮಾತುಕತೆಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ಹೊಸ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಸಮಯ. ಸ್ವಂತ ಮನೆ ಖರೀದಿಸುವ ನಿಮ್ಮ ಕನಸು ನನಸಾಗಲಿದೆ.
Guru Dese Effect6/6

ವೃಶ್ಚಿಕ ರಾಶಿ

ದೀಪಾವಳಿಗೂ ಮೊದಲೇ ವೃಶ್ಚಿಕ ರಾಶಿಯ ಜನರಿಗೆ ಗುರು ದೆಸೆ ಆರಂಭವಾಗಲಿದ್ದು ವೃತ್ತಿ, ವ್ಯವಹಾರ ವಿಷಯಗಳಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆ ಇದ್ದು, ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಯತ್ನ ಕಾರ್ಯಾಧಿಗಳಲ್ಲಿ ಶುಭ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಕುಬೇರನ ಸಂಪತ್ತೇ ನಿಮ್ಮ ಕೈ ಸೇರಲಿದೆ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

Trending

  • News
  • Photos
  • Videos
ಬೆಂಗಳೂರು ಮೆಟ್ರೋ ಹೊಸೂರು ವಿಸ್ತರಣೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ವಿರೋಧ

ಬೆಂಗಳೂರು ಮೆಟ್ರೋ ಹೊಸೂರು ವಿಸ್ತರಣೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ತೀವ್ರ ವಿರೋಧ

2

ಕರ್ನಾಟಕದಲ್ಲಿ ಅಕ್ಟೋಬರ್ 24ರವರೆಗೆ ಮುಂದುವರಿಯಲಿದೆ ಮಳೆಯ ಅಬ್ಬರ: ಹವಾಮಾನ ಇಲಾಖೆ ಎಚ್ಚರಿಕೆ

3

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ರಣಕಹಳೆ: ಗದಗದಲ್ಲಿ ಬಿಗಿ ಭದ್ರತೆಯೊಂದಿಗೆ ಬಿರುಸಿನ ಮತದಾನ ಆರಂಭ!

4

ಇಂದಿನ ಹನ್ನೆರಡು ರಾಶಿಗಳ ಫಲಾಫಲಗಳು: ನಿಮ್ಮ ರಾಶಿಗೆ ಅಕ್ಟೋಬರ್ 23 ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ವಿವರ

5

ಅಪ್ಪನ ಆಸ್ತಿಯನ್ನ ಮಗಳಿಗೆ ಗೊತ್ತಿಲ್ಲದಂತೆ ಮಾರಬಹುದೇ..? ಹೆಣ್ಣುಮಕ್ಕಳೇ ಸಹೋದರರಿಂದ ಮೋಸ ಹೋಗಬೇಡಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.