ಸೆಪ್ಟೆಂಬರ್ 18ರ ರಾತ್ರಿ ಗುರು–ಚಂದ್ರನ ನಡುವೆ ಷಡಾಷ್ಟಕ ಯೋಗ ರೂಪುಗೊಳ್ಳಲಿದೆ. ಇದರ ಪರಿಣಾಮ ವೃಷಭ, ತುಲಾ ಮತ್ತು ಮಕರ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ.
Jupiter Moon Shadashtaka Yoga: ಸೆಪ್ಟೆಂಬರ್ 18ರ ರಾತ್ರಿ ಗುರು ಮತ್ತು ಚಂದ್ರ ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿ ಸ್ಥಾನ ಪಡೆದು, ಷಡಾಷ್ಟಕ ಯೋಗವನ್ನ ರೂಪಿಸುತ್ತಾರೆ. ಚಂದ್ರನು ಧನು ರಾಶಿಗೆ ಸಾಗುವಾಗ ಈ ಯೋಗವು ರೂಪುಗೊಳ್ಳುತ್ತದೆ. ಸೆ.18ರಂದು ರಾತ್ರಿ 10:45ಕ್ಕೆ ಚಂದ್ರನು ಧನು ರಾಶಿಗೆ ಸಾಗುತ್ತಾನೆ. ಗುರು ಮತ್ತು ಚಂದ್ರನ ನಡುವೆ ರೂಪುಗೊಳ್ಳುವ ಷಡಾಷ್ಟಕ ಯೋಗವು ಕೆಲವು ರಾಶಿಗಳಿಗೆ ಸವಾಲಿನದ್ದಾಗಿರಬಹುದು. ಆ ರಾಶಿಗಳು ಯಾವುವು ಮತ್ತು ಇದಕ್ಕೆ ಯಾವ ರೀತಿಯ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿಯಿರಿ.
1/6
ಷಡಾಷ್ಟಕ ಯೋಗದ ಪ್ರಭಾವ
ಸೆಪ್ಟೆಂಬರ್ 18ರ ರಾತ್ರಿ ಗುರು ಮತ್ತು ಚಂದ್ರನ ನಡುವೆ ಷಡಾಷ್ಟಕ ಯೋಗ ರೂಪುಗೊಳ್ಳಲಿದೆ. ರಾತ್ರಿ 10:45ಕ್ಕೆ ಚಂದ್ರನು ಧನು ರಾಶಿಗೆ ಪ್ರವೇಶಿಸಿದಾಗ ಈ ಯೋಗ ಸಂಭವಿಸಲಿದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಯೋಗವು ಕೆಲವು ರಾಶಿಗಳಿಗೆ ಹಣಕಾಸು ಮತ್ತು ವೈಯಕ್ತಿಕ ಜೀವನದಲ್ಲಿ ಎಚ್ಚರಿಕೆ ವಹಿಸುವ ಸೂಚನೆ ನೀಡುತ್ತದೆ.
2/6
ವೃಷಭ ರಾಶಿ
ವೃಷಭ ರಾಶಿಯವರು ಈ ಅವಧಿಯಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಬೇಕು. ಅಪರಿಚಿತರನ್ನ ನಂಬಿ ಹಣಕಾಸಿನ ವ್ಯವಹಾರ ಮಾಡಬಾರದು. ಹೂಡಿಕೆ ಮಾಡುವುದನ್ನ ಕೆಲಕಾಲ ಮುಂದೂಡುವುದು ಒಳಿತು. ಕುಟುಂಬದ ಹಿರಿಯರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಯಂತ್ರಣ ಇರಲಿ. ಪರಿಹಾರ: ಲಕ್ಷ್ಮಿ ದೇವಿಯ ಪೂಜೆ.
3/6
ತುಲಾ ರಾಶಿ
ತುಲಾ ರಾಶಿಯವರು ಸೆಪ್ಟೆಂಬರ್ 20ರವರೆಗೆ ದೊಡ್ಡ ಮೊತ್ತದ ಹೂಡಿಕೆಗಳನ್ನ ತಪ್ಪಿಸುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ಉದ್ಯೋಗದಲ್ಲಿ ಜಾಗರೂಕರಾಗಿರಿ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಕರಿದ ಆಹಾರ ಸೇವನೆಯನ್ನ ಕಡಿಮೆ ಮಾಡಿ. ಪರಿಹಾರ: ಶಿವಲಿಂಗಕ್ಕೆ ನೀರಿನ ಅಭಿಷೇಕ.
4/6
ಮಕರ ರಾಶಿ
ಮಕರ ರಾಶಿಯವರಿಗೆ ಈ ಯೋಗವು ಹಣಕಾಸಿನ ಒತ್ತಡವನ್ನ ತರಬಹುದು ಎಂಬ ನಂಬಿಕೆ ಇದೆ. ಸಾಲ ನೀಡುವಾಗ ಅಥವಾ ಪಡೆಯುವಾಗ ಎಚ್ಚರಿಕೆ ಅಗತ್ಯ. ಬ್ಯಾಂಕಿಂಗ್ ಮತ್ತು ಮಾರಾಟ ಕ್ಷೇತ್ರದಲ್ಲಿರುವವರು ಯಾರನ್ನೂ ಕುರುಡಾಗಿ ನಂಬಬಾರದು. ಹೊಸ ಉದ್ಯಮ ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.
5/6
ಆರೋಗ್ಯ ಮತ್ತು ವೃತ್ತಿ
ಮಕರ ರಾಶಿಯವರು ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡುವುದು ಒಳಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಹೆಚ್ಚಿನ ಪರಿಶ್ರಮ ವಹಿಸಬೇಕು. ಹಣಕಾಸಿನ ನಿರ್ಧಾರಗಳಲ್ಲಿ ದಾಖಲೆಗಳು ಮತ್ತು ಒಪ್ಪಂದಗಳನ್ನ ಪರಿಶೀಲಿಸದೆ ಮುಂದುವರಿಯಬೇಡಿ.
6/6
ಜ್ಯೋತಿಷ್ಯ ಪರಿಹಾರಗಳು
ಷಡಾಷ್ಟಕ ಯೋಗದ ಸಮಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಮುಖ್ಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ವೃಷಭ ರಾಶಿಯವರು ಲಕ್ಷ್ಮಿದೇವಿಯನ್ನ ಪೂಜಿಸಬಹುದು, ತುಲಾ ರಾಶಿಯವರು ಶಿವಲಿಂಗಕ್ಕೆ ನೀರು ಅರ್ಪಿಸಬಹುದು ಮತ್ತು ಮಕರ ರಾಶಿಯವರು ಹನುಮಾನ್ ಚಾಲೀಸಾ ಪಠಿಸಬಹುದು. ಇವು ಜ್ಯೋತಿಷ್ಯ ನಂಬಿಕೆಗಳ ಆಧಾರಿತ ಪರಿಹಾರಗಳಾಗಿವೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)