ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವಾನು ದೇವತೆಗಳ ದೇವಗುರು ಎಂದು ಪರಿಗಣಿಸಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ, ಪ್ರಸ್ತುತ ಗುರು ಗ್ರಹ ತನ್ನ ಉಚ್ಚ ರಾಶಿಯಲ್ಲಿ ವಿರಾಜಮಾನನಾಗಿದ್ದು, ಆಶ್ಲೇಷಾ ನಕ್ಷತ್ರದ 3ನೇ ಪಾದದಲ್ಲಿ ಸಂಚರಿಸುತ್ತಿದ್ದಾನೆ.
1/6
ಗುರು ಗೋಚಾರ
ವೈದಿಕ ಜ್ಯೋತಿಷ್ಯದಲ್ಲಿ ಜ್ಞಾನ, ಅದೃಷ್ಟದ ಗ್ರಹವೆಂದು ಪರಿಗಣಿಸಲಾಗುವ ದೇವಗುರು ಬೃಹಸ್ಪತಿ ಪ್ರಸ್ತುತ, ತನ್ನ ಉತ್ಕೃಷ್ಟ ರಾಶಿಯಾದ ಕರ್ಕಾಟಕ ರಾಶಿಯಲ್ಲಿ ಕುಳಿತಿದ್ದಾನೆ. ಉಚ್ಚ ರಾಶಿಯಲ್ಲಿ ಗುರು ಸಂಚಾರವು ರಾಶಿಗಳಿಗೆ ಶುಭ ಫಲಗಳನ್ನೇ ನೀಡಲಿದೆ.
2/6
ಗುರು ನಕ್ಷತ್ರ ಪರಿವರ್ತನೆ
ಕರ್ಕಾಟಕ ರಾಶಿಯಲ್ಲಿ ವಿರಾಜಮಾನನಾಗಿರುವ ಗುರು ಆಶ್ಲೇಷಾ ನಕ್ಷತ್ರದ 3ನೇ ಪಾದದಲ್ಲಿ ಸಂಚರಿಸುತ್ತಿದ್ದು ಅಕ್ಟೋಬರ್ 8ರಂದು ಆಶ್ಲೇಷಾ ನಕ್ಷತ್ರದ 4ನೇ ಪಾದಕ್ಕೆ ಪ್ರವೇಶಿಸಲಿದ್ದಾನೆ.
3/6
ಆಶ್ಲೇಷಾ ನಕ್ಷತ್ರದಲ್ಲಿ ಗುರು ಸಂಚಾರ
ಆಶ್ಲೇಷಾ ನಕ್ಷತ್ರದ 4ನೇ ಪಾದದಲ್ಲಿ ಗುರು ಸಂಚಾರದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಈ ಅವಧಿಯಲ್ಲಿ ಮೂರು ರಾಶಿಯವರಿಗೆ ಭಾಗ್ಯೋದಯವಾಗಿಲಿದ್ದು ಕುಬೇರನ ಸಂಪತ್ತೇ ಕೈ ಸೇರಲಿದೆ ಎಂದು ಹೇಳಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ...
4/6
ಮೇಷ ರಾಶಿ
ಆಶ್ಲೇಷಾ ನಕ್ಷತ್ರದ 4ನೇ ಪಾದದಲ್ಲಿ ಗುರು ಸಂಚಾರವು ಮೇಷ ರಾಶಿಯವರಿಗೆ ವಿಶೇಷವಾಗಿ ಫಲಪ್ರದವಾಗಿದ್ದು, ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಶುಭ ಫಲಿತಾಂಶಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ಮೂಡಿದ್ದ ಅಶಾಂತಿಯ ವಾತಾವರಣ ಮರೆಯಾಗಲಿದೆ. ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ.
5/6
ಕರ್ಕಾಟಕ ರಾಶಿ
ಆಶ್ಲೇಷಾ ನಕ್ಷತ್ರದ 4ನೇ ಪಾದಕ್ಕೆ ಗುರು ಪ್ರವೇಶಿಸುತ್ತಿದ್ದಂತೆ ಕರ್ಕಾಟಕ ರಾಶಿಯ ಜನರ ಅದೃಷ್ಟವೇ ಬದಲಾಗಲಿದೆ. ಈ ಅವಧಿಯಲ್ಲಿ ವೃತ್ತಿ, ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಸಾಕ್ಷಾತ್ ಕುಬೇರನ ಸಂಪತ್ತೇ ನಿಮ್ಮ ಕೈ ಸೇರುವ ನಿರೀಕ್ಷೆ ಇದೆ. ಕಾನೂನು ವಿಚಾರಗಳಲ್ಲಿ ಜಯ ಸಾಧಿಸುವಿರಿ.
6/6
ಮಕರ ರಾಶಿ
ಆಶ್ಲೇಷಾ ನಕ್ಷತ್ರದ 4ನೇ ಪಾದಕ್ಕೆ ಗುರು ಪ್ರವೇಶವು ಮಕರ ರಾಶಿಯ ಜನರಿಗೆ ಶುಭಪ್ರದವೆಂದು ಸಾಬೀತುಪಡಿಸಲಿದೆ. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ನಿರೀಕಷೆ ಇದ್ದು, ಜೀವನದಲ್ಲಿ ನಾನಾ ರೀತಿಯ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ದೀರ್ಘಾವಧಿಯಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರುವ ಸೂಚನೆಗಳಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.