• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಗುರು ಗೋಚಾರದಿಂದ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ! ಮುಂದಿನ 87 ದಿನ ಸಂಪತ್ತು, ಉದ್ಯೋಗದಲ್ಲಿ ಪ್ರಗತಿ!

ಗುರು ಗೋಚಾರದಿಂದ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ! ಮುಂದಿನ 87 ದಿನ ಸಂಪತ್ತು, ಉದ್ಯೋಗದಲ್ಲಿ ಪ್ರಗತಿ!

Written ByPuttaraj K Alur
Published: Nov 01, 2026, 06:33 PM IST|Updated: Nov 01, 2026, 06:45 PM IST
joinshare
ಅಕ್ಟೋಬರ್ 31ರಂದು ಗುರು ಗ್ರಹವು ಸಿಂಹ ರಾಶಿಗೆ ಪ್ರವೇಶಿಸಿದ್ದು, ಮುಂದಿನ 87 ದಿನಗಳ ಅವಧಿಯಲ್ಲಿ ಐದು ರಾಶಿಯವರಿಗೆ ವಿಶೇಷ ಶುಭಫಲ ದೊರೆಯಲಿದೆ ಎಂದು ಜ್ಯೋತಿಷ್ಯ ಮೂಲಗಳು ತಿಳಿಸಿವೆ.

Jupiter Transit 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ವಿಶೇಷ ಮಹತ್ವವಿದೆ. ಗುರುವನ್ನ ಜ್ಞಾನ, ಅದೃಷ್ಟ, ಸಂಪತ್ತು, ಶುಭಕಾರ್ಯಗಳು ಮತ್ತು ವೈವಾಹಿಕ ಜೀವನದ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಗುರು ಗ್ರಹದ ರಾಶಿ ಬದಲಾವಣೆಯು ದ್ವಾದಶ ರಾಶಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನ ಉಂಟುಮಾಡುತ್ತದೆ ಎಂಬ ನಂಬಿಕೆಯಿದೆ. ಇದೀಗ ಅಕ್ಟೋಬರ್ 31ರಂದು ಗುರು ಗ್ರಹವು ಸಿಂಹ ರಾಶಿಗೆ ಪ್ರವೇಶಿಸಿದ್ದು, ಮುಂದಿನ 87 ದಿನಗಳ ಅವಧಿಯಲ್ಲಿ ಐದು ರಾಶಿಯವರಿಗೆ ವಿಶೇಷ ಶುಭಫಲ ದೊರೆಯಲಿದೆ ಎಂದು ಜ್ಯೋತಿಷ್ಯ ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಬಹುದು. ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ, ಹೊಸ ಒಪ್ಪಂದಗಳು ಹಾಗೂ ಬಹುದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಹಾಗಾದರೆ ಗುರುವಿನ ಈ ಗೋಚಾರದಿಂದ ಯಾವ ಐದು ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯಿರಿ.

Jupiter Transit 20261/6

ಮುಂದಿನ 87 ದಿನ ಈ ರಾಶಿಗಳಿಗೆ ಶುಭಕಾಲ!

ಅಕ್ಟೋಬರ್ 31ರಂದು ಗುರು ಗ್ರಹವು ಸಿಂಹ ರಾಶಿಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಮೇಷ, ಕರ್ಕಾಟಕ, ಸಿಂಹ, ಧನು ಮತ್ತು ಕುಂಭ ರಾಶಿಯವರಿಗೆ ಮುಂದಿನ 87 ದಿನಗಳು ವಿಶೇಷವಾಗಿರಲಿವೆ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಉದ್ಯೋಗ, ವ್ಯಾಪಾರ, ಆರ್ಥಿಕ ಪರಿಸ್ಥಿತಿ, ಕುಟುಂಬ ಜೀವನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಐದು ರಾಶಿಯವರು ಅನುಕೂಲಕರ ಬದಲಾವಣೆಗಳನ್ನ ನಿರೀಕ್ಷಿಸಬಹುದು ಎಂಬುದು ಈ ಗೋಚಾರದ ಜ್ಯೋತಿಷ್ಯ ಫಲವಾಗಿದೆ.
Jupiter Transit 20262/6

ಮೇಷ ರಾಶಿ

ಮೇಷ ರಾಶಿಯವರಿಗೆ ಗುರು ಗ್ರಹದ ಈ ಸಂಚಾರವು ಅನುಕೂಲಕರವಾಗಿರಲಿದೆ ಎಂದು ಹೇಳಲಾಗಿದೆ. ಬಹಳ ದಿನಗಳಿಂದ ಕೈ ಸೇರದೆ ಉಳಿದಿದ್ದ ಹಣ ಮರಳಿ ಬರುವ ಸಾಧ್ಯತೆಯಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳು ದೊರೆಯಬಹುದು. ಉದ್ಯೋಗದಲ್ಲಿರುವವರಿಗೆ ಈ ಅವಧಿ ಉತ್ತಮವಾಗಿದ್ದು, ಬಡ್ತಿ ಅಥವಾ ವೇತನ ಹೆಚ್ಚಳದ ನಿರೀಕ್ಷೆಯಿದೆ. ವ್ಯಾಪಾರಸ್ಥರಿಗೆ ಲಾಭದಾಯಕವಾದ ಹೊಸ ಒಪ್ಪಂದಗಳು ಸಿಗುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಉತ್ತಮ ಆದಾಯ ತಂದುಕೊಡುವ ವ್ಯವಹಾರಿಕ ನಿರ್ಧಾರಗಳನ್ನ ಕೈಗೊಳ್ಳಲು ಅವಕಾಶಗಳು ದೊರೆಯಬಹುದು. ಇನ್ನು ವೈವಾಹಿಕ ಜೀವನದಲ್ಲಿದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿ ದಾಂಪತ್ಯದಲ್ಲಿ ಸಂತೋಷ ಹೆಚ್ಚಾಗಲಿದೆ.
Jupiter Transit 20263/6

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಗುರುವಿನ ಗೋಚಾರದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹೊಸ ಕೆಲಸಗಳನ್ನ ಕೈಗೆತ್ತಿಕೊಳ್ಳಲು ಆಸಕ್ತಿ ಮೂಡಲಿದೆ. ಮನೆ ಅಥವಾ ವಾಹನ ಖರೀದಿಸುವ ಯೋಜನೆ ಹೊಂದಿರುವವರಿಗೆ ಈ ಅವಧಿ ಅನುಕೂಲಕರವಾಗಿರಬಹುದು. ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ನಿಧಾನವಾಗಿ ನಿವಾರಣೆಯಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದ್ದು, ಪ್ರಗತಿಗೆ ಪೂರಕವಾದ ಬೆಳವಣಿಗೆಗಳು ಕಂಡುಬರಬಹುದು. ವೈಯಕ್ತಿಕ ಜೀವನದಲ್ಲಿಯೂ ಉತ್ತಮ ಬದಲಾವಣೆಗಳನ್ನ ನಿರೀಕ್ಷಿಸಬಹುದು.
Jupiter Transit 20264/6

ಸಿಂಹ ರಾಶಿ

ಗುರು ಗ್ರಹವು ಸಿಂಹ ರಾಶಿಗೆ ಪ್ರವೇಶಿಸಿರುವುದರಿಂದ ಈ ರಾಶಿಯವರಿಗೆ ವಿಶೇಷ ಶುಭಫಲಗಳು ದೊರೆಯಲಿವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಉದ್ಯಮಿಗಳಿಗೆ ಆರ್ಥಿಕವಾಗಿ ಉತ್ತಮ ಸಮಯವಾಗಿದ್ದು, ವ್ಯಾಪಾರದಲ್ಲಿ ಗಣನೀಯ ಲಾಭ ಗಳಿಸುವ ಅವಕಾಶಗಳಿವೆ. ಬಹಳ ಸಮಯದಿಂದ ಪೂರ್ಣಗೊಳ್ಳದೆ ಬಾಕಿ ಉಳಿದಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರಬಹುದು. ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಸಾಧ್ಯತೆಯೂ ಇದೆ. ಹೂಡಿಕೆ ಮಾಡುವವರಿಗೆ ಈ ಅವಧಿ ಅನುಕೂಲಕರವಾಗಿರಲಿದೆ ಎಂದು ಹೇಳಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಅವಕಾಶ ಹೊಂದಿರುತ್ತಾರೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುವ ಸಾಧ್ಯತೆಯಿದ್ದು, ದಾಂಪತ್ಯ ಜೀವನದಲ್ಲಿಯೂ ಸಾಮರಸ್ಯ ಹೆಚ್ಚಾಗಬಹುದು.
Jupiter Transit 20265/6

ಧನು ರಾಶಿ

ಧನು ರಾಶಿಯವರಿಗೆ ಗುರು ಗ್ರಹದ ವಿಶೇಷ ಅನುಗ್ರಹ ದೊರೆಯಲಿದೆ ಎಂಬ ಜ್ಯೋತಿಷ್ಯ ನಂಬಿಕೆಯಿದೆ. ಬಹಳ ದಿನಗಳಿಂದ ಮುಂದೂಡಲ್ಪಟ್ಟಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಹೊಸ ಅವಕಾಶಗಳು ಲಭಿಸಲಿದ್ದು, ವ್ಯವಹಾರ ವಿಸ್ತರಣೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ನಡೆಸುತ್ತಿರುವವರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿಯೂ ಯಶಸ್ಸಿನ ಹಾದಿ ಸುಗಮವಾಗಬಹುದು. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದ್ದು, ಮಕ್ಕಳಿಂದ ಶುಭ ಸುದ್ದಿಗಳನ್ನ ಕೇಳುವ ಅವಕಾಶವಿದೆ. ಒಟ್ಟಾರೆ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಉತ್ತಮ ಬೆಳವಣಿಗೆಗಳನ್ನ ನಿರೀಕ್ಷಿಸಬಹುದು.
Jupiter Transit 20266/6

ಕುಂಭ ರಾಶಿ

ಕುಂಭ ರಾಶಿಯವರಿಗೆ ಗುರು ಗ್ರಹದ ಸಂಚಾರವು ಶುಭಕರವಾಗಿರಲಿದೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಕೈಗೆತ್ತಿಕೊಂಡಿರುವ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಹಿಂದೆ ಬೇರೆಯವರಿಗೆ ಸಾಲವಾಗಿ ನೀಡಿದ್ದ ಹಣ ವಾಪಸ್ ಸಿಗಬಹುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಪ್ರಮುಖ ಒಪ್ಪಂದಗಳು ಅಂತಿಮಗೊಳ್ಳುವ ಅವಕಾಶವಿದೆ. ಹೊಸ ವ್ಯವಹಾರಗಳಿಂದ ಲಾಭ ಗಳಿಸುವ ಸಾಧ್ಯತೆಯೂ ಇದೆ. ಹಣಕಾಸಿನ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರಬಹುದು. ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗಲಿದ್ದು, ಕುಟುಂಬದಲ್ಲಿಯೂ ಉತ್ತಮ ವಾತಾವರಣ ನಿರ್ಮಾಣವಾಗಲಿದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)
TAGS:
Astro Tips
Kannada News

Trending

  • News
  • Photos
  • Videos
ರಾಯಚೂರಿನಲ್ಲಿ ಘೋರ ದುರಂತ: ಪತ್ನಿ, ಇಬ್ಬರು ಮಕ್ಕಳನ್ನ ಕೊಂ*ದು ರೈಲಿಗೆ ತಲೆಕೊಟ್ಟ ತಂದೆ!

ರಾಯಚೂರಿನಲ್ಲಿ ಘೋರ ದುರಂತ: ಪತ್ನಿ, ಇಬ್ಬರು ಮಕ್ಕಳನ್ನ ಕೊಂ*ದು ರೈಲಿಗೆ ತಲೆಕೊಟ್ಟ ತಂದೆ!

2

ಕಾಲ ಬದಲಾದರೂ ಕರಗದ ಕ್ರೇಜ್.. ಭಾರತೀಯರಿಗೆ ವಿಸ್ಕಿ ಏಕೆ ಇಷ್ಟ ಗೊತ್ತೆ..? ರೋಚಕ ಕಥೆ ಇಲ್ಲಿದೆ

3

ಹಾಸನಾಂಬೆ ದರ್ಶನಕ್ಕೆ ಹೋಗಲ್ಲ; ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ.ರೇವಣ್ಣ ಮತ್ತೆ ಆಕ್ರೋಶ!

4

ಬೇಲಿಯೇ ಹೊಲ ಮೇಯ್ದ ಕಥೆ: 40 ಲಕ್ಷ ಲೂಟಿ ಮಾಡಿ ಸಿಕ್ಕಿಬಿದ್ದ ಟ್ರಸ್ಟ್ ಸಿಬ್ಬಂದಿ!

5

ಬೆಂಗಳೂರು-ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಗಿಫ್ಟ್! ಬುಲೆಟ್ ರೈಲು ಯೋಜನೆಯೂ ಮುಕ್ತಾಯ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.